AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬ್ರಿಕ್ಸ್ ರಾಷ್ಟ್ರಗಳೊಂದಿಗೆ ಭಾರತದ ವ್ಯಾಪಾರ ಕೊರತೆ ಬರೋಬ್ಬರಿ 226 ಬಿಲಿಯನ್ ಡಾಲರ್

ಹನ್ನೊಂದು ರಾಷ್ಟ್ರಗಳ ಗುಂಪಾಗಿರುವ ಬ್ರಿಕ್ಸ್ ಬಹಳ ದೊಡ್ಡ ಮಾರುಕಟ್ಟೆ ಆದರೂ ಭಾರತಕ್ಕೆ ದೊಡ್ಡ ವ್ಯಾಪಾರ ಕೊರತೆಯ ಪ್ಲಾಟ್​ಫಾರ್ಮ್ ಆಗಿದೆ. ಈ ಗುಂಪಿನ ಇತರ ರಾಷ್ಟ್ರಗಳಿಗೆ ಭಾರತದ ರಫ್ತು ಮಾಡುವ ಸರಕುಗಳ ಮೌಲ್ಯವು ಆಮದಿಗೆ ಹೋಲಿಸಿದರೆ ಬಹಳ ಕಡಿಮೆ. ಚೀನಾ, ಯುಎಇ ಮತ್ತು ರಷ್ಯಾ ದೇಶಗಳ ಜೊತೆ ಭಾರತ ಹೆಚ್ಚಿನ ಟ್ರೇಡ್ ಡೆಫಿಸಿಟ್ ಹೊಂದಿದೆ. ಈ ಬ್ರಿಕ್ಸ್ ಶೃಂಗಸಭೆ ದೆಹಲಿಯಲ್ಲಿ ಸೆಪ್ಟೆಂಬರ್ 12ರಿಂದ 14ರವರೆಗೆ ನಡೆಯುತ್ತದೆ.

ಬ್ರಿಕ್ಸ್ ರಾಷ್ಟ್ರಗಳೊಂದಿಗೆ ಭಾರತದ ವ್ಯಾಪಾರ ಕೊರತೆ ಬರೋಬ್ಬರಿ 226 ಬಿಲಿಯನ್ ಡಾಲರ್
ವ್ಯಾಪಾರImage Credit source: Getty Images
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Sep 10, 2026 | 8:08 PM

Share

ನವದೆಹಲಿ, ಸೆಪ್ಟೆಂಬರ್ 10: ಇನ್ನೆರಡು ದಿನಗಳಲ್ಲಿ ಭಾರತದಲ್ಲಿ ಆರಂಭವಾಗಲಿರುವ ಬ್ರಿಕ್ಸ್ ಶೃಂಗಸಭೆ (BRICS summit 2026) ಇಡೀ ಜಗತ್ತಿನ ಗಮನ ಸೆಳೆಯುತ್ತಿದೆ. ಆರ್ಥಿಕವಾಗಿ ಇದು ವಿಶ್ವದ ಅತ್ಯಂತ ಬಲಶಾಲಿ ಗುಂಪುಗಳಲ್ಲಿ ಒಂದೆನಿಸಿದೆ. ಜಿ7 ಗುಂಪಿನಷ್ಟು ಆರ್ಥಿಕ ಗಾತ್ರ ಇಲ್ಲವಾದರೂ ಬಹಳ ವೇಗವಾಗಿ ಬೆಳವಣಿಗೆ ಹೊಂದುತ್ತಿರುವ ಮಾರುಕಟ್ಟೆಗಳು ಈ ಗುಂಪಿನಲ್ಲಿವೆ. ಚೀನಾ ದೇಶವು ಈ ಒಕ್ಕೂಟದ ಕೇಂದ್ರ ಬಿಂದುವಿನಂತೆ ಇದ್ದರೂ ಭಾರತ ಈ ಗುಂಪಿನ ಮುಖ್ಯ ಆಟಗಾರರಲ್ಲಿ ಒಂದೆನಿಸಿರುವುದು ಹೌದು. ಆರ್ಥಿಕವಾಗಿ ನೋಡಿದರೆ ಬ್ರಿಕ್ಸ್ ಬಹಳ ದೊಡ್ಡ ಮಾರುಕಟ್ಟೆಯಾಗಿದೆ. ಆದರೆ, ಭಾರತದ ಪಾಲಿಗೆ ಬ್ರಿಕ್ಸ್ ಎಂಬುದು ದೊಡ್ಡ ವ್ಯಾಪಾರ ಕೊರತೆಯ ವೇದಿಕೆಯಾಗಿದೆ.

