AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನಿರೀಕ್ಷೆಮೀರಿಸುತ್ತದಾ ಭಾರತದ ಈ ವರ್ಷದ ಆರ್ಥಿಕ ಬೆಳವಣಿಗೆ?; ವಿ ಅನಂತನಾಗೇಶ್ವರನ್ ವಿಶ್ವಾಸ

Chief Economic Advisor V Anantha Nageswaran projection of India's GDP in 2025-26: ಭಾರತದ ಜಿಡಿಪಿ ಈ ಹಣಕಾಸು ವರ್ಷದಲ್ಲಿ ಶೇ 6.3ರಿಂದ 6.8ರಷ್ಟು ಬೆಳೆಯಬಹುದು ಎಂದು ಈ ಹಿಂದೆ ನೀಡಿದ್ದ ಅಭಿಪ್ರಾಯವನ್ನು ಸಿಇಎ ಬದಲಿಸಿದ್ದಾರೆ. ತಾನು ನಿರೀಕ್ಷಿಸಿದುದಕ್ಕಿಂತಲೂ ಹೆಚ್ಚು ಪ್ರಮಾಣದಲ್ಲಿ ಜಿಡಿಪಿ ಬೆಳೆಯಬಹುದು ಎಂದು ವಿ ಅನಂತನಾಗೇಶ್ವರನ್ ಹೇಳಿದ್ದಾರೆ. ಜಿಡಿಪಿ ಶೇ. 6.5ಕ್ಕಿಂತಲೂ ಹೆಚ್ಚು ಎಂಬುದು ಖಾತ್ರಿ ಇದೆ. ಶೇ. 6.8 ದಾಟುವ ವಿಶ್ವಾಸ ಇದೆ. ಶೇ. 7 ಮುಟ್ಟುತ್ತದೋ ಗೊತ್ತಿಲ್ಲ ಎಂದಿದ್ದಾರೆ.

ನಿರೀಕ್ಷೆಮೀರಿಸುತ್ತದಾ ಭಾರತದ ಈ ವರ್ಷದ ಆರ್ಥಿಕ ಬೆಳವಣಿಗೆ?; ವಿ ಅನಂತನಾಗೇಶ್ವರನ್ ವಿಶ್ವಾಸ
ಮುಖ್ಯ ಆರ್ಥಿಕ ಸಲಹೆಗಾರ ವಿ ಅನಂತನಾಗೇಶ್ವರನ್
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Nov 09, 2025 | 4:57 PM

Share

ನವದೆಹಲಿ, ನವೆಂಬರ್ 9: ಈ ವರ್ಷ ಭಾರತದ ಆರ್ಥಿಕತೆ (Indian economy) ನಿರೀಕ್ಷೆಮೀರಿ ಬೆಳೆಯಬಹುದು ಎಂದು ಹಲವರು ಹೇಳತೊಡಗಿದ್ದಾರೆ. ಮುಖ್ಯ ಆರ್ಥಿಕ ಸಲಹೆಗಾರರಾದ ವಿ ಅನಂತನಾಗೇಶ್ವರನ್ (CEA V. Anantha Nageswaran) ಅವರೂ ಕೂಡ ಈ ಅಭಿಪ್ರಾಯಕ್ಕೆ ಧ್ವನಿಗೂಡಿಸಿದ್ದಾರೆ. ಹಲವರ ಅಂದಾಜಿಗಿಂತ ಇವರು ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿದ್ದಾರೆ. ಇವರ ಪ್ರಕಾರ ಭಾರತದ ಜಿಡಿಪಿ ಬೆಳವಣಿಗೆ 2025-26ರಲ್ಲಿ ಶೇ. 6.8 ಅನ್ನು ಸುಲಭವಾಗಿ ಮೀರಬಹುದು.

ಖಾಸಗಿ ವಾಹಿನಿಯೊಂದರ ಗ್ಲೋಬಲ್ ಲೀಡರ್​ಶಿಪ್ ಸಮಿಟ್​ನಲ್ಲಿ ಮಾತನಾಡುತ್ತಿದ್ದ ನಾಗೇಶ್ವರನ್, ತಾನು ಹಿಂದೆ ಭಾವಿಸಿದುದಕ್ಕಿಂತಲೂ ಹೆಚ್ಚು ಪ್ರಮಾಣದಲ್ಲಿ ಈ ವರ್ಷದ ಆರ್ಥಿಕತೆ ಬೆಳೆಯುತ್ತದೆ ಎಂದಿದ್ದಾರೆ. ತಾನು ಹಿಂದೆ ಮಾಡಿದ ಅಂದಾಜು ಪ್ರಕಾರ ಈ ವರ್ಷ ಜಿಡಿಪಿ ದರ ಶೇ. 6.3ರಿಂದ 6.8ರ ಶ್ರೇಣಿಯಲ್ಲಿರಬಹುದು. ಆದರೆ, ಈಗ ಆರ್ಥಿಕ ಬೆಳವಣಿಗೆ ಶೇ. 6.8ಕ್ಕಿಂತಲೂ ಹೆಚ್ಚಿರುತ್ತದೆ ಎಂದು ಸುಲಭವಾಗಿ ಹೇಳಬಲ್ಲೆ ಎಂದು ಮುಖ್ಯ ಆರ್ಥಿಕ ಸಲಹೆಗಾರರು ಅಭಿಪ್ರಾಯಪಟ್ಟಿದ್ದಾರೆ.

