ಹೂಡಿಕೆದಾರರಿಗೆ ಅಮೆರಿಕ ಬಿಟ್ಟರೆ ಭಾರತವೇ ಮೊದಲ ಆದ್ಯತೆ: ಸಿಟಿ ಗ್ರೂಪ್ ವೈಸ್ ಛೇರ್ಮನ್ ವಿಶ್ವಾಸ್ ರಾಘವನ್

Citigroup vice-chairman Viswas Raghavan: ಡೊನಾಲ್ಡ್ ಟ್ರಂಪ್ ಅಮೆರಿಕ ಅಧ್ಯಕ್ಷರಾಗಿರುವುದು ಭಾರತಕ್ಕೆ ಅನುಕೂಲವಾಗುತ್ತದೆ ಎಂದು ಸಿಟಿಗ್ರೂಪ್​ನ ಬ್ಯಾಂಕಿಂಗ್ ಮುಖ್ಯಸ್ಥ ವಿಶ್ವಾಸ್ ರಾಘವನ್ ಅಭಿಪ್ರಾಯಪಟ್ಟಿದ್ದಾರೆ. ಜಾಗತಿಕ ಹೂಡಿಕೆಗಳ ಒಳಹರಿವಿಗೆ ಅಮೆರಿಕ ಬಿಟ್ಟರೆ ಭಾರತವೇ ಅತಿದೊಡ್ಡ ಮಾರುಕಟ್ಟೆಯಾಗಿದೆ. ಭಾರತದಲ್ಲಿ ನೀವು ಏನೇ ತಯಾರಿಸಿದರೂ ಅದನ್ನು ಅಲ್ಲೇ ಬಳಕೆ ಮಾಡಬಹುದು. ಇದು ಭಾರತಕ್ಕಿರುವ ಅನುಕೂಲ ಎನ್ನುತ್ತಾರೆ ವಿ ರಾಘವನ್.

ಹೂಡಿಕೆದಾರರಿಗೆ ಅಮೆರಿಕ ಬಿಟ್ಟರೆ ಭಾರತವೇ ಮೊದಲ ಆದ್ಯತೆ: ಸಿಟಿ ಗ್ರೂಪ್ ವೈಸ್ ಛೇರ್ಮನ್ ವಿಶ್ವಾಸ್ ರಾಘವನ್
ವಿಶ್ವಾಸ್ ರಾಘವನ್
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Nov 18, 2024 | 11:34 AM

ಮುಂಬೈ, ನವೆಂಬರ್ 18: ಅಮೆರಿಕದಲ್ಲಿ ಡೊನಾಲ್ಡ್ ಟ್ರಂಪ್ ಸರ್ಕಾರ ಅಸ್ತಿತ್ವದಲ್ಲಿರುವ ವೇಳೆ ಭಾರತಕ್ಕೂ ಸಾಕಷ್ಟು ಲಾಭವಾಗಲಿದೆ. ಜಾಗತಿಕ ಹೂಡಿಕೆಗಳಿಗೆ ಅಮೆರಿಕ ಅತಿದೊಡ್ಡ ಮಾರುಕಟ್ಟೆಯಾದರೆ, ನಂತರದ ಆದ್ಯತೆ ಭಾರತಕ್ಕೆ ಸಿಗುತ್ತದೆ ಎಂದು ಸಿಟಿಗ್ರೂಪ್ ಸಂಸ್ಥೆಯ ಎಕ್ಸಿಕ್ಯೂಟಿವ್ ವೈಸ್ ಛೇರ್ಮನ್ ಆಗಿರುವ ವಿಶ್ವಾಸ್ ರಾಘವನ್ (Viswas Raghavan) ಹೇಳಿದ್ದಾರೆ. ರಾಘವನ್ ಪ್ರಕಾರ, ಕೈಯಲ್ಲಿ ಮೂರು ಟ್ರಿಲಿಯನ್ ಡಾಲರ್ ಹಣ ಹಿಡಿದು ಕೂತಿರುವ ಹೂಡಿಕೆದಾರರು ಎಲ್ಲಿಗೆ ಹಣ ಚೆಲ್ಲುವುದು ಎಂದು ಆಲೋಚಿಸುತ್ತಿದ್ದಾರೆ. ಯಾವ ಸ್ಥಳದಿಂದ ಹೆಚ್ಚು ರಿಟರ್ನ್ ಸಿಗುತ್ತದೆ ಎಂದು ಅವಲೋಕಿಸಿ ಎಚ್ಚರಿಕೆಯ ಹೆಜ್ಜೆಗಳನ್ನು ಇರಿಸುವ ನಿರೀಕ್ಷೆ ಇದೆ.

