India GDP: ಭಾರತದ ಜಿಡಿಪಿ 4ನೇ ಕ್ವಾರ್ಟರ್​​ನಲ್ಲಿ ಶೇ. 7.4; ಇಡೀ ವರ್ಷಕ್ಕೆ ಶೇ. 6.5 ಬೆಳವಣಿಗೆ; ನಿರೀಕ್ಷೆ ಮೀರಿಸಿ ವೃದ್ಧಿಸಿದ ಆರ್ಥಿಕತೆ

India GDP registers 7.4pc growth in Q4: ಭಾರತದ ಜಿಡಿಪಿ 2024-25ರ ಕೊನೆಯ ತ್ರೈಮಾಸಿಕದಲ್ಲಿ ಶೇ. 7.4ರಷ್ಟು ಹೆಚ್ಚಳ ಕಂಡಿದೆ. ಇಡೀ ಹಣಕಾಸು ವರ್ಷದಲ್ಲಿ ಭಾರತದ ಆರ್ಥಿಕತೆ ಶೇ. 6.5ರಷ್ಟು ಬೆಳವಣಿಗೆ ದಾಖಲಿಸಿದಂತಾಗಿದೆ. 2023-24ರಲ್ಲಿ ಜಿಡಿಪಿ ಶೇ. 9.2ರಷ್ಟು ಹೆಚ್ಚಿತ್ತು. ಅದಕ್ಕೆ ಹೋಲಿಸಿದರೆ 2024-25ರ ಜಿಡಿಪಿ ದರ ಕಡಿಮೆ ಆಗಿದೆ. ಇದು ಕಳೆದ ನಾಲ್ಕು ವರ್ಷದಲ್ಲೇ ಅತಿ ಕಡಿಮೆ ವಾರ್ಷಿಕ ವೃದ್ಧಿದರ ಎನಿಸಿದೆ.

India GDP: ಭಾರತದ ಜಿಡಿಪಿ 4ನೇ ಕ್ವಾರ್ಟರ್​​ನಲ್ಲಿ ಶೇ. 7.4; ಇಡೀ ವರ್ಷಕ್ಕೆ ಶೇ. 6.5 ಬೆಳವಣಿಗೆ; ನಿರೀಕ್ಷೆ ಮೀರಿಸಿ ವೃದ್ಧಿಸಿದ ಆರ್ಥಿಕತೆ
ಜಿಡಿಪಿ

Updated on: May 30, 2025 | 4:57 PM

ನವದೆಹಲಿ, ಮೇ 30: ಭಾರತದ ಆರ್ಥಿಕತೆ ಹೆಚ್ಚಿನ ಜನರ ಲೆಕ್ಕಾಚಾರ ಮೀರಿಸಿ ಹೆಚ್ಚು ವೃದ್ಧಿ ಕಂಡಿದೆ. ಇಂದು ಸರ್ಕಾರದಿಂದ ಬಿಡುಗಡೆಯಾದ ದತ್ತಾಂಶದ ಪ್ರಕಾರ 2024-25ರ ಹಣಕಾಸು ವರ್ಷದ ಕೊನೆಯ ಕ್ವಾರ್ಟರ್ ಆದ ಜನವರಿಯಿಂದ ಮಾರ್ಚ್​​​ವರೆಗಿನ ಅವಧಿಯಲ್ಲಿ ಭಾರತದ ಜಿಡಿಪಿ (India GDP growth) ಶೇ. 7.4ರಷ್ಟು ಹೆಚ್ಚಾಗಿದೆ. ಹೆಚ್ಚಿನ ತಜ್ಞರು ಮತ್ತು ಹಣಕಾಸು ಸಂಸ್ಥೆಗಳು ಕೊನೆಯ ಕ್ವಾರ್ಟರ್​​​ನಲ್ಲಿ ಶೇ. 6.4ರಿಂದ ಶೇ. 7ರ ಶ್ರೇಣಿಯಲ್ಲಿ ಜಿಡಿಪಿ ಬೆಳೆಯಬಹುದು ಎಂದು ಎಣಿಸಿದ್ದುವು. ಎಲ್ಲರ ನಿರೀಕ್ಷೆ ಮೀರಿಸಿ ಜಿಡಿಪಿ ವೃದ್ಧಿ ಕಂಡಿದೆ.

ಕೊನೆಯ ಕ್ವಾರ್ಟರ್​​​ನಲ್ಲಿ ಶೇ. 7.4ರಷ್ಟು ಬೆಳೆದರೂ ಇಡೀ ವರ್ಷದಲ್ಲಿ (2024-25) ಆರ್ಥಿಕತೆ ಶೇ. 6.5ರಷ್ಟು ಮಾತ್ರ ಹೆಚ್ಚಾಗಿದೆ. ಇದೂ ಕೂಡ ಹಲವರ ನಿರೀಕ್ಷೆಗಿಂತ ಹೆಚ್ಚಾಗಿದೆಯಾದರೂ, ಹಿಂದಿನ ಹಣಕಾಸು ವರ್ಷಕ್ಕೆ ಹೋಲಿಸಿದರೆ ಬಹಳ ಕಡಿಮೆ ಆಗಿದೆ. ಕಳೆದ ನಾಲ್ಕು ವರ್ಷದಲ್ಲೇ ಇದು ಕಡಿಮೆ ವೃದ್ಧಿ ದರ ಎನಿಸಿದೆ. 2023-24ರ ಹಣಕಾಸು ವರ್ಷದಲ್ಲಿ ಭಾರತದ ಜಿಡಿಪಿ 9.2ರಷ್ಟು ಹೆಚ್ಚಳ ದಾಖಲಿಸಿದೆ.

