AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಗ್ರಾಮೀಣ ಭಾಗದ ಬಡತನ 12 ವರ್ಷದಲ್ಲಿ ಶೇ. 24.8ರಿಂದ ಶೇ. 8.6ಕ್ಕೆ ಇಳಿಕೆ: ಸಮೀಕ್ಷೆ ವರದಿ

India's poverty rate estimates: 2011-12ರಲ್ಲಿ ಭಾರತದಲ್ಲಿ ಶೇ. 21ರಷ್ಟಿದ್ದ ಬಡತನ ಇದೀಗ ಶೇ. 8.5ಕ್ಕೆ ಇಳಿದಿರಬಹುದು ಎಂದು ಎನ್​ಸಿಎಇಆರ್​ನ ಸಮೀಕ್ಷಾ ವರದಿ ಹೇಳಿದೆ. ಶೇ. 24.8ರಷ್ಟಿದ್ದ ಗ್ರಾಮೀಣ ಭಾಗದ ಬಡತನ ಶೇ. 8.7ಕ್ಕೆ ಇಳಿಕೆ ಆಗಿರುವ ಸಾಧ್ಯತೆ ಇದೆ. ನಗರ ಭಾಗದಲ್ಲಿ ಬಡತನ ಶೇ. 13.4ರಿಂದ ಶೇ. 8.4ಕ್ಕೆ ಇಳಿದಿರಬಹುದು ಎಂದು ಸಮೀಕ್ಷೆಯು ಹೇಳುತ್ತಿದೆ.

ಗ್ರಾಮೀಣ ಭಾಗದ ಬಡತನ 12 ವರ್ಷದಲ್ಲಿ ಶೇ. 24.8ರಿಂದ ಶೇ. 8.6ಕ್ಕೆ ಇಳಿಕೆ: ಸಮೀಕ್ಷೆ ವರದಿ
ಬಡತನ
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Jul 03, 2024 | 1:47 PM

Share

ನವದೆಹಲಿ, ಜುಲೈ 3: ಭಾರತದಲ್ಲಿ ಬಡತನ ನಿವಾರಣೆ ಕಾರ್ಯ ವೇಗವಾಗಿ ಸಾಗುತ್ತಿದೆ ಎನ್ನುವ ವಾದಕ್ಕೆ ಇಂಬುಕೊಡುವಂತೆ ಹೊಸ ಸಮೀಕ್ಷೆಯ ಪ್ರಕಾರ ಕಳೆದ 12 ವರ್ಷದಲ್ಲಿ ಗಣನೀಯವಾಗಿ ಇಳಿಕೆ ಆಗಿದೆ. ನ್ಯಾಷನಲ್ ಕೌನ್ಸಿಲ್ ಆಫ್ ಅಪ್ಲೈಡ್ ರಿಸರ್ಚ್ (NCAER) ಸಂಸ್ಥೆಯ ಆರ್ಥಿಕ ತಜ್ಞರ ತಂಡವೊಂದು ಈ ಸಮೀಕ್ಷೆ ನಡೆಸಿದ್ದು ಅವರ ಪ್ರಕಾರ 2011-12ರಲ್ಲಿ ಬಡತನ ದರ ಶೇ. 21ರಷ್ಟಿತ್ತು. ಇದೀಗ ಅದು ಶೇ. 8.5ಕ್ಕೆ ಇಳಿದಿದೆ ಎನ್ನಲಾಗಿದೆ. ಟೈಮ್ಸ್ ಆಫ್ ಇಂಡಿಯಾದಲ್ಲಿ ಪ್ರಕಟವಾಗಿರುವ ಈ ಸಮೀಕ್ಷಾ ವರದಿ ಪ್ರಕಾರ ಗ್ರಾಮೀಣ ಭಾಗದಲ್ಲಿ ಬಡತನ ಹೆಚ್ಚು ಪ್ರಮಾಣದಲ್ಲಿ ತಗ್ಗಿದೆ. ಈ ವಿಚಾರದಲ್ಲಿ ನಗರವಾಸಿಗಳ ಸಮಕ್ಕೆ ಗ್ರಾಮೀಣ ಭಾಗದವರು ಇದ್ದಾರೆ.

2011-12ರಲ್ಲಿ ಗ್ರಾಮೀಣ ಭಾಗದಲ್ಲಿ ಬಡತನ ದರ ಬರೋಬ್ಬರಿ ಶೇ. 24.8ರಷ್ಟಿತ್ತು. ಈಗ ಅದು ಶೇ. 8.6ಕ್ಕೆ ಇಳಿದಿದೆ. ಇನ್ನು, ನಗರಭಾಗದಲ್ಲಿ ಬಡತನ ಪ್ರಮಾಣ ಆಗ ಶೇ. 13.4ರಷ್ಟಿತ್ತು. ಈಗ ಅದು ಶೇ. 8.4ಕ್ಕೆ ಇಳಿದಿದೆ ಎಂದು ಎನ್​ಸಿಎಇಆರ್​ನ ಈ ಸಮೀಕ್ಷೆಯು ಪತ್ತೆ ಮಾಡಿದೆ.