ಪ್ರಮುಖ ಆರ್ಥಿಕ ಸಂಶೋಧನಾ ಸಂಸ್ಥೆ ‘ಗ್ಲೋಬಲ್ ಟ್ರೇಡ್ ರಿಸರ್ಚ್ ಇನಿಶಿಯೇಟಿವ್’ (GTRI) ಪ್ರಕಟಿಸಿರುವ ವರದಿಯ ಪ್ರಕಾರ, ಬ್ರಿಕ್ಸ್ (BRICS) ಒಕ್ಕೂಟದ 11 ರಾಷ್ಟ್ರಗಳೊಂದಿಗೆ ಭಾರತದ ಸರಕು ವ್ಯಾಪಾರ ಕೊರತೆಯು (Trade Deficit) 2025-26ನೇ ಹಣಕಾಸು ವರ್ಷದಲ್ಲಿ ಒಟ್ಟು 226.1 ಬಿಲಿಯನ್ ಡಾಲರ್‌ಗೆ ತಲುಪಿದೆ. 2020-21ರಲ್ಲಿ 74.5 ಬಿಲಿಯನ್ ಡಾಲರ್​ನಷ್ಟು ವ್ಯಾಪಾರ ಕೊರತೆ ಇತ್ತು. ಕಳೆದ 5 ವರ್ಷಗಳಲ್ಲಿ ಈ ಕೊರತೆಯು ಮೂರು ಪಟ್ಟಿಗೂ ಹೆಚ್ಚು ವೃದ್ಧಿಸಿದೆ. ಬ್ರಿಕ್ಸ್ ಒಕ್ಕೂಟಕ್ಕೆ ಭಾರತ ಮಾಡುವ ರಫ್ತಿಗಿಂತ (Exports) ಅಲ್ಲಿಂದ ಮಾಡಿಕೊಳ್ಳುವ ಆಮದು (Imports) ಪ್ರಮಾಣ ತೀವ್ರವಾಗಿ ಹೆಚ್ಚಿರುವುದೇ ಈ ಬೃಹತ್ ಅಂತರಕ್ಕೆ ಪ್ರಮುಖ ಕಾರಣವಾಗಿದೆ.

ಇದನ್ನೂ ಓದಿ: ಎಐನಿಂದ ದೊಡ್ಡ ಕಂಪನಿಗಳಲ್ಲಿ ಕೆಲಸಕ್ಕೆ ಕತ್ತರಿ ಬೀಳಬಹುದು; ಲಕ್ಷಾಂತರ ಸಣ್ಣ ಕಂಪನಿಗಳಿಂದ ಉದ್ಯೋಗಸೃಷ್ಟಿ: ನಂದನ್ ನಿಲೇಕಣಿ

ಆಮದು-ರಫ್ತು ನಡುವಿನ ಅಂತರ: ಬ್ರಿಕ್ಸ್ ರಾಷ್ಟ್ರಗಳೊಂದಿಗೆ ಭಾರತದ ಒಟ್ಟು ವ್ಯಾಪಾರವು $417.5 ಬಿಲಿಯನ್​ಗೆ ಏರಿಕೆಯಾಗಿದೆ. ಇದರಲ್ಲಿ ಭಾರತದ ರಫ್ತು $95.7 ಬಿಲಿಯನ್ (ಶೇ. 48.8 ರಷ್ಟು ಏರಿಕೆ) ತಲುಪಿದ್ದರೆ, ಆಮದು $321.8 ಬಿಲಿಯನ್​ಗೆ (ಶೇ. 131.8 ರಷ್ಟು ಭಾರಿ ಏರಿಕೆ) ಜಿಗಿದಿದೆ.

