ಸ್ಕ್ರ್ಯಾಪ್ ಸಂಸ್ಥೆ ಎಫ್​ಎಸ್​ಎನ್​ಎಲ್ ಅನ್ನು ಜಪಾನೀ ಕಂಪನಿಗೆ 320 ಕೋಟಿ ರೂಗೆ ಮಾರಲು ಒಪ್ಪಿಗೆ

Konoike Transport ltd of Japan wins bid to buy scrap company FSNL: ಸರ್ಕಾರಿ ಸ್ವಾಮ್ಯದ ಮೆಟಲ್ ಸ್ಕ್ರಾಪ್ ಟ್ರೇಟ್ ಕಾರ್ಪೊರೇಶನ್​ನ ಅಂಗಸಂಸ್ಥೆಯಾದ ಎಫ್​ಎಸ್​ಎನ್​ಎಲ್ ಅನ್ನು ಜಪಾನ್​ನ ಕೊನೋಯಿಕೆ ಟ್ರಾನ್ಸ್​ಪೋರ್ಟ್​ಗೆ ಮಾರಲಾಗುತ್ತಿದೆ. 262 ಕೋಟಿ ರೂ ರಿಸರ್ವ್ ಪ್ರೈಸ್​ಗೆ ಮಾರಾಟಕ್ಕಿಡಲಾಗಿದ್ದ ಎಫ್ಎಸ್​ಎನ್​ಎಲ್ ಖರೀದಿಗೆ ಎರಡು ಕಂಪನಿಗಳು ಬಿಡ್ ಸಲ್ಲಿಸಿದ್ದವು. ಜಪಾನೀ ಸಂಸ್ಥೆ ಅತಿ ಹೆಚ್ಚು ಮೊತ್ತಕ್ಕೆ ಅಂದರೆ 320 ಕೋಟಿ ರೂಗೆ ಬಿಡ್ ಸಲ್ಲಿಸಿತ್ತು.

ಸ್ಕ್ರ್ಯಾಪ್ ಸಂಸ್ಥೆ ಎಫ್​ಎಸ್​ಎನ್​ಎಲ್ ಅನ್ನು ಜಪಾನೀ ಕಂಪನಿಗೆ 320 ಕೋಟಿ ರೂಗೆ ಮಾರಲು ಒಪ್ಪಿಗೆ
ಮೆಟಲ್ ಸ್ಕ್ರಾಪ್
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Sep 20, 2024 | 11:11 AM

ನವದೆಹಲಿ, ಸೆಪ್ಟೆಂಬರ್ 20: ಮೆಟಲ್ ಸ್ಕ್ರಾಪ್ ಟ್ರೇಡ್ ಕಾರ್ಪೊರೇಶನ್​ನ ಅಂಗಸಂಸ್ಥೆಯಾದ ಫೆರೋ ಸ್ಕ್ರಾಪ್ ನಿಗಮ್ ಅನ್ನು ಖಾಸಗೀಕರಣಗೊಳಿಸಲಾಗುತ್ತಿದೆ. ಜಪಾನ್ ಮೂಲದ ಕೊನೋಯಿಕೆ ಟ್ರಾನ್ಸ್​ಪೋರ್ಟ್ ಸಂಸ್ಥೆಗೆ ಎಫ್​ಎಸ್​ಎನ್​ಎಲ್ ಅನ್ನು ಮಾರಲಾಗುತ್ತಿದೆ. ಇದಕ್ಕೆ ಕೇಂದ್ರ ಸರ್ಕಾರ ನಿನ್ನೆ ಗುರುವಾರ (ಸೆ. 19) ಅನುಮೋದನೆ ನೀಡಿದೆ. ಎಫ್​ಎಸ್​ಎಲ್​​ಎಲ್ ಮಾರಾಟಕ್ಕೆ ಟೆಂಡರ್ ಕರೆಯಲಾಗಿತ್ತು. ಎರಡು ಕಂಪನಿಗಳು ಬಿಡ್ ಸಲ್ಲಿಸಿದ್ದವು. ಅಂತಿಮವಾಗಿ ಜಪಾನ್​ನ ಕೋನೋಯಿಕೆ ಸಂಸ್ಥೆ ಅತಿಹೆಚ್ಚು ಮೊತ್ತಕ್ಕೆ ಬಿಡ್ ಸಲ್ಲಿಸಿತ್ತು. ಉಕ್ಕು ಸಚಿವ ಎಚ್.ಡಿ. ಕುಮಾರಸ್ವಾಮಿ, ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, ಸಾರಿಗೆ ಸಚಿವ ನಿತಿನ್ ಗಡ್ಕರಿ ಅವರಿದ್ದ ಆಲ್ಟರ್ನೇಟಿವ್ ಮೆಕ್ಯಾನಿಸಮ್ ಸಮಿತಿ ಈ ಬಿಡ್​ಗೆ ಅನುಮೋದನೆ ಕೊಟ್ಟಿದೆ.

