ಕಾರು, ಆಭರಣ ಸಾಲಗಳಲ್ಲಿ ಬಾಕಿ ಹೆಚ್ಚಳ; ಎರಡನೇ ತ್ರೈಮಾಸಿಕದಲ್ಲಿ ಬ್ಯಾಂಕ್​ಗಳಿಂದ ಹರಾಜು ಜಾಸ್ತಿ ಆಗುವ ಸಾಧ್ಯತೆ

ಸಾಲ ಕಟ್ಟದೆ ಬಾಕಿ ಉಳಿಸಿಕೊಂಡವರ ಪ್ರಮಾಣ ಜಾಸ್ತಿ ಆಗಿದ್ದು, ಜುಲೈನಿಂದ ಸೆಪ್ಟೆಂಬರ್ ತ್ರೈಮಾಸಿಕದಲ್ಲಿ ಬ್ಯಾಂಕ್​ಗಳಿಂದ ಆ ಅಡಮಾನದ ಆಸ್ತಿಗಳ ಹರಾಜು ಪ್ರಮಾಣ ಜಾಸ್ತಿ ಆಗುವ ಸಾಧ್ಯತೆ ಇದೆ.

ಕಾರು, ಆಭರಣ ಸಾಲಗಳಲ್ಲಿ ಬಾಕಿ ಹೆಚ್ಚಳ; ಎರಡನೇ ತ್ರೈಮಾಸಿಕದಲ್ಲಿ ಬ್ಯಾಂಕ್​ಗಳಿಂದ ಹರಾಜು ಜಾಸ್ತಿ ಆಗುವ ಸಾಧ್ಯತೆ
ಸಾಂದರ್ಭಿಕ ಚಿತ್ರ
TV9kannada Web Team

| Edited By: Srinivas Mata

Jul 31, 2021 | 12:54 PM

ಪ್ರಸಕ್ತ ಹಣಕಾಸು ವರ್ಷದ ಎರಡನೇ ತ್ರೈಮಾಸಿಕದಲ್ಲಿ (ಜುಲೈನಿಂದ ಸೆಪ್ಟೆಂಬರ್ ಮಧ್ಯೆ) ಸಾಲ ನೀಡಿರುವ ಸಂಸ್ಥೆಗಳಿಂದ ರೀಟೇಲ್ ಆಸ್ತಿಗಳ ಹರಾಜು, ಅದರಲ್ಲೂ ಆಭರಣಗಳು ಮತ್ತು ಕಾರುಗಳನ್ನು ಅಡಮಾನ ಮಾಡಿದ ಸಾಲದ ಪ್ರಕರಣಗಳಲ್ಲಿ ಹರಾಜು ಪ್ರಮಾಣ ಜಾಸ್ತಿ ಆಗುವ ಸಾಧ್ಯತೆ ಇದೆ. ಏಪ್ರಿಲ್​ನಿಂದ ಜೂನ್ ತ್ರೈಮಾಸಿಕದಲ್ಲೇ ರೀಟೇಲ್ ಸಾಲದ ಬಾಕಿ ಉಳಿದರೂ ಸಾಲ ನೀಡಿದ ಸಂಸ್ಥೆಗಳು ಏನನ್ನೂ ವಶಕ್ಕೆ ಪಡೆಯದೆ, ಹರಾಜು ಹಾಕಲು ಮುಂದಾಗಲಿಲ್ಲ. ಆದರೆ ಅದಕ್ಕೆ ಕಾರಣವಾಗಿದ್ದು ಕೊರೊನಾ ಬಿಕ್ಕಟ್ಟು. ಆದರೆ ಯಾವಾಗ ಆರ್ಥಿಕತೆಯು ಆರಂಭವಾಯಿತೋ ವಸೂಲಾತಿ ಕಾರ್ಯಾಚರಣೆ ಆರಂಭವಾಗುವ ಎಲ್ಲ ಸಾಧ್ಯತೆ ಇದೆ.

