ಆಧಾರ್ ಕಾರ್ಡ್ ಬಳಕೆದಾರರೇ ನಿಮ್ಮ ಮೊಬೈಲ್ ಫೋನ್ ಸಂಖ್ಯೆಯನ್ನು ಸದಾ ಅಪ್ಡೇಟ್ ಮಾಡಿಟ್ಟುಕೊಳ್ಳಿ ಎಂದು ಯೂನಿಕ್ ಐಡಿಂಟಿಫಿಕೇಷನ್ ಅಥಾರಿಟಿ ಆಫ್ ಇಂಡಿಯಾ (UIDAI) ಎಚ್ಚರಿಕೆ ನೀಡಿದೆ. ವಂಚಕರಿಂದ ಜಾಗ್ರತೆ ವಹಿಸುವಂತೆ ಟ್ವಿಟ್ಟರ್ ಹ್ಯಾಂಡಲ್ ಮೂಲಕ ಮನವಿ ಮಾಡಲಾಗಿದೆ. ಆಧಾರ್ ಆನ್ಲೈನ್ ಸೇವೆಗಳು ಲಭ್ಯ ಆಗುವುದಕ್ಕೆ ನೋಂದಾಯಿತ ಮೊಬೈಲ್ ಫೋನ್ ಸಂಖ್ಯೆ ಮುಖ್ಯವಾದದ್ದು. ಆದ್ದರಿಂದ ಆ ದಾಖಲೆಯಲ್ಲಿ ಇರುವಂತೆ ನಿಮ್ಮ ಮೊಬೈಲ್ ಸಂಖ್ಯೆಯನ್ನು ಪರಿಷ್ಕರಣೆ ಮಾಡಿಟ್ಟುಕೊಳ್ಳಿ. ಒಂದು ವೇಳೆ ಆಧಾರ್ ಜತೆಗೆ ಫೋನ್ ನಂಬರ್ ಅನ್ನು ಸಲ್ಲಿಸಿಲ್ಲ ಎಂದಾದಲ್ಲಿ ಹತ್ತಿರದ ಪರ್ಮನೆಂಟ್ ಆಧಾರ್ ಸೆಂಟರ್ಗೆ ಭೇಟಿ ನೀಡಬಹುದು. ಸೆಪ್ಟೆಂಬರ್ 20ನೇ ತಾರೀಕಿನಂದು ಸಂವಹನ ಸಚಿವಾಲಯದ ಅಧಿಕೃತ ಟ್ವಿಟ್ಟರ್ ಹ್ಯಾಂಡಲ್ನಿಂದ ಪೋಸ್ಟ್ ಮಾಡಲಾಗಿದೆ. ಅದರಲ್ಲಿ ಹೇಳಿರುವಂತೆ, ನಿಮ್ಮ ಆಧಾರ್ನಲ್ಲಿ ಮೊಬೈಲ್ ಸಂಖ್ಯೆ ಅಪ್ಡೇಟ್ ಆಗಿಟ್ಟುಕೊಳ್ಳಿ. ಸರಿಯಾದ ಮೊಬೈಲ್ ನಂಬರ್ ಅಥವಾ ಇಮೇಲ್ ಅಪ್ಡೇಟ್ ಆಗಿದೆಯಾ ಎಂಬ ಬಗ್ಗೆ ನಿಮಗೇನಾದರೂ ಅನುಮಾನ ಇದ್ದಲ್ಲಿ ಈ ಲಿಂಕ್: https://resident.uidai.gov.in/verify-email-mobile ಮೂಲಕ ದೃಢಪಡಿಸಿಕೊಳ್ಳಿ ಎನ್ನಲಾಗಿದೆ.
ಆಧಾರ್ ನೋಂದಣಿ ಸಮಯದಲ್ಲಿ ಬಳಕೆದಾರರು ನೀಡಿದ ಇಮೇಲ್ ವಿಳಾಸ ಮತ್ತು ಮೊಬೈಲ್ ಸಂಖ್ಯೆ ಅಥವಾ ಇತ್ತೀಚಿನ ಆಧಾರ್ ಮಾಹಿತಿ ಅಪ್ಡೇಟ್ ಅನ್ನು ಆಧಾರ್ ವೆಬ್ಸೈಟ್ನಲ್ಲಿ ದೃಢಪಡಿಸಿಕೊಳ್ಳಬಹುದು.
