Tariff war: ಆಲ್ಕೋಹಾಲ್, ಕೃಷಿ ಉತ್ಪನ್ನಗಳ ಮೇಲೆ ಭಾರತ ಸಿಕ್ಕಾಪಟ್ಟೆ ಸುಂಕ: ಅಮೆರಿಕ ಕೆಂಗಣ್ಣು

|

Updated on: Mar 12, 2025 | 1:40 PM

USA objects India's tariff on American products: ಹಲವು ದೇಶಗಳು ದಶಕಗಳಿಂದ ತನ್ನ ಮುಕ್ತ ಮಾರುಕಟ್ಟೆಯನ್ನು ದುರ್ಬಳಕೆ ಮಾಡಿಕೊಳ್ಳುತ್ತಿವೆ ಎಂದು ಅಮೆರಿಕ ಮತ್ತೆ ಅಲವತ್ತುಕೊಂಡಿದೆ. ವೈಟ್​​ಹೌಸ್​​ನ ಪ್ರೆಸ್ ಸೆಕ್ರಟರಿ ಕೆರೋಲಿನ್ ಲಿಯಾವಿಟ್ ಅವರು ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಾ, ಕೆನಡಾ, ಭಾರತ, ಜಪಾನ್ ದೇಶಗಳ ಟ್ಯಾರಿಫ್ ನಿದರ್ಶನ ನೀಡಿದರು. ಇದೇ ವೇಳೆ, ಯೂರೋಪಿಯನ್ ಯೂನಿಯನ್ ಮೇಲೆ ಅಮೆರಿಕ ಟ್ಯಾರಿಫ್ ಹೇರಿಕೆ ಮಾಡಿದ ಪರಿಣಾಮ ಈಗ ಯೂರೋಪ್ ಕೂಡ ಪ್ರತಿಸುಂಕ ಹಾಕಲು ನಿರ್ಧರಿಸಿದೆ.

Tariff war: ಆಲ್ಕೋಹಾಲ್, ಕೃಷಿ ಉತ್ಪನ್ನಗಳ ಮೇಲೆ ಭಾರತ ಸಿಕ್ಕಾಪಟ್ಟೆ ಸುಂಕ: ಅಮೆರಿಕ ಕೆಂಗಣ್ಣು
ಕರೋಲಿನ್ ಲಿಯಾವಿಟ್
Follow us on

ವಾಷಿಂಗ್ಟನ್, ಮಾರ್ಚ್ 12: ಅಮೆರಿಕ ಈಗ ನಿತ್ಯವೂ ಸುಂಕದ ತಗಾದೆ ತೆಗೆಯಲು ಆರಂಭಿಸಿದೆ. ಎಲ್ಲಾ ದೇಶಗಳು ಅಮೆರಿಕದ ಮುಕ್ತ ಮಾರುಕಟ್ಟೆಯನ್ನು ದುರ್ಬಳಕೆ ಮಾಡಿಕೊಳ್ಳುತ್ತಿವೆ ಎಂದು ಅಮೆರಿಕದ ಅಧ್ಯಕ್ಷರ ಗೃಹಕಚೇರಿಯಾದ ಶ್ವೇತಭವನದ ಪತ್ರಿಕಾ ಕಾರ್ಯದರ್ಶಿ ಕರೋಲಿನ್ ಲಿಯಾವಿಟ್ (White House press secretary Karoline Leavitt) ಪುನರುಚ್ಚರಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೆನಡಾ, ಭಾರತ, ಜಪಾನ್ ಮೊದಲಾದ ದೇಶಗಳ ಹೆಸರನ್ನು ಪ್ರಸ್ತಾಪಿಸಿ, ಕುಟುಕಲು ಯತ್ನಿಸಿದರು. ಅಮೆರಿಕದ ಮದ್ಯ ಉತ್ಪನ್ನಗಳ ಮೇಲೆ ಭಾರತ ಶೇ. 150ರಷ್ಟು ಆಮದು ಸುಂಕ ಹಾಕುತ್ತದೆ. ಕೃಷಿ ಉತ್ಪನ್ನಗಳ ಮೇಲೆ ಶೇ. 100ರಷ್ಟು ಟ್ಯಾರಿಫ್ ಹಾಕುತ್ತದೆ ಎಂದು ವ್ಹೈಟ್​ಹೌಸ್ ಪ್ರೆಸ್ ಸೆಕ್ರೆಟರಿ ಆತಂಕ ವ್ಯಕ್ತಪಡಿಸಿದರು.

