ನವದೆಹಲಿ, ಡಿಸೆಂಬರ್ 29: ಭಾರತದಲ್ಲಿ ಡಿಪಿಐಐಟಿಯಿಂದ ಮಾನ್ಯಗೊಂಡಿರುವ ಸ್ಟಾರ್ಟಪ್ಗಳ ಸಂಖ್ಯೆ ಒಂದೂವರೆ ಲಕ್ಷಕ್ಕಿಂತಲೂ ಅಧಿಕ ಇದೆ. ಸರ್ಕಾರ ಬಿಡುಗಡೆ ಮಾಡಿರುವ ಮಾಹಿತಿ ಪ್ರಕಾರ ಡಿಪಿಐಐಟಿಯಿಂದ ಮಾನ್ಯತೆ ಹೊಂದಿರುವ 1,57,066ಕ್ಕೂ ಹೆಚ್ಚು ಸ್ಟಾರ್ಟಪ್ಗಳಿವೆ. ಈ ಪೈಕಿ 73,000ಕ್ಕೂ ಅಧಿಕ ಸ್ಟಾರ್ಟಪ್ಗಳಲ್ಲಿ ಕನಿಷ್ಠ ಒಬ್ಬರಾದರೂ ಮಹಿಳಾ ನಿರ್ದೇಶಕರಿದ್ದಾರೆ. ಅಂದರೆ, ಮಾನ್ಯತೆ ಪಡೆದ ಸ್ಟಾರ್ಟಪ್ಗಳಲ್ಲಿ (Recognized startups) ಹೆಚ್ಚೂಕಡಿಮೆ ಅರ್ಧದಷ್ಟು ಕಂಪನಿಗಳಲ್ಲಿ ನಿರ್ದೇಶಕಿಯರಿದ್ದಾರೆ. ಉದ್ಯಮ ಮತ್ತು ಆಂತರಿಕ ವ್ಯಾಪಾರ ಉತ್ತೇಜಕ ಇಲಾಖೆಯಾದ ಡಿಪಿಐಐಟಿಯಲ್ಲಿ ನೊಂದಾಯಿತರಾದ 7,59,303 ಬಳಕೆದಾರರಿದ್ದಾರೆ.
ಜಾಗತಿಕವಾಗಿ ಅತ್ಯಂತ ವೈಬ್ರೆಂಟ್ ಆಗಿರುವ ಸ್ಟಾರ್ಟಪ್ ಇಕೋಸ್ಟಂಗಳಿರುವ ದೇಶಗಳಲ್ಲಿ ಭಾರತವೂ ಒಂದು. ಭಾರತವು ವಿಶ್ವದ ಮೂರನೇ ಅತಿದೊಡ್ಡ ಸ್ಟಾರ್ಟಪ್ ಹಬ್ ಎನಿಸಿದೆ. ಒಂದೂವರೆ ಲಕ್ಷಕ್ಕೂ ಹೆಚ್ಚು ನೊಂದಾಯಿತ ಸ್ಟಾರ್ಟಪ್ಗಳಲ್ಲಿ ಯೂನಿಕಾರ್ನ್ ಎನಿಸಿದ ಕಂಪನಿಗಳ ಸಂಖ್ಯೆ 100ಕ್ಕೂ ಹೆಚ್ಚಿದೆ. ಯೂನಿಕಾರ್ನ್ ಎಂದರೆ ಒಂದು ಬಿಲಿಯನ್ ಡಾಲರ್ಗೂ ಅಧಿಕ ಮೌಲ್ಯ ಹೊಂದಿರುವ, ಹಾಗೂ ಇನ್ನೂ ಷೇರುಪೇಟೆಯಲ್ಲಿ ಲಿಸ್ಟ್ ಆಗದಿರುವ ಸ್ಟಾರ್ಟಪ್.
