AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕರ್ನಾಟಕದಲ್ಲಿ ಒಂದು ಲೀಟರ್ ಪೆಟ್ರೋಲ್​​ಗೆ ಕೇಂದ್ರ ಮತ್ತು ರಾಜ್ಯದ ತೆರಿಗೆ ಎಷ್ಟು? ತೆರಿಗೆ ಬಿಟ್ಟರೆ ಮೂಲ ಪೆಟ್ರೋಲ್ ಬೆಲೆ ಎಷ್ಟು? ಇಲ್ಲಿದೆ ಡೀಟೇಲ್ಸ್

Taxes on petrol in Karnataka: ಭಾರತದಲ್ಲಿ ಕೇಂದ್ರ ಸರ್ಕಾರದಿಂದ ಅಬಕಾರಿ ಶುಲ್ಕ ವಿಧಿಸಲಾಗುತ್ತದೆ. ಇದರ ಜೊತೆಗೆ ಪ್ರತೀ ರಾಜ್ಯಗಳಲ್ಲೂ ವ್ಯಾಟ್ ಅಥವಾ ಬೇರೆ ತೆರಿಗೆಗಳು ಜಾರಿಯಲ್ಲಿರುತ್ತವೆ. ದಕ್ಷಿಣ ರಾಜ್ಯಗಳು ಅತಿಹೆಚ್ಚು ತೆರಿಗೆ ವಿಧಿಸುತ್ತವೆ. ಕರ್ನಾಟಕವೂ ಕೂಡ ಹೆಚ್ಚು ತೆರಿಗೆ ವಿಧಿಸುವ ರಾಜ್ಯಗಳಲ್ಲಿ ಒಂದು. ತೆಲಂಗಾಣ ರಾಜ್ಯ ಅತಿಹೆಚ್ಚು ತೆರಿಗೆ ಹೇರುತ್ತದೆ. ಈಶಾನ್ಯ ರಾಜ್ಯಗಳಲ್ಲಿ ಕಡಿಮೆ ತೆರಿಗೆ ಇದೆ.

ಕರ್ನಾಟಕದಲ್ಲಿ ಒಂದು ಲೀಟರ್ ಪೆಟ್ರೋಲ್​​ಗೆ ಕೇಂದ್ರ ಮತ್ತು ರಾಜ್ಯದ ತೆರಿಗೆ ಎಷ್ಟು? ತೆರಿಗೆ ಬಿಟ್ಟರೆ ಮೂಲ ಪೆಟ್ರೋಲ್ ಬೆಲೆ ಎಷ್ಟು? ಇಲ್ಲಿದೆ ಡೀಟೇಲ್ಸ್
ಪೆಟ್ರೋಲ್
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Mar 20, 2025 | 4:47 PM

Share

Petrol and Diesel prices: ಪೆಟ್ರೋಲ್ ಮತ್ತು ಡೀಸಲ್ ಮೇಲೆ ಅತಿ ಹೆಚ್ಚು ತೆರಿಗೆಗಳನ್ನು (taxes on petrol) ಹಾಕಲಾಗುವ ದೇಶಗಳಲ್ಲಿ ಭಾರತ ಒಂದು. ಇಲ್ಲಿ ಕೇಂದ್ರದಿಂದ ಅಬಕಾರಿ ಸುಂಕಗಳು (Central Excise Tax) ಒಂದೆಡೆಯಾದರೆ, ರಾಜ್ಯ ಸರ್ಕಾರಗಳೂ ಕೂಡ ಪ್ರತ್ಯೇಕವಾಗಿ ವ್ಯಾಟ್ ಮತ್ತಿತರ ವಿವಿಧ ಟ್ಯಾಕ್ಸ್​​ಗಳನ್ನು ಹಾಕುತ್ತವೆ. ದಕ್ಷಿಣ ರಾಜ್ಯಗಳು ಅತಿಹೆಚ್ಚು ತೆರಿಗೆಗಳನ್ನು ಹಾಕುತ್ತವೆ. ಟಾಪ್-5 ಪಟ್ಟಿ ತೆಗೆದರೆ ಮಹಾರಾಷ್ಟ್ರ ಹೊರತುಪಡಿಸಿ ಉಳಿದ ರಾಜ್ಯಗಳೆಲ್ಲವೂ ದಕ್ಷಿಣದವೇ. ಇದರಲ್ಲಿ ಕರ್ನಾಟಕವೂ ಇದೆ. ಗುಜರಾತ್, ಗೋವಾ, ಹಾಗೂ ಈಶಾನ್ಯ ರಾಜ್ಯಗಳು ಪೆಟ್ರೋಲ್ ಮತ್ತು ಡೀಸಲ್ ಮೇಲೆ ಕಡಿಮೆ ಟ್ಯಾಕ್ಸ್ ಹೇರುತ್ತಿವೆ.

