Smartphone: ಭಾರತದಿಂದ ಸ್ಮಾರ್ಟ್​ಫೋನ್ ರಫ್ತು ಎರಡು ಪಟ್ಟು ಹೆಚ್ಚಳ; ವಿಶ್ವ ಮೊಬೈಲ್ ಮಾರುಕಟ್ಟೆಯಲ್ಲಿ ಮಿಂಚಲಿದೆಯಾ ಭಾರತ?

|

Updated on: Apr 13, 2023 | 10:45 AM

Spike In India's Export of Electronics: 2021-22ರ ಹಣಕಾಸು ವರ್ಷದಲ್ಲಿ ಭಾರತದಿಂದ ಆದ ಸ್ಮಾರ್ಟ್​ಫೋನ್​ಗಳ ರಫ್ತು 45,000 ಕೋಟಿ ರೂ. ಆದರೆ, 2022-23ರ ಹಣಕಾಸು ವರ್ಷದಲ್ಲಿ ಈ ಪ್ರಮಾಣ 90,000 ಕೋಟಿ ರೂ ಗಡಿ ದಾಟಿದೆ ಎಂದು ಐಸಿಎಎ ಹೇಳಿದೆ.

Smartphone: ಭಾರತದಿಂದ ಸ್ಮಾರ್ಟ್​ಫೋನ್ ರಫ್ತು ಎರಡು ಪಟ್ಟು ಹೆಚ್ಚಳ; ವಿಶ್ವ ಮೊಬೈಲ್ ಮಾರುಕಟ್ಟೆಯಲ್ಲಿ ಮಿಂಚಲಿದೆಯಾ ಭಾರತ?
ಸ್ಮಾರ್ಟ್​ಫೋನ್ ತಯಾರಿಕೆ
Follow us on

ನವದೆಹಲಿ: ಕಳೆದ ಬಾರಿಯ ಹಣಕಾಸು ವರ್ಷದಲ್ಲಿ (2022-23) ಭಾರತದಿಂದ ರಫ್ತಾದ ಸ್ಮಾರ್ಟ್​ಫೋನ್​ಗಳ ಪ್ರಮಾಣ (Smartphone Exports) ಎರಡು ಪಟ್ಟು ಹೆಚ್ಚಳವಾಗಿದೆ. 11 ಬಿಲಿಯನ್ ಡಾಲರ್ (ಸುಮಾರು ಎಂದು ಇಂಡಿಯಾ ಸೆಲ್ಯೂಲರ್ ಅಂಡ್ ಎಲೆಕ್ಟ್ರಾನಿಕ್ಸ್ ಅಸೋಸಿಯೇಶನ್ (ICEA) ಹೇಳಿದೆ. ಮಾಧ್ಯಮಗಳೊಂದಿಗೆ ಮಾತನಾಡಿದ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್, ಐಸಿಇಎ ಪ್ರಕಟಿಸಿದ ಅಂಕಿ ಅಂಶವನ್ನು ಉಲ್ಲೇಖಿಸುತ್ತಾ, ವಿಶ್ವದ ಮೊಬೈಲ್ ಸಾಧನಗಳ ಮಾರುಕಟ್ಟೆಯಲ್ಲಿ (Mobile Device Market) ಭಾರತ ಮುಂಚೂಣಿಗೆ ಬರುತ್ತಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ. ಐಸಿಇಎ ಪ್ರಕಟಿಸಿದ ದತ್ತಾಂಶದ ಪ್ರಕಾರ 2022-23ರ ಹಣಕಾಸು ವರ್ಷದಲ್ಲಿ ಭಾರತದಿಂದ ಆದ ಸ್ಮಾರ್ಟ್​ಫೋನ್​ಗಳ ರಫ್ತು 11 ಬಿಲಿಯನ್ ಡಾಲರ್​ಗೂ ಹೆಚ್ಚು. ಅಂದರೆ ಸುಮಾರು 90 ಸಾವಿರ ಕೋಟಿಗೂ ಹೆಚ್ಚು ರೂಪಾಯಿ ಮೌಲ್ಯದಷ್ಟು ಸ್ಮಾರ್ಟ್​​ಫೋನ್​ಗಳನ್ನು ಭಾರತ ವಿಶ್ವದ ವಿವಿಧ ದೇಶಗಳಿಗೆ ಮಾರಾಟ ಮಾಡಿದೆ. ಕೇಂದ್ರ ಸಚಿವರ ಪ್ರಕಾರ ಇದು ಮೇಕ್ ಇನ್ ಇಂಡಿಯಾ ಯೋಜನೆಯ ಫಲಶ್ರುತಿ.

