ಕಾಣದೇ ಮಾಯವಾಗಿದ್ದ ಡಬ್ಬಾ ಟ್ರೇಡಿಂಗ್ ಮತ್ತೆ ಚಾಲ್ತಿಗೆ; ದಿನಕ್ಕೆ 100 ಲಕ್ಷಕೋಟಿ ರೂ ವಹಿವಾಟು; ಏನಿದು ಡಬ್ಬಾ? ಇಲ್ಲಿದೆ ಮಾಹಿತಿ

Dabba trading updates: ಅಧಿಕೃತ ಷೇರು ಮಾರುಕಟ್ಟೆಗೆ ಸೆಡ್ಡು ಹೊಡೆಯುವಷ್ಟು ಪ್ರಬಲವಾಗಿರುವ ಡಬ್ಬಾ ಮಾರುಕಟ್ಟೆ ಮತ್ತೆ ಕಂಬ್ಯಾಕ್ ಮಾಡಿದೆ. ದಿನಕ್ಕೆ ನೂರು ಲಕ್ಷ ಕೋಟಿ ರೂನಷ್ಟು ವಹಿವಾಟು ಈ ಡಬ್ಬಾ ಮಾರುಕಟ್ಟೆಯಲ್ಲಿ ನಡೆಯುತ್ತಿದೆ. ಯಾವುದೇ ಪ್ರಾಧಿಕಾರದ ಮಾನ್ಯತೆ, ಅಂಕೆಗಳಿಲ್ಲದೇ ಚಾಲನೆಯಲ್ಲಿರುವ ಈ ಡಬ್ಬಾ ಟ್ರೇಡಿಂಗ್​ಗೆ ಜನರು ಮುಗಿಬೀಳುತ್ತಿರುವುದು ಯಾಕೆ?

ಕಾಣದೇ ಮಾಯವಾಗಿದ್ದ ಡಬ್ಬಾ ಟ್ರೇಡಿಂಗ್ ಮತ್ತೆ ಚಾಲ್ತಿಗೆ; ದಿನಕ್ಕೆ 100 ಲಕ್ಷಕೋಟಿ ರೂ ವಹಿವಾಟು; ಏನಿದು ಡಬ್ಬಾ? ಇಲ್ಲಿದೆ ಮಾಹಿತಿ
ಡಬ್ಬಾ ಟ್ರೇಡರ್
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Nov 18, 2024 | 10:49 AM

ನವದೆಹಲಿ, ನವೆಂಬರ್ 18: ಭಾರತದಲ್ಲಿ ಅಧಿಕೃತ ಷೇರು ಬಜಾರಿಗೆ ಮತ್ತು ಸರ್ಕಾರಕ್ಕೆ ತಲೆನೋವಾಗಿದ್ದ ಡಬ್ಬಾ ಟ್ರೇಡಿಂಗ್ ಮತ್ತೆ ತಲೆ ಎತ್ತುತ್ತಿದೆ. ಷೇರುಪೇಟೆ ದಿನೇ ದಿನೇ ಕುಸಿತ ಕಾಣುತ್ತಿದ್ದು ಅದರ ಪರಿಣಾಮವು ಎಫ್ ಅಂಡ್ ಒ ಟ್ರೇಡಿಂಗ್​ನಂತಹ ಡಿರೈವೇಟಿವ್ ಮಾರುಕಟ್ಟೆಗಳಲ್ಲಿ ವ್ಯವಹಾರ ಕಡಿಮೆ ಆಗುತ್ತಿದೆ. ಇದರ ಬೆನ್ನಲ್ಲೇ ಕಾಳಸಂತೆಯಂತೆ ಕಾಣದ ಕಣ್ಮರೆ ನಡೆಯುವ ಡಬ್ಬಾ ಟ್ರೇಡಿಂಗ್ ಹೊಸ ಹುರುಪಿನೊಂದಿಗೆ ಕಂಬ್ಯಾಕ್ ಮಾಡಿದೆ. ಷೇರು ಮಾರುಕಟ್ಟೆಯ ನಿರಂತರ ಕುಸಿತದಿಂದ ಜರ್ಝರಿತರಾದ ಹಲವು ಹೂಡಿಕೆದಾರರು ಈ ಡಬ್ಬಾ ಮಾರುಕಟ್ಟೆಗೆ ಆಕರ್ಷಿತರಾಗುತ್ತಿದ್ದಾರೆ ಎನ್ನಲಾಗಿದೆ. ವರದಿಗಳ ಪ್ರಕಾರ ಈ ಅನಧಿಕೃತ ಟ್ರೇಡಿಂಗ್​ಗಳಲ್ಲಿ ಒಂದು ದಿನಕ್ಕೆ ಬರೋಬ್ಬರಿ 100 ಲಕ್ಷ ಕೋಟಿ ರೂ ಮೊತ್ತದ ವಹಿವಾಟು ನಡೆಯುತ್ತಿದೆಯಂತೆ.

