ಭಾರತದಲ್ಲಿ ಒಬ್ಬ ವ್ಯಕ್ತಿ ತಿಂಗಳಿಗೆ ಎಷ್ಟು ಜಿಬಿ ಡಾಟಾ ಬಳಸುತ್ತಾನೆ? ಇಲ್ಲಿದೆ ಮಾಹಿತಿ

|

Updated on: Mar 21, 2025 | 5:20 PM

India's Soaring Data Consumption: ಭಾರತದಲ್ಲಿ 2024ರಲ್ಲಿ ಒಬ್ಬ ವ್ಯಕ್ತಿಯ ಸರಾಸರಿ ಡಾಟಾ ಬಳಕೆ ತಿಂಗಳಿಗೆ 27.5 ಜಿಬಿಯಷ್ಟಿದೆ ಎಂದು ನೊಕಿಯಾದ ವಾರ್ಷಕ ಮೊಬೈಲ್ ಬ್ರಾಡ್​​ಬ್ಯಾಂಡ್ ಇಂಡೆಕ್ಸ್ ವರದಿಯಲ್ಲಿ ಹೇಳಲಾಗಿದೆ. 5ಜಿ ಏರ್ ಫೈಬರ್ ಇತ್ಯಾದಿ ಎಫ್​​ಡಬ್ಲ್ಯುಎ ಸರ್ವಿಸ್​​ಗಳ ಬಳಕೆ ಹೆಚ್ಚುತ್ತಿರುವುದು ಮೊಬೈಲ್ ಡಾಟಾ ಕನ್ಸಮ್ಷನ್ ಅನ್ನು ಹೆಚ್ಚಿಸಿದೆ.

ಭಾರತದಲ್ಲಿ ಒಬ್ಬ ವ್ಯಕ್ತಿ ತಿಂಗಳಿಗೆ ಎಷ್ಟು ಜಿಬಿ ಡಾಟಾ ಬಳಸುತ್ತಾನೆ? ಇಲ್ಲಿದೆ ಮಾಹಿತಿ
ಮೊಬೈಲ್ ಡಾಟಾ ಬಳಕೆ
Follow us on

ನವದೆಹಲಿ, ಮಾರ್ಚ್ 21: ಭಾರತದಲ್ಲಿ ಮೊಬೈಲ್ ಬಳಕೆ ಹೆಚ್ಚಾದಂತೆ ಡಾಟಾ ಬಳಕೆಯೂ (Data consumption) ಗಣನೀಯವಾಗಿ ಏರುತ್ತಿದೆ. ವರದಿಯೊಂದರ ಪ್ರಕಾರ ಕಳೆದ ಐದು ವರ್ಷದಲ್ಲಿ ಭಾರತದಲ್ಲಿ ಡಾಟಾ ಬಳಕೆ ಪ್ರಮಾಣ ವಾರ್ಷಿಕ ಶೇ. 19.4ರ ವೇಗದಲ್ಲಿ ಹೆಚ್ಚುತ್ತಿದೆ. 2024ರಲ್ಲಿ ಒಬ್ಬ ವ್ಯಕ್ತಿಯ ಸರಾಸರಿ ಡಾಟಾ ಬಳಕೆ ತಿಂಗಳಿಗೆ 27.5 ಜಿಬಿಯಷ್ಟಿದೆ ಎಂದು ನೊಕಿಯಾ ಸಂಸ್ಥೆಯ ವಾರ್ಷಿಕ ಮೊಬೈಲ್ ಬ್ರಾಡ್​​ಬ್ಯಾಂಡ್ ಇಂಡೆಕ್ಸ್ ವರದಿಯಲ್ಲಿ ತಿಳಿಸಲಾಗಿದೆ. ಏರ್ ಫೈಬರ್ ಇತ್ಯಾದಿ 5ಜಿ ಫಿಕ್ಸೆಡ್ ವೈರ್ಲೆಸ್ ಅಕ್ಸೆಸ್ (FWA) ಸರ್ವಿಸ್​ಗಳ ಜನಪ್ರಿಯತೆಯು ಡಾಟಾ ಬಳಕೆಯನ್ನು ಹೆಚ್ಚಿಸಲು ಕಾರಣವಾಗಿದೆ.

ನೊಕಿಯಾದ ಎಂಬಿಟ್ ವರದಿ ಪ್ರಕಾರ, ಎಫ್​​ಡಬ್ಲ್ಯುಎ ಬಳಕೆದಾರರು ಇತರ ಸರಾಸರಿ ಮೊಬೈಲ್ ಬಳಕೆದಾರರಿಗಿಂತ 12 ಪಟ್ಟು ಹೆಚ್ಚು ಡಾಟಾ ಬಳಸುತ್ತಿದ್ದಾರಂತೆ. ಹೀಗಾಗಿ, ಭಾರತದಲ್ಲಿ ಸರಾಸರಿ ಡಾಟಾ ಬಳಕೆ ಗಣನೀಯವಾಗಿ ಹೆಚ್ಚಿದೆ.

