Mobile Phone Exports: ಭಾರತದ ಮೊಬೈಲ್ ಫೋನ್ ರಫ್ತು ದುಪ್ಪಟ್ಟು; ಬರೋಬ್ಬರಿ 5,00 ಕೋಟಿ ಡಾಲರ್ ಆದಾಯ

ಈಗಿನ ವೇಗದಲ್ಲೇ ಮೊಬೈಲ್ ಫೋನ್ ರಫ್ತು ಮುಂದುವರಿದರೆ 23ನೇ ಹಣಕಾಸು ವರ್ಷದ ಅಂತ್ಯದ ವೇಳೆಗೆ 8.5 ರಿಂದ 9 ಶತಕೋಟಿ ಡಾಲರ್ ಮೌಲ್ಯದ ಫೋನ್​ಗಳು ರಫ್ತಾಗುವ ನಿರೀಕ್ಷೆ ಇದೆ.

Mobile Phone Exports: ಭಾರತದ ಮೊಬೈಲ್ ಫೋನ್ ರಫ್ತು ದುಪ್ಪಟ್ಟು; ಬರೋಬ್ಬರಿ 5,00 ಕೋಟಿ ಡಾಲರ್ ಆದಾಯ
ಸಾಂದರ್ಭಿಕ ಚಿತ್ರ
Follow us
TV9 Web
| Updated By: Ganapathi Sharma

Updated on: Nov 30, 2022 | 12:43 PM

ನವದೆಹಲಿ: ದೇಶದ ಮೊಬೈಲ್ ಫೋನ್ ರಫ್ತು (Mobile phone exports) ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ದುಪ್ಪಟ್ಟಾಗಿದೆ. ಏಪ್ರಿಲ್-ಅಕ್ಟೋಬರ್ ಅವಧಿಯಲ್ಲಿ 500 ಕೋಟಿ ಡಾಲರ್ ಮೌಲ್ಯದ ಮೊಬೈಲ್ ಫೋನ್ ರಫ್ತು ಮಾಡಲಾಗಿದೆ. ಇದೇ ಅವಧಿಯಲ್ಲಿ ಕಳೆದ ವರ್ಷ 220 ಕೋಟಿ ಡಾಲರ್ ಮೌಲ್ಯದ ಮೊಬೈಲ್​ ಫೋನ್ ರಫ್ತು ಮಾಡಲಾಗಿತ್ತು. ಆ್ಯಪಲ್, ಸ್ಯಾಮ್ಸಂಗ್​ನಂಥ ಕಂಪನಿಗಳು ತಯಾರಿಸಿದ ಮೊಬೈಲ್​ ಫೋನ್​ಗಳು ರಫ್ತಿನಲ್ಲಿ ಮುಂಚೂಣಿಯಲ್ಲಿವೆ ಎಂದು ಕೈಗಾರಿಕಾ ಇಲಾಖೆಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಈಗಿನ ವೇಗದಲ್ಲೇ ಮೊಬೈಲ್ ಫೋನ್ ರಫ್ತು ಮುಂದುವರಿದರೆ 23ನೇ ಹಣಕಾಸು ವರ್ಷದ ಅಂತ್ಯದ ವೇಳೆಗೆ 8.5 ರಿಂದ 9 ಶತಕೋಟಿ ಡಾಲರ್ ಮೌಲ್ಯದ ಫೋನ್​ಗಳು ರಫ್ತಾಗುವ ನಿರೀಕ್ಷೆ ಇದೆ. 22ನೇ ಹಣಕಾಸು ವರ್ಷದಲ್ಲಿ ಒಟ್ಟಾರೆಯಾಗಿ 580 ಕೋಟಿ ಡಾಲರ್ ಮೌಲ್ಯದ ಮೊಬೈಲ್ ಫೋನ್ ರಫ್ತು ಮಾಡಲಾಗಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇದನ್ನೂ ಓದಿ: Tata Group: ಭಾರತದಲ್ಲಿ ಐಫೋನ್ ತಯಾರಿಸುವ ವಿಸ್ಟ್ರಾನ್ ಬೆಂಗಳೂರು ಘಟಕ ಖರೀದಿಗೆ ಟಾಟಾ ಒಲವು

