AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

TCS: ಅತಿಹೆಚ್ಚು ಮಹಿಳೆಯರಿಗೆ ಉದ್ಯೋಗ ನೀಡುತ್ತಿದೆ ಟಿಸಿಎಸ್; ಇಲ್ಲಿದೆ ಟಾಪ್ 10 ಪಟ್ಟಿ

ಕೊನೆಯ ಐದು ಸ್ಥಾನಗಳಲ್ಲಿ ಮದರ್​ಸನ್ ಸುಮಿ ಸಿಸ್ಟಂಸ್, ಟೆಕ್ ಮಹೀಂದ್ರಾ, ಐಸಿಐಸಿಐ ಬ್ಯಾಂಕ್, ಎಚ್​ಡಿಎಫ್​ಸಿ ಬ್ಯಾಂಕ್ ಹಾಗೂ ಪೇಜ್ ಇಂಡಸ್ಟ್ರೀಸ್ ಇವೆ.

TCS: ಅತಿಹೆಚ್ಚು ಮಹಿಳೆಯರಿಗೆ ಉದ್ಯೋಗ ನೀಡುತ್ತಿದೆ ಟಿಸಿಎಸ್; ಇಲ್ಲಿದೆ ಟಾಪ್ 10 ಪಟ್ಟಿ
ಟಿಸಿಎಸ್Image Credit source: PTI
TV9 Web
| Updated By: ಡಾ. ಭಾಸ್ಕರ ಹೆಗಡೆ|

Updated on:Dec 01, 2022 | 5:34 PM

Share

ನವದೆಹಲಿ: ದೇಶದಲ್ಲಿ ಅತಿಹೆಚ್ಚು ಮಹಿಳೆಯರಿಗೆ ಉದ್ಯೋಗ ನೀಡುವ ಪ್ರಮುಖ 10 ಕಂಪನಿಗಳ ಪಟ್ಟಿಯನ್ನು ಆ್ಯಕ್ಸಿಸ್ ಬ್ಯಾಂಕ್​ನ (Axis Bank) ಬರ್ಗಂಡಿ ಪ್ರೈವೇಟ್ (Burgundy Private) ಮತ್ತು ಹರುನ್ ಇಂಡಿಯಾ ಸಂಸ್ಥೆ (Hurun India) ಬಿಡುಗಡೆ ಮಾಡಿದ್ದು, ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್ ಅಥವಾ ಟಿಸಿಎಸ್ (Tata Consultancy Services) ಮೊದಲ ಸ್ಥಾನ ಪಡೆದಿದೆ. ಟಿಸಿಎಸ್ ಸುಮಾರು 2.1 ಲಕ್ಷ ಮಂದಿಗೆ ಉದ್ಯೋಗ ನೀಡಿದ್ದು, ಈ ಪೈಕಿ ಶೇಕಡಾ 35ರಷ್ಟು ಮಂದಿ ಮಹಿಳೆಯರಾಗಿದ್ದಾರೆ. ನಂತರದ ಸ್ಥಾನಗಳಲ್ಲಿ ಇನ್ಫೋಸಿಸ್ (Infosys), ವಿಪ್ರೋ (Wipro), ಎಚ್​ಸಿಎಲ್​ ಟೆಕ್ನಾಲಜೀಸ್ (HCL Technologies) ಹಾಗೂ ರಿಲಯನ್ಸ್ ಇಂಡಸ್ಟ್ರೀಸ್ (Reliance Industries) ಇವೆ.

ಕೊನೆಯ ಐದು ಸ್ಥಾನಗಳಲ್ಲಿ ಮದರ್​ಸನ್ ಸುಮಿ ಸಿಸ್ಟಂಸ್, ಟೆಕ್ ಮಹೀಂದ್ರಾ, ಐಸಿಐಸಿಐ ಬ್ಯಾಂಕ್, ಎಚ್​ಡಿಎಫ್​ಸಿ ಬ್ಯಾಂಕ್ ಹಾಗೂ ಪೇಜ್ ಇಂಡಸ್ಟ್ರೀಸ್ ಇವೆ.

