ಹೊಸ LPG ಸಂಪರ್ಕವನ್ನು ಪಡೆಯಬೇಕು ಅಂತಿದ್ದೀರಾ? ಸರಿ, ಇಂಡೇನ್ ಎಲ್‌ಪಿಜಿ ಸಂಪರ್ಕವು ಈಗ ಒಂದೇ ಒಂದು ಮಿಸ್ಡ್ ಕಾಲ್ ದೂರದಲ್ಲಿದೆ. ಅಲ್ಲದೆ, ಇಂಡೇನ್ ಎಲ್‌ಪಿಜಿ ಬಳಕೆದಾರರು ತಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಯಿಂದ ಮಿಸ್ಡ್ ಕಾಲ್ ನೀಡುವ ಮೂಲಕ ರೀಫಿಲ್ ಅನ್ನು ಸಹ ಬುಕ್ ಮಾಡಬಹುದು. ಇಂಡೇನ್ನ ಈ ಸೌಲಭ್ಯವನ್ನು ಇತ್ತೀಚೆಗೆ ಇಂಡಿಯನ್ ಆಯಿಲ್ನ ಅಧಿಕೃತ ಟ್ವಿಟರ್ ಹ್ಯಾಂಡಲ್ನಿಂದ ಹೀಗೆ ಟ್ವೀಟ್ ಮಾಡಲಾಗಿದೆ: “ನಿಮ್ಮ ಹೊಸ #Indane ಎಲ್‌ಪಿಜಿ ಸಂಪರ್ಕವು ಕೇವಲ ಒಂದು ಮಿಸ್ಡ್ ಕಾಲ್ ದೂರ! 8454955555 ಅನ್ನು ಡಯಲ್ ಮಾಡಿ ಮತ್ತು ನಿಮ್ಮ ಮನೆ ಬಾಗಿಲಿಗೆ ಎಲ್‌ಪಿಜಿ ಸಂಪರ್ಕವನ್ನು ಪಡೆಯಿರಿ. ಈಗಿರುವ ಇಂಡೇನ್ ಗ್ರಾಹಕರು ತಮ್ಮ ನೋಂದಾಯಿತ ಫೋನ್ ಸಂಖ್ಯೆಯಿಂದ ನಮಗೆ ಮಿಸ್ಡ್ ಕಾಲ್ ನೀಡುವ ಮೂಲಕ ರೀಫಿಲ್ ಅನ್ನು ಬುಕ್ ಮಾಡಬಹುದು.”
ಇಂಡೇನ್ ಎಲ್‌ಪಿಜಿ ಸಂಪರ್ಕವನ್ನು ಪಡೆಯಲು, 8454955555ಗೆ ಮಿಸ್ಡ್ ಕಾಲ್ ನೀಡಬಹುದು. ಇಂಡೇನ್ ಎಲ್‌ಪಿಜಿ ಸಿಲಿಂಡರ್ ಅನ್ನು ರೀಫಿಲ್ ಮಾಡಲು ಕೆಲವು ಸ್ಮಾರ್ಟ್ ಬುಕಿಂಗ್ ಮೋಡ್‌ಗಳಿವೆ. ಅವು ಈ ಕೆಳಗಿನಂತಿವೆ:
1) ಎಲ್‌ಪಿಜಿ ಸಿಲಿಂಡರ್ ರೀಫಿಲ್ಲಿಂಗ್ ಅನ್ನು ವಾಟ್ಸಾಪ್ ಸಂಖ್ಯೆ 7588888824 ಮೂಲಕ ವಿನಂತಿಸಬಹುದು
2) 8454955555 ಸಂಖ್ಯೆಗೆ ಮಿಸ್ಡ್ ಕಾಲ್ ನೀಡಬಹುದು
3) 7718955555ರಲ್ಲಿ ಎಸ್‌ಎಂಎಸ್ ಅಥವಾ ಐವಿಆರ್‌ಎಸ್ ಬುಕಿಂಗ್ ಮೂಲಕ ಇಂಡೇನ್ ಎಲ್‌ಪಿಜಿ ಸಿಲಿಂಡರ್ ರೀಫಿಲ್ ಬುಕ್ ಮಾಡಬಹುದು.
