Fuel Shortage: ಯುನೈಟೆಡ್ ಕಿಂಗ್ಡಮ್ನಲ್ಲಿ ಇಂಧನ ಕೊರತೆ; ಸಮಸ್ಯೆ ಸರಿಪಡಿಸಲು ರಸ್ತೆಗೆ ಇಳಿಯಲಿದೆ ಸೇನೆ
ಯುನೈಟೆಡ್ ಕಿಂಗ್ಡಮ್ನಲ್ಲಿ ತೈಲ ಕೊರತೆ ನಿವಾರಣೆ ಮಾಡಬೇಕು ಎಂಬ ಉದ್ದೇಶದಿಂದ ಅಲ್ಲಿನ ಸರ್ಕಾರವು ಮಿಲಿಟರಿ ಟ್ರಕ್ ಚಾಲಕರನ್ನು ನೇಮಕ ಮಾಡಲಾಗಿದೆ.
ಯುನೈಟೆಡ್ ಕಿಂಗ್ಡಮ್ನಾದ್ಯಂತ ಪೂರೈಕೆ ಕೊರತೆಯಿಂದಾಗಿ ಪೆಟ್ರೋಲ್ ಬಂಕ್‌ಗಳಲ್ಲಿ ದೀರ್ಘ ಸರತಿ ಸಾಲುಗಳು ಆಗುತ್ತಿದ್ದು, ಅದನ್ನು ನಿರ್ವಹಿಸಲು ತಾತ್ಕಾಲಿಕ ಬೆಂಬಲವನ್ನು ಒದಗಿಸುವ ಸಲುವಾಗಿ ಸೋಮವಾರದಿಂದ ಸುಮಾರು 200 ಮಿಲಿಟರಿ ಟ್ಯಾಂಕರ್ ಸಿಬ್ಬಂದಿಯನ್ನು ನಿಯೋಜಿಸಲಾಗುವುದು ಎಂದು ಅಲ್ಲಿನ ಸರ್ಕಾರ ಶನಿವಾರ ಪ್ರಕಟಿಸಿದೆ. ಟ್ರಕ್ ಚಾಲಕರು, ವಿಶೇಷವಾಗಿ ಭಾರೀ ಸರಕುಗಳ ವಾಹನಗಳ (HGV) ಚಾಲಕರ ತೀವ್ರ ಕೊರತೆಯಿಂದಾಗಿ ಇಂಧನ ಪೂರೈಸಲು ಸಮಸ್ಯೆ ಉಂಟಾಗಿದೆ. ಮಿಲಿಟರಿ ಸಿಬ್ಬಂದಿಯು ಸದ್ಯಕ್ಕೆ ದೇಶದಾದ್ಯಂತ ಸಾಗಾಣಿಕೆ ತಾಣಗಳಲ್ಲಿ ತಮ್ಮ ತರಬೇತಿ ಕೈಗೊಳ್ಳುತ್ತಿದ್ದಾರೆ ಮತ್ತು ಸೋಮವಾರದಿಂದ ಇಂಧನ ಸರಬರಾಜು ಮಾಡುವ ಸಲುವಾಗಿ ರಸ್ತೆಯಲ್ಲಿ ಇರಲಿದ್ದಾರೆ ಎಂದು ಸರ್ಕಾರ ಹೇಳಿದೆ. “ವಾರಾಂತ್ಯದಲ್ಲಿ 200ಕ್ಕೂ ಹೆಚ್ಚು ಮಿಲಿಟರಿ ಸಿಬ್ಬಂದಿಯನ್ನು ಆಪರೇಷನ್ ಎಸ್ಕಲಿನ್ನ ಭಾಗವಾಗಿ ಸಜ್ಜುಗೊಳಿಸಲಾಗಿದೆ,” ಎಂದು ಯುಕೆ ರಕ್ಷಣಾ ಕಾರ್ಯದರ್ಶಿ ಬೆನ್ ವ್ಯಾಲೇಸ್ ಹೇಳಿದ್ದಾರೆ. “ಪರಿಸ್ಥಿತಿ ಸ್ಥಿರ ಆಗುತ್ತಿರುವಾಗ ನಮ್ಮ ಸಶಸ್ತ್ರ ಪಡೆಗಳು ಯಾವುದೇ ನಿರ್ಣಾಯಕ ಖಾಲಿ ಹುದ್ದೆಗಳನ್ನು ಭರ್ತಿ ಮಾಡಲು ಮತ್ತು ಮುಂಚೂಣಿಯಲ್ಲಿ ಇಂಧನವನ್ನು ತಲುಪಿಸಲು ಉದ್ಯಮವನ್ನು ಬೆಂಬಲಿಸುವ ಮೂಲಕ ದೇಶವನ್ನು ಚಲನೆಯಲ್ಲಿಡಲು ಸಹಾಯ ಮಾಡುತ್ತವೆ,” ಎಂದು ಅವರು ತಿಳಿಸಿದ್ದಾರೆ.
