AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅಮೆರಿಕದ ಅನಲಾಗ್ ಡಿವೈಸಸ್ ಸಂಸ್ಥೆ ಜೊತೆ ಟಾಟಾ ಗ್ರೂಪ್ ಒಪ್ಪಂದ; ಭಾರತದಲ್ಲಿ ಸೆಮಿಕಂಡಕ್ಟರ್ ಚಿಪ್ಸ್ ತಯಾರಿಕೆಗೆ ಮುಂದು

Analog Devices of USA signs pact with Tata Electronics: ಅಮೆರಿಕದ ಅನಲಾಗ್ ಡಿವೈಸಸ್ ಸಂಸ್ಥೆ ಜೊತೆ ಟಾಟಾ ಎಲೆಕ್ಟ್ರಾನಿಕ್ಸ್ ಒಪ್ಪಂದ ಮಾಡಿಕೊಂಡಿದೆ. ಟಾಟಾ ಗ್ರೂಪ್ ನಿರ್ಮಿಸುತ್ತಿರುವ ಎರಡು ಘಟಕಗಳಲ್ಲಿ ಎಡಿಐನ ಸೆಮಿಕಂಡಕ್ಟರ್ ಚಿಪ್​​ಗಳನ್ನು ತಯಾರಿಸುವ ನಿಟ್ಟಿನಲ್ಲಿ ಅವಲೋಕನೆ ಆಗುತ್ತಿದೆ. ಟವರ್ ಸೆಮಿಕಂಡಕ್ಟರ್ ಸೇರಿದಂತೆ ಹಲವು ಜಾಗತಿಕ ಚಿಪ್ ಕಂಪನಿಗಳು ಭಾರತದಲ್ಲಿ ಫ್ಯಾಕ್ಟರಿ ಶುರು ಮಾಡಲು ಹೊರಟಿವೆ. ಈ ಪಟ್ಟಿಗೆ ಎಡಿಐ ಸೇರುತ್ತಿದೆ.

ಅಮೆರಿಕದ ಅನಲಾಗ್ ಡಿವೈಸಸ್ ಸಂಸ್ಥೆ ಜೊತೆ ಟಾಟಾ ಗ್ರೂಪ್ ಒಪ್ಪಂದ; ಭಾರತದಲ್ಲಿ ಸೆಮಿಕಂಡಕ್ಟರ್ ಚಿಪ್ಸ್ ತಯಾರಿಕೆಗೆ ಮುಂದು
ಟಾಟಾ ಕಂಪನಿ
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Sep 19, 2024 | 4:13 PM

Share

ನವದೆಹಲಿ, ಸೆಪ್ಟೆಂಬರ್ 19: ಅಮೆರಿಕದ ಸೆಮಿಕಂಡಕ್ಟರ್ ಚಿಪ್ ತಯಾರಿಸುವ ಅನಲಾಗ್ ಡಿವೈಸಸ್ (ಎಡಿಐ) ಜೊತೆ ಟಾಟಾ ಗ್ರೂಪ್ ಒಪ್ಪಂದಕ್ಕೆ ಸಹಿ ಹಾಕಿದೆ. ಇವೆರಡೂ ಸಂಸ್ಥೆಗಳು ಭಾರತದಲ್ಲಿ ಜಂಟಿಯಾಗಿ ಚಿಪ್​ಗಳನ್ನು ತಯಾರಿಸಲಿವೆ. ಟಾಟಾ ಎಲೆಕ್ಟ್ರಾನಿಕ್ಸ್​ನ ಫ್ಯಾಬ್ ಘಟಕಗಳಲ್ಲಿ ಎಡಿಐನ ವಿವಿಧ ಉತ್ಪನ್ನಗಳನ್ನು ತಯಾರಿಸುವ ನಿರೀಕ್ಷೆ ಇದೆ. ‘ಗುಜರಾತ್​ನಲ್ಲಿರುವ ಟಾಟಾ ಎಲೆಕ್ಟ್ರಾನಿಕ್ಸ್​ನ ಫ್ಯಾಬ್ ಘಟಕದಲ್ಲಿ ಮತ್ತು ಅಸ್ಸಾಮ್​ನಲ್ಲಿರುವ ಅಸೆಂಬ್ಲಿಂಗ್ ಘಟಕದಲ್ಲಿ ಎಡಿನ ಉತ್ಪನ್ನಗಳನ್ನು ತಯಾರಿಸುವ ಅವಕಾಶವನ್ನು ಅವಲೋಕಿಸಲಾಗುತ್ತಿದೆ,’ ಎಂದು ಅಮೆರಿಕದ ಸೆಮಿಕಂಡಕ್ಟರ್ ಚಿಪ್ ತಯಾರಕ ಕಂಪನಿ ಹೇಳಿಕೆ ನೀಡಿದೆ.