ಇಮೇಲ್ ಹಾಗೂ ಮೊಬೈಲ್ ಸಂಖ್ಯೆಯನ್ನು ದೃಢಪಡಿಸಿಕೊಳ್ಳುವುದಕ್ಕೆ ಅನುಸರಿಸಬೇಕಾದ ಹಂತಹಂತವಾದ ವಿವರಣೆ ಇಲ್ಲಿದೆ:
ಹಂತ 1: UIDAI ಅಧಿಕೃತ ವೆಬ್ಸೈಟ್ https://uidai.gov.in/ ಅಥವಾ ನೇರವಾಗಿ ಟೈಪ್ ಮಾಡಿ ಮತ್ತು https://resident.uidai.gov.in/verify-email-mobile.
ಹಂತ 2: ಅಧಿಕೃತ UIDAIಗೆ ತೆರಳಿ My Aadhaar ಮೇಲೆ ಕ್ಲಿಕ್ ಮಾಡಿ.
ಹಂತ 3: ಟ್ಯಾಬ್ಗೆ ತೆರಳಿ ಆಧಾರ್ ಸೇವೆಗಳನ್ನು ಓದಿಕೊಳ್ಳಿ ಮತ್ತು Verify Email/Mobile Number ಆಯ್ಕೆ ಮಾಡಿಕೊಳ್ಳಿ.
ಹಂತ 4: ಬಹಳ ಎಚ್ಚರಿಕೆಯಿಂದ ಹನ್ನೆರಡು ಆಧಾರ್ ಸಂಖ್ಯೆಯನ್ನು (UID) ನಮೂದಿಸಿ.
ಹಂತ 5: ಸರಿಯಾದ ಸಂಪರ್ಕ ಮಾಹಿತಿಯನ್ನು ಒದಗಿಸಿ (ಮೊಬೈಲ್ ಸಂಖ್ಯೆ ಅಥವಾ ಇಮೇಲ್)
ಹಂತ 6: Captcha ದೃಢೀಕರಣ ಸಂಪೂರ್ಣಗೊಳಿಸಿ.
ಹಂತ 7: ಈಗ ಕ್ಲಿಕ್ ಮಾಡಿ ಮತ್ತು ಒಟಿಪಿ ಆಯ್ಕೆ ಕಳಿಸಿ.
ಆಧಾರ್ ಸಂಖ್ಯೆಯು 12 ಅಂಕಿಯದ್ದಾಗಿದ್ದು, UIDAIನಿಂದ ಭಾರತ ನಾಗರಿಕರಿಗೆ ವಿತರಿಸಲಾಗುತ್ತದೆ. ಆದರೆ ಅದಕ್ಕೂ ಮುಂಚೆ ಸಂಪೂರ್ಣ ದೃಢೀಕರಣ ಪ್ರಕ್ರಿಯೆಯನ್ನು ಖಾತ್ರಿಪಡಿಸಬೇಕಾಗುತ್ತದೆ. ವಯಸ್ಸು ಮತ್ತು ಲಿಂಗ ಈ ರೀತಿಯ ಭೇದ ಇಲ್ಲದೆ ಭಾರತದ ನಾಗರಿಕರು ಯಾರಾದರೂ ಆಧಾರ್ ಪಡೆದುಕೊಳ್ಳುವುದಕ್ಕೆ ನೋಂದಣಿ ಮಾಡಬಹುದು. ಕನಿಷ್ಠ ಮಟ್ಟದ ಬಯೋಮೆಟ್ರಿಕ್ ಮತ್ತು ಇತರ ಮಾಹಿತಿಯನ್ನು ಒದಗಿಸಿದರೆ ಸಾಕು. ಈ ಪ್ರಕ್ರಿಯೆಗೆ ಯಾವುದೇ ಶುಲ್ಕ ಇರುವುದಿಲ್ಲ.
ಇದನ್ನೂ ಓದಿ: Aadhaar card: ಆಧಾರ್ ನೋಂದಣಿ, ಅಪ್ಡೇಟ್ಗೆ ಮಹತ್ವದ ಘೋಷಣೆ; ಕೇಂದ್ರಗಳ ಸಂಖ್ಯೆ ಹೆಚ್ಚಳ