Aadhaar card: ಆಧಾರ್​ ನೋಂದಣಿ, ಅಪ್​ಡೇಟ್​ಗೆ ಮಹತ್ವದ ಘೋಷಣೆ; ಕೇಂದ್ರಗಳ ಸಂಖ್ಯೆ ಹೆಚ್ಚಳ

ಆಧಾರ್ ನೋಂದಣಿ ಹಾಗೂ ಅಪ್​ಡೇಟ್ ಸಲೀಸಾಗಿ ಆಗುವ ಉದ್ದೇಶದಿಂದ ಯುಐಡಿಎಐ ಆಧಾರ್​ ಕೇಂದ್ರಗಳ ಸಂಖ್ಯೆ ಹೆಚ್ಚಿಸಲು ನಿರ್ಧರಿಸಿದೆ.

Aadhaar card: ಆಧಾರ್​ ನೋಂದಣಿ, ಅಪ್​ಡೇಟ್​ಗೆ ಮಹತ್ವದ ಘೋಷಣೆ; ಕೇಂದ್ರಗಳ ಸಂಖ್ಯೆ ಹೆಚ್ಚಳ
ಪ್ರಾತಿನಿಧಿಕ ಚಿತ್ರ
Follow us
TV9 Web
| Updated By: Srinivas Mata

Updated on: Oct 02, 2021 | 1:27 PM

ಆಧಾರ್ ಅಪ್​ಡೇಟ್ ಹಾಗೂ ನೋಂದಣಿಯನ್ನು ಇನ್ನಷ್ಟು ಸಲೀಸು ಮಾಡುವ ಉದ್ದೇಶದಿಂದ ಯೂನಿಕ್ ಐಡೆಂಟಿಫಿಕೇಷನ್ ಅಥಾರಿಟಿ ಆಫ್ ಇಂಡಿಯಾದಿಂದ (UIDAI) ಇನ್ನಷ್ಟು ಸಂಖ್ಯೆಯಲ್ಲಿ ಆಧಾರ್​ಗಷ್ಟೇ ಮೀಸಲಾದ ಕೇಂದ್ರಗಳನ್ನು ಭಾರತದಲ್ಲಿ ಆರಂಭಿಸಲು ತೀರ್ಮಾನಿಸಲಾಗಿದೆ. ಇಲ್ಲಿ ಆಧಾರ್​ ನೋಂದಣಿ ಹಾಗೂ ಅಪ್​ಡೇಟ್​ಗಂತಲೇ ಮೀಸಲಾಗಿ ಇಡಲಾಗುತ್ತದೆ. ಭಾರತದ 122 ನಗರಗಳಲ್ಲಿ ಇಂಥ 166 ಕೇಂದ್ರಗಳನ್ನು ಆರಂಭಿಸುವುದಾಗಿ UIDAI ಘೋಷಿಸಿದೆ. ಇದರಿಂದಾಗಿ ಭಾರತೀಯ ನಾಗರಿಕರು ಹೊಸದಾಗಿ ಆಧಾರ್​ ಕಾರ್ಡ್​ಗೆ ಅಪ್ಲೈ ಮಾಡುವುದಕ್ಕೆ ಮತ್ತು ಈಗಾಗಲೇ ಇರುವ ಆಧಾರ್ ಕಾರ್ಡ್ ಅಪ್​ಡೇಟ್​ ಮಾಡುವುದಕ್ಕೆ ಸುಲಭ ಆಗುತ್ತದೆ.​ UIDAIನಿಂದ 55 ಸೇವಾ ಕೇಂದ್ರಗಳನ್ನು ಈಗಾಗಲೇ ಆರಂಭಿಸಲಾಗಿದೆ. ಇದು 166 ಕೇಂದ್ರಗಳ ಆರಂಭದ ಭಾಗವಾಗಿ ಶುರು ಮಾಡಲಾಗಿದೆ. ಈಗಾಗಲೇ ಬ್ಯಾಂಕ್​ಗಳು, ಪೋಸ್ಟ್​ ಆಫೀಸ್​ಗಳು ಮತ್ತು ರಾಜ್ಯ ಸರ್ಕಾರಗಳಿಂದ 52,000 ಆಧಾರ್​ ನೋಂದಣಿ ಕೇಂದ್ರಗಳನ್ನು ನಡೆಸಲಾಗುತ್ತದೆ. ಈ ಆಧಾರ್​ ಸೇವಾ ಕೇಂದ್ರಗಳನ್ನು (ASK) ವಾರದ ಎಲ್ಲ ದಿನಗಳಲ್ಲೂ ತೆರೆದಿರುತ್ತದೆ. ಈವರೆಗೆ ದಿವ್ಯಾಂಗ ವ್ಯಕ್ತಿಗಳೂ ಸೇರಿ 70 ಲಕ್ಷ ನಿವಾಸಿಗಳಿಗೆ ಸೇವೆ ನೀಡಲಾಗಿದೆ.

