ಆಧಾರ್ ಭಾರತದ ನಾಗರಿಕರಿಗೆ ನೀಡಲಾಗುವ ಬಹಳ ವಿಶೇಷ ಗುರುತಿನ ಚೀಟಿ. 12 ಅಂಕಿಗಳಿರುವ ಈ ಗುರುತಿನ ಸಂಖ್ಯೆ (Aadhaar Number) ಬಹಳ ಮುಖ್ಯವಾದುದು. ಹಲವು ಸೌಲಭ್ಯ, ಸವಲತ್ತು, ಸರ್ಕಾರಿ ಸೇವೆ ಇತ್ಯಾದಿ ಕಾರ್ಯಗಳಿಗೆ ಆಧಾರ್ ಅಗತ್ಯವಾಗಿದೆ. ಹೀಗಾಗಿ, ನಿಮ್ಮ ಆಧಾರ್ನಲ್ಲಿ ನಿಖರ ಮಾಹಿತಿ ಇರುವುದು ಅತ್ಯಗತ್ಯ. ಹೆಸರು, ಜನ್ಮ ದಿನಾಂಕ, ವಿಳಾಸ ಮಾಹಿತಿ ತಪ್ಪಾಗಿಲ್ಲ ಎಂಬುದನ್ನು ಖಚಿತಪಡಿಸಿಕೊಳ್ಳಿ. ಇದರ ಜೊತೆಗೆ ನೀವು ಆಧಾರ್ನಲ್ಲಿರುವ ಮಾಹಿತಿಯನ್ನು ಹೆಚ್ಚು ಬಾರಿ ಬದಲಾಯಿಸಲೂ ಸಾಧ್ಯವಿಲ್ಲ. ಹೀಗಾಗಿ, ಆಧಾರ್ ಅಪ್ಡೇಟ್ ಮಾಡುವ ಮುನ್ನ ಎಚ್ಚರ ವಹಿಸಿ. ಆಧಾರ್ ಕಾರ್ಡ್ನಲ್ಲಿರುವ ವ್ಯಕ್ತಿಯ ಹೆಸರು, ದಿನಾಂಕ, ಲಿಂಗ ಸ್ಥಾನಮಾನ, ವಿಳಾಸ ಇವುಗಳನ್ನು ಎಷ್ಟು ಬಾರಿ ಅಪ್ಡೇಟ್ ಮಾಡಬಹುದು ಎಂಬ ಮಾಹಿತಿ ಇಲ್ಲಿದೆ.
ಎಷ್ಟು ಬಾರಿ ಅಪ್ಡೇಟ್ ಮಾಡಬಹುದು?
ಸಾಮಾನ್ಯವಾಗಿ ನೀವು ನೊಂದಾಯಿಸುವಾಗ ನೀಡಿದ್ದ ಜನ್ಮದಿನಾಂಕವನ್ನು ಬದಲಾಯಿಸಲು ಆಗುವುದಿಲ್ಲ. ಒಂದು ವೇಳೆ ನೊಂದಣಿ ವೇಳೆ ತಪ್ಪಾದ ಮಾಹಿತಿ ಇದ್ದರೆ, ಅಂದರೆ ಡೇಟಾ ಎಂಟ್ರಿ ವೇಳೆ ದೋಷವಾಗಿ ಹೆಸರು ತಪ್ಪಾಗಿ ಹೋಗಿದ್ದರೆ ಮಾತ್ರ ಜನ್ಮದಿನಾಂಕದ ವಿವರ ಬದಲಾಯಿಸಲು ಅವಕಾಶ ಇರುತ್ತದೆ. ಅದಕ್ಕಾಗಿ ಸೂಕ್ತ ದಾಖಲೆಗಳನ್ನು ನೀಡಬೇಕು.
ಇದನ್ನೂ ಓದಿ: Aadhaar-PAN Link: ಈ ವ್ಯಕ್ತಿಗಳಿಗೆ ಆಧಾರ್-ಪಾನ್ ನಂಬರ್ ಲಿಂಕ್ ಬೇಕಾಗಿಲ್ಲ; ಯಾರಿಗೆಲ್ಲಾ ಇದೆ ವಿನಾಯಿತಿ? ಇಲ್ಲಿದೆ ವಿವರ
ಇನ್ನು ನಿಮ್ಮ ಖಾಯಂ ವಿಳಾಸವನ್ನೇ ಆಧಾರ್ನಲ್ಲಿರುವ ವಿಳಾಸವಾಗಿ ಇಟ್ಟುಕೊಳ್ಳುವುದು ಉತ್ತಮ. ಬಾಡಿಗೆ ಮನೆ ಬದಲಾಯಿಸಿದಾಗೆಲ್ಲಾ ಆಧಾರ್ನಲ್ಲಿ ವಿಳಾಸ ಅಪ್ಡೇಟ್ ಮಾಡಲು ಆಗುವುದಿಲ್ಲ.
