ಮಾಲ್ಡೀವ್ಸ್ ಸಂಕಷ್ಟಕ್ಕೆ ಭಾರತದಿಂದ ನೆರವು; ಎರಡನೇ ಬಾರಿ ಟ್ರೆಷರಿ ಬಿಲ್ ಪಾವತಿಗೆ ಗಡುವು ವಿಸ್ತರಣೆ

|

Updated on: Sep 20, 2024 | 12:01 PM

India extends budgetary support to Maldives: ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾಗೆ ಟ್ರೆಷರಿ ಬಿಲ್ ಮರುಪಾವತಿಸಲಾಗದೆ ಮಾಲ್ಡೀವ್ಸ್ ಸರ್ಕಾರ ಕೈಚೆಲ್ಲಿದೆ. ಮಾಲ್ಡೀವ್ಸ್ ಮನವಿ ಮೇರೆಗೆ ಟ್ರೆಷರಿ ಬಿಲ್ ಪಾವತಿಗಿದ್ದ ಗಡುವನ್ನು ಒಂದು ವರ್ಷಕ್ಕೆ ವಿಸ್ತರಿಸಿದೆ. ಮೇ ತಿಂಗಳಲ್ಲೂ ಮತ್ತೊಂದು ಟ್ರೆಷರಿ ಬಿಲ್ ಪಾವತಿಗೆ ಭಾರತ ಗಡುವು ವಿಸ್ತರಿಸಿತ್ತು.

ಮಾಲ್ಡೀವ್ಸ್ ಸಂಕಷ್ಟಕ್ಕೆ ಭಾರತದಿಂದ ನೆರವು; ಎರಡನೇ ಬಾರಿ ಟ್ರೆಷರಿ ಬಿಲ್ ಪಾವತಿಗೆ ಗಡುವು ವಿಸ್ತರಣೆ
ಭಾರತ ಮಾಲ್ಡೀವ್ಸ್
Follow us on

ನವದೆಹಲಿ, ಸೆಪ್ಟೆಂಬರ್ 20: ನೆರೆಯ ದೇಶಗಳಿಗೆ ಪ್ರಾಧಾನ್ಯತೆ ಕೊಡುವ ಭಾರತದ ನೀತಿಯ ಭಾಗವಾಗಿ ಮಾಲ್ಡೀವ್ಸ್ ದೇಶಕ್ಕೆ ನೆರವಿನ ಹಸ್ತ ಅಗತ್ಯ ಬಿದ್ದಾಗೆಲ್ಲಾ ಚಾಚಲಾಗುತ್ತಿದೆ. ಮಾಲ್ಡೀವ್ಸ್ ಸರ್ಕಾರ ನಿಚ್ಚಳ ರೀತಿಯಲ್ಲಿ ಚೀನಾ ಪರ ಒಲವು ತೋರುತ್ತಿದ್ದರೂ ಭಾರತ ಮುನಿಸು ತೋರುತ್ತಿಲ್ಲ. ಒಂದಿಲ್ಲೊಂದು ರೀತಿಯಲ್ಲಿ ಮಾಲ್ಡೀವ್ಸ್​ಗೆ ನೆರವು ಒದಗಿಸುತ್ತಿದೆ. ಇದೀಗ ಭಾರತಕ್ಕೆ ನೀಡಬೇಕಿರುವ 50 ಮಿಲಿಯನ್ ಡಾಲರ್ ಮೊತ್ತದ ಟ್ರೆಷರಿ ಬಿಲ್ (ಸರ್ಕಾರಿ ಬಾಂಡ್) ಅನ್ನು ಪಾವತಿಸಲಾಗದೆ ಮಾಲ್ಡೀವ್ಸ್ ಸರ್ಕಾರ ಭಾರತದ ಬಳಿ ಸಹಾಯ ಕೋರಿದೆ. ಈ ಮನವಿಯನ್ನು ಪರಿಗಣಿಸಿರುವ ಭಾರತವು ಟ್ರೆಷರಿ ಬಿಲ್ ಪಾವತಿಯ ಗಡುವನ್ನು ಒಂದು ವರ್ಷಕ್ಕೆ ವಿಸ್ತರಿಸಿದೆ.

ಮೇ ತಿಂಗಳಲ್ಲೂ ಭಾರತವು ಮಾಲ್ಡೀವ್ಸ್​ಗೆ ಇದೇ ರೀತಿಯಲ್ಲ ಟ್ರೆಷರಿ ಬಿಲ್ ಪಾವತಿಯಲ್ಲಿ ವಿನಾಯಿತಿ ಕೊಟ್ಟಿತ್ತು. ಒಂದು ವರ್ಷ ಗಡುವು ವಿಸ್ತರಣೆ ಮಾಡಿತ್ತು. ಮಾಲ್ಡೀವ್ಸ್ ಸರ್ಕಾರದಿಂದ ನೀಡಲಾದ ಮೂರು ಟ್ರೆಷರಿ ಬಿಲ್​ಗಳನ್ನು ಭಾರತದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಸಬ್​ಸ್ಕ್ರೈಬ್ ಮಾಡಿಕೊಂಡಿತ್ತು. ಈ ಪೈಕಿ ಹಾಲಿ ಸರ್ಕಾರ ಜನವರಿ ತಿಂಗಳಲ್ಲಿ ಮರುಪಾವತಿ ಮಾಡಿತು.

