ICICI Bank: ಯುಪಿಐ ಪೇಮೆಂಟ್ಗೂ ಇಎಂಐ; ಈ ಸೌಲಭ್ಯ ಕೊಟ್ಟ ಮೊದಲ ಬ್ಯಾಂಕ್ ಐಸಿಐಸಿಐ
Stock and Crypto Markets Shine: ಏಪ್ರಿಲ್ 11, ಮಂಗಳವಾರ ಹೂಡಿಕೆದಾರರಿಗೆ ಮಂಗಳಕರ ದಿನದಂತಿದೆ. ಭಾರತದ ಷೇರುಪೇಟೆಗಳು ಉತ್ತಮ ವಾತಾವರಣ ಕಂಡಿವೆ. ಸೆನ್ಸೆಕ್ಸ್ ಮತ್ತೊಮ್ಮೆ 60,000 ಅಂಕಗಳ ಮಟ್ಟ ದಾಟಿದೆ. ಈಕ್ವಿಟಿ ಬೆಂಚ್ಮಾರ್ಕ್ಗಳಾದ ನಿಫ್ಟಿ50, ಸೆನ್ಸೆಕ್ಸ್30 ಸೂಚ್ಯಂಕಗಳು ಸತತ ಏಳು ದಿನವೂ ಏರಿಕೆಯ ಹಂತದಲ್ಲೇ ಇವೆ.

Important Business News Bulletin, 2023 April 11: ನಾವು ಸ್ಕ್ಯಾನ್ ಮಾಡಿ ನೀಡುವ ಯುಪಿಐ ಪಾವತಿಯನ್ನು ಕಂತುಗಳಲ್ಲಿ (EMI) ಕಟ್ಟುವ ಸೌಲಭ್ಯವನ್ನು ಐಸಿಐಸಿಐ ಒದಗಿಸಿದೆ. ಕ್ರೆಡಿಟ್ ಕಾರ್ಡ್ ಮಾದರಿಯ ಈ ಸೇವೆಯನ್ನು ಯುಪಿಐ ಪಾವತಿಗೆ ನೀಡಿದ ಮೊದಲ ಬ್ಯಾಂಕ್ ಐಸಿಐಸಿಐ ಆಗಿದೆ. ಜನರು ಇಎಂಐ ಸೌಲಭ್ಯ ಪಡೆಯಲು ಕ್ರೆಡಿಟ್ ಕಾರ್ಡ್ ಸ್ವೈಪ್ ಮಾಡಬೇಕೆಂದಿಲ್ಲ. ಶಾಪಿಂಗ್ನಲ್ಲಿ ಯುಪಿಐ ಸ್ಕ್ಯಾನ್ ಮೂಲಕ ಪಾವತಿಸಿದರೂ ಸಾಕು. ಐಸಿಐಸಿಐನ ಐಮೊಬೈಲ್ ಪೇ ಆ್ಯಪ್ (iMobile Pay) ಮೂಲಕ ಸ್ಕ್ಯಾನ್ ಮಾಡಿ ಹಣ ಪಾವತಿಸಬೇಕು. 3ರಿಂದ 9 ತಿಂಗಳವರೆಗೆ ಕಂತುಗಳನ್ನು ಕಟ್ಟುವ ಅವಕಾಶ ನೀಡಲಾಗುತ್ತದೆ. ಸದ್ಯ ಇದು ಆಫ್ಲೈನ್ ಶಾಪಿಂಗ್ಗೆ ಮಾತ್ರ ಸೀಮಿತವಾಗಿದೆ. ಅಂದರೆ ಅಂಗಡಿ, ಮಾಲ್ ಇತ್ಯಾದಿ ಕಡೆ ಈ ಸೇವೆ ಪಡೆಯಬಹುದು. ಆನ್ಲೈನ್ ಪಾವತಿಗೆ ಈ ಸೌಲಭ್ಯ ಮುಂದಿನ ದಿನಗಳಲ್ಲಿ ಬರಬಹುದು.
ಐಸಿಐಸಿಐ ಬ್ಯಾಂಕ್ನ ಈ ಸೌಲಭ್ಯ ಪಡೆಯಲು ಎರಡು ಷರತ್ತುಗಳಿವೆ. ಒಂದು, ನಾವು ಮಾಡುವ ಶಾಪಿಂಗ್ನ ಮೊತ್ತ ಕನಿಷ್ಠ 10,000 ರೂ ಅಗಿರಬೇಕು. ಇನ್ನೊಂದು, ಐಸಿಐಸಿಐ ಬ್ಯಾಂಕ್ನ ಬೈ ನೌ ಪೇ ಲೇಟರ್ (Buy Now Pay Later) ಸ್ಕೀಮ್ಗೆ ಅರ್ಹರಾಗಿರುವ ಗ್ರಾಹಕರಿಗೆ ಮಾತ್ರ ಈ ಸೌಲಭ್ಯ ಸಿಗುತ್ತದೆ.