ಎಫ್​ಎಸ್​ಎನ್​ಎಲ್ ಮಾರಾಟಕ್ಕೆ ಸರ್ಕಾರ ಮೌಲ್ಯಮಾಪನ ನಡೆಸಿ 262 ಕೋಟಿ ರೂ ಅನ್ನು ಮೀಸಲು ಬೆಲೆಯಾಗಿ ನಿಗದಿ ಮಾಡಿತ್ತು. ಅಂದರೆ, ಇದಕ್ಕಿಂತ ಹೆಚ್ಚಿನ ಬೆಲೆಗೆ ಬಿಡ್ ಸಲ್ಲಿಕೆಯಾದರೆ ಮಾರಲು ನಿರ್ಧರಿಸಲಾಗಿತ್ತು. ಜಪಾನ್​ನ ಕೊನೋಯಿಕೆ ಟ್ರಾನ್ಸ್​ಪೋರ್ಟ್ 320 ಕೋಟಿ ರೂ ಮೌಲ್ಯಕ್ಕೆ ಬಿಡ್ ಸಲ್ಲಿಸಿತು. ಚಂದನ್ ಸ್ಟೀಲ್ ಸಂಸ್ಥೆ ಮಾಲಕತ್ವದ ಇಂಡಿಕ್ ಜಿಯೋ ರಿಸೋರ್ಸಸ್ ಸಂಸ್ಥೆ ಕೂಡ ಬಿಡ್ ಸಲ್ಲಿಸಿತ್ತು.

ಇದನ್ನೂ ಓದಿ: ಅಮೆರಿಕದ ಅನಲಾಗ್ ಡಿವೈಸಸ್ ಸಂಸ್ಥೆ ಜೊತೆ ಟಾಟಾ ಗ್ರೂಪ್ ಒಪ್ಪಂದ; ಭಾರತದಲ್ಲಿ ಸೆಮಿಕಂಡಕ್ಟರ್ ಚಿಪ್ಸ್ ತಯಾರಿಕೆಗೆ ಮುಂದು

ಒಪ್ಪಂದದ ಪ್ರಕಾರ, ಕೋಲ್ಕತಾ ಮೂಲದ ಮೆಟಲ್ ಸ್ಕ್ರಾಪ್ ಟ್ರೇಡ್ ಕಾರ್ಪೊರೇಶನ್ (ಎಂಎಸ್​ಟಿಸಿ) ಎಫ್​ಎಸ್​ಎನ್​ಎಲ್​ನಲ್ಲಿ ಹೊಂದಿರುವ ನೂರಕ್ಕೆ ನೂರು ಷೇರುಗಳನ್ನು ಜಪಾನೀ ಸಂಸ್ಥೆಗೆ ವರ್ಗಾಯಿಸಲಿದೆ. ಇದರೊಂದಿಗೆ ಕೋನೋಯಿಕೆ ಟ್ರಾನ್ಸ್​ಪೋರ್ಟ್ ಸಂಸ್ಥೆ ಎಫ್​ಎಸ್​ಎನ್​ಎಲ್​ನ ಪೂರ್ಣಪ್ರಮಾಣದ ಮಾಲೀಕ ಸಂಸ್ಥೆಯಾಗಲಿದೆ.

ಫೆರೋ ಸ್ಕ್ರಾಪ್ ನಿಗಮ್ ಲಿ ಸಂಸ್ಥೆ ಛತ್ತೀಸ್​ಗ ಮೂಲದ್ದಾಗಿದ್ದು, 1979ರಲ್ಲಿ ಸ್ಥಾಪನೆಯಾಗಿದೆ. ಉಕ್ಕು ಮತ್ತು ಕಬ್ಬಿಣ ಉತ್ಪಾದನೆ ವೇಳೆ ನಿರ್ಮಾಣವಾಗುವ ಸ್ಕ್ರಾಪ್ ಅಥವಾ ಕಬ್ಬಿಣ ತ್ಯಾಜ್ಯವನ್ನು ಮರುಸಂಸ್ಕರಿಸುವ ಕಾರ್ಯವನ್ನು ಎಫ್​ಎಸ್​ಎನ್​ಎಲ್ ಮಾಡುತ್ತದೆ.

ಇದನ್ನೂ ಓದಿ: ಎನ್​ಪಿಎಸ್ ವಾತ್ಸಲ್ಯ ಅಕೌಂಟ್ ತೆರೆಯುವ ಮುನ್ನ ಸಾಧಕ, ಬಾಧಕಗಳೇನು ತಿಳಿದಿರಲಿ

ಎಫ್​ಎಸ್​ಎನ್​ಎಲ್ ಅನ್ನು ಖರೀದಿಸಿರುವ ಕೊನೋಯಿಕೆ ಟ್ರಾನ್ಸ್​ಪೋರ್ಟ್ ಸಂಸ್ಥೆಯ ಉಕ್ಕು ವಿಭಾಗ 140 ವರ್ಷಗಳಿಂದಲೂ ಸೇವೆಯಲ್ಲಿದೆ. ಇದೂ ಕೂಡ ಸ್ಕ್ರ್ಯಾಪ್ ಸಂಸ್ಕರಣೆ, ರೀಸೈಕ್ಲಿಂಗ್ ಕಾರ್ಯಗಳನ್ನು ಮಾಡುತ್ತದೆ. ಔದ್ಯಮಿಕ ತ್ಯಾಜ್ಯಗಳನ್ನು ಪೂರ್ಣವಾಗಿ ರೀಸೈಕಲ್ ಮಾಡುವ ಕಾರ್ಯದಲ್ಲಿ ಇದು ಪರಿಣಿತಿ ಹೊಂದಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