ಭಾರತವು ಬ್ರಿಕ್ಸ್‌ನಿಂದ ಮಾಡಿಕೊಳ್ಳುವ ಒಟ್ಟು ಆಮದಿನಲ್ಲಿ ಚೀನಾ, ರಷ್ಯಾ ಮತ್ತು ಯುಎಇ (UAE) ದೇಶಗಳ ಪಾಲು ಶೇ. 83.9 ರಷ್ಟಿದೆ. ಚೀನಾದಿಂದ $131.6 ಬಿಲಿಯನ್ ಡಾಲರ್​ನಷ್ಟು ಆಮದು ಆಗಿದ್ದರೆ, ಭಾರತದಿಂದ ಚೀನಾಗೆ ನಡೆದ ರಫ್ತು ಶೇ. 8.1ರಷ್ಟು ಕುಸಿದು $19.5 ಬಿಲಿಯನ್ ತಲುಪಿದೆ.

ರಷ್ಯಾದಿಂದ ಇಂಧನ ಮತ್ತು ಕಚ್ಚಾ ತೈಲ ಖರೀದಿಯಿಂದಾಗಿ ಆಮದು 10 ಪಟ್ಟು ಹೆಚ್ಚಿ $55.4 ಬಿಲಿಯನ್​ಗೆ ತಲುಪಿದೆ (ರಫ್ತು ಕೇವಲ $4.5 ಬಿಲಿಯನ್). ಬ್ರಿಕ್ಸ್ ಗುಂಪಿನಲ್ಲೇ ಭಾರತದ ಪಾಲಿಗೆ ಅತಿದೊಡ್ಡ ರಫ್ತು ಮಾರುಕಟ್ಟೆಯಾಗಿರುವ ಯುಎಇ ಜೊತೆಗೂ ಭಾರತದ ವ್ಯಾಪಾರ ಕೊರತೆ ದೊಡ್ಡದೇ ಇದೆ. ಯುಎಇಗೆ ಭಾರತದಿಂದ ಆಗುವ ರಫ್ತು $37.4 ಬಿಲಿಯನ್ ಡಾಲರ್ ಇದೆ. ಆಮದು ಮಾಡಿಕೊಂಡಿರುವುದು $63.9 ಬಿಲಿಯನ್ ಡಾಲರ್ ಎಂದು ದಾಖಲಾಗಿದೆ.

ಚೀನಾ ಕೇಂದ್ರಿತ ವ್ಯಾಪಾರ ವ್ಯವಸ್ಥೆ: ಬ್ರಿಕ್ಸ್ ಒಕ್ಕೂಟದ ಆಂತರಿಕ ವ್ಯಾಪಾರವು ‘ಚೀನಾ ಕೇಂದ್ರಿತ’ ರೂಪ ಪಡೆದುಕೊಂಡಿದೆ ಎಂದು ಜಿಟಿಆರ್‌ಐ ಸಂಸ್ಥಾಪಕ ಅಜಯ್ ಶ್ರೀವಾಸ್ತವ ತಿಳಿಸಿದ್ದಾರೆ. ಕುತೂಹಲ ಎಂದರೆ, ಬ್ರಿಕ್ಸ್ ಒಕ್ಕೂಟದೊಳಗೆ ಗರಿಷ್ಠ ವ್ಯಾಪಾರ ಕೊರತೆ ಎದುರಿಸುತ್ತಿರುವ ದೇಶ ಭಾರತವಾಗಿದೆ.