ಇದನ್ನೂ ಓದಿ: ಅಮೆರಿಕಕ್ಕೆ ತಿರುಗುಬಾಣವಾಗ್ತಿದ್ಯಾ ಟ್ರೇಡ್ ವಾರ್?; ಮೊದಲ ಕ್ವಾರ್ಟರ್​​ನಲ್ಲಿ ಜಿಡಿಪಿ ಕುಸಿತ

ಇದನ್ನೂ ಓದಿ
ಶೇ. 0.2ರಷ್ಟು ಕುಸಿದ ಅಮೆರಿಕದ ಆರ್ಥಿಕತೆ
ಈ ವರ್ಷವೂ ಭಾರತದ ಆರ್ಥಿಕತೆಯೇ ಅತಿ ವೇಗಿ: ಆರ್​​ಬಿಐ
ವಯಸ್ಸಾದವರಿಂದ ದೇಶಕ್ಕೆ ಕೊಡುಗೆ: ರೋಹಿಣಿ ನಿಲೇಕಣಿ ವರದಿ
ಭಾರತದ ಮುಂದಿನ ಜಿಗಿತವು ತಲಾದಾಯದ್ದಾಗಿರಬೇಕು: ಆನಂದ್ ಮಹೀಂದ್ರ

ಕೊನೆಯ ಕ್ವಾರ್ಟರ್​​​ನಲ್ಲಿ ರಿಯಲ್ ಜಿಡಿಪಿ 51.35 ಲಕ್ಷ ಕೋಟಿ ರೂ

ಜನವರಿಯಿಂದ ಮಾರ್ಚ್​​ವರೆಗಿನ ತ್ರೈಮಾಸಿಕದಲ್ಲಿ ರಿಯಲ್ ಜಿಡಿಪಿ 51.35 ಲಕ್ಷ ಕೋಟಿ ರೂ ಇರಬಹುದು ಎಂದು ಅಂದಾಜಿಸಲಾಗಿದೆ. ಹಿಂದಿನ ವರ್ಷದ ಇದೇ ಕ್ವಾರ್ಟರ್​​​ನಲ್ಲಿ (2024ರ ಜನವರಿಯಿಂದ ಮಾರ್ಚ್ ಕ್ವಾರ್ಟರ್) ರಿಯಲ್ ಜಿಡಿಪಿ 47.82 ಲಕ್ಷ ಕೋಟಿ ರೂ ಇತ್ತು. ಅಂದರೆ, ಶೇ. 7.4ರಷ್ಟು ಜಿಡಿಪಿ ಹೆಚ್ಚಳ ಆಗಿದೆ.

ಇವತ್ತಿನ ಮಾರುಕಟ್ಟೆ ದರಗಳನ್ನು ಗಣನೆಗೆ ತೆಗೆದುಕೊಳ್ಳುವ ನಾಮಿನಲ್ ಜಿಡಿಪಿ ಈ 4ನೇ ಕ್ವಾರ್ಟರ್​​ನಲ್ಲಿ ಶೇ. 10.8ರಷ್ಟು ಬೆಳವಣಿಗೆ ಕಂಡಿದೆ.

ಕೃಷಿ ಕ್ಷೇತ್ರ ಬೆಳವಣಿಗೆ, ತಯಾರಿಕಾ ಕ್ಷೇತ್ರ ಮಂದ

ರಾಷ್ಟ್ರೀಯ ಸಾಂಖ್ಯಿಕ ಕಚೇರಿ ಇಂದು ಶುಕ್ರವಾರ ಬಿಡುಗಡೆ ಮಾಡಿದ ದತ್ತಾಂಶದ ಪ್ರಕಾರ, 2024ರ ಮಾರ್ಚ್ ಕ್ವಾರ್ಟರ್​​​ನಲ್ಲಿ ಕೇವಲ 0.9 ಪ್ರತಿಶತದಷ್ಟು ಬೆಳೆದಿದ್ದ ಕೃಷಿ ಕ್ಷೇತ್ರ ಈ ಬಾರಿ ಶೇ. 5ರಷ್ಟು ಪ್ರಗತಿ ದಾಖಲಿಸಿದೆ. ಜಿಡಿಪಿಯು ನಿರೀಕ್ಷಿಸಿದುದಕ್ಕಿಂತ ಹೆಚ್ಚಾಗಲು ಕೃಷಿಯೂ ಒಂದು ಕಾರಣವಾಗಿದೆ.

ಇದನ್ನೂ ಓದಿ: ಜಾಗತಿಕ ಅನಿಶ್ಚಿತತೆ ಮಧ್ಯೆಯೂ ಭಾರತದ ಆರ್ಥಿಕತೆ ಅತ್ಯುತ್ತಮ ಬೆಳವಣಿಗೆ: ಆರ್​ಬಿಐ ಅಂದಾಜು

ಇನ್ನೊಂದೆಡೆ, ಭಾರತ ಬಹಳ ಮುತುವರ್ಜಿ ತೋರುತ್ತಿರುವ ತಯಾರಿಕಾ ಕ್ಷೇತ್ರದ ಬೆಳವಣಿಗೆ ಮಂದಗೊಂಡಿದೆ. ಕಳೆದ ವರ್ಷದ ಕೊನೆಯ ಕ್ವಾರ್ಟರ್​​​ನಲ್ಲಿ ಶೇ. 11.3ರಷ್ಟು ಹೆಚ್ಚಿದ್ದ ಮ್ಯಾನುಫ್ಯಾಕ್ಚರಿಂಗ್ ಸೆಕ್ಟರ್ ಈ ಬಾರಿ ಬೆಳವಣಿಗೆ ಕಂಡಿದ್ದು ಶೇ. 4.8ರಷ್ಟು ಮಾತ್ರ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 4:35 pm, Fri, 30 May 25