ಕೇಂದ್ರದಿಂದ 32.90 ರೂ ಅಬಕಾರಿ ಸುಂಕ

ಭಾರತದಲ್ಲಿ ಒಂದು ಲೀಟರ್ ಪೆಟ್ರೋಲ್ ಮೇಲೆ ಕೇಂದ್ರ ಸರ್ಕಾರ 32.90 ರೂನಷ್ಟು ಅಬಕಾರಿ ಸುಂಕ ವಿಧಿಸುತ್ತದೆ. ಡೀಸಲ್ ಮೇಲೆ 31.80 ರೂ ಟ್ಯಾಕ್ಸ್ ಹೇರುತ್ತದೆ.

ಇದಕ್ಕೆ ಹೆಚ್ಚುವರಿಯಾಗಿ ರಾಜ್ಯಗಳೂ ಕೂಡ ಪ್ರತ್ಯೇಕವಾದ ತೆರಿಗೆಗಳನ್ನು ವಿಧಿಸುತ್ತವೆ. ಇತ್ತೀಚಿನವರೆಗೂ ಕರ್ನಾಟಕ ಶೇ. 35ರಷ್ಟು ತೆರಿಗೆ ವಿಧಿಸುತ್ತಿತ್ತು. ನಂತರ ಶೇ. 25.92ಕ್ಕೆ ಟ್ಯಾಕ್ಸ್ ಇಳಿಸಿತ್ತು. ಕೆಲ ತಿಂಗಳ ಹಿಂದೆ ಅದನ್ನು 29.84ಕ್ಕೆ ಹೆಚ್ಚಿಸಿದೆ. ಪೆಟ್ರೋಲ್ ಮೇಲೆ ಅತಿಹೆಚ್ಚು ಟ್ಯಾಕ್ಸ್ ವಿಧಿಸುವ ರಾಜ್ಯಗಳ ಪಟ್ಟಿಯಲ್ಲಿ ಭಾರತ 5ನೇ ಸ್ಥಾನದಲ್ಲಿದೆ.

ಇದನ್ನೂ ಓದಿ
Image
ಕ್ರೆಡಿಟ್ ಸ್ಕೋರ್ ಹೊಸ ನಿಯಮಗಳ ಪ್ರಯೋಜನಗಳೇನು?
Image
ಫ್ಯಾಮಿಲಿ ಪೆನ್ಷನ್ ನೀತಿಯಲ್ಲಿ ಮಾರ್ಪಾಡು; ಮಹಿಳೆಯರಿಗೆ ವರದಾನ
Image
ಈ ವರ್ಷ 25 ಲಕ್ಷ ಕೋಟಿ ರೂ ದಾಟಿದ ಡೈರೆಕ್ಟ್ ಟ್ಯಾಕ್ಸ್ ಸಂಗ್ರಹ
Image
ಪೆಟ್ರೋಲ್ ಬಂಕ್​ನಲ್ಲಿ ಲಾಭವೆಷ್ಟು, ಬಿಸಿನೆಸ್ ಆರಂಭಿಸೋದು ಹೇಗೆ?

