
ನವದೆಹಲಿ, ಜೂನ್ 8: ನರೇಂದ್ರ ಮೋದಿ (Narendra Modi) ದೇಶದ ಪ್ರಧಾನಿಯಾಗಿ 11 ವರ್ಷವಾಗಿದೆ. ಗುಜರಾತ್ ಸಿಎಂ ಆಗಿ 25 ವರ್ಷ ಆಗಿದೆ. ಕಳೆದ 25 ವರ್ಷಗಳಿಂದಲೂ ಸತತವಾಗಿ ಸಿಎಂ ಮತ್ತು ಪಿಎಂ ಗಾದಿಯಲ್ಲಿ ಕೂತಿರುವ ನರೇಂದ್ರ ಮೋದಿ ಆಡಳಿತ ವ್ಯವಸ್ಥೆಗೆ ಬಹಳ ಬದಲಾವಣೆಗಳನ್ನು ತಂದಿದ್ದಾರೆ ಎಂಬುದು ಹಲವರ ಅನಿಸಿಕೆ. ವಿವಿಧ ಕ್ಷೇತ್ರಗಳ ಪರಿಣಿತರು ಈ ಅನಿಸಿಕೆಗೆ ಸಹಮತ ವ್ಯಕ್ತಪಡಿಸಿದ್ದಾರೆ. ಹೀನಾ ಖಾನ್, ಸುಭಾಷ್ ಘಾಯ್ ಮೊದಲಾದ ನಟ ನಟಿಯರು, ನಿರ್ದೇಶಕರೂ ಕೂಡ ಇದಕ್ಕೆ ಧ್ವನಿಗೂಡಿಸಿದ್ದಾರೆ.
ನರೇಂದ್ರ ಮೋದಿ ಪ್ರಧಾನಿಯಾಗಿ ನೀಡಿದ 11 ವರ್ಷದ ನಾಯಕತ್ವದಲ್ಲಿ ದೇಶವು ಎಲ್ಲಾ ರಂಗದಲ್ಲೂ ಉತ್ತಮಗೊಂಡಿದೆ ಎಂದು ಬಾಲಿವುಡ್ ನಟಿ ಹೀನಾ ಖಾನ್ ಅಭಿಪ್ರಾಯಪಟ್ಟಿದ್ದಾರೆ. ಐಎಎನ್ಎಸ್ ಸುದ್ದಿಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಅವರು, ‘ನನಗಿರುವ ಸೀಮಿತ ಅನುಭವದಲ್ಲಿ, ಭಾರತ ಬಹಳ ಬಲಶಾಲಿಯಾಗಿದೆ ಎಂದನಿಸುತ್ತದೆ. ಮೂಲಸೌಕರ್ಯ, ತಂತ್ರಜ್ಞಾನ, ಬಾಹ್ಯಾಕಾಶ, ಆರೋಗ್ಯ, ಬಡತನ ನಿರ್ಮೂಲನೆ, ರಕ್ಷಣೆ ಮತ್ತು ಆರ್ಥಿಕತೆ ಇತ್ಯಾದಿ ಕ್ಷೇತ್ರದಲ್ಲಿ ಭಾರತ ಉತ್ತಮಗೊಂಡಿದೆ’ ಎಂದು ಹೇಳಿದ್ದಾರೆ.