‘ಉತ್ಪಾದನೆ ಸಂಯೋಜಿತ ಭತ್ಯೆ (PLI)’ ಯೋಜನೆ ಅಡಿಯಲ್ಲಿ ಭಾರತದ ಮೊಬೈಲ್ ಫೋನ್ ರಫ್ತಿಗೆ ಆ್ಯಪಲ್ ಮತ್ತು ಸ್ಯಾಮ್ಸಂಗ್ ಶೇಕಡಾ 90ರಷ್ಟು ಕೊಡುಗೆ ನೀಡುತ್ತಿವೆ. ರಫ್ತು ಹಚ್ಚಿರುವುದಲ್ಲದೆ 22ನೇ ಹಣಕಾಸು ವರ್ಷದಲ್ಲಿ ದೇಶದ ಮೊಬೈಲ್ ಫೋನ್ ಆಮದು ಅವಲಂಬನೆ ಶೇಕಡಾ 5ರಷ್ಟು ಇಳಿಕೆಯಾಗಿದೆ ಎಂದು ಕೈಗಾರಿಕಾ ಮಂಡಳಿ ‘ಇಂಡಿಯಾ ಸೆಲ್ಯುಲರ್ ಆ್ಯಂಡ್ ಎಲೆಕ್ಟ್ರಾನಿಕ್ಸ್’ ತಿಳಿಸಿದೆ. 2014-15ರಲ್ಲಿ ಮೊಬೈಲ್ ಫೋನ್ ಆಮದು ಪ್ರಮಾಣ ಶೇಕಡಾ 78ರಷ್ಟಿತ್ತು. 2025-26ರ ವೇಳೆಗೆ ಮೊಬೈಲ್ ಫೋನ್ ರಫ್ತನ್ನು 60 ಶತಕೋಟಿ ಡಾಲರ್​ಗೆ ವಿಸ್ತರಿಸುವ ಗುರಿಯನ್ನು ಭಾರತ ಹೊಂದಿದೆ. ‘ಉತ್ಪಾದನೆ ಸಂಯೋಜಿತ ಭತ್ಯೆ’ ಯೋಜನೆ ಆ್ಯಪಲ್​ನಂಥ ಮೊಬೈಲ್ ಫೋನ್ ತಯಾರಿಕಾ ಕಂಪನಿಗಳನ್ನು ಭಾರತದಲ್ಲಿ ಕಾರ್ಯಾಚರಣೆ ವಿಸ್ತರಣೆ ಮಾಡುವತ್ತ ಆಕರ್ಷಿಸಿದೆ ಎನ್ನಲಾಗಿದೆ.

ಪ್ರಧಾನಿ ಮೋದಿ ಸಂತಸ

ದೇಶದ ಮೊಬೈಲ್ ಫೋನ್ ರಫ್ತು ಗಣನೀಯವಾಗಿ ಹೆಚ್ಚಳಗೊಂಡಿರುವುದಕ್ಕೆ ಪ್ರಧಾನಿ ನರೇಂದ್ರ ಮೋದಿ ಸಂಸತಸ ವ್ಯಕ್ತಪಡಿಸಿದ್ದಾರೆ. ಮೊಬೈಲ್ ಫೋನ್ ರಫ್ತು ಹೆಚ್ಚಳದೊಂದಿಗೆ ಭಾರತವು ಉತ್ಪಾದನಾ ಜಗತ್ತಿನಲ್ಲಿ ದಾಪುಗಾಲಿಡುತ್ತಾ ಮುಂದುವರಿಯುತ್ತಿದೆ ಎಂದು ಅವರು ಬಣ್ಣಿಸಿದ್ದಾರೆ. ಮೊಬೈಲ್ ರಫ್ತು ಹೆಚ್ಚಳದ ಬಗ್ಗೆ ಮಾಹಿತಿ ತಂತ್ರಜ್ಞಾನ ಮತ್ತು ಎಲೆಕ್ಟ್ರಾನಿಕ್ಸ್ ಇಲಾಖೆಯ ರಾಜ್ಯ ಖಾತೆ ಸಚಿವ ರಾಜೀವ್ ಚಂದ್ರಶೇಖರ್ ಟ್ವೀಟ್ ಮಾಡಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ ಮೋದಿ, ಉತ್ಪಾದನಾ ಕ್ಷೇತ್ರದಲ್ಲಿ ದೇಶವು ಸ್ಥಿರವಾದ ಪ್ರಗತಿಯನ್ನು ಸಾಧಿಸುತ್ತಿದೆ ಎಂದು ಉಲ್ಲೇಖಿಸಿದ್ದಾರೆ.

ಇನ್ನಷ್ಟು ವಾಣಿಜ್ಯ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