ಯುಪಿಐ ಮೂಲಕ ಈಗಾಗಲೇ ಭಾರತದ ಪೇಮೆಂಟ್ ವ್ಯವಸ್ಥೆಯಲ್ಲಿ ಕ್ರಾಂತಿಯಾಗಿದೆ. ಈಗ ಐಎಂಪಿಎಸ್ ಪಾವತಿ ವ್ಯವಸ್ಥೆಯನ್ನು (IMPS payment system) ಇನ್ನಷ್ಟು ಸಮರ್ಪಕಗೊಳಿಸಲಾಗಿದೆ. ಈ ಸುಧಾರಿತ ಐಎಂಪಿಎಸ್ನಿಂದ ಬ್ಯಾಂಕ್ ಖಾತೆಗೆ ಹಣ ವರ್ಗಾವಣೆ (money transfer) ಕಾರ್ಯ ಬಹಳ ಸರಳಗೊಂಡಿದೆ. ಯುಪಿಐ ಅನ್ನು ರೂಪಿಸಿದ ನ್ಯಾಷನಲ್ ಪೇಮೆಂಟ್ ಕಾರ್ಪೊರೇಶನ್ ಸಂಸ್ಥೆಯೇ (NPCI) ಐಎಂಪಿಎಸ್ ಅನ್ನು ಸುಧಾರಿಸಿದೆ. ವ್ಯಕ್ತಿಯ ಮೊಬೈಲ್ ನಂಬರ್ ಮತ್ತು ಬ್ಯಾಂಕ್ ಹೆಸರಿದ್ದರೆ ಸಾಕು, ಐಎಂಪಿಎಸ್ ಮೂಲಕ 5 ಲಕ್ಷ ರೂವರೆಗೂ ಹಣ ವರ್ಗಾಯಿಸಬಹುದು. ಮುಂದೆ ಈ ಸುಧಾರಿತ ಐಎಂಪಿಎಸ್ ವ್ಯವಸ್ಥೆ ಜಾರಿಗೆ ಬರುವ ಸಾಧ್ಯತೆ ಇದೆ.
ಈಗಿರುವ ಐಎಂಪಿಎಸ್ ವಿಧಾನದಲ್ಲಿ ಹಣ ವರ್ಗಾವಣೆ ಹೇಗೆ?
ಇಮ್ಮೀಡಿಯೇಟ್ ಪೇಮೆಂಟ್ ಸರ್ವಿಸ್ ಎನ್ನಲಾಗುವ ಐಎಂಪಿಎಸ್ ಅನ್ನು ಎರಡು ವಿಧಾನದಲ್ಲಿ ಬಳಸಬಹುದು. ಮೊದಲನೆಯದರಲ್ಲಿ, ನೀವು ಹಣ ಕಳುಹಿಸಬೇಕಾದವರ ಬ್ಯಾಂಕ್ ಖಾತೆ ಸಂಖ್ಯೆ, ಬ್ಯಾಂಕ್ ಹೆಸರು ಮತ್ತು ಐಎಫ್ಎಸ್ಸಿ ಕೋಡ್ ಹಾಕಿ ಹಣ ಕಳುಹಿಸಬೇಕು.
ಎರಡನೇ ವಿಧಾನದಲ್ಲಿ, ವ್ಯಕ್ತಿಯ ಬ್ಯಾಂಕ್ ಖಾತೆಗೆ ಜೋಡಿತವಾದ ಮೊಬೈಲ್ ನಂಬರ್ ಮತ್ತು ಎಂಎಂಐಡಿ ಇರಬೇಕು. ಹಣ ಕಳುಹಿಸುವವರು ಮತ್ತು ಸ್ವೀಕರಿಸುವವರು ಇಬ್ಬರ ಬಳಿಯೂ ಎಂಎಂಐಡಿ ಇರಬೇಕು.
ಇದನ್ನೂ ಓದಿ: ಹೊಸ ಸ್ಕ್ಯಾಮ್..! ಒಟಿಪಿ ಬರದೆಯೇ ಆಧಾರ್ ಬಳಸಿ ಹಣ ಎಗರಿಸುತ್ತಾರೆ; ಈಗಲೇ ಬಯೋಮೆಟ್ರಿಕ್ ಲಾಕ್ ಮಾಡಿ; ಇದು ಹೇಗೆ?