ಇದನ್ನೂ ಓದಿ: 500 ರೂ ನೋಟು ನಿಷೇಧ ಆಗುತ್ತೆ ಅನ್ನೋದು ಸುಳ್ಳು ಸುದ್ದಿ; ಪಿಐಬಿ ಫ್ಯಾಕ್ಟ್ ಚೆಕ್ ಸ್ಪಷ್ಟನೆ ಇದು
‘ನಮ್ಮ ಜೀವಿತಾವಧಿಯಲ್ಲೇ ಭಾರತ ಅಭಿವೃದ್ಧಿ ಹೊಂದಿದ ದೇಶವಾಗಬಲ್ಲುದು ಎಂದನಿಸುತ್ತಿದೆ. ಪ್ರಾಮಾಣಿಕವಾಗಿ ಹೇಳಬೇಕೆಂದರೆ ಈ ಭಾವನೆಯನ್ನು ಮತ್ತು ಕನಸನ್ನು ಹುಟ್ಟುಹಾಕಿದ್ದೇ ನಮ್ಮ ಪ್ರಧಾನಿಗಳು. ಈಗ ಆಗುತ್ತಿರುವ ಅಭಿವೃದ್ಧಿ ಮತ್ತು ಸುಧಾರಣೆಗಳನ್ನು ನೋಡಿದರೆ ನಿಜಕ್ಕೂ ಈ ಕನಸು ಬಹಳ ಬೇಗ ನನಸಾಗಬಹುದು ಎಂದನಿಸುತ್ತಿದೆ’ ಎಂದು 37 ವರ್ಷದ ನಟಿ ಹೀನಾ ಖಾನ್ ತಿಳಿಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರು ದೇಶವನ್ನು ಅಭಿವೃದ್ಧಿಪಥದಲ್ಲಿ ತಂದಿರುವುದು ಮಾತ್ರವಲ್ಲ, ಜನರ ಯೋಚನಾ ಕ್ರಮದಲ್ಲೂ ಬದಲಾವಣೆ ತರುತ್ತಿದ್ದಾರೆ ಎಂದು ಬಾಲಿವುಡ್ ನಿರ್ದೇಶಕ ಸುಭಾಷ್ ಘಾಯ್ ಅಭಿಪ್ರಾಯಪಟ್ಟಿದ್ದಾರೆ.
ಇದನ್ನೂ ಓದಿ: ದೇಶಭ್ರಷ್ಟ ಅನ್ನಿ ಒಪ್ತೀನಿ, ಆದ್ರೆ ಕಳ್ಳ ಅನ್ನೋಕೆ ನಾನೇನು ಕದ್ದಿದ್ದೀನಿ? ಹೊಟ್ಟೆಯೊಳಗಿನ ಸಂಕಟವೆಲ್ಲಾ ಬಿಚ್ಚಿಟ್ಟ ವಿಜಯ್ ಮಲ್ಯ
‘ನಾನು ಹನ್ನೊಂದು ವರ್ಷದ ಹಿಂದೆ ಕಾಂಚಿ ಸಿನಿಮಾ ಮಾಡಿದೆ. ಚಿತ್ರದ ಕ್ಲೈಮಾಕ್ಸ್ಗೆ ಒಂದು ಹಾಡು ರಚಿಸಿದೆವು. ಸಾರೆ ಜಹಾಂ ಸೆ ಅಚ್ಛಾ, ವೋ ಹಿಂದೂಸ್ತಾನ್ ಕಹಾಂ ಹೈ ಎನ್ನುವ ಹಾಡು ಅದು. ಒಂದು ಕಾಲದಲ್ಲಿ ಎಲ್ಲರಿಗಿಂತ ಶ್ರೇಷ್ಠವಾಗಿದ್ದ ಆ ದೇಶ ಎಲ್ಲಿ ಹೋಯಿತು ಎಂದು ಪ್ರಶ್ನಿಸುವ ಹಾಡದು. ನಿರಾಸೆಯ ಕಾಲದಲ್ಲಿ ರಚಿಸಿದ್ದ ಹಾಡು. ಆಗ ನರೇಂದ್ರ ಮೋದಿ ನೇತೃತ್ವದ ಹೊಸ ಸರ್ಕಾರ ಬಂತು. ಅವರಿಗೆ ದೇಶದ ಅಭಿವೃದ್ಧಿ ಮಾತ್ರವಲ್ಲ, ಜನರ ಚಿಂತನೆಯಲ್ಲೂ ಬದಲಾವಣೆ ತರುವ ಉದ್ದೇಶ ಇರುವುದು ನರೇಂದ್ರ ಮೋದಿ ಅವರ ಮಾತಿನಿಂದ ಅರ್ಥ ಮಾಡಿಕೊಳ್ಳಬಬಹುದಿತ್ತು. ಅದು ನನಗೆ ಇಷ್ಟವಾಯಿತು. ಸರಿ, ಕಾದು ನೋಡೇ ಬಿಡೋಣ ಎಂದುಕೊಂಡೆ’ ಎಂದು ಸುಭಾಷ್ ಘಾಯ್ ಹೇಳಿದ್ದಾರೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