ಬ್ಯಾಂಕಲ್ಲಿ ಪರ್ಸನಲ್ ಲೋನ್ ಸಿಗುತ್ತಿಲ್ಲವಾ? ಬೇರೆಡೆ ಸಾಲ ಮಾಡುವಾಗ ಗಮನಿಸಬೇಕಾದ 3 ಸಂಗತಿಗಳು

Loan from fintech platforms: ನಮ್ಮ ಸಾಲ ತೀರಿಸುವಿಕೆಯ ಇತಿಹಾಸದ ಆಧಾರದ ಮೇಲೆ ವೈಯಕ್ತಿಕ ಸಾಲವನ್ನು ಬ್ಯಾಂಕುಗಳು ನೀಡುತ್ತವೆ. ಕ್ರೆಡಿಟ್ ಸ್ಕೋರ್ ಕಡಿಮೆ ಇದ್ದರೆ ಬ್ಯಾಂಕುಗಳು ಸಾಲ ಕೊಡದೇ ಹೋಗಬಹುದು. ಈ ಸಂದರ್ಭದಲ್ಲಿ ಫಿನ್​ಟೆಕ್ ಪ್ಲಾಟ್​ಫಾರ್ಮ್ ಮೂಲಕ ಸಾಲ ಪಡೆಯಲು ಯತ್ನಿಸಬಹುದು. ಅದಕ್ಕೆ ಮುನ್ನ ಕೆಲವಿಷ್ಟು ಮುನ್ನೆಚ್ಚರಿಕೆ ವಹಿಸುವುದು ಉತ್ತಮ.

ಬ್ಯಾಂಕಲ್ಲಿ ಪರ್ಸನಲ್ ಲೋನ್ ಸಿಗುತ್ತಿಲ್ಲವಾ? ಬೇರೆಡೆ ಸಾಲ ಮಾಡುವಾಗ ಗಮನಿಸಬೇಕಾದ 3 ಸಂಗತಿಗಳು
ಸಾಲ
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Sep 09, 2024 | 11:13 AM

ಯಾವುದೇ ಅಡಮಾನ ಇಲ್ಲದೇ ಸಿಗುವ ಸಾಲವೆಂದರೆ ಪರ್ಸನಲ್ ಲೋನ್. ನಮ್ಮ ಹಿಂದಿನ ಹಣಕಾಸು ಶಿಸ್ತು ಪಾಲನೆಯ ಆಧಾರದ ಮೇಲೆ ಮತ್ತು ನಮ್ಮ ಆದಾಯದ ಆಧಾರದ ಮೇಲೆ ಬ್ಯಾಂಕುಗಳು ಮತ್ತು ಎನ್​ಬಿಎಫ್​ಸಿಗಳು ಸಾಲಗಳನ್ನು ನೀಡುತ್ತವೆ. ಇದೆಲ್ಲದಕ್ಕೂ ಕ್ರೆಡಿಟ್ ಸ್ಕೋರ್ ಆಧಾರವಾಗಿರುತ್ತದೆ. ಒಂದು ವೇಳೆ ಬೇರೆ ಬೇರೆ ಕಾರಣಗಳಿಗೆ ನಿಮ್ಮ ಕ್ರೆಡಿಟ್ ಸ್ಕೋರ್ ತೀರಾ ಕಡಿಮೆ ಇದ್ದರೆ ಪರ್ಸನಲ್ ಲೋನ್ ಸಿಗುವುದು ಬಹಳ ಕಷ್ಟವಾಗುತ್ತದೆ. ಸಿಕ್ಕರೂ ಕೂಡ ಬಡ್ಡಿದರ ದುಬಾರಿಯಾಗಿರುತ್ತದೆ. ಚಿನ್ನ ಇದ್ದರೆ ತುರ್ತಾಗಿ ಯಾವುದೇ ಸೆಕ್ಯೂರಿಟಿ ಇಲ್ಲದೇ ಸಾಲ ಪಡೆಯಬಹುದು. ಅದೂ ಇಲ್ಲದೇ ಇದ್ದ ಪಕ್ಷದಲ್ಲಿ ಬೇರೆ ಖಾಸಗಿ ಹಣಕಾಸು ಸಂಸ್ಥೆಗಳು ಅಥವಾ ಫಿನ್​ಟೆಕ್ ಕಂಪನಿಗಳ ಮುಖಾಂತರ ಸಾಲ ಪಡೆಯಬಹುದು.

