Reliance Industries: ಅಬುಧಾಬಿ ಗ್ಲೋಬಲ್ ಮಾರ್ಕೆಟ್ನಲ್ಲಿ RINL ಸೇರ್ಪಡೆ ಮಾಡಿದ ರಿಲಯನ್ಸ್ ಇಂಡಸ್ಟ್ರೀಸ್
ರಿಲಯನ್ಸ್ ಇಂಡಸ್ಟ್ರೀಸ್ನಿಂದ ಯುಎಇಯಲ್ಲಿ ರಿಲಯನ್ಸ್ ಇಂಟರ್ನ್ಯಾಷನಲ್ ಲಿಮಿಟೆಡ್ ಅನ್ನು ಇನ್ಕಾರ್ಪೊರೇಟ್ ಮಾಡಲಾಗಿದೆ. ಆ ಬಗ್ಗೆ ವಿವರ ಇಲ್ಲಿದೆ.
ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ (RIL)ನಿಂದ ಸಂಪೂರ್ಣ ಒಡೆತನದ ಅಂಗ ಸಂಸ್ಥೆಯಾದ ರಿಲಯನ್ಸ್ ಇಂಟರ್ನ್ಯಾಷನಲ್ ಲಿಮಿಟೆಡ್ (RINL) ಎಂಬುದನ್ನು ಯುನೈಟೆಡ್ ಅರಬ್ ಎಮಿರೇಟ್ಸ್ನ (UAE) ಅಬುಧಾಬಿ ಗ್ಲೋಬಲ್ ಮಾರ್ಕೆಟ್ನಲ್ಲಿ ಸೇರ್ಪಡೆ (Incorporate) ಮಾಡಲಾಗಿದೆ. ಕಂಪೆನಿಯು 7.42 ಕೋಟಿ ರೂಪಾಯಿ ಅಥವಾ 10 ಲಕ್ಷ ಅಮೆರಿಕನ್ ಡಾಲರ್ ನಗದನ್ನು ರಿಲಯನ್ಸ್ ಇಂಟರ್ನ್ಯಾಷನಲ್ ಲಿಮಿಟೆಡ್ನ ತಲಾ 1 ಯುಎಸ್ಡಿಯ 10 ಲಕ್ಷ ಈಕ್ವಿಟಿ ಷೇರುಗಳಲ್ಲಿ ಹೂಡಿಕೆ ಮಾಡಿದೆ, ಎಂದು ಶನಿವಾರ ಫೈಲಿಂಗ್ನಲ್ಲಿ ತಿಳಿಸಲಾಗಿದೆ. ಕಚ್ಚಾ ತೈಲ, ಪೆಟ್ರೋಲಿಯಂ ಉತ್ಪನ್ನಗಳು, ಪೆಟ್ರೋಕೆಮಿಕಲ್ಸ್ ಮತ್ತು ಕೃಷಿ ಪದಾರ್ಥಗಳಲ್ಲಿ ವಹಿವಾಟು ನಡೆಸುವುದಕ್ಕೆ ಈ ಅಂಗಸಂಸ್ಥೆಯನ್ನು ಸ್ಥಾಪಿಸಲಾಗಿದೆ. ರಿಲಯನ್ಸ್ ಇಂಟರ್ನ್ಯಾಷನಲ್ ಲಿಮಿಟೆಡ್ ವಾಣಿಜ್ಯ ಕಾರ್ಯ ಚಟುವಟಿಕೆ ಇನ್ನಷ್ಟೇ ಆರಂಭಗೊಳ್ಳಬೇಕಿದೆ. ಅಬುಧಾಬಿ ನ್ಯಾಷನಲ್ ಆಯಿಲ್ ಕಂಪೆನಿ ಯೋಜನೆಯಲ್ಲಿ ಹೂಡಿಕೆ ಮಾಡುವುದಾಗಿ ಕಳೆದ ಜೂನ್ನಲ್ಲಿ ರಿಲಯನ್ಸ್ ಇಂಡಸ್ಟ್ರೀಸ್ ಘೋಷಣೆ ಮಾಡಿತ್ತು. ಆಗಿನ ಯೋಜನೆಯ ಬೆನ್ನಿಗೆ ಈ ಬೆಳವಣಿಗೆ ಆಗಿದೆ.
ಕಂಪೆನಿಯು ಹೇಳಿರುವಂತೆ, ರಿಲಯನ್ಸ್ ಇಂಟರ್ನ್ಯಾಷನಲ್ ಲಿಮಿಟೆಡ್ ಹೂಡಿಕೆಯು ಸಂಬಂಧಪಟ್ಟ ವ್ಯಕ್ತಿಗಳ ವಹಿವಾಟಿಗೆ ಬರುವುದಿಲ್ಲ ಎಂದು ಕಂಪೆನಿ ಹೇಳಿದೆ. ಜತೆಗೆ ಪ್ರವರ್ತಕರು ಅಥವಾ ಪ್ರವರ್ತಕರ ಸಮೂಹ ಅಥವಾ ಸಮೂಹದ ಕಂಪೆನಿಗಳು ರಿಲಯನ್ಸ್ ಇಂಟರ್ನ್ಯಾಷನಲ್ ಲಿಮಿಟೆಡ್ನಲ್ಲಿ ಯಾವುದೇ ಆಸಕ್ತಿ ಹೊಂದಿಲ್ಲ ಎಂದು ತಿಳಿಸಲಾಗಿದೆ.
ಈಗಿನ ಹೂಡಿಕೆಗೆ ಸರ್ಕಾರದ ಅಥವಾ ನಿಯಂತ್ರಕರ ಅನುಮತಿಯ ಅಗತ್ಯ ಇಲ್ಲ ಎನ್ನಲಾಗಿದೆ. ರಿಲಯನ್ಸ್ ಕಂಪೆನಿಯಿಂದ ವಿಶ್ವದ ಅತಿ ದೊಡ್ಡ ತೈಲ ರಿಫೈನಿಂಗ್ ಸಮುಚ್ಚಯವನ್ನು ಗುಜರಾತ್ನಲ್ಲಿ ನಡೆಸುತ್ತಿದೆ. ರಿಲಯನ್ಸ್ ಇಂಡಸ್ಟ್ರೀಸ್ ಕಂಪೆನಿಯ ಷೇರು ಶುಕ್ರವಾರದಂದು ಎನ್ಎಸ್ಇಯಲ್ಲಿ ವಾರದ ಕೊನೆಗೆ ರೂ. 2,525ಕ್ಕೆ ವಾರಾಂತ್ಯ ಕಂಡಿದೆ.
ಇದನ್ನೂ ಓದಿ: RRVL: ಜಸ್ಟ್ ಡಯಲ್ನಲ್ಲಿ ಶೇ 67ರಷ್ಟು ಷೇರು ಖರೀದಿಸಲಿದೆ ರಿಲಯನ್ಸ್ ರೀಟೇಲ್ ವೆಂಚರ್ಸ್