
ನವದೆಹಲಿ, ಡಿಸೆಂಬರ್ 26: ಈ ವರ್ಷ ಭಾರತದ ಬಿಲಿಯನೇರ್ಗಳಿಗೆ (Indian billionaires) ಮಿಶ್ರಾನುಭವ ಮತ್ತು ಮಿಶ್ರಫಲ ಸಿಕ್ಕಿದೆ. ಕೆಲ ಬಿಲಿಯನೇರ್ಗಳ ಶ್ರೀಮಂತಿಕೆ 2025ರಲ್ಲಿ ಗಣನೀಯವಾಗಿ ಏರಿದೆ. ಕೆಲವರಿಗೆ ಇಳಿಮುಖವಾಗಿದೆ. ಕೆಲವರ ಬ್ಯುಸಿನೆಸ್ ಹೆಚ್ಚಿದೆ, ಕೆಲವರ ಷೇರುಗಳ ಮೌಲ್ಯ ಕುಸಿದಿದೆ. ಮಾರುಕಟ್ಟೆಯ ಸಂಚಲನ, ಜಾಗತಿಕ ಪರಿಸ್ಥಿತಿಯ ಏರಿಳಿತಗಳು ಶ್ರೀಮಂತಿಕೆ ಮೇಲೆ ಪ್ರಭಾವ ಬೀರಿವೆ.
2025ರಲ್ಲಿ ಭಾರತೀಯ ಬಿಲಿಯನೇರ್ಗಳ ಪೈಕಿ ಸಿರಿತನ ಅತಿ ಹೆಚ್ಚು ಏರಿದ್ದು ಉಕ್ಕು ಉದ್ಯಮಿ ಲಕ್ಷ್ಮೀ ಮಿಟ್ಟಲ್ ಅವರದ್ದು. ಈ ಒಂದೇ ವರ್ಷದಲ್ಲಿ ಅವರ ಆಸ್ತಿಮೌಲ್ಯ ಶೇ. 59ರಷ್ಟು ಏರಿದೆ. ಆರ್ಸೆಲರ್ಮಿಟ್ಟಲ್ ಕಂಪನಿಯ ಛೇರ್ಮನ್ ಆಗಿರುವ ಲಕ್ಷ್ಮೀ ಮಿಟ್ಟಲ್ ಅವರ ಒಟ್ಟು ನಿವ್ವಳ ಆಸ್ತಿಮೌಲ್ಯ 31.2 ಬಿಲಿಯನ್ ಡಾಲರ್ಗೆ ಏರಿದೆ. ಇವರ ಕಂಪನಿಯ ಷೇರುಗಳು ಈ ವರ್ಷ ಶೇ. 70ರಷ್ಟು ಏರಿದ ಪರಿಣಾಮವಾಗಿ ಲಕ್ಷ್ಮೀ ಮಿಟ್ಟಲ್ ಸಿರಿತನ ಕೂಡ ಏರಿದೆ.
ಇದನ್ನೂ ಓದಿ: ಇನ್ಫೋಸಿಸ್ನಲ್ಲಿ ಭರ್ಜರಿ ಸಂಬಳ; ಎಂಟ್ರಿ ಲೆವೆಲ್ನಲ್ಲೇ 21 ಲಕ್ಷ ರೂ ಸ್ಯಾಲರಿ ಆಫರ್
ರಾಯಲ್ ಎನ್ಫೀಲ್ಡ್ ಬುಲೆಟ್ ಬೈಕ್ಗಳನ್ನು ತಯಾರಿಸುವ ಏಚರ್ ಮೋಟರ್ಸ್ ಕಂಪನಿಯ ಸಂಸ್ಥಾಪಕ ವಿಕ್ರಮ್ ಲಾಲ್ ಅವರ ಶ್ರೀಮಂತಿಕೆ ಶೇ. 42ರಷ್ಟು ಏರಿದೆ. ಇವರ ಮೋಟರ್ಸೈಕಲ್ಗಳು ಈ ವರ್ಷ ಉತ್ತಮ ಸೇಲ್ ಆಗಿವೆ. ಅಲ್ಟ್ರಾ ಪ್ರೀಮಿಯಮ್ ಸೆಗ್ಮೆಂಟ್ನಲ್ಲಿ ರಾಯಲ್ ಎನ್ಫೀಲ್ಡ್ ಶೇ. 81ರಷ್ಟು ಮಾರುಕಟ್ಟೆ ಪ್ರಾಬಲ್ಯ ಹೊಂದಿದೆ. ಹಾಗೆಯೇ, ಕಮರ್ಷಿಯಲ್ ವಾಹನಗಳ ಮಾರಾಟದಲ್ಲೂ ಕಂಪನಿ ಉತ್ತಮ ಪ್ರಗತಿ ಕಂಡಿದೆ. ಪರಿಣಾಮವಾಗಿ ಏಚರ್ ಮೋಟರ್ಸ್ನ ಷೇರುಬೆಲೆ ಈ ವರ್ಷ ಉತ್ತಮವಾಗಿ ಏರಿದೆ.
ಮುಕೇಶ್ ಅಂಬಾನಿ ಅವರ ಆಸ್ತಿಮೌಲ್ಯ ಈ ವರ್ಷ ಏರಿಕೆ ಆಗಿದ್ದು ಶೇ. 7.5 ಮಾತ್ರವೇ. ಆದರೂ ಕೂಡ ಅಂಬಾನಿ ಅವರೇ ಭಾರತದ ಅತಿದೊಡ್ಡ ಶ್ರೀಮಂತರಾಗಿ ಮುಂದುವರಿದಿದ್ದಾರೆ. ಗೌತಮ್ ಅದಾನಿ ಅವರ ಆಸ್ತಿಮೌಲ್ಯ ಇಳಿಮುಖವಾದರೂ ಅವರು ಎರಡನೇ ಅತಿದೊಡ್ಡ ಶ್ರೀಮಂತರಾಗಿದ್ದಾರೆ. ಇಲ್ಲಿ ಕೆಳಗೆ ಭಾರತದ ಬಿಲಿಯನೇರ್ಗಳ ಪಟ್ಟಿ ಇದೆ:
ಇದನ್ನೂ ಓದಿ: ಕರ್ನಾಟಕದ ವಿವಿಧ ಬ್ಯಾಂಕುಗಳಲ್ಲಿ ಕ್ಲೇಮ್ ಆಗದೇ ಉಳಿದಿರುವ ಹಣ ಎಷ್ಟು ಗೊತ್ತಾ? ಅನ್ಕ್ಲೇಮ್ಡ್ ಡೆಪಾಸಿಟ್ ಮರಳಿಪಡೆಯುವುದು ಹೇಗೆ?
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