ನವದೆಹಲಿ, ನವೆಂಬರ್ 18: ಜಾಗತಿಕವಾಗಿ ಪ್ರಮುಖ ಆರ್ಥಿಕತೆಗಳ ಪೈಕಿ ಭಾರತ ಕಳೆದ ಕೆಲ ವರ್ಷಗಳಿಂದ ಅತಿವೇಗದ ಜಿಡಿಪಿ ಬೆಳವಣಿಗೆ ಕಾಣುತ್ತಿದೆ. ಇದು 2024ರಲ್ಲೂ ಮುಂದುವರಿಯಲಿದೆ. ಈ ಕ್ಯಾಲಂಡರ್ ವರ್ಷದಲ್ಲಿ ಭಾರತದ ಆರ್ಥಿಕತೆ ಶೇ. 7ರಷ್ಟು ಬೆಳೆಯಬಹುದು ಎನ್ನುವ ಅಂದಾಜು ಇದೆ. ಇದು ತೀರಾ ಹೆಚ್ಚಿನ ಮಟ್ಟದ ದರ ಅಲ್ಲದಿದ್ದರೂ ಪ್ರಮುಖ ಆರ್ಥಿಕತೆಗಳ ಪೈಕಿ ಅಗ್ರಪಂಕ್ತಿಯಲ್ಲಿ ನಿಲ್ಲುತ್ತದೆ. ವಿಶ್ವದ ಪ್ರಮುಖ ಆರ್ಥಿಕತೆಯ ದೇಶಗಳ ಗುಂಪಾಗಿರುವ ಜಿ20ಯಲ್ಲಿ ಭಾರತ ಸೂಪರ್ ಸ್ಟಾರ್ ಎನಿಸಿದೆ.
ಸರ್ಕಾರದ ಎಕ್ಸ್ ಪೋಸ್ಟ್ವೊಂದರಲ್ಲಿ ಜಿ20 ಗುಂಪಿನ ದೇಶಗಳ ಜಿಡಿಪಿ ದರಗಳನ್ನು ತುಲನೆ ಮಾಡಿ ಮಾಹಿತಿ ಹಾಕಿದೆ. ಜಾಗತಿಕ ಸವಾಲುಗಳ ನಡುವೆಯೂ ಭಾರತದ ಆರ್ಥಿಕತೆ ವೇಗವಾಗಿ ಬೆಳವಣಿಗೆ ಹೊಂದುತ್ತಿರುವುದು ಸ್ಪಷ್ಟವಾಗಿದೆ ಎಂದು ಆ ಪೋಸ್ಟ್ನಲ್ಲಿ ಬರೆಯಲಾಗಿದೆ.
India takes the lead in the G20 with an impressive 7% GDP growth rate projected for 2024!
This achievement highlights India’s robust economy, showcasing its resilience and fast-paced growth amidst global challenges. #G20#EconomicGrowth#IndiaGrowthStory pic.twitter.com/4GbHn8ewue
— MyGovIndia (@mygovindia) November 18, 2024
ಜಿ20 ಗುಂಪಿನಲ್ಲಿರುವ ದೇಶಗಳಲ್ಲಿ ವಿಶ್ವದ ಬಹುಪಾಲು ಆರ್ಥಿಕತೆ ಇದೆ. 2024ರಲ್ಲಿ ಏಳು ದೇಶ ಅಥವಾ ಪ್ರದೇಶಗಳು ಶೇ. 3 ಹಾಗೂ ಹೆಚ್ಚು ಜಿಡಿಪಿ ಬೆಳವಣಿಗೆ ಕಾಣಬಹುದು ಎಂದು ನಿರೀಕ್ಷಿಸಲಾಗಿದೆ. ನಾಲ್ಕು ದೇಶಗಳು ಶೇ. 1ಕ್ಕಿಂತಲೂ ಕಡಿಮೆ ಜಿಡಿಪಿ ದರ ಹೊಂದಿರಬಹುದು ಎಂದು ಅಂದಾಜಿಸಲಾಗಿದೆ. ಅರ್ಜೆಂಟೀನಾ ಶೇ. 3.5ರಷ್ಟು ಜಿಡಿಪಿ ನಷ್ಟ ಕಾಣಬಹುದು ಎನ್ನಲಾಗಿದೆ.
ಇದನ್ನೂ ಓದಿ: ಹೂಡಿಕೆದಾರರಿಗೆ ಅಮೆರಿಕ ಬಿಟ್ಟರೆ ಭಾರತವೇ ಮೊದಲ ಆದ್ಯತೆ: ಸಿಟಿ ಗ್ರೂಪ್ ವೈಸ್ ಛೇರ್ಮನ್ ವಿಶ್ವಾಸ್ ರಾಘವನ್
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