AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮುಕ್ತ ವ್ಯಾಪಾರ ಒಪ್ಪಂದಗಳು ಕೃಷಿ ಕ್ಷೇತ್ರಕ್ಕೆ ಹಾನಿಕರವಲ್ಲ, ಲಾಭದಾಯಕ; ಅಂಕಿ ಅಂಶಗಳು ಹೇಳುತ್ತಿವೆ ವಸ್ತುಸ್ಥಿತಿ

ಮುಕ್ತ ವ್ಯಾಪಾರ ಒಪ್ಪಂದಗಳು ಭಾರತದ ಕೃಷಿ ಕ್ಷೇತ್ರವನ್ನು ಅಪಾಯಕ್ಕೆ ನೂಕುತ್ತವೆ ಎನ್ನುವ ಆತಂಕ ಇದೆ. ಆದರೆ, ಕೃಷಿ ಸಚಿವಾಲಯ ಬಿಡುಗಡೆ ಮಾಡಿರುವ ವರದಿ ಪ್ರಕಾರ, ಎಫ್​ಟಿಎಗಳು ಕೃಷಿ ಕ್ಷೇತ್ರಕ್ಕೆ ವರದಾನವಾಗಿ ಪರಿಣಮಿಸಬಹುದು. ಎಫ್​ಟಿಎಗಳು ಹೆಚ್ಚಾಗಿರುವುದರಿಂದ ಭಾರತೀಯ ಉತ್ಪನ್ನಗಳಿಗೆ ಮಾರುಕಟ್ಟೆ ವಿಸ್ತಾರವೂ ಹರಡಿರುವುದು ಅಂಕಿ ಅಂಶಗಳಿಂದ ತಿಳಿದುಬರುತ್ತದೆ.

ಮುಕ್ತ ವ್ಯಾಪಾರ ಒಪ್ಪಂದಗಳು ಕೃಷಿ ಕ್ಷೇತ್ರಕ್ಕೆ ಹಾನಿಕರವಲ್ಲ, ಲಾಭದಾಯಕ; ಅಂಕಿ ಅಂಶಗಳು ಹೇಳುತ್ತಿವೆ ವಸ್ತುಸ್ಥಿತಿ
ಕೃಷಿImage Credit source: Getty Images
ಸುಗ್ಗನಹಳ್ಳಿ ವಿಜಯಸಾರಥಿ
|

Updated on:Sep 11, 2026 | 1:29 PM

Share

ನವದೆಹಲಿ, ಸೆಪ್ಟೆಂಬರ್ 11: ಮುಕ್ತ ವ್ಯಾಪಾರ ಒಪ್ಪಂದದಿಂದ ಕೃಷಿ ಕ್ಷೇತ್ರಕ್ಕೆ ಅಪಾಯ ಇದೆ ಎನ್ನುವ ಮಾತುಗಳು ಬಹಳ ಬಾರಿ ಕೇಳಿಬರುತ್ತವೆ. ಆದರೆ, ಅಂಕಿ ಅಂಶಗಳು ಬೇರೆಯೇ ವಿಷಯ ಹೇಳುತ್ತಿವೆ. ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಸಚಿವಾಲಯವು ಬಿಡುಗಡೆ ಮಾಡಿರುವ ನೂತನ ವರದಿಯ ಪ್ರಕಾರ, ಭಾರತೀಯ ಕೃಷಿ ಹಾಗೂ ಒಟ್ಟು ವ್ಯಾಪಾರ ಕ್ಷೇತ್ರವು ಜಾಗತಿಕ ಮಟ್ಟದಲ್ಲಿ ಭಾರಿ ಬೆಳವಣಿಗೆ ಕಂಡಿದೆ. ಮುಕ್ತ ವ್ಯಾಪಾರ ಒಪ್ಪಂದಗಳ (FTA) ನೆರವಿನಿಂದ ಭಾರತದ ಉತ್ಪನ್ನಗಳು ವಿದೇಶಿ ಮಾರುಕಟ್ಟೆಗಳಲ್ಲಿ ಹೆಚ್ಚಿನ ಪ್ರವೇಶ ಪಡೆಯುತ್ತಿವೆ.