ಮಾರುಕಟ್ಟೆ ತಜ್ಞರ ಪ್ರಕಾರ ಡಬ್ಬಾ ಟ್ರೇಡಿಂಗ್​ನಲ್ಲಿ ಆಗುತ್ತಿರುವ ವಹಿವಾಟು ಎಫ್ ಅಂಡ್ ಒ ಟ್ರೇಡಿಂಗ್​ನ ಶೇ. 20ರಷ್ಟಿದೆ ಎನ್ನಲಾಗಿದೆ. ತೊಂಬತ್ತರ ದಶಕ ಮತ್ತು 2000ದ ದಶಕದಲ್ಲಿ ಡಬ್ಡಾ ಟ್ರೇಡಿಂಗ್ ಉಚ್ಛ್ರಾಯ ಸ್ಥಿತಿಯಲ್ಲಿತ್ತು. ಎಫ್ ಅಂಡ್ ಒದ ವಹಿವಾಟಿನ ಶೇ. 30ರಿಂದ 35ರಷ್ಟು ಮೊತ್ತದ ಹಣವು ಆಗ ಡಬ್ಬಾ ಟ್ರೇಡಿಂಗ್​ನಲ್ಲಿ ಚಲಾವಣೆ ಆಗುತ್ತಿತ್ತಂತೆ. ಈಗ ಅದು ಶೇ. 20ರಷ್ಟಿದೆ. ಇದು ಇನ್ನೂ ಹೆಚ್ಚುವ ಸಾಧ್ಯತೆ ಇದೆ ಎನ್ನುತ್ತಿದ್ದಾರೆ ಪರಿಣಿತರು.

ಇದನ್ನೂ ಓದಿ: ಜನರಿಂದ, ಜನರಿಗೋಸ್ಕರ ಇರುವ ಸಂಸ್ಥೆಯಾಗಬೇಕು; 500 ವರ್ಷ ನಡೆಯಬೇಕು: ಕನಸು ಬಿಚ್ಚಿಟ್ಟ ವೇದಾಂತ ಮುಖ್ಯಸ್ಥ ಅನಿಲ್ ಅಗರ್ವಾಲ್

ಡಬ್ಬಾ ಟ್ರೇಡಿಂಗ್ ತುಂಬಾ ರಿಸ್ಕಿ…

ಡಬ್ಬಾ ಟ್ರೇಡಿಂಗ್ ಅನಧಿಕೃತವಾಗಿ ನಡೆಯುವ ಮಾರುಕಟ್ಟೆ. ಅಧಿಕೃತ ಷೇರು ಬಜಾರಿನಂತೆಯೇ ಇದೂ ಕಾರ್ಯನಿರ್ವಹಿಸುತ್ತದೆ. ವಿನಿಮಯ ಕೇಂದ್ರಗಳಿರುತ್ತವೆ. ಬ್ರೋಕರ್​ಗಳೂ ಇರುತ್ತಾರೆ. ಆದರೆ, ಇವರಿಗೆಲ್ಲಾ ಕಾನೂನು ಕಟ್ಟಳೆಗಳಿರುವುದಿಲ್ಲ. ಹಣ ಲಪಟಾಯಿಸಿದರೆ ಹೇಳುವವರು, ಕೇಳುವವರು ಇರುವುದಿಲ್ಲ.