ಇದನ್ನೂ ಓದಿ: ವಿಯೆಟ್ನಾಂ, ಚೀನಾ ರೀತಿ ಆಮದು ಸುಂಕ ಇಳಿಯಲಿ: ಬಜೆಟ್​ನಿಂದ ಎಲೆಕ್ಟ್ರಾನಿಕ್ ಉದ್ಯಮದ ನಿರೀಕ್ಷೆಗಳಿವು…

ಬಡತನ ಈಗ ಎಷ್ಟಿದೆ ಎಂದು ಸರ್ಕಾರ ಇನ್ನೂ ಅಧಿಕೃತವಾಗಿ ಬಿಡುಗಡೆ ಮಾಡಿಲ್ಲ. ಬೇರೆ ಬೇರೆ ಸ್ತರಗಳಲ್ಲಿ ಕೆಲವರು ಬಡತನ ಇಳಿಕೆಯ ಅಂದಾಜು ಮಾಡಿರುವುದುಂಟು. ಎಸ್​ಬಿಐ ರಿಸರ್ಚ್ ಸಂಸ್ಥೆಯ ಆರ್ಥಿಕ ತಜ್ಞರು ಮಾಡಿದ ಅಂದಾಜು ಪ್ರಕಾರ ಗ್ರಾಮೀಣ ಭಾಗದಲ್ಲಿ ಬಡತನ ಶೇ. 7.2ರಷ್ಟಿರಬಹುದು. ನಗರದಲ್ಲಿ ಇದು ಶೇ. 4.6ರಷ್ಟಿರಬಹುದು. ಆದರೆ, ಎನ್​ಸಿಎಇಆರ್ ಸಮೀಕ್ಷೆಯು ನಗರ ಪ್ರದೇಶಗಳಲ್ಲಿ ಬಡತನ ಹೆಚ್ಚಿನ ಮಟ್ಟದಲ್ಲಿ ಇಳಿಕೆ ಆಗಿಲ್ಲದೇ ಇರುವುದನ್ನು ಸೂಚಿಸುತ್ತಿದೆ.

ಆರ್​ಬಿಐನ ಮಾಜಿ ಗವರ್ನರ್ ಸಿ ರಂಗರಾಜನ್ ಮತ್ತು ಆರ್ಥಿಕ ತಜ್ಞ ಎಸ್ ಮಹೇಂದ್ರ ದೇವ್ ಅವರು ಭಾರತದಲ್ಲಿ ಒಟ್ಟಾರೆ ಬಡತನ ದರ ಶೇ. 10.8ರಷ್ಟಿರಬಹುದು. ಈ ಅಂದಾಜಿಗಿಂತ ಎನ್​ಸಿಎಇಆರ್ ಅಂದಾಜು ಹೆಚ್ಚು ಉದಾರವಾಗಿದೆ.

ಇದನ್ನೂ ಓದಿ: ಜಾಮ್​ನಗರದ ಚಿತ್ರಣವನ್ನೇ ಬದಲಾಯಿಸಿಬಿಟ್ಟ ಅಂಬಾನಿ ಮಗನ ಪ್ರೀವೆಡ್ಡಿಂಗ್ ಕಾರ್ಯಕ್ರಮಗಳು

