AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಾಕಿ ಹಣ ವಾಪಸ್ ಮಾಡಿ: ಬಾಂಗ್ಲಾದೇಶಕ್ಕೆ ಅದಾನಿ ಎಚ್ಚರಿಕೆ; ಬಾಕಿ ಉಳಿದಿರುವ ಹಣ 4,200 ಕೋಟಿ ರೂ

Bangladesh owes Adani more than Rs 6,700 crores: ಬಾಂಗ್ಲಾದೇಶ ವಿದ್ಯುತ್ ಬಿಕ್ಕಟ್ಟಿನಿಂದ ಪರದಾಡುತ್ತಿದೆ. ಈ ಕ್ಷೇತ್ರದಲ್ಲಿ 31,000 ಕೋಟಿ ರೂ ಸಾಲ ಬಾಕಿ ಉಳಿಸಿಕೊಂಡಿದೆ. ಈ ಪೈಕಿ ಅದಾನಿ ಕಂಪನಿಗೆ 6,700 ಕೋಟಿ ರೂ ಕೊಡಬೇಕು. ಈಗ ಗಡುವು ಮುಗಿದರೂ ಅದಾನಿ ಪವರ್​ಗೆ ಬಾಂಗ್ಲಾ ಬಾಕಿ ಉಳಿಸಿಕೊಂಡಿರುವ ಹಣ 4,100 ಕೋಟಿ ರೂಗೂ ಹೆಚ್ಚು. ಈ ಹಣವನ್ನು ನೀಡಬೇಕು ಎಂದು ಅದಾನಿ ಗ್ರೂಪ್ ಬಾಂಗ್ಲಾದೇಶ ಸರ್ಕಾರಕ್ಕೆ ಆಗ್ರಹಿಸಿದೆ.

ಬಾಕಿ ಹಣ ವಾಪಸ್ ಮಾಡಿ: ಬಾಂಗ್ಲಾದೇಶಕ್ಕೆ ಅದಾನಿ ಎಚ್ಚರಿಕೆ; ಬಾಕಿ ಉಳಿದಿರುವ ಹಣ 4,200 ಕೋಟಿ ರೂ
ಗೌತಮ್ ಅದಾನಿ
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Sep 09, 2024 | 3:34 PM

Share

ನವದೆಹಲಿ, ಸೆಪ್ಟೆಂಬರ್ 9: ವಿದ್ಯುತ್ ಸರಬರಾಜು ಹಣ ನೀಡದೇ ಸಾಕಷ್ಟು ಬಾಕಿ ಉಳಿಸಿಕೊಂಡಿರುವ ಬಾಂಗ್ಲಾದೇಶ ಸರ್ಕಾರಕ್ಕೆ ಅದಾನಿ ಗ್ರೂಪ್ ಎಚ್ಚರಿಕೆ ನೀಡಿದೆ. ಫೈನಾನ್ಷಿಯಲ್ ಟೈಮ್ಸ್ ವರದಿ ಪ್ರಕಾರ ಅದಾನಿ ಗ್ರೂಪ್​ಗೆ ಬಾಂಗ್ಲಾದೇಶ ಕೊಡಬೇಕಿರುವ ಬಾಕಿ ಹಣ 500 ಮಿಲಿಯನ್ ಡಾಲರ್ ಎನ್ನಲಾಗಿದೆ. ಅಂದರೆ ಸುಮಾರು 4,200 ಕೋಟಿ ರೂನಷ್ಟು ಹಣವನ್ನು ಬಾಕಿ ಉಳಿಸಿಕೊಂಡಿದೆ. ಜಾರ್ಖಂಡ್​ನ ಗೋಡ್ಡಾದಲ್ಲಿರುವ ವಿದ್ಯುತ್ ಘಟಕದಿಂದ ಬಾಂಗ್ಲಾದೇಶಕ್ಕೆ ಸರಬರಾಜು ಮಾಡಲಾದ ವಿದ್ಯುತ್​ಗೆ ಬಾಂಗ್ಲಾದೇಶ ಬಾಕಿ ಉಳಿಸಿಕೊಂಡಿರುವ ಪಾವತಿ ಮೊತ್ತ ಇಷ್ಟು.