ಇದನ್ನೂ ಓದಿ: ರಿಲಯನ್ಸ್ ಸಾಮ್ರಾಜ್ಯ ಕಟ್ಟಿದ ಧೀರೂಭಾಯಿ ಅಂಬಾನಿ ಸಾಗಿ ಬಂದ ಹಾದಿ ಹೇಗಿತ್ತು? ಇಲ್ಲಿದೆ ಕುತೂಹಲಕಾರಿ ಸಂಗತಿ
ಸ್ಟಾರ್ಟಪ್ಗಳ ವಿಚಾರಕ್ಕೆ ಬಂದರೆ ಭಾರತಕ್ಕೆ ಬೆಂಗಳೂರು ಪ್ರಮುಖವಾದುದು. ಬೆಂಗಳೂರು ಭಾರತದ ಸ್ಟಾರ್ಟಪ್ ರಾಜಧಾನಿಯಂತಿದೆ. ಬಹಳಷ್ಟು ಸ್ಟಾರ್ಟಪ್ಗಳು ಬೆಂಗಳೂರಿನಲ್ಲಿವೆ. ಹೈದರಾಬಾದ್ ಕೂಡ ಸಾಕಷ್ಟು ಸ್ಟಾರ್ಟಪ್ಗಳನ್ನು ಸಲಹುತ್ತಿವೆ. ಮುಂಬೈ, ದೆಹಲಿ, ಪುಣೆಯಲ್ಲೂ ಉದ್ಯಮ ಹುಲುಸಾಗಿ ಬೆಳೆಯುತ್ತಿದೆ.
ಈ ವರ್ಷ ಸಾಕಷ್ಟು ಸಂಖ್ಯೆಯಲ್ಲಿ ಸ್ಟಾರ್ಟಪ್ಗಳು ಐಪಿಒ ಮೂಲಕ ಸಾರ್ವಜನಿಕವಾಗಿ ಬಂಡವಾಳ ಸಂಗ್ರಹಿಸಿವೆ. 2024ರಲ್ಲಿ 13 ಹೊಸ ಸ್ಟಾರ್ಟಪ್ಗಳು ಷೇರು ಮಾರುಕಟ್ಟೆಯಲ್ಲಿ ಒಟ್ಟಾರೆ ಸಂಗ್ರಹಿಸಿದ ಬಂಡವಾಳ 29,200 ಕೋಟಿ ರೂಗೂ ಅಧಿಕ ಇದೆ. ಇದರಲ್ಲಿ ಹೊಸ ಷೇರುಗಳನ್ನು ವಿತರಿಸಿ 14,672 ಕೋಟಿ ರೂ ಸಂಗ್ರಹಿಸಲಾಗಿದೆ. ಆಫರ್ ಫಾರ್ ಸೇಲ್, ಅಥವಾ ಒಎಫ್ಎಸ್ ಮೂಲಕ 14,574 ಕೋಟಿ ರೂ ಬಂಡವಾಳ ಸಂಗ್ರಹಿಸಿವೆ.
ಇದನ್ನೂ ಓದಿ: ಕೈಗಾರಿಕೋದ್ಯಮದ ರತ್ನ ʻರತನ್ ಟಾಟಾʼ ಯುವ ಪೀಳಿಗೆಗೆ ಮಾದರಿ ಯಾಕೆ? ರತನ್ ಅವರ ಸಾಧನೆಯ ಹಾದಿಯ ಚಿತ್ರಣ ಇಲ್ಲಿದೆ
ಬೇರೆ ದೇಶಗಳಿಗೆ ಹೋಲಿಸಿದರೆ ಭಾರತದಲ್ಲಿ ಇಂಟರ್ನೆಟ್ ಅಗ್ಗದ ದರಕ್ಕೆ ಸಿಗುತ್ತದೆ. ಇದು ಫಿನ್ಟೆಕ್, ಎಜುಟೆಕ್, ಹೆಲ್ತ್ ಟೆಕ್ ಇತ್ಯಾದಿ ನಾವೀನ್ಯ ತಂತ್ರಜ್ಞಾನ ಕಂಪನಿಗಳು ಮತ್ತು ಇಕಾಮರ್ಸ್ ಕಂಪನಿಗಳು ಉತ್ತಮ ರೀತಿಯಲ್ಲಿ ಬೆಳೆಯಲು ಸಹಕಾರಿಯಾಗಿದೆ. ಭಾರತದಲ್ಲಿ ಯುವ ಮತ್ತು ಉತ್ಸಾಹೀ ಉದ್ಯೋಗಿಗಳ ಲಭ್ಯತೆಯೂ ಸ್ಟಾರ್ಟಪ್ಗಳ ಬೆಳವಣಿಗೆಗೆ ಸಹಕಾರಿ ಆಗಿದೆ. ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ತಂತ್ರಜ್ಞಾನ, ಬ್ಲಾಕ್ಚೈನ್ ಇತ್ಯಾದಿ ಆವಿಷ್ಕಾರಗಳು ಸ್ಟಾರ್ಟಪ್ಗಳಿಗೆ ಸಹಕಾರಿಯಾಗಿವೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