ಆನ್​ಲೈನ್​ನಲ್ಲಿ ಸುಲಭವಾಗಿ ಸಾಲ ನೀಡುತ್ತೇವೆ ಎಂದು ಹಲವು ಲೋನ್ ಆ್ಯಪ್​ಗಳು ಆಫರ್ ಮಾಡುವುದನ್ನು ನೋಡಿರಬಹುದು. ಆದರೆ, ಇವುಗಳ ಬಗ್ಗೆ ಬಹಳ ಎಚ್ಚರಿಕೆಯಿಂದ ಇರಬೇಕು. ಅದರ ಬದಲು ಹೆಚ್ಚು ವಿಶ್ವಾಸಾರ್ಹವಾದ ಶ್ರೀರಾಮ್ ಫೈನಾನ್ಸ್, ಬಜಾಜ್ ಫೈನಾನ್ಸ್, ಪೇಟಿಎಂ, ಫೋನ್​ಪೆ, ಗ್ರೋ, ಕ್ರೆಡಿಟ್​ಬೀ, ಲೆಂಡಿಂಗ್​ಕಾರ್ಟ್ ಇತ್ಯಾದಿ ಫಿನ್​ಟೆಕ್ ಪ್ಲಾಟ್​ಫಾರ್ಮ್​ಗಳಲ್ಲಿ ಪ್ರಯತ್ನಿಸಬಹುದು.

ಇದನ್ನೂ ಓದಿ: ಸುಕನ್ಯಾ ಸಮೃದ್ಧಿ ಯೋಜನೆ: ಅ. 1ರಿಂದ ಬದಲಾಗಲಿವೆ 2 ನಿಯಮಗಳು, ಗಮನಿಸಿ

ಫಿನ್​ಟೆಕ್ ಪ್ಲಾಟ್​ಫಾರ್ಮ್​ನಲ್ಲಿ ಸಾಲ ಪಡೆಯುವ ಮುನ್ನ ಈ ವಿಷಯ ಗಮನದಲ್ಲಿರಲಿ

  • ನೀವು ಸಾಲ ಪಡೆಯಲಿರುವ ಸಂಸ್ಥೆ ಆರ್​ಬಿಐ ಜೊತೆ ನೊಂದಾಯಿತವಾಗಿದೆಯಾ ಗಮನಿಸಿ. ಫಿನ್​ಟೆಕ್ ಕಂಪನಿಗಳು ಸಾಲ ಕೊಡಲು ಪರವಾನಿಗೆ ಹೊಂದಿರುವುದಿಲ್ಲ. ಆದರೆ, ಎನ್​ಬಿಎಫ್​ಸಿಗಳ ಜೊತೆ ಹೊಂದಾಣಿಕೆ ಮಾಡಿಕೊಂಡು ಸಾಲದ ಆಫರ್ ಮಾಡಬಹುದು. ನೊಂದಾಯಿತವಾಗಿರುವ ಎನ್​ಬಿಎಫ್​ಸಿಗಳ ಪಟ್ಟಿಯನ್ನು ಆರ್​ಬಿಐ ವೆಬ್​ಸೈಟ್​ನಲ್ಲಿ ಕಾಣಬಹುದು. ಫಿನ್​ಟೆಕ್ ಕಂಪನಿಯು ಸಾಲ ನೀಡಲು ನೊಂದಾಯಿತವಾದ ಎನ್​ಬಿಎಫ್​ಸಿ ಜೊತೆ ಟೈ ಅಪ್ ಆಗಿದೆಯಾ ಎಂದು ಖಚಿತಪಡಿಸಿಕೊಳ್ಳಿ.
  • ಪ್ಲೇಸ್ಟೋರ್​ನಲ್ಲಿ ಬಹಳಷ್ಟು ಲೋನ್ ಆ್ಯಪ್​ಗಳನ್ನು ಕಾಣುತ್ತೇವೆ. ಸಾಕಷ್ಟು ಜನರು ಅತಿಹೆಚ್ಚು ಡೌನ್​ಲೋಡ್ ಆದ ಆ್ಯಪ್​ಗಳು ಹೆಚ್ಚು ವಿಶ್ವಾಸಾರ್ಹ ಎಂದು ಭಾವಿಸುವುದುಂಟು. ಇದು ತಪ್ಪು. ಕಳೆದ ಎರಡು ವರ್ಷದಲ್ಲಿ 4,700 ಅನಧಿಕೃತ ಲೋನ್ ಆ್ಯಪ್​ಗಳನ್ನು ಪ್ಲೇಸ್ಟೋರ್​ನಿಂದ ತೆಗೆದುಹಾಕಲಾಗಿದೆ. ಹತ್ತಕ್ಕೂ ಹೆಚ್ಚು ಆ್ಯಪ್​ಗಳಂತೂ ಒಂದು ಲಕ್ಷಕ್ಕಿಂತ ಹೆಚ್ಚು ಡೌನ್​ಲೋಡ್ಸ್ ಆಗಿದ್ದವು.

