
ನವದೆಹಲಿ, ಫೆಬ್ರುವರಿ 16: ಎಚ್ಎಸ್ಬಿಸಿ ಮ್ಯೂಚುವಲ್ ಫಂಡ್ನಿಂದ ಹೊಸ ಎನ್ಎಫ್ಒ ಆರಂಭವಾಗಿದೆ. ಎಚ್ಎಸ್ಬಿಸಿ ಸರ್ವಿಸಸ್ ಫಂಡ್ ಎನ್ನುವ ಓಪನ್ ಎಂಡೆಡ್ ಈಕ್ವಿಟಿ ಸ್ಕೀಮ್ ಇತ್ತೀಚೆಗೆ ಶುರುವಾಗಿದೆ. ಈ ಎನ್ಎಫ್ಒ 2025ರ ಫೆಬ್ರುವರಿ 20ಕ್ಕೆ ಮುಕ್ತಾಯಗೊಳ್ಳುತ್ತದೆ. ಸರ್ಕಾರದ ಆಡಳಿತಾತ್ಮಕ ನೀತಿಗಳು, ಡಿಜಿಟಲೀಕರಣ ಇತ್ಯಾದಿ ಕಾರಣದಿಂದಾಗಿ ಭಾರತದಲ್ಲಿ ಹಣಕಾಸು ಸೇವಾ ವಲಯ ಪ್ರಬಲವಾಗಿ ಬೆಳವಣಿಗೆ ಹೊಂದುತ್ತಿದೆ. ಈ ಹಿನ್ನೆಲೆಯಲ್ಲಿ ಈ ವಲಯದಲ್ಲಿ ಹೂಡಿಕೆ ಮಾಡುವುದು ಸಹಜವಾಗಿ ಲಾಭಕಾರಿ ಎನಿಸಲಿದೆ. ದೀರ್ಘಾವಧಿ ಸಂಪತ್ತು ಬೆಳಸಲು ಇಚ್ಛಿಸುವವರಿಗೆ ಈ ಸೆಕ್ಟರ್ನಲ್ಲಿನ ಹೂಡಿಕೆ ಹೇಳಿ ಮಾಡಿಸಿದಂತಿದೆ ಎನ್ನುವುದು ತಜ್ಞರ ಅಭಿಪ್ರಾಯ.
ಎಚ್ಎಸ್ಬಿಸಿ ಮ್ಯೂಚುವಲ್ ಫಂಡ್ ಸಂಸ್ಥೆ ಹೇಳುವ ಪ್ರಕಾರ ಅದರ ಫೈನಾನ್ಷಿಯಲ್ ಸರ್ವಿಸಸ್ ಫಂಡ್ನಲ್ಲಿ ಸಾಂಪ್ರದಾಯಿಕ ಸಾಲ ನೀಡುವ ಮತ್ತು ಇತರ ಹಣಕಾಸು ಸೇವೆ ನೀಡುವ ಸಂಸ್ಥೆಗಳ ಮಿಶ್ರಣ ಇರುತ್ತದೆ. ಬಿಎಸ್ಇ ಫೈನಾನ್ಷಿಯಲ್ ಸರ್ವಿಸಸ್ ಇಂಡೆಕ್ಸ್ ಟಿಆರ್ಐ ಅನ್ನು ಈ ಫಂಡ್ ಟ್ರ್ಯಾಕ್ ಮಾಡುತ್ತದೆ.
ಬ್ಯಾಂಕ್ಗಳು, ಬ್ಯಾಂಕೇತರ ಹಣಕಾಸು ಸಂಸ್ಥೆಗಳು, ಷೇರು ಬ್ರೋಕರ್, ಎಎಂಸಿ, ಡೆಪಾಸಿಟರಿ, ಕ್ರೆಡಿಟ್ ರೇಟಿಂಗ್ ಏಜೆನ್ಸಿ, ಫಿನ್ಟೆಕ್, ಎಕ್ಸ್ಚೇಂಜ್ ಮತ್ತು ಡಾಟಾ ಪ್ಲಾಟ್ಫಾರ್ಮ್, ಇನ್ವೆಸ್ಟ್ಮೆಂಟ್ ಬ್ಯಾಂಕಿಂಗ್, ವೆಲ್ತ್ ಮ್ಯಾನೇಜ್ಮೆಂಟ್ ಕಂಪನಿಗಳು, ಇನ್ಷೂರೆನ್ಸ್ ಕಂಪನಿಗಳು, ಹೌಸಿಂಗ್ ಫೈನಾನ್ಸಿಂಗ್ ಕಂಪನಿಗಳು, ಪೇಮೆಂಟ್ ಕಂಪನಿಗಳು ಇತ್ಯಾದಿ ಸಂಸ್ಥೆಗಳ ಷೇರುಗಳಲ್ಲಿ ಎಚ್ಎಸ್ಬಿಸಿ ಫೈನಾನ್ಷಿಯಲ್ ಸರ್ವಿಸಸ್ ಫಂಡ್ ಹೂಡಿಕೆ ಮಾಡಲಿದೆ. ಇದರಿಂದಾಗಿ ಹೂಡಿಕೆದಾರರಿಗೆ ಹೆಚ್ಚಿನ ಸುರಕ್ಷತೆ ಮತ್ತು ರಿಟರ್ನ್ಸ್ ನಿರೀಕ್ಷಿಸಬಹುದು ಎಂದು ಹೇಳಲಾಗಿದೆ.