‘ಹೂಡಿಕೆಗಳು ಎತ್ತ ಹರಿದುಹೋಗಬಹುದು ಎಂದು ಸಾಕಷ್ಟು ಸಮಯದಿಂದ ಅವಲೋಕಿಸಿದ್ದೇವೆ. ಹೂಡಿಕೆ ಒಳಹರಿವಿಗೆ ಅಮೆರಿಕವೇ ಅತಿದೊಡ್ಡ ಮಾರುಕಟ್ಟೆಯಾಗಿದೆ. ನಂತರದ್ದು ಭಾರತವೇ,’ ಎಂದು ಸಿಟಿ ಗ್ರೂಪ್ ಎಕ್ಸಿಕ್ಯೂಟಿವ್ ವೈಸ್​ಛೇರ್ಮನ್ ಹೇಳಿದ್ದಾರೆ.

ಅಮೆರಿಕಕ್ಕೆ ಹೆಚ್ಚು ಹೂಡಿಕೆಗಳು ಹರಿದುಹೋಗುವುದು ಯಾಕೆ?

ಡೊನಾಲ್ಡ್ ಟ್ರಂಪ್ ಅವರು ಅಮೆರಿಕವನ್ನು ಮತ್ತೊಮ್ಮೆ ಉತ್ಪಾದಕ ರಾಷ್ಟ್ರವಾಗಿ ಮಾಡುವ ಗುರಿ ಹೊಂದಿದ್ದಾರೆ. ಅಮೆರಿಕದಲ್ಲಿ ಉತ್ಪನ್ನಗಳ ತಯಾರಿಕೆ ಆಗಲು ಉತ್ತೇಜಿಸುವಂತಹ ನೀತಿಗಳನ್ನು ಅವರು ರೂಪಿಸಲಿದ್ದಾರೆ. ಇದರಿಂದ ಬಹುರಾಷ್ಟ್ರೀಯ ಕಂಪನಿಗಳು ತಮ್ಮ ಹೂಡಿಕೆ ಪ್ಲಾನ್​ಗಳನ್ನು ಮರುಯೋಜಿಸುತ್ತಿವೆ. ಇದರಿಂದ ಅಮೆರಿಕದಲ್ಲಿ ಉದ್ಯೋಗಸೃಷ್ಟಿ ಹೆಚ್ಚಲಿದೆ ಎಂದು ವಿಶ್ವಾಸ್ ರಾಘವನ್ ಅಭಿಪ್ರಾಯಪಟ್ಟಿದ್ದಾರೆ.

ಇದನ್ನೂ ಓದಿ: ಕಾಣದೇ ಮಾಯವಾಗಿದ್ದ ಡಬ್ಬಾ ಟ್ರೇಡಿಂಗ್ ಮತ್ತೆ ಚಾಲ್ತಿಗೆ; ದಿನಕ್ಕೆ 100 ಲಕ್ಷಕೋಟಿ ರೂ ವಹಿವಾಟು; ಏನಿದು ಡಬ್ಬಾ? ಇಲ್ಲಿದೆ ಮಾಹಿತಿ

ಬೇರೆ ದೇಶಗಳಿಗಿಲ್ಲದ ಅನುಕೂಲ ಭಾರತಕ್ಕಿದೆ…

ಡೊನಾಲ್ಡ್ ಟ್ರಂಪ್ ಭಾರತದ ಬಗ್ಗೆ ಸಕಾರಾತ್ಮಕ ಧೋರಣೆ ಹೊಂದಿದ್ದಾರೆ. ಭಾರತದ ಮಾರುಕಟ್ಟೆಯೂ ಪೂರಕ ರೀತಿಯಲ್ಲಿ ಇದೆ. ಇದು ಭಾರತಕ್ಕೆ ಅನುಕೂಲ ತರುವ ಸಂಗತಿ ಎಂಬುದು ರಾಘವನ್ ಅನಿಸಿಕೆ.

