ಭಾರತದ ಆರ್ಥಿಕ ಬೆಳವಣಿಗೆ ವೇಗ ಕನಿಷ್ಠ ಹಂತ ಮುಟ್ಟಿರಬಹುದು; ಇನ್ನೇನಿದ್ದರೂ ಮೇಲೇರುವ ಸಮಯ: ಎಚ್​ಎಸ್​ಬಿಸಿ ಎಂಎಫ್ ವರದಿ

HSBC MF's report predicts strong future growth of Indian economy: ಭಾರತದ ಆರ್ಥಿಕ ಬೆಳವಣಿಗೆಯ ಚಕ್ರವು ತಳಮಟ್ಟ ಮುಟ್ಟಿದೆ ಎಂದು ಎಚ್​ಎಸ್​ಬಿಸಿ ಎಂಎಫ್​ನ ವರದಿಯಲ್ಲಿ ಶುಭನುಡಿಯಲಾಗಿದೆ. ಭಾರತದ ಮುಂದಿನ ಆರ್ಥಿಕ ಬೆಳವಣಿಗೆಯು ಹೆಚ್ಚಿನ ವೇಗದಲ್ಲಿ ಸಾಗಬಹುದು ಎಂದು ಹೇಳಲಾಗಿದೆ. ತೈಲ ಬೆಲೆ ಇಳಿಕೆ, ಬಡ್ಡಿದರ ಇಳಿಕೆ, ಹೂಡಿಕೆ ಹೆಚ್ಚಳ ಇತ್ಯಾದಿ ಅಂಶಗಳು ಆರ್ಥಿಕ ಬೆಳವಣಿಗೆಗೆ ಪೂರಕವಾಗಿವೆ ಎಂದು ಈ ವರದಿ ಅಭಿಪ್ರಾಯಪಟ್ಟಿದೆ.

ಭಾರತದ ಆರ್ಥಿಕ ಬೆಳವಣಿಗೆ ವೇಗ ಕನಿಷ್ಠ ಹಂತ ಮುಟ್ಟಿರಬಹುದು; ಇನ್ನೇನಿದ್ದರೂ ಮೇಲೇರುವ ಸಮಯ: ಎಚ್​ಎಸ್​ಬಿಸಿ ಎಂಎಫ್ ವರದಿ
ಆರ್ಥಿಕತೆ

Updated on: Oct 14, 2025 | 4:58 PM

ನವದೆಹಲಿ, ಅಕ್ಟೋಬರ್ 14: ಭಾರತದ ಆರ್ಥಿಕ ಬೆಳವಣಿಗೆ (GDP growth rate) ಶೇ. 8ಕ್ಕಿಂತಲೂ ಹೆಚ್ಚಿನ ವೇಗದಲ್ಲಿ ಆಗಬಹುದು ಎನ್ನುವ ನಿರೀಕ್ಷೆ ಕೆಲ ವರ್ಷಗಳ ಹಿಂದೆ ಇತ್ತು. ಆದರೆ, ಶೇ. 6-7ರ ಆಸುಪಾಸಿನ ಬೆಳವಣಿಗೆಗೆ ತೃಪ್ತಿಪಡುವಂತಾಗಿದೆ. ಈ ಮಂದಗತಿಗೆ ನಿರ್ದಿಷ್ಟ ಕಾರಣಗಳು ಕಾಣದಾಗಿವೆ. ಆದರೆ, ಎಚ್​ಎಸ್​ಬಿಸಿ ಎಂಎಫ್ ಸಂಸ್ಥೆಯ ವರದಿಯೊಂದು ಖುಷಿಯ ವಿಚಾರ ಪ್ರಸ್ತುತಪಡಿಸಿದೆ. ಭಾರತದ ಅಭಿವೃದ್ಧಿ ಚಕ್ರ ತನ್ನ ಕನಿಷ್ಠ ಮಟ್ಟ ಮುಟ್ಟಿರಬಹುದು ಎಂದು ಈ ವರದಿಯಲ್ಲಿ ಹೇಳಲಾಗಿದೆ. ಅಂದರೆ, ಜಿಡಿಪಿ ದರ ಕನಿಷ್ಠ ಹಂತ ಮುಟ್ಟಿದ್ದು, ಮುಂದಿನ ದಿನಗಳು ವೇಗದ ಚಲನೆಗೆ ಸಾಕ್ಷಿಯಾಗಲಿವೆ.