ಜನರು ಯಾಕೆ ಈ ಡಬ್ಬಾ ಟ್ರೇಡಿಂಗ್ ಕಡೆ ಆಕರ್ಷಿತರಾಗುತ್ತಿದ್ದಾರೆ?

ಡಬ್ಬಾ ಟ್ರೇಡಿಂಗ್ ಮಾರುಕಟ್ಟೆಯು ಯಾವುದೇ ನಿಯಂತ್ರಣಕ್ಕೆ ಒಳಪಟ್ಟಿಲ್ಲವಾದ್ದರಿಂದ ನಿಯಮಗಳೆಲ್ಲವೂ ಆಕರ್ಷಕವಾಗಿರುತ್ತವೆ. ತೆರಿಗೆ ಇರುವುದಿಲ್ಲ, ಶುಲ್ಕ ಇರುವುದಿಲ್ಲ. ಷೇರುಗಳ ಲಾಟ್ ಕೂಡ ಕಡಿಮೆ ಇರುತ್ತದೆ. ಟ್ರೇಡರ್​ಗಳು ಗೌಪ್ಯವಾಗಿ ವ್ಯವಹಾರ ನಡೆಸಬಹುದು.

ಡಬ್ಬಾ ಟ್ರೇಡರ್​ವೊಬ್ಬ ಭಾರಿ ನಷ್ಟ ಕಂಡು ಕಣ್ಮರೆಯಾಗಿಬಿಟ್ಟರೆ, ಹೂಡಿಕೆದಾರರಿಗೆ ಅವರ ಹಣ ಹಿಂಪಡೆಯುವ ದಾರಿಯೇ ಇರುವುದಿಲ್ಲ.

ಇದನ್ನೂ ಓದಿ: ಬಜೆಟ್​ನಲ್ಲಿ ಟ್ಯಾಕ್ಸ್ ದರ ಕಡಿಮೆ ಆಗುತ್ತಾ? ಮಧ್ಯಮವರ್ಗದವರಿಗೆ ರಿಲೀಫ್ ಕೊಡಿ ಎಂದ ವ್ಯಕ್ತಿಯೊಬ್ಬರಿಗೆ ನಿರ್ಮಲಾ ಮೇಡಂ ಸಕಾರಾತ್ಮಕ ಸ್ಪಂದನೆ

ಇನ್ನೊಂದೆಡೆ ಷೇರು ಮಾರುಕಟ್ಟೆಯಲ್ಲಿ ಅಧಿಕೃತವಾಗಿರುವ ಎಫ್ ಅಂಡ್ ಒ ಟ್ರೇಡಿಂಗ್​ನಲ್ಲಿ ಸೆಬಿ ಕಠಿಣ ನಿಯಮ, ಶುಲ್ಕಗಳನ್ನು ಹಾಕುತ್ತಿದೆ. ಹೀಗಾಗಿ, ಇಲ್ಲಿ ಶೇ. 40ರಷ್ಟು ಟ್ರೇಡಿಂಗ್ ಕಡಿಮೆ ಆಗುತ್ತಿದೆ. ಇಲ್ಲಿಂದ ಹೊರಹೋಗುತ್ತಿರುವ ಟ್ರೇಡರ್​ಗಳು ಡಬ್ಬಾ ಟ್ರೇಡಿಂಗ್, ಗೇಮಿಂಗ್ ಇತ್ಯಾದಿ ಕಡೆ ವಾಲುತ್ತಿರಬಹುದು ಎನ್ನಲಾಗಿದೆ.

ಅಧಿಕೃತ ಷೇರು ಮಾರುಕಟ್ಟೆಯಲ್ಲಿ ಸರ್ಕಾರ ತೆರಿಗೆ ಮೊತ್ತವನ್ನು ಕಡಿಮೆ ಮಾಡಿದರೆ ಅನಧಿಕೃತ ಟ್ರೇಡಿಂಗ್ ಭೂತ ಆವರಿಸದಂತೆ ನಿಯಂತ್ರಿಸಬಹುದು ಎನ್ನುವುದು ಕೆಲ ತಜ್ಞರ ಅನಿಸಿಕೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?