ಟಾಟಾ ಗ್ರೂಪ್​ಗೆ ಸೇರಿದ ಟಾಟಾ ಎಲೆಕ್ಟ್ರಾನಿಕ್ಸ್ ಸಂಸ್ಥೆ ಗುಜರಾತ್​ನಲ್ಲಿ ಸೆಮಿಕಂಡಕ್ಟರ್ ಫ್ಯಾಬ್ರಿಕೇಶನ್ ಯೂನಿಟ್ ಅನ್ನು ಸ್ಥಾಪಿಸುತ್ತಿದೆ. 14 ಬಿಲಿಯನ್ ಡಾಲರ್ (ಸುಮಾರು 10,000 ಕೋಟಿ ರೂ) ವೆಚ್ಚದಲ್ಲಿ ಈ ಘಟಕ ಸ್ಥಾಪಿಸಲಾಗುತ್ತಿದೆ. ಇದು ಭಾರತದ ಮೊದಲ ಸೆಮಿಕಂಡಕ್ಟರ್ ಫ್ಯಾಬ್ ಯೂನಿಟ್ ಆಗುತ್ತದೆ. ಅಸ್ಸಾಮ್​ನಲ್ಲಿ ಚಿಪ್ ಅಸೆಂಬ್ಲಿ ಮತ್ತು ಟೆಸ್ಟಿಂಗ್ ಘಟಕ ನಿರ್ಮಿಸುತ್ತಿದೆ.

ಇದನ್ನೂ ಓದಿ: ಎಂಎಸ್​ಸಿಐ ಐಎಂಐ ಸೂಚ್ಯಂಕದಲ್ಲಿ ಚೀನಾವನ್ನು ಹಿಂದಿಕ್ಕಿದ ಭಾರತ; ವಿಶ್ವದ ಆರು ಪ್ರಮುಖ ಮಾರುಕಟ್ಟೆಗಳಲ್ಲಿ ಭಾರತ

ಅಮೆರಿಕದ ಅನಲಾಗ್ ಡಿವೈಸಸ್ ಸಂಸ್ಥೆ 60 ವರ್ಷದ ಹಿಂದೆ ಸ್ಥಾಪನೆಯಾಗಿದೆ. ಅನಲಾಗ್, ಮಿಕ್ಸೆಡ್ ಸಿಗ್ನಲ್, ಡಿಜಿಟಲ್ ಸಿಗ್ನಲ್ ಪ್ರೋಸಸಿಂಗ್​ನ ಐಸಿಗಳನ್ನು (ಇಂಟಿಗ್ರೇಟೆಡ್ ಸರ್ಕ್ಯುಟ್) ತಯಾರಿಸುತ್ತದೆ. ಇವು ಎಲೆಕ್ಟ್ರಾನಿ ಉಪಕರಣಗಳಲ್ಲಿ ಬಳಕೆ ಆಗುತ್ತದೆ. ಕಂಪ್ಯೂಟರ್, ಮಿಲಿಟರಿ ಉಪಕರಣ, ವಾಹನ, ಗೃಹ ಎಲೆಕ್ಟ್ರಾನಿಕ್ಸ್ ಉಪಕರಣಗಳಲ್ಲಿ ಇದರ ಉತ್ಪನ್ನಗಳನ್ನು ಬಳಸಲಾಗುತ್ತದೆ. ಟಾಟಾ ಕಂಪನಿಯ ಎಲೆಕ್ಟ್ರಿಕ್ ಕಾರುಗಳಿಗೆ ಎಡಿಐ ಉತ್ಪನ್ನಗಳ ಅವಶ್ಯಕತೆ ಬರಬಹುದು. ಭಾರತದ ಉದ್ದಿಮೆಗಳಿಗೂ ಇದು ಉಪಯೋಗಕ್ಕೆ ಬರುತ್ತದೆ.

ಭಾರತದಲ್ಲಿ ಎಡಿಐ ಮಾತ್ರವಲ್ಲಿ ಇನ್ನೂ ಹಲವು ಜಾಗತಿಕ ಸೆಮಿಕಂಡಕ್ಟರ್ ಕಂಪನಿಗಳು ಘಟಕಗಳನ್ನು ಸ್ಥಾಪಿಸಲಿವೆ. ಇಸ್ರೇಲ್​ನ ಟವರ್ ಸೆಮಿಕಂಡಕ್ಟರ್, ಎಲ್ ಅಂಡ್ ಟಿ, ಎನ್​ಎಕ್ಸ್​ಪಿ ಸೆಮಿಕಂಡಕ್ಟರ್ಸ್, ಮೈಕ್ರಾನ್ ಮೊದಲಾದ ಕಂಪನಿಗಳು ಭಾರತದಲ್ಲಿ ಮ್ಯಾನುಫ್ಯಾಕ್ಚರಿಂಗ್ ಘಟಕಗಳನ್ನು ಸ್ಥಾಪಿಸಲು ಹೊರಟಿವೆ.

ಇದನ್ನೂ ಓದಿ: ಅಮೆರಿಕದಲ್ಲಿ 50 ಮೂಲಾಂಕಗಳಷ್ಟು ಬಡ್ಡಿದರ ಇಳಿಕೆ; ಬಾಕಿ ಇದೆ ಇನ್ನಷ್ಟು ಕಡಿತ; ಮಿಂಚುತ್ತಿರುವ ಭಾರತೀಯ ಮಾರುಕಟ್ಟೆ

ಅದಾನಿ ಗ್ರೂಪ್​ನ ಕಂಪನಿಯೊಂದು ಇಸ್ರೇಲ್​ನ ಟವರ್ ಸೆಮಿಕಂಡಕ್ಟರ್ ಜೊತೆಗೆ ಕೈಜೋಡಿಸಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