ಎಚ್​ಎಸ್​ಸಿಬಿ ಮ್ಯುಚುವಲ್ ಫಂಡ್ ಸಂಸ್ಥೆಯ ವರದಿ ಪ್ರಕಾರ ಭಾರತದ ಆರ್ಥಿಕತೆಯ ಎಲ್ಲಾ ಸಂಕೇತಗಳೂ ಸಕಾರಾತ್ಮಕವಾಗಿದ್ದು, ಮುಂದಿನ ದಿನಗಳಲ್ಲಿ ಅಭಿವೃದ್ಧಿ ವೇಗ ಹೆಚ್ಚಬಹುದು ಎಂದು ನಿರೀಕ್ಷಿಸಲಾಗಿದೆ.

ಇದನ್ನೂ ಓದಿ: ಭಾರತದಲ್ಲಿ ಗೂಗಲ್​ನಿಂದ ಬೃಹತ್ ಎಐ ಹಬ್; 15 ಬಿಲಿಯನ್ ಡಾಲರ್ ಹೂಡಿಕೆ; ಪ್ರಧಾನಿ ಮೋದಿ ಸ್ವಾಗತ

‘ಬಡ್ಡಿದರ, ಹಣದ ಹರಿವಿನ ಚಕ್ರ, ಕಚ್ಚಾ ತೈಲ ಬೆಲೆಗಳಲ್ಲಿ ಇಳಿಕೆ, ಸಹಜ ಮುಂಗಾರು ಮೊದಲಾದ ಅಂಶಗಳು ಭಾರತದ ಆರ್ಥಿಕ ಬೆಳವಣಿಗೆಗೆ ಪೂರಕವಾಗಿವೆ’ ಎಂದು ಈ ವರದಿಯಲ್ಲಿ ಹೇಳಲಾಗಿದೆ.

ಆದರೆ, ಜಾಗತಿಕ ವ್ಯಾಪಾರ ಅನಿಶ್ಚಿತತೆಯಿಂದ ಹಿಡಿದು ಖಾಸಗಿ ಬಂಡವಾಳ ವೆಚ್ಚದಲ್ಲಿ ಇಳಿಕೆವರೆಗೆ ಒಂದಷ್ಟು ಹಿನ್ನಡೆಗಳೂ ಇವೆ ಎಂದು ಈ ಎಚ್ಚರಿಸಿದೆ ಈ ವರದಿ.

ಇದನ್ನೂ ಓದಿ: ಟೆಲಿಗ್ರಾಮ್ ಸಿಇಒ ಆದರೂ ಮೊಬೈಲ್ ಮುಟ್ಟಲ್ಲ, ಒಂದೂ ಚಟ ಹೊಂದಿಲ್ಲ; ಪಾವೆಲ್ ದುರೋವ್ ಕಥೆ ಇದು…

ಈ ಹಿನ್ನಡೆಗಳ ಹೊರತಾಗಿಯೂ ಭಾರತದಲ್ಲಿ ಹೂಡಿಕೆಗಳು ಉತ್ತಮವಾಗಿ ಆಗಬಹುದು. ಖಾಸಗಿ ಬಂಡವಾಳ ವೆಚ್ಚದಲ್ಲಿ ಏರುಪೇರಾದರೂ ಸರ್ಕಾರಿ ಹೂಡಿಕೆಗಳು ಸರಾಗವಾಗಿ ಮುಂದುವರಿಯಬಹುದು. ಖಾಸಗಿ ಹೂಡಿಕೆಗಳೂ ಕೂಡ ಚೇತರಿಕೆ ಪಡೆಯಬಹುದು. ರಿಯಲ್ ಎಸ್ಟೇಟ್ ಚಕ್ರದಲ್ಲೂ ಚೇತರಿಕೆ ಆಗಬಹುದು ಎಂದು ಎಚ್​ಎಸ್​ಬಿಸಿ ಎಂಎಫ್​ನ ಈ ವರದಿಯಲ್ಲಿ ವಿವರಿಸಲಾಗಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