ಶೇಖ್ ಹಸೀನಾ ಸರ್ಕಾರ ಪತನಗೊಂಡು ಈಗ ಹಂಗಾಮಿ ಸರ್ಕಾರ ಅಸ್ತಿತ್ವಕ್ಕೆ ಬಂದಿದೆ. ನೊಬೆಲ್ ವಿಜೇತ ಆರ್ಥಿಕ ತಜ್ಞ ಮೊಹಮ್ಮದ್ ಯೂನುಸ್ ನೇತೃತ್ವದ ಹಂಗಾಮಿ ಸರ್ಕಾರ ಅದಾನಿ ಗ್ರೂಪ್ ಜೊತೆಗೆ ಹಿಂದಿನ ಸರ್ಕಾರ ಮಾಡಿಕೊಂಡ ವಿದ್ಯುತ್ ಸರಬರಾಜು ಒಪ್ಪಂದ ತೀರಾ ದುಬಾರಿಯಾಗಿತ್ತು ಎಂದು ವಾದಿಸುತ್ತಿದೆ. ಆದರೆ, ಹಣಕಾಸು ಒತ್ತಡದ ಮಧ್ಯೆಯೂ ಬಾಂಗ್ಲಾದೇಶಕ್ಕೆ ವಿದ್ಯುತ್ ಸರಬರಾಜು ಮಾಡಿದ್ದೇವೆ ಎಂದು ಅದಾನಿ ಪವರ್ ಸಂಸ್ಥೆ ಹೇಳುತ್ತಿದೆ.

ಇದನ್ನೂ ಓದಿ: ಡಿಗ್ರಿ ಪಾಸಾದವರಿಗೆ ಬ್ಯಾಂಕ್​ಗಳಲ್ಲಿ ಅಪ್ರೆಂಟಿಸ್​ಶಿಪ್; ಒಂದು ವರ್ಷ ಸ್ಟೈಪೆಂಡ್; ಇನ್ನೊಂದು ತಿಂಗಳಲ್ಲಿ ಸ್ಕೀಮ್ ಜಾರಿ ಸಾಧ್ಯತೆ

‘ಬಾಂಗ್ಲಾದೇಶ ಸರ್ಕಾರದ ಜೊತೆ ನಿರಂತರವಾಗಿ ಸಂಪರ್ಕದಲ್ಲಿದ್ದೇವೆ. ನಮಗೆ ಬಾಕಿ ಹಣ ಬರಬೇಕಿದ್ದರೂ ನಮ್ಮ ಸರಬರಾಜುದಾರರು, ಹೂಡಿಕೆದಾರರಿಗೆ ಪಾವತಿ ನಿಲ್ಲಿಸಿಲ್ಲ. ಇದೇ ವೇಳೆ ಬಾಂಗ್ಲಾದೇಶಕ್ಕೆ ವಿದ್ಯುತ್ ಸರಬರಾಜು ಮಾಡುವ ಬದ್ಧತೆಯನ್ನೂ ಬಿಟ್ಟಿಲ್ಲ. ಇಂಥ ಒಂದು ಇಕ್ಕಟ್ಟಿನ ಪರಿಸ್ಥಿತಿ ಬಗ್ಗೆ ಬಾಂಗ್ಲಾ ಸರ್ಕಾರಕ್ಕೆ ಮನವರಿಕೆ ಮಾಡಿಕೊಡುತ್ತಲೇ ಇದ್ದೇವೆ’ ಎಂದು ಅದಾನಿ ಗ್ರೂಪ್​ನ ಈ ಸಂಸ್ಥೆ ತಿಳಿಸಿದೆ.

ಬಾಂಗ್ಲಾದೇಶ ಇತ್ತೀಚಿನ ವರ್ಷಗಳಲ್ಲಿ ಸಾಕಷ್ಟು ವೇಗವಾಗಿ ಬೆಳವಣಿಗೆ ಹೊಂದಿದೆ. ಆದರೆ, ವಿದ್ಯುತ್ ಮತ್ತು ಇಂಧನ ಕೊರತೆ ಮಾತ್ರ ಬಾಂಗ್ಲಾಗೆ ಮಗ್ಗುಲ ಮುಳ್ಳಾಗಿ ಮುಂದುವರಿದಿದೆ. ವಿದ್ಯುತ್ ಸಂಬಂಧ ಬಾಂಗ್ಲಾದೇಶ ಬಾಕಿ ಉಳಿಸಿಕೊಂಡಿರುವ ಪಾವತಿ ಹಣ 3.7 ಬಿಲಿಯನ್ ಡಾಲರ್. ಸುಮಾರು 31,000 ಕೋಟಿ ರೂನಷ್ಟು ಬಾಕಿ ಇದೆ. ಇದರಲ್ಲಿ 6,700 ಕೋಟಿ ರೂನಷ್ಟು ಹಣ ಅದಾನಿ ಪವರ್​ಗೆ ಕೊಡಬೇಕಿದೆ. ಈ ಪೈಕಿ ಸದ್ಯಕ್ಕೆ ಪಾವತಿಸಲು ಗಡುವು ಮುಗಿದಿರುವ ಹಣ 4,130 ಕೋಟಿ ರೂ ಎನ್ನಲಾಗಿದೆ.