ಕೆರೋಲಿನ್ ಲಿಯಾವಿಟ್ ಅವರು ಕೆನಡಾ ವಿರುದ್ಧ ಹಾರಿಹಾಯ್ದರು. ದಶಕಗಳ ಕಾಲ ಸುಂಕಗಳ ಮೂಲಕ ಕೆನಡಾ ದೇಶವು ಅಮೆರಿಕ ಹಾಗೂ ಅದರ ನಾಗರಿಕರನ್ನು ಸುಲಿಗೆ ಮಾಡುತ್ತಿದೆ ಎಂದು ಅಕ್ರೋಶ ವ್ಯಕ್ತಪಡಿಸಿದರು.

ಇದನ್ನೂ ಓದಿ: ಏರ್ಟೆಲ್ ಆಯ್ತು, ಈಗ ಜಿಯೋ ಕೂಡ ಸ್ಟಾರ್​ಲಿಂಕ್ ಜೊತೆ ಒಪ್ಪಂದ; ಏನಿದು ಸ್ಟಾರ್​​ಲಿಂಕ್ ಇಂಟರ್ನೆಟ್?

‘ಅಮೆರಿಕದ ಬೆಣ್ಣೆ ಮತ್ತು ಮೊಸರಿಗೆ ಕೆನಡಾ ಶೇ. 300ರಷ್ಟು ಸುಂಕ ಹಾಕುತ್ತದೆ. ಅಮೆರಿಕದ ಆಲ್ಕೋಹಾಲ್ ಮೇಲೆ ಭಾರತ ಶೇ. 150ರಷ್ಟು ತೆರಿಗೆ ಹಾಕುತ್ತದೆ. ಕುಂಟುಕಿ ಬೋರ್ಬೋನ್ ಅನ್ನು ಭಾರತಕ್ಕೆ ರಫ್ತು ಮಾಡಲು ಸಾಧ್ಯವಾಗುತ್ತಿರಬಹುದು ಎಂದು ಭಾವಿಸಿದ್ದೀರಾ? ಅದು ಅಸಾಧ್ಯ. ಭಾರತವು ಕೃಷಿ ಉತ್ಪನ್ನಗಳ ಮೇಲೆ ಶೇ. 100ರಷ್ಟು ಆಮದು ಸುಂಕ ಹಾಕುತ್ತದೆ’ ಎಂದು ಅಮೆರಿಕ ಅಧ್ಯಕ್ಷರ ಮಾಧ್ಯಮ ಕಾರ್ಯದರ್ಶಿ ಹೇಳಿದರು.

ಇದನ್ನೂ ಓದಿ
ಸ್ಟಾರ್​​ಲಿಂಕ್ ಜೊತೆ ಏರ್ಟೆಲ್, ಜಿಯೋ ಒಪ್ಪಂದ
ಡಿವಿಡೆಂಡ್ ಯೀಲ್ಡ್ ಮ್ಯೂಚುವಲ್ ಫಂಡ್​​ಗಳ ಸಾಧಕ-ಬಾಧಕಗಳು
ಲೋನ್ ಆ್ಯಪ್ ಗಾಳಕ್ಕೆ ಬಿದ್ದಾಗ ಏನು ಮಾಡಬೇಕು?
ಏರ್ಪೋರ್ಟ್​​ನಲ್ಲಿ 10 ರೂಗೆ ಚಹಾ ಮಾರುವ ಉಡಾನ್ ಕೆಫೆ

