
ನವದೆಹಲಿ, ಜುಲೈ 15: ಭಾರತದ ಒಟ್ಟಾರೆ ಸ್ಥಾಪಿತ ವಿದ್ಯುತ್ ಉತ್ಪಾದನಾ ಸಾಮರ್ಥ್ಯದ (Installed power capacity) ಪೈಕಿ ಪಳೆಯುಳಿಕೆಯಲ್ಲದ ಇಂಧನ ಮೂಲಗಳಿಂದ (non-fossil fuel sources) ಶೇ. 50 ವಿದ್ಯುತ್ ಉತ್ಪಾದನಾ ಮಟ್ಟ ಮುಟ್ಟಲಾಗಿದೆ. ಪ್ಯಾರಿಸ್ ಒಪ್ಪಂದದ (Paris Agreement) ವೇಳೆ ಭಾರತವು 2030ಕ್ಕೆ ಈ ಗುರಿ ನಿಗದಿ ಮಾಡಿತ್ತು. ಆದರೆ, ಐದು ವರ್ಷ ಮುಂಚೆಯೇ ಗುರಿ ಮುಟ್ಟಲಾಗಿದೆ. ಈ ರಿನಿವಬಲ್ ಎನರ್ಜಿ ಮೈಲಿಗಲ್ಲಿನ ಬಗ್ಗೆ ಸರ್ಕಾರದ ಅಧಿಕೃತ ಹೇಳಿಕೆಯಲ್ಲಿ ತಿಳಿಸಲಾಗಿದೆ.
ಕೇಂದ್ರ ನವೀಕರಣ ಇಂಧನ ಸಚಿವ ಪ್ರಹ್ಲಾದ್ ಜೋಷಿ ಅವರು ತಮ್ಮ ಎಕ್ಸ್ ಪೋಸ್ಟ್ನಲ್ಲಿ ಈ ಮಾಹಿತಿ ಹಂಚಿಕೊಂಡಿದ್ದಾರೆ. ಸ್ವಚ್ಛ ಹಾಗೂ ಪಳೆಯುಳಿಕೆಯಲ್ಲದ ಇಂಧನ ಮೂಲಗಳಿಂದ ಶೇ. 50 ವಿದ್ಯುತ್ ಉತ್ಪಾದನೆ ಮಾಡುವ ಸಾಮರ್ಥ್ಯಕ್ಕೆ ಬೆಳೆದಿದ್ದೇವೆ ಎಂದು ಅವರು ತಿಳಿಸಿದ್ದಾರೆ.
ಇದನ್ನೂ ಓದಿ: ಚೀನಾ ಬದಲು ಸೌದಿ ಅರೇಬಿಯಾ ದೇಶದಿಂದ ರಸಗೊಬ್ಬರ ಖರೀದಿಸಲಿದೆ ಭಾರತ
ಪ್ರಲ್ಹಾದ್ ಜೋಷಿ ಅವರ ಎಕ್ಸ್ ಪೋಸ್ಟ್
In a world seeking climate solutions, India is showing the way.
Achieving 50% non-fossil fuel capacity five years ahead of the 2030 target is a proud moment for every Indian.
Hon’ble PM Shri @narendramodi ji’s leadership continues to drive Bharat’s green transformation — paving… pic.twitter.com/ydzWErWQNC
— Pralhad Joshi (@JoshiPralhad) July 14, 2025
ಭಾರತದಲ್ಲಿ ಸ್ಥಾಪಿತವಾಗಿರುವ ಘಟಕಗಳಿಂದ ಒಟ್ಟಾರೆ 484.82 ಗಿಗಾ ವ್ಯಾಟ್ ವಿದ್ಯುತ್ ಉತ್ಪಾದನೆ ಮಾಡಬಹುದು. ಈ ಪೈಕಿ ನವೀಕರಣ ಇಂಧನ ಅಥವಾ ಪಳೆಯುಳಿಕೆಯಲ್ಲದ ಇಂಧನ ಮೂಲಗಳಿಂದ ವಿದ್ಯುತ್ ತಯಾರಿಕೆ ಸಾಮರ್ಥ್ಯ 242.78 ಗಿ.ವ್ಯಾಟ್ ತಲುಪಿದೆ.
ಸೌರಶಕ್ತಿ, ವಾಯುಶಕ್ತಿ ಇತ್ಯಾದಿ ನವೀಕರಣ ಶಕ್ತಿಯ ಮೂಲಕ 184.62 ಗಿ.ವ್ಯಾಟ್ ವಿದ್ಯುತ್, ಜಲವಿದ್ಯುತ್ ಘಟಕಗಳ ಮೂಲಕ 49.38 ಗಿ.ವ್ಯಾಟ್, ಹಾಗೂ ಪರಮಾಣು ಮೂಲಕ 8.78 ಗಿ.ವ್ಯಾಟ್ ವಿದ್ಯುತ್ ಉತ್ಪಾದನೆ ಮಾಡುವ ಸಾಮರ್ಥ್ಯ ಭಾರತಕ್ಕೆ ಇದೆ.
ಇದನ್ನೂ ಓದಿ: ರೀಟೇಲ್ ಹಣದುಬ್ಬರ ಜೂನ್ ತಿಂಗಳಲ್ಲಿ ಶೇ. 2.10; ಆರು ತಿಂಗಳಲ್ಲೇ ಕನಿಷ್ಠ ಬೆಲೆ ಏರಿಕೆ ದರ<
‘ಇಡೀ ಜಗತ್ತು ಹವಾಮಾನ ಸಮಸ್ಯೆಗಳಿಗೆ ಪರಿಹಾರ ಹುಡುಕುತ್ತಿರುವಾಗ ಭಾರತವು ದಾರಿ ತೋರುತ್ತಿದೆ. 2030ರ ಗುರಿಗಿಂತ ಐದು ವರ್ಷ ಮುನ್ನವೇ ಶೇ. 50 ನಾನ್ ಫಾಸಿಲ್ ಫುಯಲ್ ಸಾಮರ್ಥ್ಯವನ್ನು (non-fossil fuel power) ಸಾಧಿಸುವುದು ಪ್ರತಿಯೊಬ್ಬ ಭಾರತೀಯನಿಗೂ ಹೆಮ್ಮೆ ತರುವ ಸಂಗತಿ. ಪ್ರಧಾನಿ ನರೇಂದ್ರ ಮೋದಿ ಅವರ ನಾಯಕತ್ವದಲ್ಲಿ ಭಾರತವು ಹಸಿರು ಪರಿವರ್ತನೆಯಲ್ಲಿದೆ’ ಎಂದು ಪ್ರಲ್ಹಾದ್ ಜೋಷಿ ಅಭಿಪ್ರಾಯಪಟ್ಟಿದ್ದಾರೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
Published On - 3:06 pm, Tue, 15 July 25