ವಾರದಿಂದ ಇಂಧನದ ಬೇಡಿಕೆ ಸ್ಥಿರವಾಗಿದೆ ಮತ್ತು ಮಾರಾಟ ಆಗುವುದಕ್ಕಿಂತ ಹೆಚ್ಚಿನ ಇಂಧನವನ್ನು ಈಗ ವಿತರಿಸಲಾಗುತ್ತಿದೆ ಎಂದು ಸರ್ಕಾರ ಹೇಳಿಕೊಂಡಿದೆ. ಆದರೂ ದೇಶದ ಕೆಲವು ಭಾಗಗಳಲ್ಲಿ ಇನ್ನೂ ಸವಾಲುಗಳನ್ನು ಎದುರಿಸಲಾಗುತ್ತಿದೆ. “ಕಳೆದ ವಾರದಲ್ಲಿ ಉದ್ಯಮದ ಪ್ರಯತ್ನಗಳಿಗೆ ಧನ್ಯವಾದಗಳು. ಪಂಪ್‌ಗಳಲ್ಲಿನ (ಪೆಟ್ರೋಲ್ ಬಂಕ್) ಪರಿಸ್ಥಿತಿ ನಿಧಾನವಾಗಿ ಸುಧಾರಿಸುತ್ತಿರುವ ಲಕ್ಷಣಗಳನ್ನು ನಾವು ನೋಡುತ್ತಿದ್ದೇವೆ,” ಎಂದು ಯುಕೆ ವ್ಯವಹಾರ ಕಾರ್ಯದರ್ಶಿ ಕ್ವಾಸಿ ಕ್ವಾರ್ಟೆಂಗ್ ಹೇಳಿದ್ದಾರೆ. “ಯುಕೆ ಮುಂಚೂಣಿ ದಾಸ್ತಾನು ಸ್ಟಾಕ್ ಮಟ್ಟ ಮೇಲ್ಸ್ತರಕ್ಕೆ ಸಾಗುತ್ತಿದೆ. ಇಂಧನ ವಿತರಣೆ ಸಾಮಾನ್ಯ ಮಟ್ಟಕ್ಕಿಂತ ಹೆಚ್ಚಿವೆ ಮತ್ತು ಬೇಡಿಕೆ ಸ್ಥಿರವಾಗಿದೆ. ಯುಕೆದಲ್ಲಿ ಯಾವುದೇ ರಾಷ್ಟ್ರೀಯ ಇಂಧನ ಕೊರತೆಯಿಲ್ಲ ಎಂದು ಒತ್ತಿ ಹೇಳುವುದು ಮುಖ್ಯ. ಮತ್ತು ಜನರು ಸಾಮಾನ್ಯ ರೀತಿಯಲ್ಲಿ ಇಂಧನವನ್ನು ಖರೀದಿಸುವುದನ್ನು ಮುಂದುವರಿಸಬೇಕು. ನಾವು ಎಷ್ಟು ಬೇಗನೆ ಸಾಮಾನ್ಯ ಖರೀದಿ ಪದ್ಧತಿಗೆ ಮರಳುತ್ತೇವೆಯೋ ಅಷ್ಟು ಬೇಗ ಸಾಮಾನ್ಯ ಸ್ಥಿತಿಗೆ ಮರಳಬಹುದು,” ಎಂದು ಅವರು ತಿಳಿಸಿದ್ದಾರೆ.
ಆಹಾರ ಸಾಗಾಣಿಕೆ ಉದ್ಯಮಗಳಲ್ಲಿ ತಾತ್ಕಾಲಿಕ ಪೂರೈಕೆ ಸರಪಳಿ (ಸಪ್ಲೈ ಚೈನ್) ಒತ್ತಡವನ್ನು ಸರಾಗಗೊಳಿಸುವ ಕ್ರಮಗಳ ವ್ಯಾಪ್ತಿಯೊಂದಿಗೆ ಮಿಲಿಟರಿ ಮಧ್ಯಪ್ರವೇಶವು ಬರುತ್ತದೆ. ಇದು ಕೊರೊನಾದಿಂದ ಬಂದಿದ್ದು, ಜಾಗತಿಕ ಆರ್ಥಿಕತೆಯು ಪ್ರಪಂಚದಾದ್ಯಂತ ಮರುಕಳಿಸುತ್ತಿದೆ ಎಂದು ಯುಕೆ ಸರ್ಕಾರವು ಹೇಳಿದೆ. ಇನ್ನೂ ಹೆಚ್ಚಿನ ಕ್ರಮದಂತೆ ತಾತ್ಕಾಲಿಕವಾಗಿ ಯುಕೆಗೆ 300 ಇಂಧನ ಟ್ಯಾಂಕರ್ ಚಾಲಕರನ್ನು ಅನುಮತಿಸುವ ಒಂದು ವ್ಯಾವಹಾರಿಕ ಯೋಜನೆಯೂ ಸೇರಿದೆ. ಬಿಕ್ಕಟ್ಟನ್ನು ಪರಿಹರಿಸಲು ತುರ್ತು ಕ್ರಮವಾಗಿ ಹಲವಾರು ಇಂಧನ ಸಾಗಣೆ ಚಾಲಕರಿಗೆ ಯುಕೆ ಹೋಮ್ ಆಫೀಸ್ ತಕ್ಷಣವೇ ಯುಕೆಯಲ್ಲಿ ಕೆಲಸ ಮಾಡಲು ಅವಕಾಶ ನೀಡುತ್ತಿದೆ. ಇದು ಅಕ್ಟೋಬರ್ ಅಂತ್ಯದಿಂದ 4,700 ಆಹಾರ ಸಾಗಾಣಿಕೆ ಚಾಲಕರನ್ನು ಪಡೆಯಲು ಮತ್ತು ಫೆಬ್ರವರಿ 2022ರೊಳಗೆ ಹೊರಹೋಗಲು ಹೆಚ್ಚಿನ ಸಮಯದ ಸೀಮಿತ ವೀಸಾ ಕ್ರಮಗಳ ಈ ಹಿಂದಿನ ಪ್ರಕಟಣೆಯನ್ನು ಅನುಸರಿಸುತ್ತದೆ.
ವೀಸಾಗಳು ಅಲ್ಪಾವಧಿಯ ಪರಿಹಾರ ಎಂದು ಸರ್ಕಾರ ಒತ್ತಿಹೇಳಿದೆ. ಮತ್ತು ಉದ್ಯೋಗದಾತರು ವಿದೇಶೀ ಕಾರ್ಮಿಕರ ಮೇಲೆ ಅವಲಂಬಿತರಾಗುವ ಬದಲು “ಹೆಚ್ಚಿನ ವೇತನ, ಉನ್ನತ ಕೌಶಲ”ದ ಆರ್ಥಿಕತೆಯನ್ನು ನಿರ್ಮಿಸಲು ಯುಕೆ ದೇಶೀಯ ಉದ್ಯೋಗಿಗಳ ಮೇಲೆ ದೀರ್ಘಾವಧಿಯ ಹೂಡಿಕೆಗಳನ್ನು ಮಾಡುವುದನ್ನು ನೋಡಲು ಬಯಸುವುದಾಗಿ ಹೇಳಲಾಗಿದೆ.
ಇದನ್ನೂ ಓದಿ: Power Issue: ಚೀನಾ, ಯುರೋಪ್ ಸೇರಿ ವಿಶ್ವದಾದ್ಯಂತ ವಿದ್ಯುತ್ ಸಮಸ್ಯೆ; ಬಿಕ್ಕಟ್ಟಿಗೆ ಎಷ್ಟೆಲ್ಲ ಕಾರಣಗಳು!