ನವದೆಹಲಿ, ಮಾರ್ಚ್ 4: ನೀವು ಕಪ್ಪು ಹಣ ಹೊಂದಿದ್ದೀರಿ, ಆದಾಯ ತೆರಿಗೆ ಪಾವತಿಸಿಲ್ಲ, ಮೌಲ್ಯಯುತ ವಸ್ತುಗಳನ್ನು (valuable assets) ಹೊಂದಿದ್ದೀರಿ ಎನ್ನುವ ಯಾವುದೇ ಅನುಮಾನ ಬಂದರೂ ಆದಾಯ ತೆರಿಗೆ ಇಲಾಖೆ ನಿಮ್ಮ ಯಾವುದೇ ಡಿಜಿಟಲ್ ಸಾಧನಗಳನ್ನು (digital platforms) ಶೋಧಿಸುವ ಅಧಿಕಾರ ಹೊಂದಿರಲಿದೆ. ಹೊಸ ಆದಾಯ ತೆರಿಗೆ ಮಸೂದೆ (New Income Tax act) ಮೂಲಕ 1961ರ ಆದಾಯ ತೆರಿಗೆ ಕಾಯ್ದೆಯಲ್ಲಿ ಕೆಲ ಪ್ರಮುಖ ಬದಲಾವಣೆಗಳನ್ನು ಮಾಡಲಾಗುತ್ತಿದೆ. ಇದರ ಪ್ರಕಾರ, ಆದಾಯ ತೆರಿಗೆ ಇಲಾಖೆಯ ಅಧಿಕಾರಿಗಳು ನಿಮ್ಮ ಖಾಸಗಿ ಇಮೇಲ್, ಬ್ಯಾಂಕ್ ಖಾತೆ, ಸೋಷಿಯಲ್ ಮೀಡಿಯಾ ಅಕೌಂಟ್, ಆನ್ಲೈನ್ ಇನ್ವೆಸ್ಟ್ಮೆಂಟ್ ಅಕೌಂಟ್, ಟ್ರೇಡಿಂಗ್ ಅಕೌಂಟ್ ಮತ್ತಿತರ ಯಾವುದೇ ಸಾಧನವನ್ನೂ ಪರಿಶೀಲಿಸುವ ಅಧಿಕಾರ ಹೊಂದಿರುತ್ತಾರೆ. ನಿಮ್ಮ ಒಪ್ಪಿಗೆ ಇಲ್ಲದೆಯೇ ಅಧಿಕಾರಿಗಳು ನಿಮ್ಮ ಅಕೌಂಟ್ಗಳನ್ನು ತೆಗೆದು ನೋಡಬಹುದು.
1961ರ ಆದಾಯ ತೆರಿಗೆ ಕಾಯ್ದೆಯಲ್ಲಿ ಡಿಜಿಟಲ್ ಪ್ಲಾಟ್ಫಾರ್ಮ್ಗಳ ಪ್ರಸ್ತಾಪ ಇಲ್ಲ. ಸೆಕ್ಷನ್ 132 ಪ್ರಕಾರ ಯಾವುದೇ ವ್ಯಕ್ತಿ ತೆರಿಗೆ ವಂಚನೆ ಮಾಡಿರಬಹುದು ಎನ್ನುವ ಶಂಕೆ ಬಂದರೆ ಬ್ಯಾಂಕ್ ಆಸ್ತಿಗಳನ್ನು ಶೋಧಿಸಬಹುದು. ಮನೆಯ ಬಾಗಿಲಿನ ಲಾಕ್ ತೆಗೆಯುವ, ಲಾಕರ್ಗಳನ್ನು ತೆಗೆಯುವ ಅಧಿಕಾರವನ್ನು ಇಲಾಖೆಯ ಅಧಿಕಾರಿಗಳು ಹೊಂದಿರುತ್ತಾರೆ.
ಈ ಕಾಯ್ದೆಯಲ್ಲಿ ಡಿಜಿಟಲ್ ಪ್ಲಾಟ್ಫಾರ್ಮ್ಗಳ ಪ್ರಸ್ತಾಪ ಇಲ್ಲದೇ ಇದ್ದರಿಂದ ಐಟಿ ರೇಡ್ಗಳಲ್ಲಿ ಕಾನೂನು ತೊಡಕು ಮತ್ತು ಸಂದಿಗ್ಧತೆ ಎದುರಾಗುತ್ತಿದೆ. ಈ ಹಿನ್ನೆಲೆಯಲ್ಲಿ ಕಾಯ್ದೆಯಲ್ಲಿ ತಿದ್ದುಪಡಿ ತರಲಾಗುತ್ತಿದೆ. ಈಗ ಶಂಕಿತ ಯಾವುದೇ ವ್ಯಕ್ತಿಯ ವರ್ಚುವಲ್ ಡಿಜಿಟಲ್ ಸ್ಪೇಸ್ ಅನ್ನು ಐಟಿ ಅಧಿಕಾರಿಗಳು ಶೋಧಿಸುವ ಅಧಿಕಾರ ತಂದುಕೊಡುತ್ತದೆ ಹೊಸ ಕಾಯ್ದೆ.
ಇದನ್ನೂ ಓದಿ: ರಾಜ್ಯಗಳ ಪೈಕಿ ಕರ್ನಾಟಕದ್ದು 5ನೇ ಅತಿಹೆಚ್ಚು ಸಾಲ; ಆದರೆ, ಜಿಡಿಪಿಗೆ ಹೋಲಿಸಿದರೆ ಇತರ ರಾಜ್ಯಗಳಿಗಿಂತ ಉತ್ತಮ
ಇಲ್ಲಿ ವರ್ಚುವಲ್ ಡಿಜಿಟಲ್ ಸ್ಪೇಸ್ ಎಂದರೆ ಒಬ್ಬ ವ್ಯಕ್ತಿಯ ಸೋಷಿಯಲ್ ಮೀಡಿಯಾ ಅಕೌಂಟ್ಗಳು, ಬ್ಯಾಂಕ್ ಅಕೌಂಟ್ಗಳು, ಟ್ರೇಡಿಂಗ್ ಅಕೌಂಟ್ಗಳು, ಇನ್ವೆಸ್ಟ್ಮೆಂಟ್ ಅಕೌಂಟ್ಗಳು ಮತ್ತು ಇಮೇಲ್ಗಳು ಒಳಗೊಳ್ಳುತ್ತವೆ. ಮುಂದಿನ ವರ್ಷ (2026) ಏಪ್ರಿಲ್ 1ರಿಂದ ಈ ಕಾಯ್ದೆ ಜಾರಿಗೆ ಬರುವ ನಿರೀಕ್ಷೆ ಇದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