ಇದನ್ನೂ ಓದಿ: ಎಸ್​ಐಪಿಯತ್ತ ಜನ ಮುಗಿಬೀಳಲು ಏನು ಕಾರಣ? ಈ ಸಿಸ್ಟಮ್ಯಾಟಿಕ್ ಇನ್ವೆಸ್ಟ್​ಮೆಂಟ್ ಪ್ಲಾನ್ ಹೊಂದುವ ಮುನ್ನ ನೀವು ತಿಳಿಯಬೇಕಾದ್ದೇನು?

  • ನೀವು ಸಾಲ ಪಡೆಯಲಿರುವ ಫಿನ್​ಟೆಕ್ ಕಂಪನಿಯು ಪ್ರಮುಖ ನಗರದಲ್ಲಿ ನೊಂದಾಯಿತ ಕಚೇರಿ ಹೊಂದಿದೆಯಾ ಎಂದು ಖಚಿತಪಡಿಸಿಕೊಳ್ಳಿ. ಕಸ್ಟಮರ್ ಕೇರ್ ನಂಬರ್ ಅಸ್ತಿತ್ವದಲ್ಲಿದ್ದು, ಅದರ ನಿರ್ವಹಣೆಗೆ ಸಿಬ್ಬಂದಿ ಇದ್ದಾರಾ ಎಂದೂ ಖಚಿತಪಡಿಸಿಕೊಳ್ಳಿ.

ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಭಾರತೀಯ ಕಂಪನಿಗಳ ಅಭಿವೃದ್ಧಿಯಲ್ಲಿ ಬೆಂಜ್ ಪಾತ್ರ ಮಹತ್ವದ್ದು; ಬಾಬಾ ಕಲ್ಯಾಣಿ
ಭಾರತೀಯ ಕಂಪನಿಗಳ ಅಭಿವೃದ್ಧಿಯಲ್ಲಿ ಬೆಂಜ್ ಪಾತ್ರ ಮಹತ್ವದ್ದು; ಬಾಬಾ ಕಲ್ಯಾಣಿ
‘ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ’ ನೋಡಲು ಜನ ಬರಲಿಲ್ಲ: ಕಾರಣ ತಿಳಿಸಿದ ವಿತರಕ
‘ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ’ ನೋಡಲು ಜನ ಬರಲಿಲ್ಲ: ಕಾರಣ ತಿಳಿಸಿದ ವಿತರಕ
ಸತ್ತವನು ದಿಢೀರನೆ ಎದ್ದು ಕೂತ ಕತೆ; ಶಾಕಿಂಗ್ ವಿಡಿಯೋ ವೈರಲ್
ಸತ್ತವನು ದಿಢೀರನೆ ಎದ್ದು ಕೂತ ಕತೆ; ಶಾಕಿಂಗ್ ವಿಡಿಯೋ ವೈರಲ್
ಭಾರತದ ಸ್ಟೀಲ್ ಉದ್ಯಮದಲ್ಲಿ ಹೆಚ್ಚು ಇಂಗಾಲದ ಡೈ ಆಕ್ಸೈಡ್ ಉತ್ಪತ್ತಿ: ಗೋಯಲ್
ಭಾರತದ ಸ್ಟೀಲ್ ಉದ್ಯಮದಲ್ಲಿ ಹೆಚ್ಚು ಇಂಗಾಲದ ಡೈ ಆಕ್ಸೈಡ್ ಉತ್ಪತ್ತಿ: ಗೋಯಲ್
5 ಲಕ್ಷ ರೂಪಾಯಿ ಪಡೆದು ಮೋಸ ಮಾಡಿದ ಸ್ಟಾರ್​ ನಟಿ; ನಿರ್ಮಾಪಕಿ ಆರೋಪ
5 ಲಕ್ಷ ರೂಪಾಯಿ ಪಡೆದು ಮೋಸ ಮಾಡಿದ ಸ್ಟಾರ್​ ನಟಿ; ನಿರ್ಮಾಪಕಿ ಆರೋಪ
ಶಿಕ್ಷಣ ಸಾರ್ಥಕವಾಗಲು ಮೂರು ಅಂಶಗಳ ಮನನವಾಗಬೇಕು: ಸಿದ್ದರಾಮಯ್ಯ
ಶಿಕ್ಷಣ ಸಾರ್ಥಕವಾಗಲು ಮೂರು ಅಂಶಗಳ ಮನನವಾಗಬೇಕು: ಸಿದ್ದರಾಮಯ್ಯ
ಸ್ಕೂಟಿಗೆ ಡಿಕ್ಕಿ ಹೊಡೆದು 1 ಕಿ.ಮೀ ಎಳೆದೊಯ್ದ ಕಾರು; ಚಿಮ್ಮಿದ ಬೆಂಕಿ ಕಿಡಿ
ಸ್ಕೂಟಿಗೆ ಡಿಕ್ಕಿ ಹೊಡೆದು 1 ಕಿ.ಮೀ ಎಳೆದೊಯ್ದ ಕಾರು; ಚಿಮ್ಮಿದ ಬೆಂಕಿ ಕಿಡಿ
ನ್ಯೂಸ್​​9 ಗ್ಲೋಬಲ್​ ಸಮಿಟ್​ನಲ್ಲಿ ಕರ್ನಾಟಕ-ಜರ್ಮನಿ ನಂಟು: ಸಿಎಂ ಮಾತು
ನ್ಯೂಸ್​​9 ಗ್ಲೋಬಲ್​ ಸಮಿಟ್​ನಲ್ಲಿ ಕರ್ನಾಟಕ-ಜರ್ಮನಿ ನಂಟು: ಸಿಎಂ ಮಾತು
ಧಾರವಾಡದಲ್ಲಿ ರೈತರೊಂದಿಗೆ ವಿತಂಡವಾದಕ್ಕಿಳಿದ ಸಚಿವ ಸಂತೋಷ್ ಲಾಡ್
ಧಾರವಾಡದಲ್ಲಿ ರೈತರೊಂದಿಗೆ ವಿತಂಡವಾದಕ್ಕಿಳಿದ ಸಚಿವ ಸಂತೋಷ್ ಲಾಡ್
ನೋಟೀಸ್ ಹಿಂಪಡೆಯಲು ಸಿದ್ದರಾಮಯ್ಯ ಮೌಖಿಕ ಆದೇಶ ನೀಡಿದ್ದಾರೆ: ರೆಡ್ಡಿ
ನೋಟೀಸ್ ಹಿಂಪಡೆಯಲು ಸಿದ್ದರಾಮಯ್ಯ ಮೌಖಿಕ ಆದೇಶ ನೀಡಿದ್ದಾರೆ: ರೆಡ್ಡಿ