ಒಂದಕ್ಕಿಂತ ಹೆಚ್ಚು ಬ್ಯಾಂಕ್‌ಗಳಲ್ಲಿ ಗ್ರಾಹಕರು ಖಾತೆ ಹೊಂದಿದ್ದರೆ ಏನಾಗುತ್ತದೆ ಗೊತ್ತಾ? ಆರ್‌ಬಿಐ ನಿಯಮಗಳು ಹೇಳುವುದೇನು?

Bank Account: ಇತ್ತೀಚಿನ ದಿನಗಳಲ್ಲಿ ಹಣದ ಹರಿವು ಹೆಚ್ಚಾಗಿದೆ. ಹಾಗಾಗಿ ಬಹುತೇಕ ಮಂದಿ ಒಂದಕ್ಕಿಂತ ಹೆಚ್ಚು ಬ್ಯಾಂಕ್ ಖಾತೆಗಳನ್ನು ಹೊಂದಲು ಇಷ್ಟಪಡುತ್ತಾರೆ. ಆದರೆ ಭಾರತೀಯ ರಿಸರ್ವ್ ಬ್ಯಾಂಕ್ ಇದಕ್ಕೆ ಕೆಲವು ನಿರ್ಬಂಧಗಳನ್ನು ವಿಧಿಸಿದೆ.

ಒಂದಕ್ಕಿಂತ ಹೆಚ್ಚು ಬ್ಯಾಂಕ್‌ಗಳಲ್ಲಿ ಗ್ರಾಹಕರು ಖಾತೆ ಹೊಂದಿದ್ದರೆ ಏನಾಗುತ್ತದೆ ಗೊತ್ತಾ? ಆರ್‌ಬಿಐ ನಿಯಮಗಳು ಹೇಳುವುದೇನು?
ಒಂದಕ್ಕಿಂತ ಹೆಚ್ಚು ಬ್ಯಾಂಕ್‌ಗಳಲ್ಲಿ ಗ್ರಾಹಕರು ಖಾತೆ ಹೊಂದಿದ್ದರೆ ಏನಾಗುತ್ತದೆ
Follow us
ಸಾಧು ಶ್ರೀನಾಥ್​
|

Updated on: Jul 03, 2023 | 6:21 PM

multiple bank accounts: ಇತ್ತೀಚಿನ ದಿನಗಳಲ್ಲಿ ಹಣದ ಹರಿವು ಹೆಚ್ಚಾಗಿದೆ. ಹಾಗಾಗಿ ಬಹುತೇಕ ಮಂದಿ ಒಂದಕ್ಕಿಂತ ಹೆಚ್ಚು ಬ್ಯಾಂಕ್ ಖಾತೆಗಳನ್ನು ಹೊಂದಲು ಇಷ್ಟಪಡುತ್ತಾರೆ. ಬ್ಯಾಂಕ್ ಖಾತೆ ತೆರೆಯುವ ಪ್ರಕ್ರಿಯೆಯನ್ನೂ ಬ್ಯಾಂಕರ್‌ಗಳು ಸರಳಗೊಳಿಸಿದ್ದಾರೆ. ಅನೇಕ ಬ್ಯಾಂಕ್‌ಗಳು ಶಾಖೆಗೆ ಭೇಟಿ ನೀಡದೆ ಆನ್‌ಲೈನ್‌ನಲ್ಲಿ ಖಾತೆ ತೆರೆಯುವ ಸೌಲಭ್ಯವನ್ನು ಒದಗಿಸಿವೆ. ಅಲ್ಲದೆ ಕೆಲವು ಬ್ಯಾಂಕುಗಳು ಹಲವು ವಿಶೇಷ ಸೌಲಭ್ಯಗಳನ್ನು ಒದಗಿಸುತ್ತವೆ. ಈ ಯೋಜನೆಯಲ್ಲಿ, ಪ್ರತಿಯೊಬ್ಬರೂ ಒಂದಕ್ಕಿಂತ ಹೆಚ್ಚು ಬ್ಯಾಂಕ್‌ಗಳಲ್ಲಿ ಖಾತೆಗಳನ್ನು (bank account) ತೆರೆಯುತ್ತಿದ್ದಾರೆ. ಇದು ಹಣಕಾಸಿನ ವಹಿವಾಟು ನಡೆಸಲು ಸಹಾಯ ಮಾಡುತ್ತದೆ. ಇದೇ ವೇಳೆ ಕೆಲವು ಅನುಮಾನಗಳು ಸಹಜವಾಗಿ ಮೂಡುತ್ತವೆ. ಒಬ್ಬ ವ್ಯಕ್ತಿಯು ಎಷ್ಟು ಖಾತೆಗಳನ್ನು ಹೊಂದಬಹುದು ಎಂಬ ಪ್ರಶ್ನೆ ಎದುರಾಗುತ್ತದೆ. ಎಷ್ಟು ಖಾತೆ ಹೊಂದಬಹುದು. ಇದಕ್ಕೇನಾದರೂ ಮಿತಿ ಇದೆಯೇ? ಅಥವಾ ಬಹು ಖಾತೆಗಳು ತೆಯಬಹುದೇ? ರಿಸರ್ವ್ ಬ್ಯಾಂಕ್ ನಿಯಮಗಳು (RBI) ಏನು ಹೇಳುತ್ತವೆ? ಈ ಬಗ್ಗೆ ನೋಡೋಣ.