ಇದನ್ನೂ ಓದಿ: ಹೆಲ್ತ್ ಇನ್ಷೂರೆನ್ಸ್ ಪಾಲಿಸಿ: ನಿಮ್ಮ ಕ್ಲೇಮ್ ರಿಜೆಕ್ಟ್ ಆಗುತ್ತಿದೆಯಾ? ಇಲ್ಲಿವೆ 5 ಕಾರಣಗಳು

ಶೇಖ್ ಹಸೀನಾ ಸರ್ಕಾರ ಇದ್ದಾಗ ಸರಿಯಾದ ರೀತಿಯಲ್ಲಿ ಬಿಡ್ಡಿಂಗ್ ಪ್ರಕ್ರಿಯೆ ನಡೆದಿಲ್ಲ. ಸಾಕಷ್ಟು ಭ್ರಷ್ಟಾಚಾರ, ಅವ್ಯವಹಾರ ನಡೆದಿದೆ. ಹೀಗಾಗಿ, ದುಬಾರಿ ಬೆಲೆಗೆ ವಿದ್ಯುತ್ ಪೂರೈಕೆ ಒಪ್ಪಂದ ಆಗಿದೆ ಎಂದು ಈಗಿನ ಹಂಗಾಮಿ ಸರ್ಕಾರ ಹೇಳುತ್ತಿದೆ. ಅಷ್ಟೇ ಅಲ್ಲ, ಹಿಂದಿನ ವಿದ್ಯುತ್ ಒಪ್ಪಂದಗಳನ್ನು ಮತ್ತೆ ಮರು ಅವಲೋಕಿಸಿ, ಹೊಸ ಬೆಲೆ ನಿಗದಿ ಮಾಡುವ ಕುರಿತು ಸರ್ಕಾರ ಆಲೋಚಿಸುತ್ತಿದೆ ಎಂದು ಹೇಳಲಾಗುತ್ತಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Follow Us
ಸುಗ್ಗನಹಳ್ಳಿ ವಿಜಯಸಾರಥಿ
ಸುಗ್ಗನಹಳ್ಳಿ ವಿಜಯಸಾರಥಿ

ಹುಟ್ಟೂರು ಹಾಸನ ಜಿಲ್ಲೆಯ ಶ್ರವಣಬೆಳಗೊಳ ಸಮೀಪದ ಒಂದು ಪುಟ್ಟ ಹಳ್ಳಿ. ಬೆಳದದ್ದು ಬೆಂಗಳೂರು ನಗರದಲ್ಲಿ. ಹಲವು ವರ್ಷಗಳಿಂದ ಪತ್ರಿಕಾ ರಂಗದಲ್ಲಿ ನೆಲೆ. ಬರವಣಿಗೆಯ ಆಸಕ್ತಿ ಮತ್ತು ಪರಿಣಿತಿಯ ಕ್ಷೇತ್ರಗಳು ಆರ್ಥಿಕತೆ, ಹಣಕಾಸು, ಅಂತರರಾಷ್ಟ್ರೀಯ ವಿದ್ಯಮಾನ, ಜನಕ್ರಾಂತಿ, ರಾಷ್ಟ್ರೀಯತೆ, ಸಂಸ್ಕೃತಿ, ಮಾನವ ಸಂಬಂಧ, ಕ್ರೀಡೆ ಮೊದಲಾದವು ಇವೆ. ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ಸಾಧ್ಯವಾದಷ್ಟೂ ಸ್ಫುಟವಾಗಿ, ಸರಳವಾಗಿ ಬರೆಯುವ ಇಚ್ಛೆ.