ಇದನ್ನೂ ಓದಿ: TCS Profit: 2022-23ರ ಮೊದಲ ತ್ರೈಮಾಸಿಕದಲ್ಲಿ ಟಿಸಿಎಸ್​ ಲಾಭ ಶೇ 5ರಷ್ಟು ಏರಿಕೆಯಾಗಿ 9478 ಕೋಟಿಗೆ, ಕೆಲಸ ಬಿಡುವವರ ಪ್ರಮಾಣ ಶೇ 19.7

ಆ್ಯಕ್ಸಿಸ್​ ಬ್ಯಾಂಕ್​ನ ಖಾಸಗಿ ಬ್ಯಾಂಕಿಂಗ್ ಉದ್ದಿಮೆ ಬರ್ಗಂಡಿ ಪ್ರೈವೇಟ್ ಮತ್ತು ಹರುನ್ ಇಂಡಿಯಾ ಭಾರತದ 500 ಹೆಚ್ಚು ಮೌಲ್ಯ ಉಳ್ಳ ಕಂಪನಿಗಳ ಪಟ್ಟಿಯನ್ನು ಬಿಡುಗಡೆ ಮಾಡಿತ್ತು. ಇದೀಗ ಎರಡನೇ ಪಟ್ಟಿ ಬಿಡುಗಡೆ ಮಾಡಿದೆ.

ಬರ್ಗಂಡಿ ಪ್ರೈವೇಟ್ ಮತ್ತು ಹರುನ್ ಇಂಡಿಯಾ ಬಿಡುಗಡೆ ಮಾಡಿರುವ 500 ಕಂಪನಿಗಳ ಪಟ್ಟಿಯಲ್ಲಿ ಕಂಪನಿಗಳ ನಿರ್ದೇಶಕರ ಮಂಡಳಿಯಲ್ಲಿ ಶೇಕಡಾ 16ರಷ್ಟು ಮಹಿಳೆಯರು ಸ್ಥಾನ ಪಡೆದಿದ್ದಾರೆ. ಭಾರತದ ಆರ್ಥಿಕತೆ ಚೇತರಿಕೆಯಾಗುತ್ತಿದ್ದು, ಈ ಪಟ್ಟಿ ಬೆಳೆಯದಲಿದೆ. ಅದೇ ರೀತಿ ಕಂಪನಿಗಳ ನಿರ್ದೇಶಕರ ಮಂಡಳಿಗಳಲ್ಲಿ ಮಹಿಳೆಯರ ಸಂಖ್ಯೆಯೂ ಹೆಚ್ಚುವ ನಿರೀಕ್ಷೆ ಇದೆ. ಸದ್ಯ ಅತಿಹೆಚ್ಚು ಮಹಿಳೆಯರಿಗೆ ಉದ್ಯೋಗ ನೀಡುವ ಕಂಪನಿಯಾಗಿ ಟಿಸಿಎಸ್ ಗುರುತಿಸಿಕೊಂಡಿದೆ ಎಂದು ಹರುನ್ ಇಂಡಿಯಾದ ವ್ಯವಸ್ಥಾಪಕ ನಿರ್ದೇಶಕ, ಮುಖ್ಯ ಸಂಶೋಧಕ ಅನಸ್ ರಹಮಾನ್ ಜುನೈದ್ ಹೇಳಿದ್ದಾರೆ.