ನಿಮಗೆ ಆಧಾರ್ನಲ್ಲಿರುವ ಮಾಹಿತಿಯನ್ನು ಅಪ್ಡೇಟ್ ಮಾಡುವ ಮಿತಿ ದಾಟಿ ಹೋಗಿದ್ದ ಸಂದರ್ಭದಲ್ಲಿ ನಿಮಗೆ ಏನಾದರೂ ಆಧಾರ್ನಲ್ಲಿ ವಿವರ ಬದಲಾವಣೆ ಬೇಕೆನಿಸಿದಲ್ಲಿ ಬದಲಾಯಿಸುವುದು ಅಗತ್ಯ ಎನಿಸಿದಲ್ಲಿ ಯುಐಡಿಎಐನ ಪ್ರಾದೇಶಿಕ ಕಚೇರಿಗೆ ಹೋಗಿ ಮನವಿ ಮಾಡಿಕೊಳ್ಳಬಹುದು.
ಆದರೆ ಕಚೇರಿಗೆ ಹೋಗುವ ಮುನ್ನ help @uidai.gov.in ಈ ವಿಳಾಸಕ್ಕೆ ಇಮೇಲ್ ಕಳುಹಿಸಿ ಮನವಿ ಮಾಡಬೇಕು. ಯುಆರ್ಎನ್ ಸ್ಲಿಪ್, ಆಧಾರ್ ವಿವರ ಮತ್ತು ಸೂಕ್ತ ದಾಖಲೆಯನ್ನೂ ಇಮೇಲ್ ವೇಳೆ ಲಗತ್ತಿಸಬೇಕು. ಇದಾದಾಗ ಬಳಿಕ ಪ್ರಾದೇಶಿಕ ಕಚೇರಿಯು ನಿಮ್ಮ ಮನವಿಯನ್ನು ಪರಿಶೀಲಿಸಿ ತನಿಖೆಯನ್ನೂ ಕೈಗೊಳ್ಳುತ್ತದೆ. ನಿಮ್ಮ ಮನವಿ ಸರಿ ಎನಿಸಿದಲ್ಲಿ ಪ್ರಾದೇಶಿಕ ಕಚೇರಿಗೆ ಬರುವಂತೆ ಸೂಚಿಸುತ್ತದೆ.
ಆಧಾರ್ ವಿವರಗಳ ತಿದ್ದುಪಡಿಗೆ ಬೇಕಾದ ದಾಖಲೆಗಳು
ಇದನ್ನೂ ಓದಿ: ELSS: ತೆರಿಗೆ ಉಳಿಸಲು ಎಸ್ಐಪಿಗೆ ಹಣ ಹಾಕುತ್ತಿದ್ದೀರಾ? ಇಎಲ್ಎಸ್ಎಸ್ ಅಂಶದತ್ತ ಗಮನ ಇರಲಿ
ಈ ಮೇಲಿನ ದಾಖಲೆಗಳಲ್ಲಿ ಒಂದನ್ನು ಪುರಾವೆಯಾಗಿ ಒದಗಿಸಬೇಕಾಗುತ್ತದೆ. ಆನ್ಲೈನ್ನಲ್ಲಿ ಆಧಾರ್ ಸೇವೆಗಳನ್ನು ಪಡೆಯಲು ಮತ್ತು ತಿದ್ದುಪಡಿ ಮಾಡಲು ಅವಕಾಶ ಇದೆಯಾದರೂ ಮೊಬೈಲ್ ನಂಬರ್ ಅಪ್ಡೇಟ್ ಮಾಡಲು ಆಧಾರ್ ಸರ್ವಿಸ್ ಸೆಂಟರ್ಗೆ ಹೋಗಲೇಬೇಕು. ಆಧಾರ್ ಕೇಂದ್ರದಲ್ಲಿ ಕೆಲವಿಷ್ಟು ಸೇವೆಗಳಿಗೆ ನಿರ್ದಿಷ್ಟ ಶುಲ್ಕಗಳಿವೆ. ಅದರ ವಿವರ ಇಲ್ಲಿದೆ.
ಆಧಾರ್ ಮಾಹಿತಿ ಅಪ್ಡೇಟ್ ಮಾಡಲು ಇರುವ ಶುಲ್ಕ
ಆರಂಭಿಕ ಬಯೋಮೆಟ್ರಿಕ್: ಉಚಿತ
ಹೆಸರು, ವಿಳಾಸ ಬದಲಾವಣೆ: 50 ರೂ
ಬಯೋಮೆಟ್ರಿಕ್ ಅಪ್ಡೇಟ್: 100 ರೂ
ಬಯೋಮೆಟ್ರಿಕ್ ಜೊತೆ ಹೆಸರು, ವಿಳಾಸ ಇತ್ಯಾದಿ ಬದಲಾವಣೆ: 100 ರೂ
ಆಧಾರ್ ಡೌನ್ಲೋಡ್ ಮಾಡಿ ಕಲರ್ ಪ್ರಿಂಟೌಟ್ ಪಡೆಯಲು: 30 ರೂ
Published On - 10:51 am, Sun, 12 March 23