ಎರಡನೇ ವಿಧಾನಕ್ಕೆ ಹೋಲಿಸಿದರೆ ಮೊದಲ ವಿಧಾನ ಹೆಚ್ಚು ಸರಳವಾಗಿದೆ. ಆದರೆ, ಈಗ ಐಎಂಪಿಎಸ್ ಅನ್ನು ಇನ್ನೂ ಕೂಡ ಸರಳಗೊಳಿಸಲಾಗಿದೆ. ಅದರ ವಿವರ ಮುಂದಿದೆ…
ಸುಧಾರಿತ ಐಎಂಪಿಎಸ್ನಲ್ಲಿ, ಹಣ ಕಳುಹಿಸಬೇಕಾದವರ ಮೊಬೈಲ್ ನಂಬರ್ ಹಾಗೂ ಅವರ ಬ್ಯಾಂಕ್ ಹೆಸರನ್ನು ಹಾಕಿದರೆ ಸಾಕು. ಆ ವಿವರ ನಮೂದಿಸಿದರೆ ಬ್ಯಾಂಕ್ ಖಾತೆಯೊಂದಿಗೆ ನೊಂದಾಯಿತವಾದ ಅವರ ಹೆಸರು ಪ್ರತ್ಯಕ್ಷವಾಗುತ್ತದೆ. ಇದರಿಂದ ಸರಿಯಾದ ವ್ಯಕ್ತಿಗೆ ಹಣ ವರ್ಗಾವಣೆ ಆಗುತ್ತದೆ ಎಂಬುದನ್ನು ಖಾತ್ರಿ ಪಡಿಸಿಕೊಳ್ಳಬಹುದು. ಈಗಿರುವ ಐಎಂಪಿಎಸ್ ವಿಧಾನಗಳಲ್ಲಿ, ಈ ರೀತಿ ಖಾತ್ರಿ ಸಿಗುವುದಿಲ್ಲ. ತಪ್ಪಾಗಿ ಖಾತೆ ನಂಬರ್ ಹಾಕಿದರೆ ಬೇರೆಯವರಿಗೆ ಹಣ ವರ್ಗಾವಣೆ ಆಗಿಹೋಗಬಹುದು.
ಇದನ್ನೂ ಓದಿ: Deepavali Bonus: ಕೇಂದ್ರ ಸರ್ಕಾರದಿಂದ ಉದ್ಯೋಗಿಗಳಿಗೆ ದೀಪಾವಳಿ ಗಿಫ್ಟ್; ಹಬ್ಬಕ್ಕೆ ಮುಂಚೆ 7,000 ರೂವರೆಗೆ ಬೋನಸ್ ಪ್ರಕಟ
ಇನ್ನೊಂದು ಪ್ರಮುಖ ಸಂಗತಿ ಎಂದರೆ, ಈಗಿರುವ ಐಎಂಪಿಎಸ್ ವ್ಯವಸ್ಥೆಯನ್ನು ಬಳಸಬೇಕೆಂದರೆ ಹಣ ಕಳುಹಿಸಬೇಕಾದವರನ್ನು ಬೆನಿಫಿಶಿಯರಿ ಆಗಿ ಸೇರಿಸಬೇಕು. ಆದರೆ, ಪ್ರಸ್ತಾವಿತ ಹೊಸ ಐಎಂಪಿಎಸ್ನಲ್ಲಿ ನೀವು ಬೆನಿಫಿಸಿ ಲಿಸ್ಟ್ಗೆ ಸೇರಿಸದೆಯೇ 5 ಲಕ್ಷ ರೂವರೆಗೂ ಹಣ ವರ್ಗಾವಣೆ ಮಾಡಬಹುದು. ಐದು ಲಕ್ಷ ಮೇಲ್ಪಟ್ಟ ಹಣ ವರ್ಗಾವಣೆ ಮಾಡುವುದಾದರೆ ಮಾತ್ರ ಬೆನಿಫಿಶಿಯರಿ ಸೇರಿಸಬೇಕು.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