ಭಾರತದ ಹಣದುಬ್ಬರ ಶೇ. 4.75ಕ್ಕೆ ಇಳಿಕೆ; ಬಡ್ಡಿದರ ಕಡಿತಕ್ಕೆ ಮನಸು ಮಾಡುತ್ತಾ ಆರ್​ಬಿಐ?

|

Updated on: Jun 12, 2024 | 6:38 PM

India retail inflation in 2024 May: ಗ್ರಾಹಕ ಬೆಲೆ ಅನುಸೂಚಿ ಆಧಾರಿತ ಹಣದುಬ್ಬರ ಮೇ ತಿಂಗಳಲ್ಲಿ ಶೇ. 4.75ಕ್ಕೆ ಇಳಿದಿದೆ. ಹಿಂದಿನ ಏಪ್ರಿಲ್ ತಿಂಗಳಲ್ಲಿ ಹಣದುಬ್ಬರ ಶೇ. 4.83ರಷ್ಟಿತ್ತು. ಆದರೆ 2023ರ ಮೇ ತಿಂಗಳಿಗೆ ಹೋಲಿಸಿದರೆ ಹಣದುಬ್ಬರ ಹೆಚ್ಚಿದೆ. ಹಿಂದಿನ ವರ್ಷದಲ್ಲಿ ಶೇ. 4.31ರಷ್ಟು ಹಣದುಬ್ಬರ ಇತ್ತು. 2024ರ ಮೇ ತಿಂಗಳಲ್ಲಿ ಹಣದುಬ್ಬರ ಇಳಿಯಲು ಆಹಾರ ಬೆಲೆಯಲ್ಲಿ ಆದ ಅಲ್ಪ ಇಳಿಕೆ ಕಾರಣವಾಗಿರಬಹುದು.

ಭಾರತದ ಹಣದುಬ್ಬರ ಶೇ. 4.75ಕ್ಕೆ ಇಳಿಕೆ; ಬಡ್ಡಿದರ ಕಡಿತಕ್ಕೆ ಮನಸು ಮಾಡುತ್ತಾ ಆರ್​ಬಿಐ?
ಹಣದುಬ್ಬರ
Follow us on

ನವದೆಹಲಿ, ಜೂನ್ 12: ಭಾರತದ ರೀಟೇಲ್ ಹಣದುಬ್ಬರ (Retail inflation) ಮೇ ತಿಂಗಳಲ್ಲಿ ತುಸು ಇಳಿಕೆ ಆಗಿದೆ. ಏಪ್ರಿಲ್ ತಿಂಗಳಲ್ಲಿ ಶೇ. 4.83ರಷ್ಟಿದ್ದ ಹಣದುಬ್ಬರ ಮೇ ತಿಂಗಳಲ್ಲಿ ಶೇ. 4.75ಕ್ಕೆ ಇಳಿದಿದೆ. ಕಳೆದ 12 ತಿಂಗಳ ಅವಧಿಯಲ್ಲಿ ಇದು ಅತಿ ಕಡಿಮೆ ಹಣದುಬ್ಬರ ದರವಾಗಿದೆ. ವರ್ಷದ ಹಿಂದಿನ ದರಕ್ಕೆ ಹೋಲಿಸಿದರೆ ಹಣುದಬ್ಬರ ಅಧಿಕ ಇದೆ. 2023ರ ಮೇ ತಿಂಗಳಲ್ಲಿ 4.31 ಪ್ರತಿಶತದಷ್ಟು ಇನ್​ಫ್ಲೇಶನ್ ಇತ್ತು.

2024ರ ಏಪ್ರಿಲ್​ಗೆ ಹೋಲಿಸಿದರೆ ಮೇ ತಿಂಗಳಲ್ಲಿ ಹಣದುಬ್ಬರ ಇಳಿಯಲು ಆಹಾರ ಬೆಲೆ ಇಳಿಕೆ ತುಸು ಪಾತ್ರ ಇದೆ. ಏಪ್ರಿಲ್​ನಲ್ಲಿ ಶೇ. 8.70ರಷ್ಟಿದ್ದ ಆಹಾರ ಹಣದುಬ್ಬರ ಮೇ ತಿಂಗಳಲ್ಲಿ ಶೇ. 8.69ರಷ್ಟಿದೆ. ಗ್ರಾಮೀಣ ಭಾಗದಲ್ಲಿ ಶೇ. 5.28, ಮತ್ತು ನಗರ ಭಾಗದಲ್ಲಿ ಶೇ. 4.15ರಷ್ಟು ಬೆಲೆ ಏರಿಕೆಯ ಬಿಸಿ ಇದೆ.

2024-25ರ ಹಣಕಾಸು ವರ್ಷದಲ್ಲಿ ಹಣದುಬ್ಬರ ಶೇ. 4.5ರಷ್ಟಿರಬಹುದು ಎಂದು ಆರ್​ಬಿಐ ಅಂದಾಜು ಮಾಡಿದೆ. ಮೊದಲ ಕ್ವಾರ್ಟರ್​ನಲ್ಲಿ ಶೇ. 4.9, ನಂತರ ಮೂರು ಕ್ವಾರ್ಟರ್​ಗಳಲ್ಲಿ ಶೇ. 3.8, ಶೇ. 4.6 ಮತ್ತು ಶೇ. 4.5ರಷ್ಟು ಹಣದುಬ್ಬರ ಇರಬಹುದು ಎಂದು ಅಂದಾಜಿಸಿದೆ.

ಇದನ್ನೂ ಓದಿ: ಆರ್ಥಿಕ ಬೆಳವಣಿಗೆಯಲ್ಲಿ ಮುಂದಿನ ಮೂರು ವರ್ಷ ಭಾರತದ್ದೇ ಅತೀ ಸ್ಪೀಡ್: ವಿಶ್ವಬ್ಯಾಂಕ್ ಅಭಿಪ್ರಾಯ

ಹಣದುಬ್ಬರವನ್ನು ಶೇ. 4ಕ್ಕೆ ತಂದು ನಿಲ್ಲಿಸುವ ಗುರಿ ಆರ್​ಬಿಐಗೆ ಇದೆ. ಈ ಹಾದಿಯಲ್ಲಿ ತಾಳಿಕೆ ಮಿತಿಯಾಗಿ ಶೇ. 2ರಿಂದ 6 ಅನ್ನು ನಿಗದಿ ಮಾಡಿದೆ. ಅಂದರೆ ಹಣದುಬ್ಬರ ಈ ಗಡಿ ದಾಟಿ ಹೋಗದಂತೆ ಆರ್​ಬಿಐ ಎಲ್ಲಾ ಎಚ್ಚರಿಕೆಗಳನ್ನೂ ತೆಗೆದುಕೊಳ್ಳಲಿದೆ. ಅಂತಿಮವಾಗಿ ಹಣದುಬ್ಬರ ಶೇ. 4ಕ್ಕೆ ತಂದು ನಿಲ್ಲಿಸುವುದು ಅದರ ಗುರಿ. ಅಲ್ಲಿಯವರೆಗೆ ಆರ್​ಬಿಐ ತನ್ನ ಬಡ್ಡಿದರವನ್ನು ಇಳಿಸುವ ಸಾಧ್ಯತೆ ಇಲ್ಲ ಎನ್ನಲಾಗುತ್ತಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