ಹಾಗೆಯೇ, ಭಾರತದಲ್ಲಿ ನೀವು ಏನೇ ತಯಾರಿಸಿದರೂ ಅದನ್ನು ಭಾರತದಲ್ಲೇ ಬಳಸಬಹುದು. ಇದು ಭಾರತದ ಮಾರುಕಟ್ಟೆಯ ವೈಶಿಷ್ಟ್ಯ. ಅದೇ ನೀವು ಯುಕೆ ಅಥವಾ ಬೇರೆ ದೇಶವನ್ನು ತೆಗೆದುಕೊಳ್ಳಿ, ಅಲ್ಲಿ ತಯಾರಾಗುವ ಸರಕನ್ನು ಬೇರೆಡೆಗೆ ಸಾಗಿಸಬೇಕಾಗುತ್ತದೆ. ಭಾರತದಲ್ಲಿ ಹೆಚ್ಚುತ್ತಿರುವ ಆದಾಯ ಮತ್ತು ಜನರ ಬೇಡಿಕೆಯು ಇಲ್ಲಿ ಸರಕು ಮತ್ತು ಸೇವೆಗಳಿಗೆ ಅತ್ಯುತ್ತಮ ಮಾರುಕಟ್ಟೆಯನ್ನು ನಿರ್ಮಿಸಿದೆ ಎಂದು ಸಿಟಿಗ್ರೂಪ್ ಸಂಸ್ಥೆಯ ಉಪಾಧ್ಯಕ್ಷರಾಗಿರುವ ವಿಶ್ವಾಸ್ ರಾಘವನ್ ತಿಳಿಸಿದ್ದಾರೆ.

ಇದನ್ನೂ ಓದಿ: ಬಜೆಟ್​ನಲ್ಲಿ ಟ್ಯಾಕ್ಸ್ ದರ ಕಡಿಮೆ ಆಗುತ್ತಾ? ಮಧ್ಯಮವರ್ಗದವರಿಗೆ ರಿಲೀಫ್ ಕೊಡಿ ಎಂದ ವ್ಯಕ್ತಿಯೊಬ್ಬರಿಗೆ ನಿರ್ಮಲಾ ಮೇಡಂ ಸಕಾರಾತ್ಮಕ ಸ್ಪಂದನೆ