“ನಾವು ಸಾಮಾನ್ಯ ವಸೂಲಾತಿ ಚಟುವಟಿಕೆಯನ್ನು ಕೆಲ ಸಮಯ ಮುಂದೂಡಿದ್ದೆವು. ಇದರಲ್ಲಿ ಹರಾಜು ಕೂಡ ಒಳಗೊಂಡಿತ್ತು. ಅಡಮಾನ ಮಾಡಿರುವುದನ್ನು ಸಾಮಾನ್ಯವಾಗಿ ಶೀಘ್ರವಾಗಿ ಹರಾಜು ಹಾಕಿ, ಹಣ ಸಂಗ್ರಹಿಸುತ್ತೇವೆ. ಕಳೆದ ತ್ರೈಮಾಸಿಕದಲ್ಲಿ ಯಾವುದೇ ಆಸ್ತಿಯ ಮಾರಾಟ ಅಥವಾ ಮರುಹೊಂದಾಣಿಕೆ ಮಾಡಿಲ್ಲ,” ಎಂದು ಎಚ್​ಡಿಬಿ ಫೈನಾನ್ಷಿಯಲ್ ಸರ್ವೀಸಸ್ ಎಂ.ಡಿ. ಮತ್ತು ಸಿಇಒ ಜಿ. ರಮೇಶ್ ತಿಳಿಸಿದ್ದಾರೆ. ಇನ್ನು ಜೂನ್ ಅಂತ್ಯದಿಂದ ಶುರುವಾಗಿ ಜುಲೈ ಆರಂಭದಿಂದ ಗ್ರಾಹಕರು ಮತ್ತೆ ಹಳಿಗೆ ಮರಳಿದ್ದಾರೆ ಎಂದಿದ್ದಾರೆ.

ವಸೂಲಾತಿ ಆರಂಭವಾಗಿದೆ ಆಭರಣ ಸಾಲದ ಪೋರ್ಟ್​ಫೋಲಿಯೋದಲ್ಲಿ ಸಾಲವನ್ನು ಕಟ್ಟದೆ ಬಾಕಿ ಉಳಿಸಿಕೊಂಡಲ್ಲಿ ಗ್ರಾಹಕರಿಗೆ ಹರಾಜು ನೋಟಿಸ್​ಗಳನ್ನು ಕಳಿಸಲಾಗುತ್ತದೆ. ಸದ್ಯದ ಸನ್ನಿವೇಶದಲ್ಲಿ ಏಪ್ರಿಲ್, ಮೇ ಹಾಗೂ ಜೂನ್​ ತಿಂಗಳಲ್ಲಿ ಬಹು ಪಾಲು ಹೀಗೆ ನೋಟಿಸ್ ಕಳಿಸಿಲ್ಲ ಎಂದು ಐಸಿಐಸಿಐ ಬ್ಯಾಂಕ್​ ಮುಖ ಹಣಕಾಸು ಅಧಿಕಾರಿ ರಾಕೇಶ್ ಝಾ ಹೇಳಿದ್ದಾರೆ. ಇನ್ನು ಬ್ಯಾಂಕ್​ನಿಂದ ಜುಲೈನಿಂದ ಇದನ್ನು ಆರಂಭಿಸಲಾಗಿದೆ. ಮತ್ತು ಈಗಾಗಲೇ ಈ ಪೋರ್ಟ್​ಫೋಲಿಯೋಗಳಲ್ಲಿ ವಸೂಲಾತಿ ಆರಂಭಿಸಲಾಗಿದೆ.

ಆರ್​ಬಿಐ ಡೇಟಾ ಪ್ರಕಾರ, ಚಿನ್ನವನ್ನು ಅಡಮಾನ ಮಾಡಿ ಪಡೆದಿರುವ ಸಾಲದ ಪ್ರಮಾಣವು ಜೂನ್ 18, 2021ಕ್ಕೆ 62,221 ಕೋಟಿ ರೂಪಾಯಿ ಇತ್ತು. ಕಳೆದ ವರ್ಷಕ್ಕೆ ಹೋಲಿಸಿದರೆ ಶೇ 80ರಷ್ಟು ಹೆಚ್ಚಾಗಿದೆ. ಮೊದಲನೇ ತ್ರೈಮಾಸಿಕದಲ್ಲೂ ಕೊರೊನಾ ಎರಡನೇ ಅಲೆಯ ಹೊರತಾಗಿಯೂ ಸಾಲ ಪ್ರಮಾಣ ಶೇ 2.5ರಷ್ಟು ಬೆಳವಣಿಗೆ ಆಗಿದೆ. ವಾಹನ ಸಾಲವು ವರ್ಷದಿಂದ ವರ್ಷಕ್ಕೆ ಶೇ 11ರಷ್ಟು ಮೇಲೇರಿ, 2,38,214 ಕೋಟಿ ರೂಪಾಯಿ ಮುಟ್ಟಿದೆ.