‘ಸ್ಮಾರ್ಟ್​ಫೋನ್​ಗಳ ರಫ್ತು ಎರಡು ಪಟ್ಟು ಹೆಚ್ಚಳಗೊಂಡು 11 ಬಿಲಿಯನ್ ಡಾಲರ್​ಗೂ ಅಧಿಕ ರಫ್ತು ಆಗಿದೆ. ವಿಶ್ವದ ಮೊಬೈಲ್ ಡಿವೈಸ್ ಮಾರುಕಟ್ಟೆಯಲ್ಲಿ ಭಾರತ ಮುಂಚೂಣಿಗೆ ಬರುತ್ತಿದೆ. ಎಲೆಕ್ಟ್ರಾನಿಕ್ಸ್ ರಫ್ತಿನಲ್ಲೂ ಭಾರತ ಪ್ರಮುಖ ಸ್ಥಾನದಲ್ಲಿರಲಿದೆ. ಪ್ರಧಾನಿ ನರೇಂದ್ರ ಮೋದಿ ಅವರ ಮೇಕ್ ಇನ್ ಇಂಡಿಯಾ ಯೋಜನೆಗೆ ಸಿಕ್ಕ ದೊಡ್ಡ ಯಶಸ್ಸು ಇದು’ ಎಂದು ಅಶ್ವಿನಿ ವೈಷ್ಣವ್ ಹೇಳಿದ್ದಾರೆ.

ಇದನ್ನೂ ಓದಿInflation: ಕೊನೆಗೂ ಹಳಿಗೆ ಬಂದ ಹಣದುಬ್ಬರ; ಶೇ. 5.6ಕ್ಕೆ ಇಳಿದ ರೀಟೇಲ್ ಇನ್​ಫ್ಲೇಶನ್

2021-22ರ ಹಣಕಾಸು ವರ್ಷದಲ್ಲಿ ಭಾರತದಿಂದ ಆದ ಸ್ಮಾರ್ಟ್​ಫೋನ್​ಗಳ ರಫ್ತು 45,000 ಕೋಟಿ ರೂ. ಆದರೆ, 2022-23ರ ಹಣಕಾಸು ವರ್ಷದಲ್ಲಿ ಈ ಪ್ರಮಾಣ 90,000 ಕೋಟಿ ರೂ ಗಡಿ ದಾಟಿದೆ ಎಂದು ಐಸಿಎಎ ಹೇಳಿದೆ.

ಪ್ರಧಾನಿ ನರೇಂದ್ರ ಮೋದಿ ಜೊತೆ ಸಚಿವ ಅಶ್ವಿನಿ ವೈಷ್ಣವ್

ದೊಡ್ಡ ಪ್ರಮಾಣದಲ್ಲಿ ರಫ್ತು ನಡೆಯದೇ ಯಾವುದೇ ಆರ್ಥಿಕತೆ ಪ್ರಬಲಗೊಳ್ಳಲು ಸಾಧ್ಯವಿಲ್ಲ. ಮೊಬೈಲ್ ಫೋನ್ ರಫ್ತಿನ ವೇಗ ಮುಂದುವರಿದಿದೆ. 2022-23ರ ಹಣಕಾಸು ವರ್ಷದಲ್ಲಿ ಮೊಬೈಲ್ ಫೋನ್ ರಫ್ತು 90,000 ಕೋಟಿ ರೂ ಗಡಿ ದಾಟಿದೆ. ಇದರ ಯಶಸ್ಸಿನ ನೆರವಿನಿಂದ ಎಲೆಕ್ಟ್ರಾನಿಕ್ಸ್ ರಫ್ತು ಕೂಡ 1.85 ಲಕ್ಷ ಕೋಟಿ ರೂ ಮೊತ್ತಕ್ಕೆ ಏರಿದೆ. ಅಂದರೆ ಎಲೆಕ್ಟ್ರಾನಿಕ್ಸ್ ರಫ್ತು ಹಿಂದಿನ ಹಣಕಾಸು ವರ್ಷಕ್ಕೆ ಹೋಲಿಸಿದರೆ ಎಲೆಕ್ಟ್ರಾನಿಕ್ಸ್ ರಫ್ತಿನಲ್ಲಿ ಶೇ. 58ರಷ್ಟು ಹೆಚ್ಚಾಗಿದೆ. 2022-23ರ ವರ್ಷಕ್ಕೆ ರಫ್ತಿನ ಗುರಿ ಇದ್ದದ್ದು 75,000 ಕೋಟಿ ರೂ ಮಾತ್ರ. ಅದನ್ನು ಸುಲಭವಾಗಿ ನಾವು ದಾಟಿದ್ದೇವೆ,’ ಎಂದು ಇಂಡಿಯಾ ಸೆಲ್ಯೂಲಾರ್ ಅಂಡ್ ಎಲೆಕ್ಟ್ರಾನಿಕ್ಸ್ ಅಸೋಷಿಯೇಶನ್ ಛೇರ್ಮನ್ ಪಂಕಜ್ ಮೋಹಿಂದ್ರೂ ತಿಳಿಸಿದ್ದಾರೆ.