4) ಇಂಡಿಯನ್ ಆಯಿಲ್ ಒನ್ ಆ್ಯಪ್ ಮೂಲಕ LPG ಸಿಲಿಂಡರ್ ರೀಫಿಲ್ ಬುಕ್ಕಿಂಗ್ ಕೂಡ ಸಾಧ್ಯ
5) ಭಾರತ್ ಬಿಲ್ ಪಾವತಿ ವ್ಯವಸ್ಥೆಯ ಮೂಲಕ ಇಂಡೇನ್ ಎಲ್‌ಪಿಜಿ ಸಿಲಿಂಡರ್ ರೀಫಿಲ್ ಬುಕ್ ಮಾಡಬಹುದು
6) LPG ಸಿಲಿಂಡರ್ ರೀಫಿಲ್ ಬುಕಿಂಗ್ ಅನ್ನು cx.indianoil.in ಆನ್ಲೈನ್ ಪೋರ್ಟಲ್ ಮೂಲಕವೂ ಮಾಡಬಹುದು.
ಈಗ, ಎಲ್‌ಪಿಜಿ ಸಿಲಿಂಡರ್‌ಗಳ (14.2 ಕೆಜಿ ಸಿಲಿಂಡರ್‌ಗಳಿಗೆ) ಬೆಲೆಯನ್ನು ಸೆಪ್ಟೆಂಬರ್ 1, 2021ರಿಂದ ಮತ್ತೆ 25 ರೂಪಾಯಿ ಹೆಚ್ಚಿಸಲಾಗಿದೆ ಎಂಬುದನ್ನು ಗಮನಿಸಬೇಕು. IOCL ವೆಬ್‌ಸೈಟ್‌ನ ಪ್ರಕಾರ, ಆಗಸ್ಟ್ 17, 2021ರಿಂದ 14.2 ಕೇಜಿ ಸಿಲಿಂಡರ್‌ಗಾಗಿ ಇಂಡೇನ್ ಸಬ್ಸಿಡಿ ರಹಿತ ಬೆಲೆಗಳು ಹೀಗಿವೆ:
1) ದೆಹಲಿ – 884.50
2) ಕೋಲ್ಕತ್ತಾ – 911.00
3) ಮುಂಬೈ – 884.50
4) ಚೆನ್ನೈ – 900.50
ಆಗಸ್ಟ್ 17, 2021ರಿಂದ 19 ಕೇಜಿ ಸಿಲಿಂಡರ್‌ಗಾಗಿ ಇಂಡೇನ್ ಸಬ್ಸಿಡಿ ರಹಿತ ಬೆಲೆಗಳು ಹೀಗಿವೆ:
1) ದೆಹಲಿ – 1693.00
2) ಕೋಲ್ಕತ್ತಾ – 1770.50
3) ಮುಂಬೈ – 1649.50
4) ಚೆನ್ನೈ – 1831.00
ಆದ್ದರಿಂದ, ಎಲ್‌ಪಿಜಿ ಸಂಪರ್ಕಕ್ಕಾಗಿ ಎದುರು ನೋಡುತ್ತಿದ್ದರೆ ಮೇಲಿನ ಸಂಖ್ಯೆಗೆ ಮಿಸ್ಡ್ ಕಾಲ್ ನೀಡಿ ಮತ್ತು ಇಂಡೇನ್ ಎಲ್‌ಪಿಜಿ ಸಂಪರ್ಕವನ್ನು ಪಡೆಯಬಹುದು. ಒಂದು ವೇಳೆ ಹೆಚ್ಚಿನ ಪ್ರಶ್ನೆ ಮತ್ತು ವಿವರಗಳು ಬೇಕಾಗಿದ್ದಲ್ಲಿ iocl.comನಲ್ಲಿ IOCLನ ಅಧಿಕೃತ ವೆಬ್‌ಸೈಟ್‌ಗೆ ಲಾಗಿನ್ ಮಾಡಬಹುದು.
ಇದನ್ನೂ ಓದಿ: LPG Subsidy: ಎಲ್‌ಪಿಜಿ ಸಬ್ಸಿಡಿ ಪಾವತಿಸದ ಕೇಂದ್ರ ಸರ್ಕಾರದಿಂದ 27,255 ಕೋಟಿ ರೂ. ಉಳಿತಾಯ
(How To Get New LPG Connection By Giving Missed Call Here Is The Step By Strep Details)