ಗರಿಗೆದರಿದ ಸೆನ್ಸೆಕ್ಸ್, ಕ್ರಿಪ್ಟೋ ಜಗತ್ತು
ಏಪ್ರಿಲ್ 11, ಮಂಗಳವಾರ ಹೂಡಿಕೆದಾರರಿಗೆ ಮಂಗಳಕರ ದಿನದಂತಿದೆ. ಭಾರತದ ಷೇರುಪೇಟೆಗಳು ಉತ್ತಮ ವಾತಾವರಣ ಕಂಡಿವೆ. ಸೆನ್ಸೆಕ್ಸ್ ಮತ್ತೊಮ್ಮೆ 60,000 ಅಂಕಗಳ ಮಟ್ಟ ದಾಟಿದೆ. ಈಕ್ವಿಟಿ ಬೆಂಚ್ಮಾರ್ಕ್ಗಳಾದ ನಿಫ್ಟಿ50, ಸೆನ್ಸೆಕ್ಸ್30 ಸೂಚ್ಯಂಕಗಳು ಸತತ ಏಳು ದಿನವೂ ಏರಿಕೆಯ ಹಂತದಲ್ಲೇ ಇವೆ. ಟಾಟಾ ಸ್ಟೀಲ್, ಐಟಿಸಿ, ಕೋಟಕ್ ಮಹೀಂದ್ರ ಬ್ಯಾಂಕ್, ಎಸ್ಬಿಐ ಮೊದಲಾದ ಷೇರುಗಳಿಗೆ ಒಳ್ಳೆಯ ಬೇಡಿಕೆ ಮುಂದುವರಿದಿದೆ.
ಇನ್ನು, ಕ್ರಿಪ್ಟೋ ಜಗತ್ತೂ ಕೂಡ ಪಾಸಿಟಿವ್ ಆಗಿದೆ. ಬಿಟ್ಕಾಯಿನ್ ಮೌಲ್ಯ 30,000 ಡಾಲರ್ಗಿಂತ ಅಧಿಕಗೊಂಡಿದೆ. ಕಳೆದ 10 ತಿಂಗಳಲ್ಲಿ ಬಿಟ್ಕಾಯಿನ್ ಮೊದಲ ಬಾರಿಗೆ ಈ ಗಡಿ ದಾಟಿದೆ. ಇತರ ಕ್ರಿಪ್ಟೋಕರೆನ್ಸಿಗಳೂ ಕೂಡ ಬೇಡಿಕೆ ಪಡೆದಿವೆ.
ಎಫ್ಐಐ ಮತ್ತು ಮ್ಯೂಚುವಲ್ ಫಂಡ್ ನಡುವಿನ ಕುತೂಹಲಕಾರಿ ಸಂಬಂಧ
ಭಾರತದ ಷೇರುಪೇಟೆಯಲ್ಲಿ ಒಂದು ಕುತೂಹಲ ಎನಿಸುವ ಪ್ಯಾಟರ್ನ್ ಅನ್ನು ಗುರುತಿಸಬಹುದು. 2020-21ರ ಹಣಕಾಸು ವರ್ಷದಲ್ಲಿ ಷೇರುಗಳಲ್ಲಿ ಭಾರೀ ಮೊತ್ತದ ಹೂಡಿಕೆ ಮಾಡಿದ್ದ ವಿದೇಶೀ ಸಾಂಸ್ಥಿಕ ಹೂಡಿಕೆದಾರರು (FII- Foreign Institutional Investors) ಕಳೆದ ಎರಡು ಹಣಕಾಸು ವರ್ಷದಲ್ಲಿ (2021-22, 2022-23) ಹೆಚ್ಚಾಗಿ ಷೇರುಗಳನ್ನು ಮಾರುತ್ತಿದ್ದಾರೆ. ಈ ಎರಡು ವರ್ಷದಲ್ಲಿ ಮ್ಯೂಚುವಲ್ ಫಂಡ್ ಕಂಪನಿಗಳು ಷೇರುಗಳ ಮೇಲೆ ಹೆಚ್ಚಾಗಿ ಹೂಡಿಕೆ ಮಾಡಿವೆ. 2021ರ ಹಣಕಾಸು ವರ್ಷದಲ್ಲಿ ಎಫ್ಐಐಗಳು ಷೇರುಗಳ ಖರೀದಿ ಮಾಡುತ್ತಿದ್ದಾಗ, ಮ್ಯೂಚುವಲ್ ಫಂಡ್ಗಳು ಷೇರುಗಳ ಮಾರಾಟದಲ್ಲಿ ತೊಡಗಿದ್ದವು. ಇದೊಂದು ಅಚ್ಚರಿಯ ಪ್ಯಾಟರ್ನ್ ಅನ್ನು ಕಳೆದ 3 ವರ್ಷಗಳಲ್ಲಿ ಕಾಣಬಹುದು.
ಇನ್ನಷ್ಟು ವ್ಯವಹಾರ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
Published On - 7:41 pm, Tue, 11 April 23