ವಿಶ್ವದ ಅಗ್ರಮಾನ್ಯ ಬ್ಯಾಂಕುಗಳಲ್ಲಿ ಒಂದಾದ ಸಿಟಿಗ್ರೂಪ್​ನಲ್ಲಿ ವೈಸ್​ಛೇರ್ಮನ್​ನಂತಹ ಪ್ರಮುಖ ಹುದ್ದೆ ಹೊಂದಿರುವ ವಿಶ್ವಾಸ್ ರಾಘವನ್ ಭಾರತ ಮೂಲದವರು. ಮುಂಬೈನಲ್ಲೇ ಓದಿ ಬೆಳೆದು ಬಳಿಕ ಯುಕೆಯಲ್ಲಿ ಉನ್ನತ ವ್ಯಾಸಂಗ ಮಾಡಿದ್ದಾರೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಜೆಪಿಗೆ ಹಣದ ಕೊರತೆಯಿಲ್ಲ, ಹಣ ಚೆಲ್ಲಿ ಶಾಸಕರನ್ನು ಖರೀದಿಸುತ್ತಾರೆ: ಗಾಣಿಗ
ಬಿಜೆಪಿಗೆ ಹಣದ ಕೊರತೆಯಿಲ್ಲ, ಹಣ ಚೆಲ್ಲಿ ಶಾಸಕರನ್ನು ಖರೀದಿಸುತ್ತಾರೆ: ಗಾಣಿಗ
ಬ್ರೆಜಿಲ್​ನಲ್ಲಿ ಮಂತ್ರ-ಘೋಷಗಳೊಂದಿಗೆ ಪ್ರಧಾನಿ ಮೋದಿಗೆ ಸ್ವಾಗತ
ಬ್ರೆಜಿಲ್​ನಲ್ಲಿ ಮಂತ್ರ-ಘೋಷಗಳೊಂದಿಗೆ ಪ್ರಧಾನಿ ಮೋದಿಗೆ ಸ್ವಾಗತ
ಡಬಲ್ ವೈಲ್ಡ್ ಕಾರ್ಡ್​ ಎಂಟ್ರಿಗೆ ಬಿಗ್ ಬಾಸ್ ಮನೆ ಶೇಕ್; ಪ್ರಬಲರೇ ಟಾರ್ಗೆಟ್
ಡಬಲ್ ವೈಲ್ಡ್ ಕಾರ್ಡ್​ ಎಂಟ್ರಿಗೆ ಬಿಗ್ ಬಾಸ್ ಮನೆ ಶೇಕ್; ಪ್ರಬಲರೇ ಟಾರ್ಗೆಟ್
ಬಿಜೆಪಿಯಿಂದ 50 ಅಲ್ಲ, 100 ಕೋಟಿ ರೂ. ಆಫರ್: ರವಿಕುಮಾರ್​ ಗಣಿಗ ಮತ್ತೆ ಆರೋಪ
ಬಿಜೆಪಿಯಿಂದ 50 ಅಲ್ಲ, 100 ಕೋಟಿ ರೂ. ಆಫರ್: ರವಿಕುಮಾರ್​ ಗಣಿಗ ಮತ್ತೆ ಆರೋಪ
Video: ಆಂಬ್ಯುಲೆನ್ಸ್​ಗೆ ದಾರಿ ಬಿಡದ ಕಾರು ಚಾಲಕನಿಗೆ 2.5 ಲಕ್ಷ ರೂ. ದಂಡ
Video: ಆಂಬ್ಯುಲೆನ್ಸ್​ಗೆ ದಾರಿ ಬಿಡದ ಕಾರು ಚಾಲಕನಿಗೆ 2.5 ಲಕ್ಷ ರೂ. ದಂಡ
Daily Devotional: ಪುಣ್ಯ ಕ್ಷೇತ್ರಗಳಿಗೆ ಹೋದಾಗ ಆಹಾರ ಪದ್ಧತಿ ಹೇಗಿರಬೇಕು
Daily Devotional: ಪುಣ್ಯ ಕ್ಷೇತ್ರಗಳಿಗೆ ಹೋದಾಗ ಆಹಾರ ಪದ್ಧತಿ ಹೇಗಿರಬೇಕು
ಕಾರ್ತಿಕ ಸೋಮವಾರದಂದು ಯಾವೆಲ್ಲಾ ರಾಶಿಗಳ ಭವಿಷ್ಯ ಹೇಗಿದೆ ತಿಳಿಯಿರಿ
ಕಾರ್ತಿಕ ಸೋಮವಾರದಂದು ಯಾವೆಲ್ಲಾ ರಾಶಿಗಳ ಭವಿಷ್ಯ ಹೇಗಿದೆ ತಿಳಿಯಿರಿ
ಪಾಸ್ ತೋರಿಸಿ ಎಂದಿದ್ದಕ್ಕೆ ಬಿಎಂಟಿಸಿ ಸಿಬ್ಬಂದಿಗೆ ಆವಾಜ್ ಹಾಕಿದ ಪ್ರಯಾಣಿಕ
ಪಾಸ್ ತೋರಿಸಿ ಎಂದಿದ್ದಕ್ಕೆ ಬಿಎಂಟಿಸಿ ಸಿಬ್ಬಂದಿಗೆ ಆವಾಜ್ ಹಾಕಿದ ಪ್ರಯಾಣಿಕ
‘ಪುಷ್ಪ 2’ ಟ್ರೇಲರ್​ ಲಾಂಚ್​ನಲ್ಲಿ ಜನಸಾಗರ; ಅಲ್ಲು ಅರ್ಜುನ್ ಕ್ರೇಜ್ ನೋಡಿ
‘ಪುಷ್ಪ 2’ ಟ್ರೇಲರ್​ ಲಾಂಚ್​ನಲ್ಲಿ ಜನಸಾಗರ; ಅಲ್ಲು ಅರ್ಜುನ್ ಕ್ರೇಜ್ ನೋಡಿ
ಮದ್ವೆ ಮನೆಯಲ್ಲಿ ಕಳ್ಳರ ಕೈಚಳಕ: ಚಿನ್ನ, ಹಣ ದೋಚಿದ ಖದೀಮರು!
ಮದ್ವೆ ಮನೆಯಲ್ಲಿ ಕಳ್ಳರ ಕೈಚಳಕ: ಚಿನ್ನ, ಹಣ ದೋಚಿದ ಖದೀಮರು!