ಇದನ್ನೂ ಓದಿLIC Investments: ಅದಾನಿ ಗ್ರೂಪ್​ನಿಂದ ಮ್ಯೂಚುವಲ್ ಫಂಡ್​ಗಳು ಹೊರಬಿದ್ದರೂ ಹೂಡಿಕೆ ಹೆಚ್ಚಿಸಿದ ಎಲ್​ಐಸಿ

10 ಲಕ್ಷ ಕೋಟಿ ರೂ ಮೊತ್ತದ ಎಲೆಕ್ಟ್ರಾನಿಕ್ಸ್ ಉತ್ಪನ್ನಗಳ ರಫ್ತಿಗೆ ಗುರಿ

ಭಾರತದಲ್ಲಿ ಸ್ಮಾರ್ಟ್​ಫೋನ್ ಸೇರಿದಂತೆ ಎಲೆಕ್ಟ್ರಾನಿಕ್ಸ್ ವಸ್ತುಗಳಿಗೆ ಬಹಳ ದೊಡ್ಡ ಬೇಡಿಕೆ ಇದೆ. ಭಾರತದ್ದು ಬಹುದೊಡ್ಡ ಮಾರುಕಟ್ಟೆ. ಸರ್ಕಾರ ಕೂಡ ಮೇಕ್ ಇನ್ ಇಂಡಿಯಾ ಯೋಜನೆ ಅನ್ವಯ ಬಹಳಷ್ಟು ಎಲೆಕ್ಟ್ರಾನಿಕ್ಸ್ ವಸ್ತುಗಳನ್ನು ಭಾರತದಲ್ಲೇ ತಯಾರಿಸಲು ವಾತಾವರಣ ಸಿದ್ಧಪಡಿಸಿದೆ. ಐಫೋನ್ ಸೇರಿದಂತೆ ಈಗಾಗಲೇ ಬಹಳಷ್ಟು ಸ್ಮಾರ್ಟ್​ಫೋನ್ ಹಾಗೂ ಎಲೆಕ್ಟ್ರಾನಿಕ್ಸ್ ಬಿಡಿಭಾಗಗಳು ಭಾರತದಲ್ಲಿ ತಯಾರಾಗುತ್ತಿವೆ. 2025-26ರ ವರ್ಷದಷ್ಟರಲ್ಲಿ 300 ಬಿಲಿಯನ್ ಡಾಲರ್ (ಸುಮಾರು 24 ಲಕ್ಷ ಕೋಟಿ ರೂ) ಮೌಲ್ಯದ ಎಲೆಕ್ಟ್ರಾನಿಕ್ಸ್ ಭಾರತದಲ್ಲಿ ತಯಾರಾಗಬೇಕು ಎನ್ನುವ ಗುರಿ ಸರ್ಕಾರದ್ದು. ಇದರಲ್ಲಿ 120 ಬಿಲಿಯನ್ ಡಾಲರ್ (ಸುಮಾರು 10 ಲಕ್ಷ ಕೋಟಿ ರೂ) ಮೌಲ್ಯದಷ್ಟು ಎಲೆಕ್ಟ್ರಾನಿಕ್ಸ್ ಉತ್ಪನ್ನಗಳು ರಫ್ತಾಗಬೇಕು ಎನ್ನುವ ಅಪೇಕ್ಷೆ ಇಟ್ಟುಕೊಳ್ಳಲಾಗಿದೆ.

ಇನ್ನಷ್ಟು ವ್ಯವಹಾರ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