
ನವದೆಹಲಿ, ಮಾರ್ಚ್ 5: ಭಾರತದ ಇಂಧನ ಭದ್ರತೆ (Energy security) ಉತ್ತಮವಾಗಿದೆ. ಇಂಧನ ದಾಸ್ತಾನು ಸಾಕಷ್ಟು ಇದೆ ಎದು ಸರ್ಕಾರದ ಮೂಲಗಳು ಹೇಳಿದ್ದಾಗಿ ಎಎನ್ಐ ವರದಿ ಮಾಡಿದೆ. ಕಚ್ಚಾ ತೈಲವನ್ನು (Crude Oil) ದಿನವೂ ಭರಿಸಲಾಗುತ್ತಿದೆ ಎಂದೂ ವರದಿಯಲ್ಲಿ ಹೇಳಲಾಗಿದೆ. ಭಾರತಕ್ಕೆ ಎಲ್ಪಿಜಿ ಮತ್ತು ಎಲ್ಎನ್ಜಿ ಗ್ಯಾಸ್ ಬಿಕ್ಕಟ್ಟು ಎದುರಾಗಿದೆ ಎನ್ನುವಂತಹ ವರದಿಗಳನ್ನೂ ಸರ್ಕಾರದ ಮೂಲಗಳು ತಳ್ಳಿಹಾಕಿವೆ.
‘ವಿಶ್ವದಲ್ಲಿ ಕಚ್ಚಾ ತೈಲಕ್ಕೆ ಯಾವ ಕೊರತೆ ಇಲ್ಲ. ಎಲ್ಪಿಜಿ ಅಥವಾ ಎಲ್ಎನ್ಜಿಗೂ ಕೊರತೆ ಬಂದಿಲ್ಲ. ಇತರ ಪೂರೈಕೆದಾರರೊಂದಿಗೂ ಭಾರತ ಸಂಪರ್ಕದಲ್ಲಿದೆ. ಆಸ್ಟ್ರೇಲಿಯಾ ಮತ್ತು ಕೆನಡಾ ದೇಶಗಳು ಭಾರತಕ್ಕೆ ಗ್ಯಾಸ್ ಮಾರಲು ಮುಂದೆ ಬಂದಿವೆ. ಭಾರತ ಪರ್ಯಾಯ ಮೂಲಗಳನ್ನೂ ಹುಡುಕುತ್ತಿದೆ. ಇತ್ತೀಚೆಗಷ್ಟೇ ಯುಎಇ ಮತ್ತು ಅಮೆರಿಕ ಜೊತೆ ಭಾರತ ಹೊಸ ಗುತ್ತಿಗೆಗೆ ಸಹಿ ಹಾಕಿದೆ’ ಎಂದು ವರದಿಯಲ್ಲಿ ಹೇಳಲಾಗಿದೆ.
ಭಾರತ 195 ಎಂಎಂಎಸ್ಸಿಎಂಡಿಯಷ್ಟು ಅನಿಲವನ್ನು ಆಮದು ಮಾಡಿಕೊಳ್ಳುತ್ತದೆ. ಇದರಲ್ಲಿ ಕತಾರ್ 60 ಎಂಎಂಎಸ್ಸಿಎಂಡಿ ಗ್ಯಾಸ್ ಪೂರೈಸುತ್ತದೆ. ಅನಿಲಕ್ಕಾಗಿ ಭಾರತ ಇತರ ಮಾರುಕಟ್ಟೆಗಳನ್ನೂ ಅವಲೋಕಿಸುತ್ತಿದೆ ಎಂದು ಸರ್ಕಾರದ ಮೂಲಗಳು ಹೇಳಿವೆ. ಎಂಎಂಎಸ್ಸಿಎಂಡಿ ಎಂದರೆ ಮಿಲಿಯನ್ ಸ್ಟ್ಯಾಂಡರ್ಡ್ ಕ್ಯೂಬಿಕ್ ಮೀಟರ್ಸ್ ಪರ್ ಡೇ. ಅಂದರೆ ದಿನಕ್ಕೆ ಮಿಲಿಯನ್ ಸ್ಟ್ಯಾಂಡರ್ ಕ್ಯೂಬಿಕ್ ಮೀಟರ್ನ್ಸ್ನಷ್ಟು ಗ್ಯಾಸ್ ಪೂರೈಕೆ. ಕಿಲೋಗೆ ಪರಿವರ್ತಿಸುವುದಾದರೆ ಸುಮಾರು ದಿನಕ್ಕೆ 8.5 ಲಕ್ಷ ಕಿಲೋ ಗ್ಯಾಸ್ ಆಗುತ್ತದೆ.
ಇದನ್ನೂ ಓದಿ: ಬೇರೆಡೆಗೆ ಹೋಗುತ್ತಿದ್ದ ರಷ್ಯನ್ ತೈಲ ಟ್ಯಾಂಕರ್ಗಳು ಭಾರತದ ಕಡೆಗೆ; ಆಪತ್ಕಾಲದಲ್ಲಿ ಭಾರತಕ್ಕೆ ದಕ್ಕಿದ ನೆರವು
ಕಚ್ಚಾ ತೈಲ ಮತ್ತು ಅನಿಲಗಳನ್ನು ಖರೀದಿಸಲು ಭಾರತ ವಿಶ್ವದ ವಿವಿಧ ಏಜೆನ್ಸಿಗಳೊಂದಿಗೆ ಸಂಪರ್ಕದಲ್ಲಿದೆ. ಅಂತರರಾಷ್ಟ್ರೀಯ ಇಂಧನ ಸಂಸ್ಥೆಯಾದ ಐಇಎ ಮತ್ತು ಒಕೆಪ್ (ಒಪಿಇಸಿ) ಜೊತೆ ಮಾತುಕತೆ ನಡೆಸುತ್ತಿದೆ. ತೈಲ ಸಾಗಿಸುವ ಹಡಗುಗಳಿಗೆ ಇನ್ಷೂರೆನ್ಸ್ ಪಡೆಯಲು ಅಮೆರಿಕದೊಂದಿಗೂ ಭಾರತ ಮಾತುಕತೆ ನಡೆಸುತ್ತಿದೆ. ದಿನಕ್ಕೆ ಎರಡು ಬಾರಿ ಇಂಧನ ಪರಿಸ್ಥಿತಿಯನ್ನು ಅವಲೋಕಿಸಲಾಗುತ್ತಿದೆ ಎನ್ನಲಾಗಿದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