ನವದೆಹಲಿ, ಜನವರಿ 3: ಈ ಹಣಕಾಸು ವರ್ಷದ ಎರಡನೇ ಕ್ವಾರ್ಟರ್ನಲ್ಲಿ (24FYQ2) ಭಾರತದ ಜಿಡಿಪಿ ನಿರೀಕ್ಷೆಮೀರಿ ಹೆಚ್ಚಾದ ಬಳಿಕ ಬಹಳಷ್ಟು ರೇಟಿಂಗ್ಸ್ ಸಂಸ್ಥೆಗಳು ತಮ್ಮ ಅಂದಾಜನ್ನು ಬದಲಿಸಿಕೊಳ್ಳುತ್ತಿವೆ. ಈ ಸಾಲಿಗೆ ಇಂಡಿಯಾ ರೇಟಿಂಗ್ಸ್ ಅಂಡ್ ರಿಸರ್ಚ್ (India Ratings and Research) ಸೇರಿದೆ. 2023-24ರ ಹಣಕಾಸು ವರ್ಷಕ್ಕೆ ಭಾರತದ ಆರ್ಥಿಕತೆ ಶೇ. 6.2ರಷ್ಟು ಬೆಳೆಯಬಹುದು ಎಂದು ಈ ಹಿಂದೆ ಅಂದಾಜು ಮಾಡಿದ್ದ ಇಂಡಿಯಾ ರೇಟಿಂಗ್ಸ್, ಇದೀಗ ಆ ದರವನ್ನು ಶೇ. 6.7ಕ್ಕೆ ಹೆಚ್ಚಿಸಿದೆ. ಸರ್ಕಾರದಿಂದ ಆಗುತ್ತಿರುವ ಬಂಡವಾಳ ವೆಚ್ಚ, ಸಾಫ್ಟ್ವೇರ್ ರಫ್ತಿನಲ್ಲಿ ಹೆಚ್ಚಳ ಇತ್ಯಾದಿ ಅಂಶಗಳು ಭಾರತದ ಆರ್ಥಿಕ ಬೆಳವಣಿಗೆಗೆ ಸಹಾಯಕವಾಗುತ್ತವೆ ಎಂಬುದು ಸಂಸ್ಥೆಯ ಅನಿಸಿಕೆ.
ಇಂಡಿಯಾ ರೇಟಿಂಗ್ಸ್ ಅಂಡ್ ರಿಸರ್ಚ್ ಸಂಸ್ಥೆ ಭಾರತದ ಜಿಡಿಪಿ ವೃದ್ಧಿ ಬಗ್ಗೆ ತಮಗೆ ಹೆಚ್ಚು ನಿರೀಕ್ಷೆ ಬರಲು ಹಲವು ಅಂಶಗಳು ಕಣ್ಮುಂದಿವೆ ಎಂದು ಹೇಳಿದ್ದು, ಅದರಲ್ಲಿ ಈ ಐದು ಅಂಶಗಳನ್ನು ಉಲ್ಲೇಖಿಸಿದೆ:
ಇದನ್ನೂ ಓದಿ: Gold: ಕಳೆದ ಎರಡು ವರ್ಷ ಶೇ. 14ಕ್ಕಿಂತಲೂ ಹೆಚ್ಚು ದರದಲ್ಲಿ ಬೆಳೆದಿರುವ ಚಿನ್ನದ ಬೆಲೆ ಈ ವರ್ಷ ಎಷ್ಟಾಗಬಹುದು?
ಇಂಡಿಯಾ ರೇಟಿಂಗ್ಸ್ ಸಂಸ್ಥೆ ಭಾರತದ ಆರ್ಥಿಕತೆ ಬಗ್ಗೆ ಸಕಾರಾತ್ಮಕ ಅಂಶಗಳ ಜೊತೆಗೆ ಎದುರಾಗಬಹುದಾದ ಸವಾಲುಗಳ ಬಗ್ಗೆಯೂ ಬೆಳಕು ಚೆಲ್ಲಿದೆ. ಅದರಲ್ಲಿ ಪ್ರಮುಖವಾದುದು ಜಾಗತಿಕ ಆರ್ಥಿಕ ಹಿನ್ನಡೆಯ ಸಾಧ್ಯತೆ. 2023ರಲ್ಲಿ ಜಾಗತಿಕ ಸರಕು ವ್ಯಾಪಾರ ಪ್ರಮಾಣ ಶೇ. 1.7ರಷ್ಟು ಹೆಚ್ಚುವ ನಿರೀಕ್ಷೆ ಇತ್ತು. ಅದು ಶೇ. 0.8ರಷ್ಟು ಮಾತ್ರ ಹೆಚ್ಚುವ ಸಾಧ್ಯತೆ ಇದೆ. ಈ ಅಂಶವು ಭಾರತದ ಬೆಳವಣಿಗೆಯ ಮೇಲೆ ಪರಿಣಾಮ ಬೀರಬಹುದು ಎಂಬುದು ಇಂಡಿಯಾ ರೇಟಿಂಗ್ಸ್ ಅಂಡ್ ರಿಸರ್ಚ್ನ ಕಳವಳ.
ಮೊದಲೆರಡು ಕ್ವಾರ್ಟರ್ನಲ್ಲಿ ಶೇ. 7ಕ್ಕಿಂತಲೂ ಹೆಚ್ಚು ಬೆಳೆದಿರುವ ಭಾರತದ ಆರ್ಥಿಕತೆ ಕೊನೆಯ ಎರಡು ಕ್ವಾರ್ಟರ್ನಲ್ಲಿ ಶೇ. 6ಕ್ಕಿಂತಲೂ ಕಡಿಮೆ ದರದಲ್ಲಿ ಬೆಳೆಯುವ ಸಾಧ್ಯತೆ ಇದೆ. ಆರ್ಬಿಐ ಕೂಡ ಈ ಇಳಿಮುಖವನ್ನು ತನ್ನ ಅಂದಾಜಿನಲ್ಲಿ ವ್ಯಕ್ತಪಡಿಸಿದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