Read More
ಸಮಯ ಪ್ರಜ್ಞೆ ಇಲ್ವೇನ್ರೀ: ಯತೀಂದ್ರ ಬಗ್ಗೆ ತನ್ವೀರ್ ಸೇಠ್ ಬಹಿರಂಗ ಅಸಮಾಧಾನ
ಸಮಯ ಪ್ರಜ್ಞೆ ಇಲ್ವೇನ್ರೀ: ಯತೀಂದ್ರ ಬಗ್ಗೆ ತನ್ವೀರ್ ಸೇಠ್ ಬಹಿರಂಗ ಅಸಮಾಧಾನ
ಬೆಂಗಳೂರಿನಲ್ಲಿ ಆನೆ ದಾಳಿಗೆ ವಾಕಿಂಗ್​ಗೆ ತೆರಳಿದ್ದ ವೃದ್ಧ ಬಲಿ!
ಬೆಂಗಳೂರಿನಲ್ಲಿ ಆನೆ ದಾಳಿಗೆ ವಾಕಿಂಗ್​ಗೆ ತೆರಳಿದ್ದ ವೃದ್ಧ ಬಲಿ!
ಸಖತ್ ಆಗವ್ರೆ ಅಂತ ಕಾಳು ಹಾಕೋಕೆ ಬಂದ ಯಶಸ್​ಗೆ ಮರೆಯಲಾರದ ಪಾಠ ಕಲಿಸಿದ ಗಾನವಿ
ಸಖತ್ ಆಗವ್ರೆ ಅಂತ ಕಾಳು ಹಾಕೋಕೆ ಬಂದ ಯಶಸ್​ಗೆ ಮರೆಯಲಾರದ ಪಾಠ ಕಲಿಸಿದ ಗಾನವಿ
ರಸ್ತೆ ಪರಿಶೀಲನೆ ವೇಳೆ ವ್ಯಕ್ತಿಗೆ ಕಪಾಳಮೋಕ್ಷ ಮಾಡಿದ ದೆಹಲಿ ಸಚಿವ ಪರ್ವೇಶ್
ರಸ್ತೆ ಪರಿಶೀಲನೆ ವೇಳೆ ವ್ಯಕ್ತಿಗೆ ಕಪಾಳಮೋಕ್ಷ ಮಾಡಿದ ದೆಹಲಿ ಸಚಿವ ಪರ್ವೇಶ್
ದಿನ ಭವಿಷ್ಯ: ರವಿ ಕನ್ಯಾ, ಚಂದ್ರ ಮೀನ ರಾಶಿಯ ರೇವತಿ ನಕ್ಷತ್ರದಲ್ಲಿ ಸಂಚಾರ
ದಿನ ಭವಿಷ್ಯ: ರವಿ ಕನ್ಯಾ, ಚಂದ್ರ ಮೀನ ರಾಶಿಯ ರೇವತಿ ನಕ್ಷತ್ರದಲ್ಲಿ ಸಂಚಾರ
ಹಿಂದೂಗಳು ಯಾರ ಮೇಲೂ ಮುಗಿಬೀಳಲ್ಲ, ತಂಟೆಗೆ ಬಂದ್ರೆ ಸುಮ್ನೆ ಬಿಡಲ್ಲ: ಸಿಂಹ
ಹಿಂದೂಗಳು ಯಾರ ಮೇಲೂ ಮುಗಿಬೀಳಲ್ಲ, ತಂಟೆಗೆ ಬಂದ್ರೆ ಸುಮ್ನೆ ಬಿಡಲ್ಲ: ಸಿಂಹ
ಮೆಗ್ಗಾನ್ ಆಸ್ಪತ್ರೆ ವೈದ್ಯರ ಯಡವಟ್ಟು: ವಿದ್ಯಾರ್ಥಿನಿ ದುರಂತ ಸಾವು
ಮೆಗ್ಗಾನ್ ಆಸ್ಪತ್ರೆ ವೈದ್ಯರ ಯಡವಟ್ಟು: ವಿದ್ಯಾರ್ಥಿನಿ ದುರಂತ ಸಾವು
ಫೇಕ್ ಸುದ್ದಿ ಹಬ್ಬಿಸುವರಿಗೆ ಖಡಕ್ ಎಚ್ಚರಿಕೆ ಕೊಟ್ಟ ಕೊಪ್ಪಳ ಎಸ್ಪಿ
ಫೇಕ್ ಸುದ್ದಿ ಹಬ್ಬಿಸುವರಿಗೆ ಖಡಕ್ ಎಚ್ಚರಿಕೆ ಕೊಟ್ಟ ಕೊಪ್ಪಳ ಎಸ್ಪಿ
ಕ್ಯಾಂಟೀನ್‌ನಲ್ಲಿ ಬಾಣಂತಿಗೆ ನೀಡಿದ್ದ ಕೇಸರಿಬಾತ್‌ನಲ್ಲಿ ಹಲ್ಲಿ ಪತ್ತೆ
ಕ್ಯಾಂಟೀನ್‌ನಲ್ಲಿ ಬಾಣಂತಿಗೆ ನೀಡಿದ್ದ ಕೇಸರಿಬಾತ್‌ನಲ್ಲಿ ಹಲ್ಲಿ ಪತ್ತೆ
ವೈಷ್ಣವಿಯ ಟ್ಯಾಲೆಂಟ್​ಗೆ ಮನಸೋತ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್
ವೈಷ್ಣವಿಯ ಟ್ಯಾಲೆಂಟ್​ಗೆ ಮನಸೋತ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್