2022ರ ಆಗಸ್ಟ್​ನಿಂದ 2023ರ ಜುಲೈವರೆಗಿನ ಅವಧಿಯಲ್ಲಿ ನಡೆಸಲಾದ ಗೃಹ ಬಳಕೆ ವೆಚ್ಚ ಸಮೀಕ್ಷೆಯ ಅಂಶಗಳನ್ನು ಆಧರಿಸಿ ಬಡತನ ಪ್ರಮಾಣವನ್ನು ಅಂದಾಜು ಮಾಡಲಾಗಿದೆ. ಇದೇ ಸಮೀಕ್ಷೆಯ ಅಂಶಗಳನ್ನು ಆಧರಿಸಿಕೊಂಡೇ ಸರ್ಕಾರವೂ ಬಡತನ ನಿರ್ಮೂಲನೆಗೆ ನಿರ್ದಿಷ್ಟ ಯೋಜನೆಗಳನ್ನು ರೂಪಿಸುವ ಕೆಲಸ ಮಾಡುತ್ತದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Follow Us
ಬಿಸಿಲಿಗೆ ತತ್ತರ: ಹೆಲ್ಮೆಟ್ ಬದಲು ಸೊಪ್ಪು ಕಟ್ಟಿಕೊಂಡು ಬೈಕ್ ಚಾಲನೆ
ಬಿಸಿಲಿಗೆ ತತ್ತರ: ಹೆಲ್ಮೆಟ್ ಬದಲು ಸೊಪ್ಪು ಕಟ್ಟಿಕೊಂಡು ಬೈಕ್ ಚಾಲನೆ
ವಾರದಲ್ಲಿ ಎರಡನೇ ಭಾರಿ ದರ್ಶನ್ ಭೇಟಿಗೆ ಜೈಲಿಗೆ ಬಂದ ವಿಜಯಲಕ್ಷ್ಮಿ
ವಾರದಲ್ಲಿ ಎರಡನೇ ಭಾರಿ ದರ್ಶನ್ ಭೇಟಿಗೆ ಜೈಲಿಗೆ ಬಂದ ವಿಜಯಲಕ್ಷ್ಮಿ
ಹುಬ್ಬಳ್ಳಿ ಭೀಕರ ಅಪಘಾತ: ಕಾರಿನ ಇಂಜಿನ್ ಒಳಗೆ ಸಿಲುಕಿದ ವ್ಯಕ್ತಿಯ ರುಂಡ
ಹುಬ್ಬಳ್ಳಿ ಭೀಕರ ಅಪಘಾತ: ಕಾರಿನ ಇಂಜಿನ್ ಒಳಗೆ ಸಿಲುಕಿದ ವ್ಯಕ್ತಿಯ ರುಂಡ
ಪ್ರಿಯಕರನನ್ನೇ ಕೊಂದ ಪ್ರಿಯತಮೆ : ಕೊಲೆಯಾದ ಕಿರಣ್ ತಂದೆಯ ಕಣ್ಣೀರ ಮಾತು
ಪ್ರಿಯಕರನನ್ನೇ ಕೊಂದ ಪ್ರಿಯತಮೆ : ಕೊಲೆಯಾದ ಕಿರಣ್ ತಂದೆಯ ಕಣ್ಣೀರ ಮಾತು
ಕುಟುಂಬದ ಆರೋಪಕ್ಕೆ ವೈದ್ಯಕೀಯ ಅಧೀಕ್ಷರು ಹೇಳಿದ್ದೇನು?
ಕುಟುಂಬದ ಆರೋಪಕ್ಕೆ ವೈದ್ಯಕೀಯ ಅಧೀಕ್ಷರು ಹೇಳಿದ್ದೇನು?
RCB ವಿರುದ್ಧ ಹೀರೋ SRH ವಿರುದ್ಧ ಝೀರೋ!
RCB ವಿರುದ್ಧ ಹೀರೋ SRH ವಿರುದ್ಧ ಝೀರೋ!
ಮೋದಿ ಬಗ್ಗೆ ಮಾತಾಡಿದ್ದ ಖರ್ಗೆಗೆ ಟಾಂಗ್​​ ಕೊಟ್ಟ ಉಪರಾಷ್ಟ್ರಪತಿ
ಮೋದಿ ಬಗ್ಗೆ ಮಾತಾಡಿದ್ದ ಖರ್ಗೆಗೆ ಟಾಂಗ್​​ ಕೊಟ್ಟ ಉಪರಾಷ್ಟ್ರಪತಿ
ಹೆಂಡ್ತಿ ರೆಡ್​ ಹ್ಯಾಂಡ್ ಸಿಕ್ಕಿಬಿದ್ದಾಗ ಬುದ್ದಿ ಹೇಳಿದ್ದೆ: ಪತಿ ಕಣ್ಣೀರು!
ಹೆಂಡ್ತಿ ರೆಡ್​ ಹ್ಯಾಂಡ್ ಸಿಕ್ಕಿಬಿದ್ದಾಗ ಬುದ್ದಿ ಹೇಳಿದ್ದೆ: ಪತಿ ಕಣ್ಣೀರು!
ಮಾಳು ಊರಲ್ಲಿ ಬೈಕ್​ ಅಲ್ಲಿ ಲಾಂಗ್ ಡ್ರೈವ್ ಹೋದ ರಕ್ಷಿತಾ ಶೆಟ್ಟಿ
ಮಾಳು ಊರಲ್ಲಿ ಬೈಕ್​ ಅಲ್ಲಿ ಲಾಂಗ್ ಡ್ರೈವ್ ಹೋದ ರಕ್ಷಿತಾ ಶೆಟ್ಟಿ
ಜೀವಜಲಕ್ಕಾಗಿ 2 ಕಿ.ಮೀ ನಡೆದುಕೊಂಡು ಹೋಗ್ಬೇಕು! ನರಲಗುಡ್ಡ ನಿವಾಸಿಗಳ ಪರದಾಟ!
ಜೀವಜಲಕ್ಕಾಗಿ 2 ಕಿ.ಮೀ ನಡೆದುಕೊಂಡು ಹೋಗ್ಬೇಕು! ನರಲಗುಡ್ಡ ನಿವಾಸಿಗಳ ಪರದಾಟ!