ಭಾರತದ ಆರ್ಥಿಕ ಬೆಳವಣಿಗೆ ವೇಗ ಹೀಗೆ ಮುಂದುವರಿಯಲಿದೆ: ಹಣಕಾಸು ಸಚಿವಾಲಯ ನಿರೀಕ್ಷೆ

|

Updated on: Apr 25, 2024 | 3:13 PM

India fastest growing big economy: ಭಾರತ ಅತಿವೇಗದ ಪ್ರಮುಖ ಆರ್ಥಿಕತೆಯಾಗಿದೆ. ಮುಂದಿನ ದಿನಗಳಲ್ಲಿ ಈ ಬೆಳವಣಿಗೆ ವೇಗ ಹೀಗೆ ಮುಂದುವರಿಯಬಹುದು ಎಂದು ಕೇಂದ್ರ ಹಣಕಾಸು ಸಚಿವಾಲಯ ತನ್ನ ಮಾಸಿಕ ವರದಿಯಲ್ಲಿ ಅಭಿಪ್ರಾಯಪಟ್ಟಿದೆ. ಜಾಗತಿಕವಾಗಿ ಆರ್ಥಿಕತೆ ಚೇತರಿಸಿಕೊಳ್ಳುತ್ತಿದ್ದರೂ ಇತ್ತೀಚಿನ ಕೆಲ ಸಂಘರ್ಷಮಯ ವಿದ್ಯಮಾನಗಳು ಹಿನ್ನಡೆ ತರಬಹುದು. ಆದರೂ ಭಾರತದಲ್ಲಿ ಆರ್ಥಿಕತೆಯ ಸಾಧನೆ ಎದ್ದುಗಾಣುತ್ತಿದೆ ಎಂದು ಹಣಕಾಸು ಸಚಿವಾಲಯ ತನ್ನ ಮಾಸಿಕ ವರದಿಯಲ್ಲಿ ಹೇಳಿಕೊಂಡಿದೆ.

ಭಾರತದ ಆರ್ಥಿಕ ಬೆಳವಣಿಗೆ ವೇಗ ಹೀಗೆ ಮುಂದುವರಿಯಲಿದೆ: ಹಣಕಾಸು ಸಚಿವಾಲಯ ನಿರೀಕ್ಷೆ
ಆರ್ಥಿಕ ಬೆಳವಣಿಗೆ
Follow us on

ನವದೆಹಲಿ, ಏಪ್ರಿಲ್ 25: ಅಂತಾರಾಷ್ಟ್ರೀಯ ಸಂಸ್ಥೆಗಳು, ಆರ್​ಬಿಐ ಮೊದಲಾದವು ಭಾರತದ ಆರ್ಥಿಕ ಬೆಳವಣಿಗೆ (economic growth) ಬಗ್ಗೆ ಆಶಾದಾಯಕವಾಗಿವೆ. ಭಾರತ ವಿಶ್ವದಲ್ಲಿ ಅತಿ ವೇಗವಾಗಿ ಬೆಳೆಯುತ್ತಿರುವ ಪ್ರಮುಖ ಆರ್ಥಿಕತೆಯಾಗಿದೆ. ಈ ಬೆಳವಣಿಗೆ ಹೀಗೇ ಮುಂದುವರಿಯಲಿದೆ ಎಂದು ಹಣಕಾಸು ಸಚಿವಾಲಯ (Finance ministry) ಅಭಿಪ್ರಾಯಪಟ್ಟಿದೆ. ಇಂದು ಗುರುವಾರ ಹಣಕಾಸು ಸಚಿವಾಲಯ ಬಿಡುಗಡೆ ಮಾಡಿದ ಮಾರ್ಚ್ ತಿಂಗಳ ಮಾಸಿಕ ಆರ್ಥಿಕ ಪರಾವರ್ಶೆ ವರದಿಯಲ್ಲಿ ಈ ವಿಚಾರವನ್ನು ಚರ್ಚಿಸಲಾಗಿದೆ.

‘ಜಾಗತಿಕವಾಗಿ ಪ್ರಮುಖ ಆರ್ಥಿಕತೆಗಳ ಚೇತರಿಕೆ ನಡೆಯುತ್ತಿದೆ. ಆರ್ಥಿಕ ಚಟುವಟಿಕೆ ಗರಿಗೆದರಿರುವುದು ಕೆಲ ಪ್ರಮುಖ ಸೂಚಕಗಳಿಂದ ಗೊತ್ತಾಗುತ್ತದೆ. ಜಾಗತಿಕ ರಾಜಕೀಯ ಬಿಕ್ಕಟ್ಟು ಕಡಿಮೆ ಆಗಿದೆ. ಆದರೆ, ಇತ್ತೀಚಿನ ಕೆಲ ಸಂಘರ್ಷಮಯ ವಿದ್ಯಮಾನ ಹಿನ್ನಡೆ ತರಬಹುದು. ಈ ಜಾಗತಿಕ ಕಷ್ಟದ ಸಂದರ್ಭದಲ್ಲಿ ಭಾರತದ ಆರ್ಥಿಕತೆಯ ಸಾಧನೆ ಎದ್ದುಗಾಣುತ್ತದೆ. ವಿವಿಧ ವಲಯಗಳಲ್ಲಿ ವಿಸ್ತೃತ ಬೆಳವಣಿಗೆ ಆಗುತ್ತಿದೆ. ಜಾಗತಿಕ ಬೆಳವಣಿಗೆಯಲ್ಲಿ ಭಾರತ ಪ್ರಮುಖ ಪಾತ್ರ ವಹಿಸುತ್ತಿದೆ’ ಎಂದು ಹಣಕಾಸು ಸಚಿವಾಲಯದ ವರದಿಯಲ್ಲಿ ಹೇಳಲಾಗಿದೆ.