ಈ ಕೇಂದ್ರಗಳಲ್ಲಿ 1000 ಮಂದಿ ನೋಂದಣಿ ಮತ್ತು ಅಪ್​ಡೇಟ್ ಮಾಡುವಷ್ಟು ಸಾಮರ್ಥ್ಯ ಇರುವುದಕ್ಕೆ ಮಾಡೆಲ್-ಎ ಆಧಾರ್​ ಸೇವಾ ಕೇಂದ್ರಗಳು, 500ರ ತನಕ ಇರುವುದಕ್ಕೆ ಮಾಡೆಲ್ ಬಿ ಆಧಾರ್​ ಸೇವಾ ಕೇಂದ್ರ ಮತ್ತು 250 ನೋಂದಣಿ ಮತ್ತು ಅಪ್​ಡೇಟ್​ ಮನವಿ ಮಾಡುವುದಕ್ಕೆ ಮಾಡೆಲ್-ಸಿ ಆಧಾರ್​ ಸೇವಾ ಕೇಂದ್ರಗಳೆಂದು ವಿಭಜಿಸಲಾಗಿದೆ. ಈ ಸೇವಾ ಕೇಂದ್ರಗಳನ್ನು ಪ್ರತಿ ದಿನ ಬೆಳಗ್ಗೆ 9 ಗಂಟೆಯಿಂದ ಸಂಜೆ 5.30ರ ತನಕ ಕಾರ್ಯ ನಿರ್ವಹಿಸುತ್ತದೆ. ಸಾರ್ವಜನಿಕ ರಜಾ ದಿನಗಳಲ್ಲಿ ಕಾರ್ಯ ನಿರ್ವಹಿಸುವುದಿಲ್ಲ.

ಆಧಾರ್ ನೋಂದಣಿ ಉಚಿತವಾಗಿದ್ದು, ಉಳಿದಂತೆ ಹೆಸರು ಮತ್ತಿತರ ಬದಲಾವಣೆಗೆ 50 ರೂಪಾಯಿ ಬಯೋಮೆಟ್ರಿಕ್ ಅಪ್​ಡೇಟ್​ ಹಾಗೂ/ಅಥವಾ ಹೆಸರು ಮತ್ತಿತರ ಬದಲಾವಣೆಗಳಿಗೆ 100 ರೂಪಾಯಿ ವಿಧಿಸಲಾಗುತ್ತದೆ. ಆಧಾರ್​ ಸೇವಾ ಕೇಂದ್ರಗಳಿಗೆ ಆನ್​ಲೈನ್ ಅಪಾಯಿಂಟ್​ಮೆಂಟ್​ ವ್ಯವಸ್ಥೆ ಇದ್ದು, ಟೋಕನ್ ಮ್ಯಾನೇಜ್​ಮೆಂಟ್ ಸಿಸ್ಟಮ್​ ಇದೆ. ಇದು ನಿವಾಸಿಗಳಿಗೆ ಅಡೆ-ತಡೆ ಇಲ್ಲದ ನೋಂದಣಿ ಮಾಡುವುದಕ್ಕೆ ವಿವಿಧ ಹಂತಗಳಿಗೆ ಮಾರ್ಗದರ್ಶನ ನೀಡುತ್ತದೆ.

ಇದನ್ನೂ ಓದಿ: Aadhaar Authentication: ಆಧಾರ್​ ದೃಢೀಕರಣದ ದರ ಇಳಿಕೆ ಮಾಡಿದ ಸರ್ಕಾರ; ಇಲ್ಲಿದೆ ಸಂಪೂರ್ಣ ವಿವರ

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