ಇದನ್ನೂ ಓದಿ: ಬೆಂಜ್ ಹಾದಿ ತುಳಿದ ಟೊಯೋಟಾ; ಬೆಂಗಳೂರಿನಲ್ಲಿ ಅದರ ಮೊದಲ ಆರ್ ಅಂಡ್ ಡಿ ಸೆಂಟರ್

ಇದನ್ನೂ ಓದಿ
ಬೆಂಗಳೂರಿನಲ್ಲಿ ಟೊಯೋಟಾ ಆರ್ ಅಂಡ್ ಡಿ ಘಟಕ
ಭಾರತದಲ್ಲಿ ಬಿಲಿಯನ್ ಟನ್ ಕಲ್ಲಿದ್ದಲು ಉತ್ಪಾದನೆ ಮೈಲಿಗಲ್ಲು
ರುಪೇ ಸಬ್ಸಿಡಿ ಖತಂ; ಪೇಮೆಂಟ್ಸ್ ಉದ್ಯಮಕ್ಕೆ 600 ಕೋಟಿ ನಷ್ಟಭೀತಿ
ಕರ್ನಾಟಕದಲ್ಲಿ ಪೆಟ್ರೋಲ್​​ಗೆ ಕೇಂದ್ರ, ರಾಜ್ಯದ ತೆರಿಗೆಗಳೆಷ್ಟು?

ಹಾಗೆಯೇ, ಭಾರತದಲ್ಲಿ 5ಜಿ ಡಾಟಾ ಬಳಕೆಯೂ ಗಣನೀಯವಾಗಿ ಹೆಚ್ಚುತ್ತಿದೆ. ಈಗಲೂ ಭಾರತದಲ್ಲಿ 4ಜಿ ಡಾಟಾ ಹೆಚ್ಚಾಗಿ ಬಳಕೆಯಾಗುತ್ತಿದೆಯಾದರೂ, 2026ರ ಮೊದಲ ಕ್ವಾರ್ಟರ್​​ನೊಳಗೆ 4ಜಿಗಿಂತ 5ಜಿ ಡಾಟಾ ಬಳಕೆ ಹೆಚ್ಚಾಗುವ ನಿರೀಕ್ಷೆ ಇದೆ.

ಮೆಟ್ರೋ ಪ್ರದೇಶಗಳಳ್ಲಿ 4ಜಿ ಡಾಟಾ ಬಳಕೆ ಕಡಿಮೆ ಆಗುತ್ತಿದೆ. 2023ರಲ್ಲಿ 5ಜಿ ಡಾಟಾ ಬಳಕೆ ಇಲ್ಲಿ ಶೇ 20ರಷ್ಟಿತ್ತು. ಈಗ ಅದು ಶೇ. 43ಕ್ಕೆ ಏರಿದೆ. ಕೆಟಗರಿ ಬಿ ಮತ್ತು ಸಿ ಸರ್ಕಲ್​​​ಗಳಲ್ಲಿ 5ಜಿ ಡಾಟಾ ಬಳಕೆ ಶೇ. 3.4 ಮತ್ತು ಶೇ. 3.2ರ ವೇಗದಲ್ಲಿ ಹೆಚ್ಚುತ್ತಿದೆ ಎಂದು ಹೇಳಲಾಗುತ್ತಿದೆ.

ಇದನ್ನೂ ಓದಿ: ನೂರು ಕೋಟಿ ಟನ್ ಮೈಲಿಗಲ್ಲು ಮುಟ್ಟಿದ ಕಲ್ಲಿದ್ದಲು ಉತ್ಪಾದನೆ; ಚೀನಾ ನಂತರ ಭಾರತದಲ್ಲೇ ಹೆಚ್ಚು

5ಜಿ ಡಿವೈಸ್ ಇಕೋಸಿಸ್ಟಂ ಬೆಳವಣಿಗೆ

ಭಾರತದಲ್ಲಿ 5ಜಿ ಡಿವೈಸ್​​ಗಳ ಇಕೋಸಿಸ್ಟಂ ಕ್ಷಿಪ್ರವಾಗಿ ಬೆಳೆಯುತ್ತಿದೆ. ಅಂದರೆ 5ಜಿ ಎನೇಬಲ್ ಆಗಿರುವ ಸ್ಮಾರ್ಟ್​​ಫೋನ್​​ಗಳ ಸಂಖ್ಯೆ ಹೆಚ್ಚುತ್ತಿದೆ. 2024ರಲ್ಲಿ 27.1 ಕೋಟಿ 5ಜಿ ಡಿವೈಸ್​​ಗಳಿದ್ದವು. ಹಿಂದಿನ ವರ್ಷಕ್ಕೆ ಹೋಲಿಸಿದರೆ ಇವುಗಳ ಸಂಖ್ಯೆ ಎರಡು ಪಟ್ಟು ಹೆಚ್ಚಾಗಿದೆ. ಈ ವರ್ಷ, ಅಂದರೆ 2025ರಲ್ಲಿ ಬರಲಿರುವ ಶೇ. 90ರಷ್ಟು ಸ್ಮಾರ್ಟ್​​ಫೋನ್​​ಗಳು 5ಜಿಯದ್ದಾಗಿರಲಿವೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 5:19 pm, Fri, 21 March 25