
ನವದೆಹಲಿ, ಜುಲೈ 31: ಭಾರತವನ್ನು ‘ಸತ್ತ ಆರ್ಥಿಕತೆ’ (Dead economy) ಎಂಬ ಡೊನಾಲ್ಡ್ ಟ್ರಂಪ್ ಅವರ ಹೇಳಿಕೆಯನ್ನು ಬೆಂಬಲಿಸಿದ ರಾಹುಲ್ ಗಾಂಧಿ (Rahul Gandhi) ಟೀಕೆಗೆ ಒಳಗಾಗಿದ್ದಾರೆ. ಅವರ ಸ್ವಂತ ಪಕ್ಷದವರೇ ರಾಹುಲ್ ಗಾಂಧಿ ಹೇಳಿಕೆಯನ್ನು ಅಲ್ಲಗಳೆದಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ರಾಹುಲ್ ಗಾಂಧಿ ಟ್ರೋಲ್ ಆಗಿದ್ದಾರೆ. ಹಿರಿಯ ಕಾಂಗ್ರೆಸ್ ಮುಖಂಡರಾದ ರಾಜೀವ್ ಶುಕ್ಲ, ಶಶಿ ತರೂರ್ ಮೊದಲಾದವರು, ಭಾರತದ ಆರ್ಥಿಕತೆ ಸತ್ತಿದೆ ಎನ್ನುವುದು ತಪ್ಪು ಎಂದಿದ್ದಾರೆ.
ಡೊನಾಲ್ಡ್ ಟ್ರಂಪ್ ಭಾರತವನ್ನು ‘ಸತ್ತ ಆರ್ಥಿಕತೆ’ ಎಂದು ಜರಿದಿದ್ದ ವಿಚಾರದ ಬಗ್ಗೆ ಸಂಸತ್ ಭವನದ ಹೊರಗೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ರಾಹುಲ್ ಗಾಂಧಿ, ‘ಟ್ರಂಪ್ ವಾಸ್ತವ ಹೇಳಿದ್ಧಾರೆ. ಭಾರತದ ಆರ್ಥಿಕತೆ ಸತ್ತಿದೆ’ ಎಂದಿದ್ದರು.
ನಂತರ ಎಕ್ಸ್ನಲ್ಲೂ ಪೋಸ್ಟ್ ಮಾಡಿದ ಅವರು ಇದೇ ಅಭಿಪ್ರಾಯ ಪುನರುಚ್ಚರಿಸಿದರು. ‘ಭಾರತದ ಆರ್ಥಿಕತೆ ಸತ್ತಿದೆ. ಮೋದಿ ಅದನ್ನು ಬಲಿಕೊಟ್ಟಿದ್ದಾರೆ’ ಎಂದು ರಾಹುಲ್ ಗಾಂಧಿ ಕುಟುಕಿದ್ದಾರೆ. ಅದಾನಿ ಮೋದಿ ಸಹಭಾಗಿತ್ವ, ನೋಟು ಅಮಾನ್ಯೀಕರಣ, ತಪ್ಪು ಜಿಎಸ್ಟಿ, ವಿಫಲ ಮೇಕ್ ಇನ್ ಇಂಡಿಯಾ, ಎಂಎಸ್ಎಂಇ ನಾಶ, ರೈತರ ಸಂಕಷ್ಟ, ಇವನ್ನು ಅವರು ಹೆಸರಿಸಿದ್ದು, ಭಾರತೀಯ ಯುವಕರಿಗೆ ಉದ್ಯೋಗಗಳನ್ನು ನೀಡದೆ ಅವರ ಭವಿಷ್ಯವನ್ನು ಮೋದಿ ನಾಶ ಮಾಡಿದ್ದರೆ ಎಂದಿದ್ದಾರೆ.
ಇದನ್ನೂ ಓದಿ: ಸತ್ಯ ಹೇಳಿದ್ದಕ್ಕೆ ಸಂತೋಷ; ಭಾರತದ್ದು ‘ಸತ್ತ ಆರ್ಥಿಕತೆ’ ಎಂಬ ಟ್ರಂಪ್ ಹೇಳಿಕೆಗೆ ರಾಹುಲ್ ಗಾಂಧಿ ಬೆಂಬಲ
ಡೊನಾಲ್ಡ್ ಟ್ರಂಪ್ ಹೇಳಿದ್ದು ಪೂರ್ಣ ಸುಳ್ಳು. ನಮ್ಮ ಆರ್ಥಿಕತೆ ದುರ್ಬಲ ಅಲ್ಲವೇ ಅಲ್ಲ. ನಮ್ಮನ್ನು ಆರ್ಥಿಕವಾಗಿ ಮುಗಿಸುತ್ತೇವೆ ಎಂದು ಯಾರಾದರೂ ಹೇಳುತ್ತಿದ್ದರೆ ಅದು ತಪ್ಪು ತಿಳಿವಳಿಕೆ. ಟ್ರಂಪ್ ಭ್ರಮೆಯಲ್ಲಿ ಬದುಕುತ್ತಿದ್ದಾರೆ ಎಂದು ಕಾಂಗ್ರೆಸ್ ಪಕ್ಷದ ರಾಜ್ಯಸಭಾ ಸಂಸದ ರಾಜೀವ್ ಶುಕ್ಲಾ ಹೇಳಿದ್ದಾರೆ.
