How to Link Aadhaar Card with EPF Account: ಆಧಾರ್ ಜತೆಗೆ ಪಿಎಫ್​ ಖಾತೆ ಜೋಡಣೆ ಮಾಡುವುದು ಹೇಗೆ?

|

Updated on: Jun 01, 2021 | 12:49 PM

ಜೂನ್ 1ರಿಂದ ಪಿಎಫ್ ಜತೆಗೆ ಆಧಾರ್ ಕಾರ್ಡ್ ಜೋಡಣೆ ಕಡ್ಡಾಯ ಮಾಡಲಾಗಿದೆ. ಹೀಗೆ ಜೋಡಣೆ ಆಗಿದೆ ಅನ್ನೋದನ್ನು ಉದ್ಯೋಗದಾತರೇ ಖಾತ್ರಿ ಪಡಿಸಬೇಕು. ಇಲ್ಲದಿದ್ದರೆ ಏನಾಗುತ್ತದೆ ಎಂಬ ಬಗ್ಗೆ ವಿವರ ಇಲ್ಲಿದೆ.

How to Link Aadhaar Card with EPF Account: ಆಧಾರ್ ಜತೆಗೆ ಪಿಎಫ್​ ಖಾತೆ ಜೋಡಣೆ ಮಾಡುವುದು ಹೇಗೆ?
ಆಧಾರ್ ಕಾರ್ಡ್
Follow us on

ನವದೆಹಲಿ: ಕಾರ್ಮಿಕರ ಭವಿಷ್ಯ ನಿಧಿ ಒಕ್ಕೂಟದ ಹೊಸ ನಿಯಮವಾದ ಆಧಾರ್ ಮತ್ತು ಪ್ರಾವಿಡೆಂಟ್ ಫಂಡ್ ಜೋಡಣೆಯು ಜೂನ್ 1, 2021ರಿಂದ ಕಡ್ಡಾಯ ಆಗಿದೆ. ಒಂದು ವೇಳೆ ಪಿಎಫ್ ಖಾತೆದಾರರು ಈ ನಿಯಮಕ್ಕೆ ಬದ್ಧರಾಗದಿದ್ದಲ್ಲಿ ಅದರ ಪರಿಣಾಮವು ಖಾತೆದಾರರ ಇಪಿಎಫ್ ಕೊಡುಗೆ ಮೇಲೆ ಆಗುತ್ತದೆ. ಇಪಿಎಫ್​ಒ ಹೊಸ ನಿಯಮದ ಪ್ರಕಾರ, ಪ್ರತಿ ಖಾತೆದಾರರು ತಮ್ಮ ಪಿಎಫ್​ ಖಾತೆಯನ್ನು ಆಧಾರ್​ ಕಾರ್ಡ್ ಜತೆಗೆ ಜೋಡಣೆ ಆಗಬೇಕು. ಉದ್ಯೋಗಿಗಳು ಪಿಎಫ್​ ಖಾತೆಯನ್ನು ದೃಢೀಕರಿಸುವಂತೆ ಸೂಚಿಸಬೇಕಾದದ್ದು ಉದ್ಯೋಗದಾತರದೇ ಜವಾಬ್ದಾರಿ. ಜೂನ್ 1ಕ್ಕೆ ಉದ್ಯೋಗಿಗಳು ಪಿಎಫ್​ ಜತೆಗೆ ಆಧಾರ್ ಜೋಡಣೆ ಮಾಡಲು ವಿಫಲವಾದಲ್ಲಿ ಹಲವು ಬಗೆಯ ನಷ್ಟವನ್ನು ಅನುಭವಿಸಬೇಕಾಗುತ್ತದೆ. ಅದರಲ್ಲಿ ಮುಖ್ಯವಾದದ್ದು ಏನೆಂದರೆ, ಉದ್ಯೋಗದಾತರು ಪಿಎಫ್​ ಖಾತೆಗೆ ನೀಡುವ ಕೊಡುಗೆ ನಿಲ್ಲುತ್ತದೆ. ಈ ಬಗ್ಗೆ ಇಪಿಎಫ್​ಒದಿಂದ ಅಧಿಸೂಚನೆಯನ್ನು ಹೊರಡಿಸಲಾಗಿದೆ.