2014-15 ರಲ್ಲಿ ಮುಕ್ತ ವ್ಯಾಪಾರ ಒಪ್ಪಂದಕ್ಕೆ (FTA) ಒಳಪಟ್ಟಂತೆ ಭಾರತದ ಒಟ್ಟು ವ್ಯಾಪಾರ ವಹಿವಾಟು 203.03 ಬಿಲಿಯನ್ ಡಾಲರ್ ಆಗಿತ್ತು. 2025-26 ರ ವೇಳೆಗೆ ಈ ಪ್ರಮಾಣವು ಭಾರಿ ಜಿಗಿತ ಕಂಡು 1,136.66 ಬಿಲಿಯನ್ ಡಾಲರ್ ತಲುಪಿದೆ. 2014-15 ರಲ್ಲಿ ಭಾರತದ ಒಟ್ಟು ವ್ಯಾಪಾರದಲ್ಲಿ FTA ಆಧರಿತ ವ್ಯಾಪಾರದ ಪಾಲು 13% ನಷ್ಟಿತ್ತು. 2025-26 ರಲ್ಲಿ ಈ ಪ್ರಮಾಣವು 48% ಗೆ ಏರಿಕೆಯಾಗಿದೆ.

ಕೇಂದ್ರ ಕೃಷಿ ಸಚಿವಾಲಯ ಹಾಕಿರುವ ಸೋಷಿಯಲ್ ಮೀಡಿಯಾ ಪೋಸ್ಟ್

57 ದೇಶಗಳಿಗೆ ಸುಲಭ ಮಾರುಕಟ್ಟೆ ಪ್ರವೇಶ: ಪ್ರಸ್ತುತ ಭಾರತವು ಜಗತ್ತಿನ 57 ದೇಶಗಳೊಂದಿಗೆ ಆದ್ಯತೆಯ (Preferential) ಅಥವಾ ಸುಂಕ-ರಹಿತ (Duty-Free) ಮಾರುಕಟ್ಟೆ ಪ್ರವೇಶ ಒಪ್ಪಂದಗಳನ್ನು ಹೊಂದಿದೆ.

ಇದನ್ನೂ ಓದಿ: ಬ್ರಿಕ್ಸ್ ರಾಷ್ಟ್ರಗಳೊಂದಿಗೆ ಭಾರತದ ವ್ಯಾಪಾರ ಕೊರತೆ ಬರೋಬ್ಬರಿ 226 ಬಿಲಿಯನ್ ಡಾಲರ್

ರೈತರಿಗೆ ಮತ್ತು ಕೃಷಿ ಕ್ಷೇತ್ರಕ್ಕೆ ಲಭಿಸುವ ಪ್ರಯೋಜನಗಳು

  • ರಫ್ತು ಮಾರುಕಟ್ಟೆ ವಿಸ್ತರಣೆ: ಮುಕ್ತ ವ್ಯಾಪಾರ ಒಪ್ಪಂದಗಳ ಕಾರಣದಿಂದಾಗಿ ಭಾರತದ ಅಕ್ಕಿ, ಸಾಂಬಾರು ಪದಾರ್ಥಗಳು, ಸಮುದ್ರೋತ್ಪನ್ನಗಳು (Marine products), ಹಣ್ಣು ಹಾಗೂ ತರಕಾರಿಗಳಿಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಬೇಡಿಕೆ ಹೆಚ್ಚಾಗಿದೆ.
  • ಆದಾಯ ಹೆಚ್ಚಳ: ಭಾರತೀಯ ಕೃಷಿ ಉತ್ಪನ್ನಗಳಿಗೆ ಸುಂಕ ವಿನಾಯಿತಿ ಸಿಗುತ್ತಿರುವುದರಿಂದ ರೈತರು ಮತ್ತು ಕೃಷಿ ರಫ್ತುದಾರರಿಗೆ ಉತ್ತಮ ಬೆಲೆ ದೊರೆಯುತ್ತಿದೆ.
  • ಕಡಿಮೆ ವೆಚ್ಚ: ಅಂತಾರಾಷ್ಟ್ರೀಯ ಗಡಿಗಳಲ್ಲಿ ಸುಂಕದ ಹೊರೆ ಕಡಿಮೆಯಾಗುವುದರಿಂದ ಜಾಗತಿಕ ಸ್ಪರ್ಧೆಯಲ್ಲಿ ಭಾರತೀಯ ಉತ್ಪನ್ನಗಳು ಮುಂಚೂಣಿಯಲ್ಲಿರಲು ನೆರವಾಗಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 1:29 pm, Fri, 11 September 26

Follow Us