ಇದನ್ನೂ ಓದಿ: BSNL: 17 ವರ್ಷಗಳ ಬಳಿಕ ನಷ್ಟದಿಂದ ಮೇಲೆದ್ದ ಬಿಎಸ್ಎನ್ಎಲ್; ಈ ಬಾರಿ 262 ಕೋಟಿ ರೂ. ಲಾಭ
ಭಾರತದ ಹಣಕಾಸು ವಲಯ ಜಿಡಿಪಿ ದರದ ಎರಡು ಪಟ್ಟು ವೇಗವಾಗಿ ಬೆಳವಣಿಗೆ ಹೊಂದುವ ನಿರೀಕ್ಷೆ ಇದೆ. 2047ರ ವಿಕಸಿತ ಭಾರತ ನಿರ್ಮಿಸುವ ಗುರಿಯನ್ನು ಈಡೇರಿಸಲು ಈ ವಲಯದ ಪಾತ್ರ ದೊಡ್ಡದಿರುತ್ತದೆ. ತಂತ್ರಜ್ಞಾನದ ಅಳವಡಿಕೆ ಮತ್ತು ಹೂಡಿಕೆದಾರ ಮನಸ್ಥಿತಿ ಗಟ್ಟಿಗೊಂಡಿರುವುದು ದೇಶದ ಹಣಕಾಸು ವಾತಾವರಣವನ್ನೇ ಬದಲಿಸಿದೆ. ಇದನ್ನು ತಮ್ಮ ಫಂಡ್ ಚೆನ್ನಾಗಿ ಬಳಸಿ ಹೂಡಿಕೆದಾರರಿಗೆ ಲಾಭ ತರಬಲ್ಲುದು ಎಂದು ಎಚ್ಎಸ್ಬಿಸಿ ಮ್ಯೂಚುವಲ್ ಫಂಡ್ನ ಸಿಇಒ ಕೈಲಾಶ್ ಕುಲಕರ್ಣಿ ಹೇಳುತ್ತಾರೆ.
ಎಚ್ಎಸ್ಬಿಸಿ ಮ್ಯೂಚುವಲ್ ಫಂಡ್ನ ಚೀಫ್ ಇನ್ವೆಸ್ಟ್ಮೆಂಟ್ ಆಫೀಸರ್ ಆದ ವೇಣುಗೋಪಾಲ್ ಮಂಘಾಟ್ ಅವರ ಪ್ರಕಾರ, ತಮ್ಮ ಫೈನಾನ್ಷಿಯಲ್ ಸರ್ವಿಸಸ್ ಫಂಡ್ನಲ್ಲಿ ದೀರ್ಘಾವಧಿ ಆಲ್ಫಾದ ತಂತ್ರಾತ್ಮಕ ಹೂಡಿಕೆ ಮಾಡಲಾಗುವುದು. ಪ್ರಮುಖವಾದ ಮಾನದಂಡಗಳನ್ನು ಇಟ್ಟುಕೊಂಡು ಸ್ಟಾಕ್ಗಳನ್ನು ಆಯ್ದುಕೊಳ್ಳಲಾಗುವುದು ಎಂದಿದ್ದಾರೆ.
ಇದನ್ನೂ ಓದಿ: ಸತತ 8ನೇ ದಿನ ಸೆನ್ಸೆಕ್ಸ್, ನಿಫ್ಟಿಗೆ ಕೆಂಪು ಬಣ್ಣ; ಎರಡು ವರ್ಷದಲ್ಲಿ ಇದೇ ಅತಿದೊಡ್ಡ ಹಿನ್ನಡೆ
2024ರ ಡಿಸೆಂಬರ್ 31ರವರೆಗಿನ ಮಾಹಿತಿ ಪ್ರಕಾರ ಎಚ್ಎಸ್ಬಿಸಿ ಮ್ಯೂಚುವಲ್ ಫಂಡ್ನಲ್ಲಿ 1.25 ಲಕ್ಷ ಕೋಟಿ ರೂ ನಿರ್ವಹಿತ ಆಸ್ತಿ ಹೊಂದಿದೆ. 44 ಓಪನ್ ಎಂಡೆಡ್ ಫಂಡ್ಗಳನ್ನು ನಿರ್ವಹಿಸುತ್ತಿದೆ. ಇದರಲ್ಲಿ ಈಕ್ವಿಟಿ, ಡೆಟ್, ಹೈಬ್ರಿಡ್, ಇಂಡೆಕ್ಸ್ ಫಂಡ್ಗಳಿವೆ.
ಹೆಚ್ಚಿನ ಮಾಹಿತಿಗೆ ಈ ವೆಬ್ಸೈಟ್ ಸಂಪರ್ಕಿಸಬಹುದು: www.global.assetmanagement.hsbc.com/
(ಗಮನಿಸಿ: ಮ್ಯೂಚುವಲ್ ಫಂಡ್ ಹೂಡಿಕೆಗಳು ಮಾರುಕಟ್ಟೆ ಅಪಾಯಕ್ಕೆ ಒಳಪಡುತ್ತವೆ. ಹೂಡಿಕೆ ಮಾಡುವ ಮುನ್ನ ಯೋಜನೆಯ ಎಲ್ಲಾ ದಾಖಲೆ ಮತ್ತು ವಿವರಗಳನ್ನು ತಪ್ಪದೇ ಓದಿರಿ.)