ಸಾಮಾನ್ಯವಾಗಿ ಯಾರೇ ಆಗಲಿ ಬ್ಯಾಂಕ್‌ನಲ್ಲಿ ಒಂದು ಖಾತೆಯನ್ನು ಹೊಂದಿರುತ್ತಾರೆ. ಬ್ಯಾಂಕ್‌ ಶಾಖೆಗಳು ಬದಲಾದರೂ ಗ್ರಾಹಕರ ಖಾತೆ ಬದಲಾಗುವುದಿಲ್ಲ. ಆದರೆ ನೀವು ಬೇರೆ ಬೇರೆ ಬ್ಯಾಂಕ್‌ಗಳಲ್ಲಿ ಪ್ರತ್ಯೇಕ ಖಾತೆಗಳನ್ನು ಹೊಂದಬಹುದು. ಭಾರತೀಯ ರಿಸರ್ವ್ ಬ್ಯಾಂಕ್ ಇದಕ್ಕೆ ಕೆಲವು ನಿರ್ಬಂಧಗಳನ್ನು ವಿಧಿಸಿದೆ. ಪ್ರತಿಯೊಬ್ಬ ವ್ಯಕ್ತಿಯು ನಾಲ್ಕರಿಂದ ಐದು ಖಾತೆಗಳನ್ನು ಹೊಂದಬಹುದು. ಆದರೆ ಅವು ಐದು ಪ್ರತ್ಯೇಕ ಬ್ಯಾಂಕುಗಳಾಗಿರಬೇಕು. ವಿವಿಧ ಬ್ಯಾಂಕ್‌ಗಳಲ್ಲಿ ಖಾತೆಗಳನ್ನು ತೆರೆಯಲು, ನೀವು ಕೆಲವು ವಿಷಯಗಳನ್ನು ನೆನಪಿನಲ್ಲಿಟ್ಟುಕೊಳ್ಳಬೇಕು. ಅದನ್ನು ನೋಡೋಣ.

ಹಣಕಾಸು ಯೋಜನೆ.. ಬಹು ಬ್ಯಾಂಕ್ ಖಾತೆಗಳನ್ನು ಹೊಂದಿರುವುದು ಹಣಕಾಸಿನ ಯೋಜನೆಯನ್ನು ಅಸಾಧ್ಯವಾಗಿಸಬಹುದು. ಏಕೆಂದರೆ ಎಲ್ಲಾ ಖಾತೆಗಳಲ್ಲಿ ನಗದು ಬ್ಯಾಲೆನ್ಸ್ ಮತ್ತು ಹಿಂಪಡೆಯುವಿಕೆಯ ಬಗ್ಗೆ ನಿಗಾ ಇಡಲು ನಿಮಗೆ ಕಷ್ಟವಾಗುತ್ತದೆ. ನಿಮ್ಮ ಹಣಕಾಸಿನ ಗುರಿಗಳಿಗೆ ಮೀಸಲಾಗಿರುವ ಒಂದೇ ಖಾತೆಯನ್ನು ಹೊಂದಿರುವ ನೀವು ನಿಮ್ಮ ಯೋಜನೆ ಅಥವಾ ಗುರಿಗಳನ್ನು ರಾಜಿ ಮಾಡಿಕೊಳ್ಳುವುದಿಲ್ಲ ಎಂದು ಖಚಿತಪಡಿಸಿಕೊಳ್ಳಲು ಸಹಾಯ ಮಾಡುತ್ತದೆ.