ಇದನ್ನೂ ಓದಿ: ಬಯೋಮೆಟ್ರಿಕ್ ಆಧಾರ್ ದೃಢೀಕರಣ ಇಲ್ಲದೆ ಜಿಎಸ್​ಟಿ ನೊಂದಣಿಗೆ ಅವಕಾಶ ಇಲ್ಲ: ದೆಹಲಿ ಹೈಕೋರ್ಟ್ ಆದೇಶ

ಜಿಟಿಆರ್‌ಐ ನೀಡಿರುವ ಪ್ರಮುಖ ಸಲಹೆಗಳು

  • ಮಾರುಕಟ್ಟೆ ಪ್ರವೇಶ ಹೆಚ್ಚಿಸುವುದು: ಚೀನಾ, ರಷ್ಯಾ ಮತ್ತು ಇಂಡೋನೇಷ್ಯಾಗಳಲ್ಲಿ ಭಾರತೀಯ ಉತ್ಪನ್ನಗಳಿಗೆ ಎದುರಾಗುತ್ತಿರುವ ಸುಂಕ ರಹಿತ ತಡೆಗಳನ್ನು (Non-tariff barriers) ತೆರವುಗೊಳಿಸಲು ರಾಜತಾಂತ್ರಿಕ ಮಾತುಕತೆ ನಡೆಸುವುದು.
  • ಉನ್ನತ ಮೌಲ್ಯವರ್ಧಿತ ರಫ್ತು: ಕೇವಲ ಕಚ್ಚಾ ವಸ್ತುಗಳ ಬದಲಿಗೆ ಮೌಲ್ಯವರ್ಧಿತ ಮತ್ತು ತಂತ್ರಜ್ಞಾನ ಆಧಾರಿತ ಉತ್ಪನ್ನಗಳನ್ನು ರಫ್ತು ಮಾಡುವುದು.
  • ಸರಬರಾಜು ಜಾಲದ ವೈವಿಧ್ಯೀಕರಣ: ಒಂದೆರಡು ದೇಶಗಳ ಮೇಲಿನ ಅತಿಯಾದ ಆಮದು ಅವಲಂಬನೆಯನ್ನು ತಗ್ಗಿಸಿ, ಸ್ಥಳೀಯ ಕರೆನ್ಸಿಗಳ (Local Currency Settlement) ಮೂಲಕ ಪಾವತಿ ವ್ಯವಸ್ಥೆಯನ್ನು ಬಲಪಡಿಸುವುದು.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Follow Us
ಹೈಕಮಾಂಡ್ ಬುಲಾವ್: ದೆಹಲಿಗೆ ಹೊರಟ ಮಾಜಿ ಸಿಎಂ ಸಿದ್ದರಾಮಯ್ಯ
ಹೈಕಮಾಂಡ್ ಬುಲಾವ್: ದೆಹಲಿಗೆ ಹೊರಟ ಮಾಜಿ ಸಿಎಂ ಸಿದ್ದರಾಮಯ್ಯ
ಡಿಕೆಶಿ 100 ದಿನಗಳ ಸಂಭ್ರಮಕ್ಕೆ ನೊಣವಿನಕೆರೆ ಶ್ರೀಗಳ ಆಶೀರ್ವಚನ ಹೀಗಿದೆ
ಡಿಕೆಶಿ 100 ದಿನಗಳ ಸಂಭ್ರಮಕ್ಕೆ ನೊಣವಿನಕೆರೆ ಶ್ರೀಗಳ ಆಶೀರ್ವಚನ ಹೀಗಿದೆ