ಇದನ್ನೂ ಓದಿ: ಸ್ಕ್ರ್ಯಾಪ್​ಗಳನ್ನು ಮಾರಿ ಒಂದೇ ತಿಂಗಳಲ್ಲಿ 800 ಕೋಟಿ ರೂ ಗಳಿಸಿದ ಸರ್ಕಾರ; 4 ವರ್ಷದಲ್ಲಿ ಬಂದ ಆದಾಯ 4,000 ಕೋಟಿ ರೂಗೂ ಹೆಚ್ಚು

ಸಿಇಎ ಅವರ ನೇತೃತ್ವದಲ್ಲಿ ತಯಾರಾದ 2025-26ರ ಆರ್ಥಿಕ ಸಮೀಕ್ಷಾ ವರದಿಯಲ್ಲಿ ಭಾರತದ ಈ ವರ್ಷದ ಆರ್ಥಿಕ ಬೆಳವಣಿಗೆ ಶೇ. 6.3ರಿಂದ 6.8ರ ಶ್ರೇಣಿಯಲ್ಲಿರಬಹುದು ಎಂದಿತ್ತು. ಈಗ ಸಿಇಎ ತನ್ನ ಅನಿಸಿಕೆ ಬದಲಿಸಿಕೊಳ್ಳಲು ಕಾರಣ ಇದೆ. ಕೇಂದ್ರ ಸರ್ಕಾರವು ಜಿಎಸ್​ಟಿ ಮತ್ತು ಆದಾಯ ತೆರಿಗೆಗಳನ್ನು ಕಡಿಮೆ ಮಾಡಿರುವುದು, ಖಾಸಗಿ ಹೂಡಿಕೆ ಹೆಚ್ಚಿರುವುದು, ವಿದೇಶಗಳಿಂದ ಬಂಡವಾಳ ಹರಿವು ಹೆಚ್ಚಿರುವುದು ಭಾರತದ ಆರ್ಥಿಕತೆ ಬೆಳವಣಿಗೆಗೆ ಇನ್ನಷ್ಟು ಚುರುಕು ತಂದಿವೆ ಎಂಬುದು ವಿ ಅನಂತನಾಗೇಶ್ವರನ್ ಅವರ ಅನಿಸಿಕೆ.

ಶೇ 7 ಅನ್ನು ಮೀರಿಸುತ್ತಾ ಭಾರತದ ಬೆಳವಣಿಗೆ ದರ?

ಈ ಹಣಕಾಸು ವರ್ಷದಲ್ಲಿ ಭಾರತದ ಜಿಡಿಪಿ ದರ ಶೇ. 7 ಅನ್ನು ಮುಟ್ಟುವ ಸಾಧ್ಯತೆಯನ್ನು ಸಿಇಎ ತಳ್ಳಿ ಹಾಕಿಲ್ಲ ಎಂಬುದು ಕುತೂಹಲದ ಸಂಗತಿ. ‘ಆರ್ಥಿಕ ಬೆಳವಣಿಗೆ ಶೇ. 6.5ಕ್ಕಿಂತ ಹೆಚ್ಚು ಆಗುತ್ತದೆ ಎಂದು ಈ ಹಂತದಲ್ಲಿ ನಿಶ್ಚಿತವಾಗಿ ಹೇಳಬಲ್ಲೆ. ಶೇ. 6.8 ಅನ್ನೂ ಮೀರಿಸಬಹುದು ಎಂದೂ ವಿಶ್ವಾಸದಿಂದ ಹೇಳಬಲ್ಲೆ. ಆದರೆ, ಜಿಡಿಪಿ ದರ ಶೇ. 7 ಮುಟ್ಟಬಹುದು ಎಂದು ನಿರೀಕ್ಷಿಸುವ ಮುನ್ನ ಎರಡನೇ ಕ್ವಾರ್ಟರ್​ನ ದತ್ತಾಂಶ ಬಿಡುಗಡೆ ಆಗುವವರೆಗೂ ಕಾಯಬೇಕಾಗುತ್ತದೆ’ ಎಂದು ಸಿಇಎ ತಿಳಿಸಿದ್ದಾರೆ.

ಇದನ್ನೂ ಓದಿ: ಭಾರತದ ಜಿಡಿಪಿ ಈ ವರ್ಷ ಶೇ. 6.7-6.9ರಷ್ಟು ಬೆಳೆಯಬಹುದು: ಡುಲೋಟ್ ಅಂದಾಜು

ಈ ಹಣಕಾಸು ವರ್ಷದ ಮೊದಲ ಕ್ವಾರ್ಟರ್ ಆದ ಏಪ್ರಿಲ್​ನಿಂದ ಜೂನ್​ವರೆಗಿನ ಅವಧಿಯಲ್ಲಿ ಜಿಡಿಪಿ ಶೇ. 7.8ರಷ್ಟು ಬೆಳೆದು ಎಲ್ಲರಿಗೂ ಅಚ್ಚರಿ ಹುಟ್ಟಿಸಿತು. ಜುಲೈನಿಂದ ಸೆಪ್ಟೆಂಬರ್​ವರೆಗಿರುವ ಎರಡನೇ ಕ್ವಾರ್ಟರ್​ನ ಜಿಡಿಪಿ ದತ್ತಾಂಶ ಈ ತಿಂಗಳಲ್ಲೇ ಪ್ರಕಟವಾಗಬಹುದು.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಇಂದು ಈ ರಾಶಿಯವರ ಪ್ರೇಮ ವ್ಯವಹಾರಗಳಿಗೆ ಅಡ್ಡಿ
ಇಂದು ಈ ರಾಶಿಯವರ ಪ್ರೇಮ ವ್ಯವಹಾರಗಳಿಗೆ ಅಡ್ಡಿ
ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಹಾಯಾಗಿ ಮಲಗಿದ ಶ್ವಾನ!
ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಹಾಯಾಗಿ ಮಲಗಿದ ಶ್ವಾನ!
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