ಸುಧಾರಣೆ ಕಂಡುಬರುತ್ತಿದೆ ಕಳೆದ ವಾರ ಖಾಸಗಿ ಹಣಕಾಸು ಸಂಸ್ಥೆ ಬಜಾಜ್ ಫೈನಾನ್ಸ್ ತಿಳಿಸಿರುವಂತೆ, ತ್ರಿಚಕ್ರ ವಾಹನ ಸಾಲದ ಪೋರ್ಟ್​ಫೋಲಿಯೋದಲ್ಲಿ ಸಾಲ ವಾಪಸ್ ಮಾಡದ ಪ್ರಮಾಣ ಹೆಚ್ಚಾಗಿದೆ. ಕಂಪೆನಿಯ ಎಂ.ಡಿ. ರಾಜೀವ್ ಜೈನ್ ಮಾತನಾಡಿ, ಆಸ್ತಿಯು ವಶಕ್ಕೆ ಪಡೆಯಬಹುದಾದ್ದರಿಂದ ವಸೂಲಾತಿ ಸಾಧ್ಯತೆ ಹೆಚ್ಚು ಎನ್ನುತ್ತಾರೆ. ಫಿಚ್ ರೇಟಿಂಗ್ಸ್ ಹೇಳುವಂತೆ, ಕೊವಿಡ್ ಎರಡನೇ ಅಲೆಯಿಂದ ಎನ್​ಬಿಎಫ್​ಸಿಗಳ ಮೇಲೆ ಒತ್ತಡ ಹೆಚ್ಚಲಿದೆ. ನಾನ್​- ಪರ್ಫಾರ್ಮಿಂಗ್ ಲೋನ್​ಗಳು ಹೆಚ್ಚಾಗಲಿವೆ. ನಿರ್ಬಂಧ ಸಡಿಲಿಕೆಯಿಂದ ಸಾಲ ಪಡೆದವರ ಹಿಂತಿರುಗಿಸುವ ಸಾಮರ್ಥ್ಯ ಬರುತ್ತಿದೆ. ಒಂದು ವರ್ಷದ ಹಿಂದಿನ ಸ್ಥಿತಿಗೆ ಹೋಲಿಸಿದರೆ ಸಂಗ್ರಹದ ಕೊರತೆ ಸುಧಾರಿಸಿದೆ. ಆದರೆ ಏಪ್ರಿಲ್​- ಮೇ 2021ರಲ್ಲಿ ಈ ಪ್ರಮಾಣ ವಿವಿಧ ಸೆಗ್ಮೆಂಟ್​ನಲ್ಲಿ ಶೇ 5ರಿಂದ 40ರಷ್ಟಿತ್ತು ಎನ್ನುತ್ತದೆ ಏಜೆನ್ಸಿ.

ಕೊರೊನಾ ಬಿಕ್ಕಟ್ಟು ಗಂಭೀರವಾಗಿದ್ದರೂ ಕಾರ್ಪೊರೇಟ್ ವಲಯದಲ್ಲಿ ಸಾಲ ಹಿಂತಿರುಗಿಸದ ಪ್ರಮಾಣವು ಹಲವು ಸಿಗಲ್ಲ. ಎಮರ್ಜೆನ್ಸಿ ಕ್ರೆಡಿಟ್ ಲೈನ್ ಗ್ಯಾರಂಟಿ ಸ್ಕೀಮ್ (ಇಸಿಎಲ್​ಜಿಎಸ್) ಅಡಿ ಎಸ್​ಎಂಇ (ಸಣ್ಣ ಮತ್ತು ಮಧ್ಯಮ ಸಂಸ್ಥೆಗಳು) ಸುರಕ್ಷತೆ ಪಡೆದಿವೆ. ಒಂದು ವರ್ಷದ ನಿರ್ಬಂಧ ಇನ್ನೇನು ಎರಡನೇ ತ್ರೈಮಾಸಿಕದಲ್ಲಿ ಕೊನೆಯಾಗಲಿದೆ. ಅದರ ಫಲಿತಾಂಶವಾಗಿ ಬಹುತೇಕ ಸಾಲ ಬಾಕಿ ಉಳಿಸಿಕೊಂಡವರು ರೀಟೇಲ್ ಸೆಗ್ಮೆಂಟ್​ನಲ್ಲಿ ಕಂಡುಬರುತ್ತಾರೆ.

ಇದನ್ನೂ ಓದಿ: HDFC Overdraft: ಸಣ್ಣ ಉದ್ಯಮಿಗಳು, ವರ್ತಕರಿಗೆ ಎಚ್​ಡಿಎಫ್​ಸಿ ಬ್ಯಾಂಕ್​ನಿಂದ ಸಾಲ ದುಕಾನ್​ದಾರ್ ಓವರ್​ಡ್ರಾಫ್ಟ್ ಸ್ಕೀಮ್

(Increase In Loan Default Banks Likely To Increase Car Gold Auction In FY22 Second Quarter)

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada