ಚಂದ್ರನಲ್ಲಿ ಪರಮಾಣು ಶಕ್ತಿ ಸ್ಥಾವರ ನಿರ್ಮಿಸಲು ರಷ್ಯಾ, ಚೀನಾ ಕೈಜೋಡಿಸಲಿರುವ ಭಾರತ

India, Russia, China to jointly build nuclear power plant at the Moon: ಚಂದ್ರನ ಅಂಗಳದಲ್ಲಿ ಮನುಷ್ಯರಿಗೆ ನೆಲೆ ರೂಪಿಸುವ ನಿಟ್ಟಿನಲ್ಲಿ ಆರಂಭಿಕ ಹೆಜ್ಜೆಯಾಗಿ ಪರಮಾಣು ವಿದ್ಯುತ್ ಸ್ಥಾವರ ನಿರ್ಮಾಣಕ್ಕೆ ರಷ್ಯಾ ಯೋಜಿಸಿದೆ. ಈ ಪ್ರಾಜೆಕ್ಟ್​ಗೆ ಚೀನಾ ಮತ್ತು ಭಾರತ ದೇಶಗಳು ಕೈಜೋಡಿಸಲಿವೆ. 2045ರೊಳಗೆ ಲೂನಾರ್ ಬೇಸ್ ನಿರ್ಮಿಸುವ ಗುರಿಯನ್ನು ಇಟ್ಟುಕೊಳ್ಳಲಾಗಿದೆ.

ಚಂದ್ರನಲ್ಲಿ ಪರಮಾಣು ಶಕ್ತಿ ಸ್ಥಾವರ ನಿರ್ಮಿಸಲು ರಷ್ಯಾ, ಚೀನಾ ಕೈಜೋಡಿಸಲಿರುವ ಭಾರತ
ಲೂನಾರ್ ಬೇಸ್ (representative image)
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Sep 09, 2024 | 6:14 PM

ನವದೆಹಲಿ, ಸೆಪ್ಟೆಂಬರ್ 9: ಚಂದ್ರ ಮತ್ತು ಮಂಗಳ ಗ್ರಹದಲ್ಲಿ ವಸಾಹತು ನಿರ್ಮಿಸಲು ಮನುಷ್ಯ ಪ್ರಯತ್ನಿಸುತ್ತಿದ್ದಾನೆ. ಈ ನಿಟ್ಟಿನಲ್ಲಿ ಪ್ರಯೋಗಗಳು ನಡೆದಿವೆ. ಭವಿಷ್ಯದ ಯೋಜನೆಗಳನ್ನು ಹಮ್ಮಿಕೊಳ್ಳಲಾಗಿದೆ. ಚಂದ್ರನಲ್ಲಿ ಮನುಷ್ಯನ ವಸಾಹತು ಸುಗಮವಾಗಿ ಆಗುವ ಸಲುವಾಗಿ ಪರಮಾಣು ವಿದ್ಯುತ್ ಘಟಕ ಸ್ಥಾಪಿಸಲು ರಷ್ಯಾ ಯೋಜಿಸುತ್ತಿದೆ. ಈ ಯೋಜನೆಗೆ ಚೀನಾ ಮತ್ತು ಭಾರತ ದೇಶಗಳು ರಷ್ಯಾ ಜೊತೆ ಕೈ ಜೋಡಿಸುತ್ತಿವೆ. ಚಂದ್ರನ ದಕ್ಷಿಣ ಧ್ರುವದಲ್ಲಿ ನೌಕೆಯನ್ನು ಇಳಿಸಿದ ವಿಶ್ವದ ಮೊದಲ ದೇಶ ಎನಿಸಿರುವ ಭಾರತ ಮುಂದಿನ ವರ್ಷಗಳಲ್ಲಿ ಚಂದ್ರನ ನೆಲಕ್ಕೆ ಮನುಷ್ಯರನ್ನು ಕಳುಹಿಸುವ ಗುರಿ ಹೊಂದಿದೆ. ಹಾಗೆಯೇ, ಲೂನಾರ್ ಬೇಸ್ ಸ್ಥಾಪಿಸುವ ಇರಾದೆ ಹೊಂದಿದೆ. ಈ ಹಿನ್ನೆಲೆಯಲ್ಲಿ ಚಂದಿರನ ಮೇಲೆ ಪರಮಾಣ ವಿದ್ಯುತ್ ಸ್ಥಾವರ ಸ್ಥಾಪನೆಯ ಯೋಜನೆಯಲ್ಲಿ ಭಾಗಿಯಾಗುವುದು ಭಾರತಕ್ಕೆ ಅನುಕೂಲವಾಗಲಿದೆ.

ರಷ್ಯಾದ ಪರಮಾಣು ಶಕ್ತಿ ನಿಗಮವಾದ ರೋಸಟೋಮ್ ನೇತೃತ್ವದಲ್ಲಿ ಈ ಲೂನಾರ್ ಪವರ್ ಪ್ರಾಜೆಕ್ಟ್ ನಡೆಯಲಿದೆ. ಅರ್ಧ ಮೆಗಾವ್ಯಾಟ್​ನಷ್ಟು ವಿದ್ಯುತ್ ಉತ್ಪಾದನೆ ಮಾಡಬಲ್ಲಂತಹ ಪರಮಾಣ ಸ್ಥಾವರ ನಿರ್ಮಿಸುವ ಗುರಿ ಇದೆ. ಭವಿಷ್ಯದಲ್ಲಿ ರೂಪಿಸಲಾಗುವ ಮಾನವರ ನೆಲೆಯಲ್ಲಿನ ಚಟುವಟಿಕೆಗಳಿಗೆ ಇದು ನೆರವಾಗಬಹುದು ಎನ್ನಲಾಗಿದೆ. ರೋಸಟೋಮ್​ನ ಮುಖ್ಯಸ್ಥ ಲಿಖಾಚೆವ್ ಅವರು ಈ ರಷ್ಯನ್ ಯೋಜನೆಯಲ್ಲಿ ಪಾಲ್ಗೊಳ್ಳಲು ಭಾರತ ಮತ್ತು ಚೀನಾ ದೇಶಗಳು ಆಸಕ್ತಿ ತೋರಿರುವ ವಿಚಾರವನ್ನು ತಿಳಿಸಿದ್ದಾರೆ.

ಇದನ್ನೂ ಓದಿ: ಬಾಕಿ ಹಣ ವಾಪಸ್ ಮಾಡಿ: ಬಾಂಗ್ಲಾದೇಶಕ್ಕೆ ಅದಾನಿ ಎಚ್ಚರಿಕೆ; ಬಾಕಿ ಉಳಿದಿರುವ ಹಣ 4,200 ಕೋಟಿ ರೂ

ಪರಮಾಣು ವಿದ್ಯುತ್ ಸ್ಥಾವರ ಯಾಕೆ ಬೇಕು?

ಚಂದ್ರನಲ್ಲಿ ಮಾನವನ ವಸಾಹತು ನಿರ್ಮಿಸಲು ಮೂಲಸೌಕರ್ಯಗಳ ನಿರ್ಮಾಣ ಅವಶ್ಯಕವಾಗಿದೆ. ಅದಕ್ಕಾಗಿ ಡ್ರಿಲ್ ಮಾಡಲು, ಬಿಸಿ ಮಾಡಲು, ತಂಪು ಮಾಡಲು ಇತ್ಯಾದಿ ಚಟುವಟಿಕೆಗಳನ್ನು ನಡೆಸಬೇಕು. ಇದಕ್ಕೆ ವಿದ್ಯುತ್ ಅವಶ್ಯಕತೆ ಇರುತ್ತದೆ. ಹೀಗಾಗಿ, ಚಂದ್ರನಲ್ಲಿ ಪರಮಾಣು ಶಕ್ತಿ ಮೂಲಕ ವಿದ್ಯುತ್ ಪಡೆಯುವ ಒಂದು ಮಾರ್ಗ ಸದ್ಯಕ್ಕೆ ವಿಜ್ಞಾನಿಗಳ ಕಣ್ಮುಂದೆ ಇದೆ.

ಕುತೂಹಲ ಎಂದರೆ 2021ರಲ್ಲಿ ರಷ್ಯಾ ಮತ್ತು ಚೀನಾ ಎರಡೂ ದೇಶಗಳು ಜಂಟಿಯಾಗಿ ಚಂದ್ರನಲ್ಲಿ ನೆಲೆ ಸ್ಥಾಪಿಸುವ ಯೋಜನೆ ಬಹಿರಂಗಪಡಿಸಿದ್ದವು. 2035 ಮತ್ತು 2045ರ ಅವಧಿಯಲ್ಲಿ ಚಂದ್ರನಲ್ಲಿ ಇಂಟರ್ನ್ಯಾಷನಲ್ ಲೂನಾರ್ ರಿಸರ್ಚ್ ಸ್ಟೇಷನ್ ನಿರ್ಮಿಸುವ ಗುರಿ ಇದೆ. ಇದೀಗ ಈ ಪ್ರಾಜೆಕ್ಟ್​ಗೆ ಭಾರತವೂ ಕೈಜೋಡಿಸುತ್ತಿರುವುದರಿಂದ ಮೂರು ದೇಶಗಳ ಜಂಟಿ ಯೋಜನೆ ಇದಾಗಲಿದೆ.

ಇದನ್ನೂ ಓದಿ: ಹೆಲ್ತ್ ಇನ್ಷೂರೆನ್ಸ್ ಪಾಲಿಸಿ: ನಿಮ್ಮ ಕ್ಲೇಮ್ ರಿಜೆಕ್ಟ್ ಆಗುತ್ತಿದೆಯಾ? ಇಲ್ಲಿವೆ 5 ಕಾರಣಗಳು

ಚಂದ್ರನಲ್ಲಿ ಲೂನಾರ್ ಬೇಸ್ ನಿರ್ಮಿಸಲು ಯೋಜಿಸಿರುವುದು ರಷ್ಯಾ ಮಾತ್ರ ಅಲ್ಲ, ಅಮೆರಿಕ ಕೂಡ ಮುಂದಿದೆ. ಹೀಗಾಗಿ, ಚಂದ್ರನ ಸಂಪನ್ಮೂಲಕ್ಕಾಗಿ ವಿವಿಧ ದೇಶಗಳ ಮಧ್ಯೆ ಪೈಪೋಟಿ ನಿರ್ಮಾಣವಾದರೆ ಅಚ್ಚರಿ ಇಲ್ಲ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?