ಏನಿದು ಹೊಸ ನಿಯಮ?
ಸಾಮಾಜಿಕ ಭದ್ರತೆ ಸಂಹಿತೆ 2020, ಸೆಕ್ಷನ್ 142 ಅಡಿಯಲ್ಲಿ ಇಪಿಎಫ್​ಒದಿಂದ ಹೊಸ ನಿಯಮವನ್ನು ಜಾರಿಗೆ ತರಲಾಗಿದೆ. ನಿಯಂತ್ರಕ ಸಂಸ್ಥೆಯಿಂದ ಉದ್ಯೋಗದಾತರಿಗೆ ಸ್ಪಷ್ಟವಾದ ಸೂಚನೆ ನೀಡಲಾಗಿದ್ದು, ಜೂನ್ 1ರಿಂದ ಪಿಎಫ್ ಖಾತೆಯು ಆಧಾರ್ ಅಥವಾ ಯುಎಎನ್ ಜತೆಗೆ ಜೋಡಣೆ ಆಗದಿದ್ದಲ್ಲಿ ಆಧಾರ್ ದೃಢೀಕರಣ ಆಗಿಲ್ಲ ಎಂದಾಗುತ್ತದೆ. ಆ ನಂತರ ಇಸಿಆರ್- ಎಲೆಕ್ಟ್ರಾನಿಕ್ ಚಲನ್ ಕಮ್ ರಿಟರ್ನ್ ಭರ್ತಿ ಆಗುವುದಿಲ್ಲ.

ಇದರರ್ಥ ಏನೆಂದರೆ, ಉದ್ಯೋಗಿಗಳು ಪಿಎಫ್​ಗೆ ತಮ್ಮ ಕೊಡುಗೆಯನ್ನು ನೋಡಬಹುದು. ಆದರೆ ಉದ್ಯೋಗದಾತರ ಪಾಲನ್ನು ಪಡೆಯುವುದು ಸಾಧ್ಯವಿಲ್ಲ.

ಇಪಿಎಫ್​ ಖಾತೆಯನ್ನು ಆಧಾರ್ ಜತೆಗೆ ಲಿಂಕ್ ಮಾಡುವುದು ಹೇಗೆ?
* ಯೂನಿಫೈಡ್ ಮೆಂಬರ್ ಪೋರ್ಟಲ್​ನಲ್ಲಿ ಇಪಿಎಫ್​ ಖಾತೆ
* ‘ಮ್ಯಾನೇಜ್’ ವಿಭಾಗದಲ್ಲಿ ‘ಕೆವೈಸಿ’ ಆಯ್ಕೆ ಮೇಲೆ ಕ್ಲಿಕ್ ಮಾಡಿ
* ಯಾವುದನ್ನು ಯುಎಎನ್​ ಜತೆಗೆ ಜೋಡಣೆ ಮಾಡಲು ಬಯಸುತ್ತೀರೋ ನೀವು ಆ ಮಾಹಿತಿಯನ್ನು ಆಯ್ಕೆ ಮಾಡಿಕೊಳ್ಳಬಹುದು (ಪ್ಯಾನ್, ಬ್ಯಾಂಕ್ ಅಕೌಂಟ್, ಆಧಾರ್ ಮುಂತಾದವು).
* ಅಗತ್ಯ ಇರುವ ಮಾಹಿತಿಯನ್ನು ಭರ್ತಿ ಮಾಡಿ
* Save ಆಯ್ಕೆಯ ಮೇಲೆ ಕ್ಲಿಕ್ ಮಾಡಿ

ಇದರೊಂದಿಗೆ ಪಿಎಫ್ ಖಾತೆ ಜತೆಗೆ ಆಧಾರ್ ಜೋಡಣೆ ಆಗುತ್ತದೆ.

ಇದನ್ನೂ ಓದಿ: Covid- 19 PF Withdrawal: ಕೋವಿಡ್-19 ಕಾರಣಕ್ಕೆ ಎರಡನೇ ಬಾರಿಗೆ ಪಿಎಫ್​ ವಿಥ್​ಡ್ರಾ ಅವಕಾಶ; ಎಷ್ಟು, ಹೇಗೆ ಮಾಹಿತಿ ಇಲ್ಲಿದೆ

ಇದನ್ನೂ ಓದಿ: PF Withdrawal Rules: ಪಿಎಫ್ ವಿಥ್​ಡ್ರಾ, ವರ್ಗಾವಣೆ ಮಾಡುವುದಕ್ಕೆ ಅನುಸರಿಸಬೇಕಾದ ನಿಯಮಗಳೇನು?

( EPF and Aadhaar link become mandatory from June 1, 2021. How to link Aadhaar card with EPF account? Here is the step by step details)