ಇದನ್ನೂ ಓದಿ: ಪೆಟ್ರೋಲ್ ಪಂಪ್ ಬಿಸಿನೆಸ್ ಹೊಂದಬೇಕಾ? ಆರಂಭಿಕ ಬಂಡವಾಳ, ಲೈಸೆನ್ಸ್, ಲಾಭ ಇತ್ಯಾದಿ ವಿವರ

ಎಸ್​​ಬಿಐ ವರದಿ ಪ್ರಕಾರ, ತೆಲಂಗಾಣ ರಾಜ್ಯ ಪೆಟ್ರೋಲ್ ಮೇಲೆ ಅತಿಹೆಚ್ಚು ತೆರಿಗೆ ವಿಧಿಸುತ್ತದೆ. ಇದು ಶೇ. 35.20ರಷ್ಟು ಟ್ಯಾಕ್ಸ್ ಹಾಕುತ್ತದೆ. ಕೇರಳ, ಆಂಧ್ರ, ಮಹಾರಾಷ್ಟ್ರ ಮತ್ತು ಕರ್ನಾಟಕ ರಾಜ್ಯಗಳು ನಂತರದ ಸ್ಥಾನದಲ್ಲಿವೆ. ಆದರೆ, ದಕ್ಷಿಣ ರಾಜ್ಯಗಳ ಪೈಕಿ ತಮಿಳುನಾಡು ತುಸು ಭಿನ್ನವಾಗಿ ತೆರಿಗೆ ವಿಧಿಸುತ್ತದೆ. ಇಲ್ಲಿ ಶೇ. 13ರಷ್ಟು ಮಾತ್ರವೇ ವ್ಯಾಟ್ ಇದೆಯಾದರೂ, ಒಂದು ಲೀಟರ್ ಪೆಟ್ರೋಲ್ ಮೇಲೆ ಹೆಚ್ಚುವರಿಯಾಗಿ 11.52 ರೂ ಸೆಸ್ ವಿಧಿಸುತ್ತದೆ.

ಕಡಿಮೆ ಟ್ಯಾಕ್ಸ್ ಹಾಕುವ ರಾಜ್ಯಗಳು

ಗುಜರಾತ್‌ನಲ್ಲಿ ಅತಿ ಕಡಿಮೆ ತೆರಿಗೆ ಇದ್ದು, ಅಲ್ಲಿ ಪೆಟ್ರೋಲ್ ಮೇಲೆ ಶೇ. 13.7 ರಷ್ಟು ವ್ಯಾಟ್ ಮತ್ತು ಡೀಸೆಲ್ ಮೇಲೆ ಶೇ. 13.9 ರಷ್ಟು ವ್ಯಾಟ್ ವಿಧಿಸಲಾಗುತ್ತದೆ. ಇದರ ನಂತರ ಗೋವಾ ಬರುತ್ತದೆ, ಅಲ್ಲಿ ಪೆಟ್ರೋಲ್ ಮೇಲೆ 21.5 ಪ್ರತಿಶತ ವ್ಯಾಟ್ ಜೊತೆಗೆ, 0.5 ಪ್ರತಿಶತ ಗ್ರೀನ್ ಸೆಸ್ ವಿಧಿಸಲಾಗುತ್ತದೆ ಮತ್ತು ಡೀಸೆಲ್ ಮೇಲೆ 17.5 ಪ್ರತಿಶತ ತೆರಿಗೆಯ ಜೊತೆಗೆ, 0.5 ಪ್ರತಿಶತ ಹಸಿರು ಸೆಸ್ ವಿಧಿಸಲಾಗುತ್ತದೆ.