ಇದನ್ನೂ ಓದಿ: ಸ್ಕ್ರ್ಯಾಪ್ ಸಂಸ್ಥೆ ಎಫ್​ಎಸ್​ಎನ್​ಎಲ್ ಅನ್ನು ಜಪಾನೀ ಕಂಪನಿಗೆ 320 ಕೋಟಿ ರೂಗೆ ಮಾರಲು ಒಪ್ಪಿಗೆ

ಮೇ ತಿಂಗಳಲ್ಲಿ ಮೆಚ್ಯೂರ್ ಆಗಿದ್ದ ಎರಡನೇ ಟಿ ಬಿಲ್ ಅನ್ನು ಪಾವತಿಸಲು ಮಾಲ್ಡೀವ್ಸ್​ಗೆ ಆಗಲಿಲ್ಲ. ಭಾರತ ಒಂದು ವರ್ಷ ಸಮಯಾವಕಾಶ ಕೊಟ್ಟಿದೆ. ಇದೀಗ ಮೂರನೇ ಟ್ರೆಷರಿ ಬಿಲ್ ಪಾವತಿ ನಿನ್ನೆಗೆ (ಸೆ. 19) ಮೆಚ್ಯೂರ್ ಆಗಿದೆ. ಇದನ್ನೂ ಕೂಡ ಪಾವತಿಸಲು ಆಗದೇ ಮಾಲ್ಡೀವ್ಸ್ ನೆರವು ಕೋರಿತು. ಹೀಗಾಗಿ, ಮೂರನೇ ಟ್ರೆಷರಿ ಬಿಲ್ ಮರುಪಾವತಿಗೂ ಒಂದು ವರ್ಷ ಹೆಚ್ಚುವರಿ ಸಮಯಾವಕಾಶವನ್ನು ಭಾರತ ನೀಡಿದೆ.

‘ಸಾಗರ ಪ್ರದೇಶದಲ್ಲಿ ಭಾರತಕ್ಕೆ ಮಾಲ್ಡೀವ್ಸ್ ಪ್ರಮುಖ ನೆರೆಹೊರೆಯ ದೇಶ. ನೆರೆ ದೇಶಗಳಿಗೆ ಆದ್ಯತೆ ಕೊಡುವ ಭಾರತದ ನೀತಿ ಅಡಿಯಲ್ಲಿ ಮಾಲ್ಡೀವ್ಸ್ ಮಹತ್ವದ ಸ್ಥಾನದಲ್ಲಿದೆ. ಆ ದೇಶಕ್ಕೆ ಅಗತ್ಯ ಬಿದ್ದಾಗ ಭಾರತ ನೆರವು ನೀಡಿದೆ,’ ಎಂದು ಮಾಲ್ಡೀವ್ಸ್​ನಲ್ಲಿರುವ ಭಾರತೀಯ ರಾಯಭಾರ ಕಚೇರಿ ಹೇಳಿಕೆ ನೀಡಿದೆ.

ಇದನ್ನೂ ಓದಿ: ಬೆಂಗಳೂರು, ರಿಯಾಧ್ ನಗರಗಳಲ್ಲಿ ಹೆಚ್ಚಾಗಲಿದ್ದಾರೆ ಶತ ಮಿಲಿಯನೇರ್​ಗಳು; ಟಾಪ್-50 ಪಟ್ಟಿಯಲ್ಲಿ ಮುಂಬೈ, ದೆಹಲಿ

ಭಾರತಕ್ಕೆ ಕೃತಜ್ಞತೆ ಸಲ್ಲಿಸಿದ ಮಾಲ್ಡೀವ್ಸ್ ಸಚಿವ ಮೂಸಾ

ಹಣಕಾಸು ಬಿಕ್ಕಟ್ಟಿನಲ್ಲಿರುವ ಮಾಲ್ಡೀವ್ಸ್​ಗೆ ಭಾರತ ನೆರವು ನೀಡಿದೆ. ಇದು ಭಾರತ ಮತ್ತು ಮಾಲ್ಡೀವ್ಸ್ ಮಧ್ಯೆ ಸ್ನೇಹ ಗಾಢವಾಗಿರುವುದನ್ನು ತೋರಿಸುತ್ತದೆ ಎಂದು ಮಾಲ್ಡೀವ್ಸ್​ನ ವಿದೇಶಾಂಗ ಸಚಿವ ಮೂಸಾ ಝಮೀರ್ ತಮ್ಮ ಎಕ್ಸ್​ನಲ್ಲಿ ಹೇಳಿಕೊಂಡಿದ್ದಾರೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