ಐರೋಪ್ಯ ಒಕ್ಕೂಟದಿಂದ ಅಮೆರಿಕದ ಮೇಲೆ ಪ್ರತಿಸುಂಕ

ಇದೇ ವೇಳೆ, ಐರೋಪ್ಯ ಒಕ್ಕೂಟದ ದೇಶಗಳಿಂದ ಬರುವ ಉಕ್ಕು ಮತ್ತು ಅಲೂಮಿನಿಯಂ ವಸ್ತುಗಳ ಮೇಲೆ ಅಮೆರಿಕ ಶೇ. 25ರಷ್ಟು ಆಮದು ಸುಂಕ ಹಾಕುತ್ತಿದೆ. ಇದು 28 ಬಿಲಿಯನ್ ಡಾಲರ್​​ನಷ್ಟು ಸುಂಕವಾಗುತ್ತದೆ. ಇದಕ್ಕೆ ಪ್ರತಿಯಾಗಿ ಯೂರೋಪಿಯನ್ ಯೂನಿಯನ್ ಕೂಡ ಅಮೆರಿಕದ ಉತ್ಪನ್ನಗಳ ಮೇಲೆ 26 ಬಿಲಿಯನ್ ಡಾಲರ್ ಮೊತ್ತದಷ್ಟು ಪ್ರತಿಸುಂಕ ಹಾಕಲು ನಿರ್ಧರಿಸಿದೆ. ಏಪ್ರಿಲ್ 1ರಿಂದ ಇಯು ಹೊಸ ಟ್ಯಾರಿಫ್ ಜಾರಿಗೆ ಬರಲಿದೆ. ಈ ಯೂರೋಪಿಯನ್ ಯೂನಿಯನ್​​ನಲ್ಲಿ 27 ಸದಸ್ಯ ದೇಶಗಳಿವೆ.

ಇದನ್ನೂ ಓದಿ: Dividend Funds: ಐದು ವರ್ಷಗಳಿಂದ ಶೇ. 20ಕ್ಕೂ ಹೆಚ್ಚು ಲಾಭ ತರುತ್ತಿರುವ ಡಿವಿಡೆಂಡ್ ಯೀಲ್ಡ್ ಮ್ಯೂಚುವಲ್ ಫಂಡ್​​ಗಳು

ಯಾರಿಗೂ ಒಳಿತಾಗದ ಆಮದು ಸುಂಕ…

ಯೂರೋಪ್ ನಾಯಕರು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಆಮದು ಸುಂಕ ನೀತಿಗೆ ವಿಷಾದಿಸಿದ್ದಾರೆ. ‘ಆಮದು ಸುಂಕ ಎನ್ನುವುದು ತೆರಿಗೆಯೇ. ಇದರಿಂದ ವ್ಯಾಪಾರಕ್ಕೆ ಕಷ್ಟವಾಗುತ್ತದೆ. ಗ್ರಾಹಕರಿಗೂ ಕಷ್ಟವಾಗುತ್ತದೆ. ಈ ಟ್ಯಾರಿಫ್​​ಗಳು ಸಪ್ಲೈ ಚೈನ್​​ಗಳನ್ನು ದುರ್ಬಲಗೊಳಿಸುತ್ತಿವೆ. ಆರ್ಥಿಕತೆಗೆ ಅನಿಶ್ಚಿತ ಪರಿಸ್ಥಿತಿ ತರುತ್ತಿವೆ. ತೆರಿಗೆಯಿಂದ ಅಮೆರಿಕದ ಫ್ಯಾಕ್ಟರಿ ಉದ್ಯೋಗಗಳನ್ನು ಸೃಷ್ಟಿಸಬಹುದು ಎನ್ನುತ್ತಾರೆ. ಆದರೆ, ಕೆಲಸಗಳೇ ಹೋಗಬಹುದು. ಬೆಲೆಗಳು ಹೆಚ್ಚುತ್ತವೆ’ ಎಂದು ಐರೋಪ್ಯ ಆಯೋಗದ ಅಧ್ಯಕ್ಷೆ ಉರ್ಸುಲಾ ವೋನ್ ಡರ್ ಲೆಯೆನ್ ಅಭಿಪ್ರಾಯಪಟ್ಟರು.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 1:03 pm, Wed, 12 March 25