ಪೆಟ್ರೋಲ್ ಮೇಲೆ ಅತಿ ಹೆಚ್ಚು ತೆರಿಗೆ ವಿಧಿಸುವ ರಾಜ್ಯಗಳು

  1. ತೆಲಂಗಾಣ: ಶೇ. 35.20 ವ್ಯಾಟ್
  2. ಕೇರಳ: ಶೇ. 30.08 ಸೇಲ್ಸ್ ಟ್ಯಾಕ್ಸ್, ಶೇ. 1 ಸೆಸ್, ಲೀಟರ್​​ಗೆ 1 ರೂ ಹೆಚ್ಚುವರಿ ಸೇಲ್ಸ್ ಟ್ಯಾಕ್ಸ್, 2 ರೂ ಸೋಷಿಯಲ್ ಸೆಕ್ಯೂರಿಟಿ ಸೆಸ್
  3. ಆಂಧ್ರಪ್ರದೇಶ: ಶೇ. 31 ವ್ಯಾಟ್ + ಲೀಟರ್​ಗೆ 4 ರೂ ವ್ಯಾಟ್ + 1 ರೂ ರೋಡ್ ಡೆವಲಪ್ಮೆಂಟ್ ಸೆಸ್
  4. ಮಹಾರಾಷ್ಟ್ರ: ಶೇ. 25 ವ್ಯಾಟ್ + ಲೀಟರ್​​ಗೆ 5.12 ರೂ ಹೆಚ್ಚುವರಿ ತೆರಿಗೆ
  5. ಕರ್ನಾಟಕ: ಶೇ. 29.84 ಸೇಲ್ಸ್ ಟ್ಯಾಕ್ಸ್

ಕರ್ನಾಟಕದಲ್ಲಿ ತೆರಿಗೆಗಳನ್ನು ಕಳೆದರೆ ಪೆಟ್ರೋಲ್ ಬೆಲೆ ಎಷ್ಟು?

ಕರ್ನಾಟಕದಲ್ಲಿ ಇವತ್ತಿನ ಪೆಟ್ರೋಲ್ ಬೆಲೆ ಒಂದು ಲೀಟರ್​​ಗೆ 102.86 ರೂ ಇದೆ. ಇದರಲ್ಲಿ ಕೇಂದ್ರ ಅಬಕಾರಿ ಸುಂಕ 32.90 ರೂ ಇದೆ. ಹಾಗೆಯೇ, ಡೀಲರ್ ಕಮಿಷನ್ 3-4 ರೂ ಇದೆ. ರಾಜ್ಯ ಸರ್ಕಾರ ಶೇ. 29.84ರಷ್ಟು ವ್ಯಾಟ್ ಹಾಕುತ್ತದೆ.

ಇದನ್ನೂ ಓದಿ: ಫ್ಯಾಮಿಲಿ ಪೆನ್ಷನ್ ನೀತಿಯಲ್ಲಿ ಸುಧಾರಣೆ; ವಿಚ್ಛೇದಿತೆಯರು, ವಿಧವೆಯರು, ಉದ್ಯೋಗಸ್ಥ ಮಹಿಳೆಯರಿಗೆ ಅನುಕೂಲ

ಮೂಲ ಪೆಟ್ರೋಲ್ ಬೆಲೆ, ಅಬಕಾರಿ ಸುಂಕ ಹಾಗೂ ಡೀಲರ್ ಕಮಿಷನ್ ಸೇರಿ ಆಗುವ ಮೊತ್ತಕ್ಕೆ ರಾಜ್ಯ ಸರ್ಕಾರ ವ್ಯಾಟ್ ಹಾಕುತ್ತದೆ. ಇಲ್ಲಿ ಮೂಲ ಪೆಟ್ರೋಲ್ ಬೆಲೆ ಎಷ್ಟೆಂಬ ಮಾಹಿತಿ ಸಾರ್ವಜನಿಕವಾಗಿ ಲಭ್ಯ ಇಲ್ಲ. ಒಂದು ಅಂದಾಜು ಪ್ರಕಾರ 40-41 ರೂನಷ್ಟು ಇರಬಹುದು.

ಪೆಟ್ರೋಲ್​​ನ ರೀಟೇಲ್ ಬೆಲೆ ಒಂದು ಲೀಟರ್​​ಗೆ 102.86 ರೂ

  • ಕೇಂದ್ರ ಅಬಕಾರಿ ಸುಂಕ: 32.90 ರೂ
  • ಡೀಲರ್ ಕಮಿಷನ್: 3.50 ರೂ
  • ಕರ್ನಾಟಕ ವ್ಯಾಟ್: 25-26 ರೂ (ಶೇ. 29.84)

ಪೆಟ್ರೋಲ್​​ನ ಮೂಲ ಬೆಲೆ ಅಂದಾಜು 40-41 ರೂ ಇರಬಹುದು.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