ಕನಿಷ್ಠ ಬ್ಯಾಂಕ್ ಬ್ಯಾಲೆನ್ಸ್.. ಬಹು ಬ್ಯಾಂಕ್ ಖಾತೆಗಳನ್ನು ಹೊಂದಿರುವ ನೀವು ನಿಮ್ಮ ಎಲ್ಲಾ ಖಾತೆಗಳಲ್ಲಿ ಕನಿಷ್ಠ ಬ್ಯಾಲೆನ್ಸ್ ನಿರ್ವಹಿಸಲು ಕಷ್ಟವಾಗಬಹುದು. ಪ್ರತಿಯೊಂದು ಉಳಿತಾಯ ಖಾತೆಯು ನಿಮ್ಮ ಖಾತೆಯಲ್ಲಿ ಕನಿಷ್ಠ ಬ್ಯಾಲೆನ್ಸ್ ನಿರ್ವಹಿಸಲು ತನ್ನದೇ ಆದ ಮಿತಿಯನ್ನು ಹೊಂದಿದೆ. ನೀವು ಆ ಮೊತ್ತವನ್ನು ನಿರ್ವಹಿಸದಿದ್ದರೆ, ಬ್ಯಾಂಕ್ ನಿಮಗೆ ದಂಡದ ಮೊತ್ತವನ್ನು ವಿಧಿಸುತ್ತದೆ. ಇದು ನಿಮಗೆ ಹೆಚ್ಚುವರಿ ಹೊರೆಯಾಗಬಹುದು.

ಇದನ್ನೂ ಓದಿ: Multibagger: ಮೂರು ವರ್ಷದಲ್ಲಿ 18 ಪಟ್ಟು ಲಾಭ; 1 ಲಕ್ಷಕ್ಕೆ 18 ಲಕ್ಷ ರಿಟರ್ನ್; ಮಲ್ಟಿಬ್ಯಾಗರ್ ಆಗಿದೆ ಆರಿಯಾನ್​ಪ್ರೋ

ಲಾಭಕ್ಕೆ ತಗಲುವ ವೆಚ್ಚದ ಲೆಕ್ಕಾಚಾರ.. ಬ್ಯಾಂಕ್ ನೀಡುವ ಪ್ರಯೋಜನಗಳ ಪಟ್ಟಿಯನ್ನು ಹೊಂದುವುದು ಮತ್ತು ವೆಚ್ಚಗಳನ್ನು ಹೋಲಿಸುವುದು ಯಾವಾಗಲೂ ಉತ್ತಮ ಅಭ್ಯಾಸವಾಗುತ್ತದೆ. ಪ್ರಯೋಜನಗಳು ವೆಚ್ಚಕ್ಕಿಂತ ಹೆಚ್ಚಿದ್ದರೆ, ಬ್ಯಾಂಕ್ ಖಾತೆಗಳನ್ನು ನಿರ್ವಹಿಸಲು ಯಾವುದೇ ಅಡ್ಡಿ ಆತಂಕ ಇರುವುದಿಲ್ಲ.