ರಂಗನತಿಟ್ಟು ವಿದೇಶಿ ಪ್ರಯೋಗ: ಪಕ್ಷಿಗಳ ರಕ್ಷಣೆಗೆ ಗೇಬಿಯನ್ ತಂತ್ರಜ್ಞಾನ
ರಂಗನತಿಟ್ಟು ವಿದೇಶಿ ಪ್ರಯೋಗ: ಪಕ್ಷಿಗಳ ರಕ್ಷಣೆಗೆ ಗೇಬಿಯನ್ ತಂತ್ರಜ್ಞಾನ
ಬಿಗ್​​ಬಾಸ್​​ನಲ್ಲಿ ಓಪನ್ ಆಗ್ತಿದೆ ಹಳೆ ಲವ್ ಸ್ಟೋರಿಗಳು: ವಿಡಿಯೋ ನೋಡಿ
ಬಿಗ್​​ಬಾಸ್​​ನಲ್ಲಿ ಓಪನ್ ಆಗ್ತಿದೆ ಹಳೆ ಲವ್ ಸ್ಟೋರಿಗಳು: ವಿಡಿಯೋ ನೋಡಿ
ಮಹಾಸಂಕಲ್ಪ ಮತ್ತು ನವಸಂಕಲ್ಪ: 2037ರ ಭವ್ಯ ಕನಸು ಬಿಚ್ಚಿಟ್ಟ ಡಿಕೆಶಿ
ಮಹಾಸಂಕಲ್ಪ ಮತ್ತು ನವಸಂಕಲ್ಪ: 2037ರ ಭವ್ಯ ಕನಸು ಬಿಚ್ಚಿಟ್ಟ ಡಿಕೆಶಿ
ಬೆಂಗಳೂರು ದಕ್ಷಿಣದಲ್ಲಿ ಮಾದಕ ವಸ್ತುಗಳ ವಿರುದ್ಧ ಪೊಲೀಸರ ಸಮರ
ಬೆಂಗಳೂರು ದಕ್ಷಿಣದಲ್ಲಿ ಮಾದಕ ವಸ್ತುಗಳ ವಿರುದ್ಧ ಪೊಲೀಸರ ಸಮರ
ಸಚಿವ ಸತೀಶ್ ಜಾರಕಿಹೊಳಿಗೆ ಎದುರಾಯ್ತು ಇಡಿ ಸಂಕಷ್ಟ!
ಸಚಿವ ಸತೀಶ್ ಜಾರಕಿಹೊಳಿಗೆ ಎದುರಾಯ್ತು ಇಡಿ ಸಂಕಷ್ಟ!
ಹನುಮ ಹುಟ್ಟಿದ ನಾಡು ಅಂಜನಾದ್ರಿಗೆ ಭೇಟಿ ನೀಡಿದ ಸಂಸದ ಯದುವೀರ್
ಹನುಮ ಹುಟ್ಟಿದ ನಾಡು ಅಂಜನಾದ್ರಿಗೆ ಭೇಟಿ ನೀಡಿದ ಸಂಸದ ಯದುವೀರ್
ಜೈಲಿನಲ್ಲಿ ಮೊಬೈಲ್ ಬಳಕೆ ಒಪ್ಪಿಕೊಂಡ ಪ್ರಜ್ವಲ್ ರೇವಣ್ಣ!
ಜೈಲಿನಲ್ಲಿ ಮೊಬೈಲ್ ಬಳಕೆ ಒಪ್ಪಿಕೊಂಡ ಪ್ರಜ್ವಲ್ ರೇವಣ್ಣ!
ಸರ್ಕಾರದ 100 ದಿನದ ಕಾರ್ಯಕ್ರಮಕ್ಕೆ ಬಂದ ಸಿದ್ದರಾಮಯ್ಯಗೆ ವಿಶೇಷ ಸ್ವಾಗತ
ಸರ್ಕಾರದ 100 ದಿನದ ಕಾರ್ಯಕ್ರಮಕ್ಕೆ ಬಂದ ಸಿದ್ದರಾಮಯ್ಯಗೆ ವಿಶೇಷ ಸ್ವಾಗತ