ಇದನ್ನೂ ಓದಿ: ಮೋದಿಗಿರುವಂತಹ ಗಟ್ಟಿತನ ಅಮೆರಿಕಕ್ಕೆ ಸ್ವಲ್ಪವಾದರೂ ಬೇಕು: ಜೆಪಿ ಮಾರ್ಗನ್ ಸಿಇಒ

ಐಎಂಎಫ್ ತನ್ನ ಏಪ್ರಿಲ್ ತಿಂಗಳ ವರ್ಲ್ಡ್ ಎಕನಾಮಿಕ್ ಔಟ್​ಲುಕ್ ವರದಿಯಲ್ಲಿ ಭಾರತದ ಜಿಡಿಪಿ 2023ರ ಹಣಕಾಸು ವರ್ಷದಲ್ಲಿ ನಿರೀಕ್ಷಿತ ಬೆಳವಣಿಗೆಯನ್ನು ಶೇ. 7.8ಕ್ಕೆ ಹೆಚ್ಚಿಸಿದೆ. 2023ರ ಅಕ್ಟೋಬರ್ ಮತ್ತು 2024ರ ಜನವರಿಯಲ್ಲಿ ಬಿಡುಗಡೆ ಮಾಡಿದ ಬೇರೆ ಬೇರೆ ವರದಿಗಳಲ್ಲಿ ಭಾರತದ ಜಿಡಿಪಿ ಬೆಳವಣಿಗೆಯ ಅಂದಾಜನ್ನು ಕ್ರಮವಾಗಿ ಶೇ. 6.3 ಮತ್ತು ಶೇ. 6.7 ಎಂದು ಹೇಳಿತ್ತು.

ಹಣದುಬ್ಬರ ಸ್ಥಿತಿ ಹೇಗಿದೆ?

ಹಣಕಾಸು ಸಚಿವಾಲಯದ ವರದಿ ಪ್ರಕಾರ ಜಾಗತಿಕವಾಗಿ ಬಹುತೇಕ ಕಡೆ ಹಣದುಬ್ಬರ ಕಡಿಮೆ ಆಗಿದೆ. ಆದರೆ ಇತ್ತೀಚೆಗೆ ಹಣದುಬ್ಬರದ ಮೇಲೆ ಒತ್ತಡ ಶುರುವಾಗಿದೆ. ಭಾರತದಲ್ಲಿ ಆರ್​ಬಿಐ ಮತ್ತು ಸರ್ಕಾರ ತೆಗೆದುಕೊಂಡಿರುವ ವಿವಿಧ ಕ್ರಮಗಳ ಫಲವಾಗಿ ಹಣದುಬ್ಬರವನ್ನು ನಿಯಂತ್ರಿಸಲು ಸಾಧ್ಯವಾಗುತ್ತಿದೆ ಎನ್ನಲಾಗಿದೆ.

ಇದನ್ನೂ ಓದಿ: ಜನಸಂಖ್ಯಾ ಬಲದ ಲಾಭ ಪಡೆಯಲು ಭಾರತ ಶೇ. 8ರಿಂದ 10ರಷ್ಟು ವೇಗದಲ್ಲಿ ಬೆಳೆಯಬೇಕು: ಆರ್​ಬಿಐ ಬುಲೆಟಿನ್

ಇನ್ನು, ವ್ಯಾಪಾರ ಕೊರತೆ ಅಥವಾ ಟ್ರೇಡ್ ಡೆಫಿಸಿಟ್ ಭಾರತದಲ್ಲಿ ಮುಂಬರುವ ವರ್ಷಗಳಲ್ಲಿ ಕಡಿಮೆ ಆಗುವ ಸಾಧ್ಯತೆಯನ್ನು ಈ ವರದಿಯಲ್ಲಿ ಉಲ್ಲೇಖಿಸಲಅಗಿದೆ. ಜಾಗತಿಕವಾಗಿ ವ್ಯಾಪಾರ ವಹಿವಾಟಿಗೆ ಪ್ರಮುಖ ಸವಾಲುಗಳು ಎದುರಾಗಿದ್ದರೂ ಭಾರತದಲ್ಲಿ ಪಿಎಲ್​ಐ ಸ್ಕೀಮ್ ವಿಸ್ತರಣೆಯ ಫಲವಾಗಿ ಟ್ರೇಡ್ ಡೆಫಿಸಿಟ್ ಕಡಿಮೆಗೊಳ್ಳಬಹುದು ಎಂದು ಹಣಕಾಸು ಸಚಿವಾಲಯ ತನ್ನ ಮಾರ್ಚ್ ತಿಂಗಳ ಮಾಸಿಕ ಅವಲೋಕನ ವರದಿಯಲ್ಲಿ ತಿಳಿಸಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