ಹಲವು ರೀತಿಯ ಖಾತೆಗಳು.. ಇತ್ತೀಚಿನ ದಿನಗಳಲ್ಲಿ, ಚಾಲ್ತಿ ಖಾತೆ, ಸಂಬಳ ಖಾತೆ, ಸ್ಥಿರ ಠೇವಣಿ ಖಾತೆಗಳು, ಮರುಕಳಿಸುವ ಠೇವಣಿ ಖಾತೆಗಳು, ಎನ್‌ಆರ್‌ಐ ಖಾತೆಗಳು, ಎನ್‌ಆರ್‌ಡಿ ಖಾತೆಗಳು ಮುಂತಾದ ಹಲವು ರೀತಿಯ ಖಾತೆಗಳನ್ನು ತೆರೆಯಲು ಬ್ಯಾಂಕುಗಳು ನಿಮಗೆ ಅವಕಾಶ ನೀಡುತ್ತವೆ. ಗ್ರಾಹಕರು ತಮ್ಮ ಅವಶ್ಯಕತೆಗಳಿಗೆ ಅನುಗುಣವಾಗಿ ತಮ್ಮ ಆಯ್ಕೆಯ ಖಾತೆಯನ್ನು ತೆರೆಯಬಹುದು; ಅನೇಕ ಜನರು ಬಡ್ಡಿ ಹೊಂದಿರುವ ಉಳಿತಾಯ ಖಾತೆಗಳನ್ನು ತೆರೆಯುತ್ತಾರೆ. ಏಕೆಂದರೆ ಉಳಿತಾಯ ಖಾತೆಯು ವಿವಿಧ ಆಯ್ಕೆಗಳನ್ನು ಹೊಂದಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಚನ್ನಪಟ್ಟಣದಲ್ಲಿ ಬಿಜೆಪಿಯೇ ಕುಮಾರಸ್ವಾಮಿಗೆ ಮೋಸ ಮಾಡಿದೆ: ಕೃಷ್ಣ ಭೈರೇಗೌಡ
ಚನ್ನಪಟ್ಟಣದಲ್ಲಿ ಬಿಜೆಪಿಯೇ ಕುಮಾರಸ್ವಾಮಿಗೆ ಮೋಸ ಮಾಡಿದೆ: ಕೃಷ್ಣ ಭೈರೇಗೌಡ
ಸೂಪರ್‌ಮ್ಯಾನ್‌ನಂತೆ ಗಾಳಿಯಲ್ಲಿ ಹಾರಿ ಅದ್ಭುತ ಕ್ಯಾಚ್ ಹಿಡಿದ ಕಿವೀಸ್ ವೇಗಿ
ಸೂಪರ್‌ಮ್ಯಾನ್‌ನಂತೆ ಗಾಳಿಯಲ್ಲಿ ಹಾರಿ ಅದ್ಭುತ ಕ್ಯಾಚ್ ಹಿಡಿದ ಕಿವೀಸ್ ವೇಗಿ
‘ಈಗಿನ್ನೂ ಆಡೋಕೆ ಬರುತ್ತಿದೆ, ಅಡ್ಡಗಾಲು ಹಾಕಿದ್ರು’: ಚೈತ್ರಾ ಹಳೇ ರಾಗ
‘ಈಗಿನ್ನೂ ಆಡೋಕೆ ಬರುತ್ತಿದೆ, ಅಡ್ಡಗಾಲು ಹಾಕಿದ್ರು’: ಚೈತ್ರಾ ಹಳೇ ರಾಗ
ಡಿನ್ನರ್​ ಸಭೆ ಗದ್ದಲದ ಮಧ್ಯ ಡಿಕೆಶಿ, ಸತೀಶ್, ಪರಮೇಶ್ವರ್ ಸುದ್ದಿಗೋಷ್ಠಿ
ಡಿನ್ನರ್​ ಸಭೆ ಗದ್ದಲದ ಮಧ್ಯ ಡಿಕೆಶಿ, ಸತೀಶ್, ಪರಮೇಶ್ವರ್ ಸುದ್ದಿಗೋಷ್ಠಿ
ಸಿದ್ದರಾಮಯ್ಯ ಅವರನ್ನು ‘ಹೀರೋ’ ಎಂದು ಕರೆಯುತ್ತಿದ್ದರು ಈ ಹಿರಿಯ ನಟಿ
ಸಿದ್ದರಾಮಯ್ಯ ಅವರನ್ನು ‘ಹೀರೋ’ ಎಂದು ಕರೆಯುತ್ತಿದ್ದರು ಈ ಹಿರಿಯ ನಟಿ
Video: ಕೇರಳ ಉತ್ಸವದಲ್ಲಿ ಕೆರಳಿದ ಆನೆ, 20ಕ್ಕೂ ಅಧಿಕ ಮಂದಿಗೆ ಗಾಯ
Video: ಕೇರಳ ಉತ್ಸವದಲ್ಲಿ ಕೆರಳಿದ ಆನೆ, 20ಕ್ಕೂ ಅಧಿಕ ಮಂದಿಗೆ ಗಾಯ
ನಗರದಲ್ಲಿ ನಾಲ್ಕು ಕಡೆ ನಿರ್ಮಿಸಲಾಗಿದೆ ಹೊಸ ಪೊಲೀಸ್ ಠಾಣೆಗಳು!
ನಗರದಲ್ಲಿ ನಾಲ್ಕು ಕಡೆ ನಿರ್ಮಿಸಲಾಗಿದೆ ಹೊಸ ಪೊಲೀಸ್ ಠಾಣೆಗಳು!
ನಮ್ಮ ಸಭೆ ರದ್ದಾಗಿಲ್ಲ ಮುಂದೂಡಲ್ಪಟ್ಟಿದೆ ಅಷ್ಟೇ: ಪರಮೇಶ್ವರ್, ಗೃಹ ಸಚಿವ
ನಮ್ಮ ಸಭೆ ರದ್ದಾಗಿಲ್ಲ ಮುಂದೂಡಲ್ಪಟ್ಟಿದೆ ಅಷ್ಟೇ: ಪರಮೇಶ್ವರ್, ಗೃಹ ಸಚಿವ
ಜೆಈ ರವೀಂದ್ರ ಆದಾಯಕ್ಕಿಂತ ಹೆಚ್ಚು ಆಸ್ತಿ ಹೊಂದಿರುವ ಅರೋಪ ಹಿನ್ನೆಲೆ ದಾಳಿ
ಜೆಈ ರವೀಂದ್ರ ಆದಾಯಕ್ಕಿಂತ ಹೆಚ್ಚು ಆಸ್ತಿ ಹೊಂದಿರುವ ಅರೋಪ ಹಿನ್ನೆಲೆ ದಾಳಿ
Video: ಮಂಜಿನ ಹೊದಿಕೆ ಹೊದ್ದು ಮಲಗಿದ ತಾಜ್​ಮಹಲ್
Video: ಮಂಜಿನ ಹೊದಿಕೆ ಹೊದ್ದು ಮಲಗಿದ ತಾಜ್​ಮಹಲ್