ಇನ್ನಷ್ಟು ವಾಣಿಜ್ಯ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ

Published On - 4:34 pm, Thu, 1 December 22

ಇಂಗ್ಲೆಂಡ್ ವರನ ಕೈ ಹಿಡಿದ ಬೇಲೂರಿನ ವಧು! ನಡೆಯಿತು ಅದ್ದೂರಿ ಮದುವೆ
ಇಂಗ್ಲೆಂಡ್ ವರನ ಕೈ ಹಿಡಿದ ಬೇಲೂರಿನ ವಧು! ನಡೆಯಿತು ಅದ್ದೂರಿ ಮದುವೆ
ಎಲಿಮಿನೇಟ್ ಆಗದಿದ್ದರೂ ರಕ್ಷಿತಾ ಶೆಟ್ಟಿಗೆ ಶುರುವಾಯ್ತು ಹೊಸ ಚಿಂತೆ
ಎಲಿಮಿನೇಟ್ ಆಗದಿದ್ದರೂ ರಕ್ಷಿತಾ ಶೆಟ್ಟಿಗೆ ಶುರುವಾಯ್ತು ಹೊಸ ಚಿಂತೆ
Video: ಆರತಿ ಎತ್ತಿರೋ ಫುಟ್​ಪಾತ್​ ಮೇಲೆ ಗಾಡಿ ಓಡ್ಸವ್ರಿಗೆ
Video: ಆರತಿ ಎತ್ತಿರೋ ಫುಟ್​ಪಾತ್​ ಮೇಲೆ ಗಾಡಿ ಓಡ್ಸವ್ರಿಗೆ
ಸೈಕಲ್ ಸವಾರನಿಗೆ ಡಿಕ್ಕಿ ಹೊಡೆದು ತಿರುಗಿಯೂ ನೋಡದೆ ಹೋದ ಬೈಕ್ ಸವಾರ
ಸೈಕಲ್ ಸವಾರನಿಗೆ ಡಿಕ್ಕಿ ಹೊಡೆದು ತಿರುಗಿಯೂ ನೋಡದೆ ಹೋದ ಬೈಕ್ ಸವಾರ
Video: ಅಮ್ಮಾ ನನ್ನ ಮೈಬಣ್ಣ ಬೇರೆ ಮಾಡೋಕೆ ಆಗಲ್ವಾ, ಕಣ್ಣೀರಿಟ್ಟ ಬಾಲಕಿ
Video: ಅಮ್ಮಾ ನನ್ನ ಮೈಬಣ್ಣ ಬೇರೆ ಮಾಡೋಕೆ ಆಗಲ್ವಾ, ಕಣ್ಣೀರಿಟ್ಟ ಬಾಲಕಿ
ವಿಷ್ಣು ತುಳಿಸಿ, ಹಾಗೂ ಲಕ್ಷ್ಮೀ ತುಳಸಿ ಎರೆಡೂ ಮನೆಯಲ್ಲಿರಬೇಕು ಯಾಕೆ?
ವಿಷ್ಣು ತುಳಿಸಿ, ಹಾಗೂ ಲಕ್ಷ್ಮೀ ತುಳಸಿ ಎರೆಡೂ ಮನೆಯಲ್ಲಿರಬೇಕು ಯಾಕೆ?
ಇಂದು ಈ ರಾಶಿಯವರಿಗೆ ಐದು ಗ್ರಹಗಳ ಶುಭಫಲವಿರುತ್ತದೆ
ಇಂದು ಈ ರಾಶಿಯವರಿಗೆ ಐದು ಗ್ರಹಗಳ ಶುಭಫಲವಿರುತ್ತದೆ
ಮದ್ಯ ಕರ್ನಾಟದಲ್ಲಿ ಶಮನೂರು ಸಾಮ್ರಾಜ್ಯ: ಹೆಲಿಕಾಪ್ಟರ್, ಮಿನಿ ವಿಮಾನ ಒಡೆಯ
ಮದ್ಯ ಕರ್ನಾಟದಲ್ಲಿ ಶಮನೂರು ಸಾಮ್ರಾಜ್ಯ: ಹೆಲಿಕಾಪ್ಟರ್, ಮಿನಿ ವಿಮಾನ ಒಡೆಯ
ಟಿ20 ಕ್ರಿಕೆಟ್‌ನಲ್ಲಿ ವಿಕೆಟ್​ಗಳ ಶತಕ ಪೂರೈಸಿದ ಹಾರ್ದಿಕ್ ಪಾಂಡ್ಯ
ಟಿ20 ಕ್ರಿಕೆಟ್‌ನಲ್ಲಿ ವಿಕೆಟ್​ಗಳ ಶತಕ ಪೂರೈಸಿದ ಹಾರ್ದಿಕ್ ಪಾಂಡ್ಯ
ಶಾಮನೂರು ಶಿವಶಂಕರಪ್ಪನವರಿಗೆ ಏನಾಗಿತ್ತು?ಆಸ್ಪತ್ರೆ ಮುಖ್ಯಸ್ಥ ಹೇಳಿದ್ದಿಷ್ಟು
ಶಾಮನೂರು ಶಿವಶಂಕರಪ್ಪನವರಿಗೆ ಏನಾಗಿತ್ತು?ಆಸ್ಪತ್ರೆ ಮುಖ್ಯಸ್ಥ ಹೇಳಿದ್ದಿಷ್ಟು