ತಿರುವನಂತಪುರಂನ ಕಾಂಗ್ರೆಸ್ ಸಂಸದ ಶಶಿ ತರೂರ್ ಕೂಡ ಟ್ರಂಪ್ ಹೇಳಿಕೆಯನ್ನು ತಿರಸ್ಕರಿಸಿದ್ದಾರೆ. ‘ಅಮೆರಿಕದೊಂದಿಗೆ ಟ್ರೇಡ್ ಡೀಲ್ ಮಾಡಿಕೊಳ್ಳಲು ಮಾತುಕತೆ ನಡೆಸಲಾಗುತ್ತಿದೆ. ಭಾರತಕ್ಕೆ ಅನುಕೂಲಕರವಾಗಿ ಒಪ್ಪಂದ ಇರದಿದ್ದರೆ ಅದನ್ನು ಕೈಬಿಡುತ್ತೇವೆ. ಅಮೆರಿಕದ ಬದಲು ಬೇರೆ ಪರ್ಯಾಯ ಮಾರುಕಟ್ಟೆಗಳನ್ನು ಹುಡುಕುತ್ತೇವೆ. ನಮಗೆ ಆಯ್ಕೆಗಳೇ ಇಲ್ಲವೆಂದಿಲ್ಲ’ ಎಂದು ಶಶಿ ತರೂರ್ ಹೇಳಿದ್ದಾರೆ.
ಡೆಡ್ ಎಕನಾಮಿ ಎಂದು ಟ್ರಂಪ್ ನೀಡಿದ ಹೇಳಿಕೆಯನ್ನು ಸಮರ್ಥಿಸಿದ ರಾಹುಲ್ ಗಾಂಧಿ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಟ್ರೋಲ್ ಮಾಡಲಾಗುತ್ತಿದೆ.
ಇದನ್ನೂ ಓದಿ: Dead Economy: ಭಾರತದ ಸತ್ತ ಆರ್ಥಿಕತೆ ನೆಲಕಚ್ಚಬೇಕು: ಡೊನಾಲ್ಡ್ ಟ್ರಂಪ್ ಹಿಡಿಶಾಪ
‘ಸತ್ತ ಆರ್ಥಿಕತೆಗಳು ಶೇ. 6.5ರಲ್ಲಿ ಬೆಳೆಯುವುದಿಲ್ಲ. ವಿಶ್ವದಲ್ಲೇ ಅತಿವೇಗವಾಗಿ ಬೆಳೆಯುವುದಿಲ್ಲ. ಇದನ್ನು ಈ ವ್ಯಕ್ತಿಗೆ ಯಾರಾದರೂ ವಿವರಿಸಿ’ ಎಂದು ಒಬ್ಬರು ಹೇಳಿದ್ದಾರೆ.
ಎಕ್ಸ್ ಪೋಸ್ಟ್ಗಳು
Someone please explain this Clown,
Dead economies don’t grow at 6.5%,
Fastest in the world pic.twitter.com/iVANgUiHGZ— Rishi Bagree (@rishibagree) July 31, 2025
NIFTY 50 has nosedived after Trump announced tariffs against India. Clear proof that the Indian economy is dead.
Only a Rahul Gandhi government, with Raghuram Rajan as the finance minister can save us from this catastrophe now. pic.twitter.com/YS0Cen0FDQ
— THE SKIN DOCTOR (@theskindoctor13) July 31, 2025
‘ಟ್ರಂಪ್ ಟ್ಯಾರಿಫ್ ಹಾಕಿದಾಗ ನಿಫ್ಟಿ50 ಕುಸಿಯಿತು. ಆರ್ಥಿಕತೆ ಸತ್ತಿದೆ ಎನ್ನುವುದಕ್ಕೆ ಇದು ಸಾಕ್ಷ್ಯವಾಗಿದೆ. ರಘುರಾಮ್ ರಾಜನ್ ವಿತ್ತ ಸಚಿವರಾಗಿರುವ ರಾಹುಲ್ ಗಾಂಧಿ ಸರ್ಕಾರದಿಂದ ಮಾತ್ರವೇ ಈ ಸಂಕಷ್ಟದಿಂದ ಪಾರು ಮಾಡಲು ಸಾಧ್ಯ’ ಎಂದು ಮತ್ತೊಬ್ಬರು ವ್ಯಂಗ್ಯ ಮಾಡಿದ್ದಾರೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
Published On - 6:05 pm, Thu, 31 July 25