Salary Hike: 2022ರಲ್ಲಿ ಎಷ್ಟು ಪರ್ಸೆಂಟ್ ವೇತನ ಹೆಚ್ಚಳ ನಿರೀಕ್ಷೆ ಮಾಡಬಹುದು? ಇಲ್ಲಿದೆ ಇಂಟೆರೆಸ್ಟಿಂಗ್ ಡೀಟೇಲ್ಸ್

| Updated By: Srinivas Mata

Updated on: Sep 20, 2021 | 2:53 PM

ಮುಂದಿನ ವರ್ಷ ಎಷ್ಟು ಪರ್ಸೆಂಟ್ ವೇತನ ಹೆಚ್ಚಳವನ್ನು ನಿರೀಕ್ಷೆ ಮಾಡಬಹುದು ಎಂಬ ಬಗ್ಗೆ ಸಮೀಕ್ಷೆಯೊಂದು ಹೊರಗಿಟ್ಟಿರುವ ಮಾಹಿತಿ ಇಲ್ಲಿದೆ.

Salary Hike: 2022ರಲ್ಲಿ ಎಷ್ಟು ಪರ್ಸೆಂಟ್ ವೇತನ ಹೆಚ್ಚಳ ನಿರೀಕ್ಷೆ ಮಾಡಬಹುದು? ಇಲ್ಲಿದೆ ಇಂಟೆರೆಸ್ಟಿಂಗ್ ಡೀಟೇಲ್ಸ್
ಸಾಂದರ್ಭಿಕ ಚಿತ್ರ
Follow us on

ಭಾರತದಲ್ಲಿ 2021ನೇ ಇಸವಿಯಲ್ಲಿ ಶೇ 92ರಷ್ಟು ಕಂಪೆನಿಗಳು ಸರಾಸರಿ ಶೇ 8ರಷ್ಟು ವೇತನ ಹೆಚ್ಚಳವನ್ನು ನೀಡಿದ್ದು, 2020ರಲ್ಲಿ ನೀಡಿದ್ದ ಕೇವಲ ಶೇ 4.4ಕ್ಕೆ ಹೋಲಿಸಿದಲ್ಲಿ ಕೇವಲ ಶೇ 60ರಷ್ಟು ಕಂಪೆನಿಗಳು ವೇತನ ಹೆಚ್ಚಳವನ್ನು ವಿಸ್ತರಿಸಿವೆ ಎಂದು ಸಮೀಕ್ಷೆ ಫಲಿತಾಂಶಗಳು ತಿಳಿಸಿವೆ. ಆರಂಭಿಕ ಅಂದಾಜಿನ ಪ್ರಕಾರ, 2022ರಲ್ಲಿ ಸರಾಸರಿ ಶೇ 8.6ಕ್ಕೆ ಹೆಚ್ಚಾಗುವ ನಿರೀಕ್ಷೆಯಿದೆ. ಇದು ಆರ್ಥಿಕತೆ ಚೇತರಿಕೆ ಮತ್ತು ವಿಶ್ವಾಸವನ್ನು ಜಾಸ್ತಿ ಮಾಡುತ್ತಿರುವ ಹಿನ್ನೆಲೆಯಲ್ಲಿ ಆಗುತ್ತಿರುವ ಬೆಳವಣಿಗೆ ಎನ್ನಲಾಗಿದೆ. ಒಂದು ವೇಳೆ ಇದು ನಿಜವಾದಲ್ಲಿ, 2022ರಲ್ಲಿನ ವೇತನ ಹೆಚ್ಚಳವು 2019ರ ಕೊರೊನಾ ಮುಂಚಿನ ಮಟ್ಟವನ್ನು ತಲುಪುತ್ತದೆ. ಸಮೀಕ್ಷೆ ನಡೆಸಿದ ಸುಮಾರು ಶೇ 25ರಷ್ಟು ಕಂಪೆನಿಗಳು 2022ಕ್ಕೆ ಎರಡಂಕಿಯ ವೇತನ ಹೆಚ್ಚಳವನ್ನು ಅಂದಾಜಿಸಿವೆ ಎಂಬುದು ಡೆಲಾಯ್ಟ್‌ನ ಕಾರ್ಯಪಡೆ ಮತ್ತು ವೇತನ ಹೆಚ್ಚಳದ ಟ್ರೆಂಡ್​ನ 2021ರ ಎರಡನೇ ಹಂತದ ಸಮೀಕ್ಷೆ ಪ್ರಕಾರ ಗೊತ್ತಾಗಿದೆ.

ಡೆಲಾಯ್ಟ್‌ನ ಕಾರ್ಯಪಡೆ ಮತ್ತು ವೇತನ ಹೆಚ್ಚಳ ಟ್ರೆಂಡ್‌ಗಳ ಸಮೀಕ್ಷೆ 2021ರ ಎರಡನೇ ಹಂತವು ನಿರ್ದಿಷ್ಟವಾಗಿ ಭಾರತದಲ್ಲಿ ರಿವಾರ್ಡ್ಸ್​ಗಳ ಬಗ್ಗೆ, ಅನುಕೂಲ ನೀತಿಗಳ ಮೇಲೆ ಕೊವಿಡ್-19ರ ಪ್ರಭಾವ ಮತ್ತು ಕಚೇರಿಗಳಿಗೆ ಹಿಂತಿರುಗುವುದಕ್ಕೆ ಸಂಸ್ಥೆಗಳ ಕಾರ್ಯತಂತ್ರಗಳ ಬಗ್ಗೆ ಒಳನೋಟಗಳನ್ನು ಒದಗಿಸುತ್ತದೆ. ಸಮೀಕ್ಷೆಯ ಒಂದನೇ ಹಂತವು 2021ರ ಫೆಬ್ರವರಿಯಲ್ಲಿ ಬಿಡುಗಡೆ ಮಾಡಲಾಯಿತು. 2021ರ ಕಾರ್ಯಪಡೆ ಮತ್ತು ವೇತನ ಹೆಚ್ಚಳದ ಟ್ರೆಂಡ್ ಸಮೀಕ್ಷೆಯನ್ನು ಜುಲೈ 2021ರಲ್ಲಿ ಆರಂಭಿಸಲಾಯಿತು. ಈ ಸಮೀಕ್ಷೆಯ ಪ್ರಾಥಮಿಕವಾಗಿ ಭಾಗಿ ಆದವರು ಪರಿಣತ ಮಾನವ ಸಂಪನ್ಮೂಲ ವೃತ್ತಿಪರರು. 450ಕ್ಕೂ ಹೆಚ್ಚು ಸಂಸ್ಥೆಗಳು ಈ ಆವೃತ್ತಿಯು ಏಳು ವಲಯಗಳು ಮತ್ತು 24 ಉಪ ವಲಯಗಳಲ್ಲಿ ಹರಡಿವೆ.

ಸಮೀಕ್ಷೆಯು ತಿಳಿಸಿರುವಂತೆ, ಕೌಶಲ ಮತ್ತು ಕಾರ್ಯಕ್ಷಮತೆಯ ಮೂಲಕ ವೇತನ ಹೆಚ್ಚಳ ಪ್ರತ್ಯೇಕಿಸುವುದನ್ನು ಸಂಸ್ಥೆಗಳು ಮುಂದುವರಿಸುತ್ತವೆ ಮತ್ತು ಸರಾಸರಿ ಸಿಬ್ಬಂದಿಗೆ ನೀಡುವ 1.8 ಪಟ್ಟು ಹೆಚ್ಚಳವನ್ನು ಟಾಪ್​ ಪರ್ಫಾರ್ಮರ್ಸ್​ ಆದವರು ನಿರೀಕ್ಷಿಸಬಹುದು ಎಂದು ಹೇಳಿದೆ. 2022ರಲ್ಲಿ ಮಾಹಿತಿ ತಂತ್ರಜ್ಞಾನ (ಐಟಿ) ವಲಯವು ಅತ್ಯಧಿಕ ಏರಿಕೆಗಳನ್ನು ನೀಡುವ ಸಾಧ್ಯತೆಯಿದೆ ಎಂದು ಹೇಳಲಾಗಿದೆ. ಆ ನಂತರದ ಸ್ಥಾನ ಜೀವ ವಿಜ್ಞಾನ ವಿಭಾಗದ್ದು. ಕೆಲವು ಡಿಜಿಟಲ್/ಇ-ಕಾಮರ್ಸ್ ಕಂಪೆನಿಗಳು ಅತಿ ಹೆಚ್ಚಿನ ಏರಿಕೆಗಳನ್ನು ನೀಡಲು ಯೋಜಿಸುವುದರೊಂದಿಗೆ ಎರಡಂಕಿಯ ಹೆಚ್ಚಳವನ್ನು ವಿಸ್ತರಿಸುವ ನಿರೀಕ್ಷೆಯಿರುವ ಏಕೈಕ ಕ್ಷೇತ್ರ ಐಟಿ (ಮಾಹಿತಿ ತಂತ್ರಜ್ಞಾನ).

ಚಿಲ್ಲರೆ ವ್ಯಾಪಾರ (ರೀಟೇಲ್), ಆತಿಥ್ಯ (ಹಾಸ್ಪಿಟಾಲಿಟಿ), ರೆಸ್ಟೋರೆಂಟ್‌ಗಳು, ಮೂಲಸೌಕರ್ಯಗಳು ಮತ್ತು ರಿಯಲ್ ಎಸ್ಟೇಟ್ ಕಂಪೆನಿಗಳು ತಮ್ಮ ವ್ಯಾಪಾರಕ್ಕೆ ಅನುಗುಣವಾಗಿ ಕೆಲವು ಕಡಿಮೆ ಪ್ರಮಾಣದ ಏರಿಕೆಗಳನ್ನು ಮುಂದುವರಿಸುತ್ತವೆ. 2021ರಲ್ಲಿ ಶೇಕಡಾ 12ರಷ್ಟು ಉದ್ಯೋಗಿಗಳಿಗೆ ಬಡ್ತಿ ನೀಡಲಾಗಿದ್ದು, 2020ರಲ್ಲಿ ಆದ ಶೇ 10ರ ಪ್ರಮಾಣಕ್ಕೆ ಹೋಲಿಸಿದರೆ ಸುಮಾರು ಶೇ 12ರಷ್ಟು ಕಂಪೆನಿಗಳು ತಮ್ಮ ಬೋನಸ್ ಅಥವಾ ವೇರಿಯಬಲ್ ಪೇ ಪ್ಲಾನ್​ಗಳನ್ನು, ರಿವಾರ್ಡ್ ರಚನೆಗಳನ್ನು ಬದಲಾಗುತ್ತಿರುವ ಆದ್ಯತೆಗಳೊಂದಿಗೆ ಜೋಡಿಸಲು ಅಪ್‌ಡೇಟ್ ಮಾಡಿವೆ. ನೇಮಕಾತಿಗೆ ಸಂಬಂಧಿಸಿದಂತೆ ಶೇ 78ರಷ್ಟು ಕಂಪೆನಿಗಳು ಕೊವಿಡ್ -19ಗೆ ಮುಂಚಿತವಾಗಿ ಬಳಸಿದ ಅದೇ ವೇಗದಲ್ಲಿ ನೇಮಕಾತಿ ಆರಂಭಿಸಿವೆ ಎಂದು ಹೇಳಲಾಗಿದೆ.

ಇದನ್ನೂ ಓದಿ: Wipro: ವಿಪ್ರೋದಿಂದ 2021ರಲ್ಲಿ ಎರಡನೇ ಬಾರಿಗೆ ವೇತನ ಹೆಚ್ಚಳ ಘೋಷಣೆ; ಶೇ 80ಕ್ಕೂ ಹೆಚ್ಚು ಮಂದಿಗೆ ಸೆ. 1ರಿಂದ ಜಾಸ್ತಿ ಸಂಬಳ

Salary Hike: ಹೊಸ ಉದ್ಯೋಗಿಗಳಿಗೆ ಶೇ 120ರಷ್ಟು ವೇತನ ಹೆಚ್ಚಳಕ್ಕೆ ಟಿಸಿಎಸ್, ವಿಪ್ರೋ, ಇನ್ಫೋಸಿಸ್ ಯೋಜನೆ

(How Much Salary Hike You Can Expect Next Year Here Is The Survey Report)

Published On - 2:53 pm, Mon, 20 September 21