Milk Industry: ಕ್ಷೀರೋದ್ಯಮಕ್ಕೆ ಎಫ್​ಟಿಎ ಬೇಕೆ? ಆಮದು ಉತ್ಪನ್ನ ಜೊತೆ ಸ್ಪರ್ಧಿಸದಿದ್ದರೆ ರಫ್ತು ಹೇಗೆ ಸಾಧ್ಯ? ಹೆಚ್ಚುವರಿ ಹಾಲು ಏನು ಮಾಡುವುದು?

|

Updated on: Apr 16, 2023 | 4:21 PM

NITI Aayog Member Bats For FTA In Dairy Industry: ಮುಕ್ತ ವ್ಯಾಪಾರ ಒಪ್ಪಂದಕ್ಕೆ ಹೈನೋದ್ಯಮ ವಿರೋಧಿಸುವುದು ಸರಿ ಅಲ್ಲ. ಆಮದು ಹಾಲಿನ ಉತ್ಪನ್ನಗಳ ಜೊತೆ ಸ್ಪರ್ಧಿಸಲು ಸಾಧ್ಯವಾಗಲಿಲ್ಲವೆಂದರೆ ರಫ್ತಿನಲ್ಲಿ ಸ್ಪರ್ಧಾತ್ಮಕತೆ ಸಾಧಿಸಲು ಆಗುವುದಿಲ್ಲ ಎಂದು ನೀತಿ ಆಯೋಗ್ ಸದಸ್ಯ ರಮೇಶ್ ಚಂದ್ ಹೇಳಿದ್ದಾರೆ.

Milk Industry: ಕ್ಷೀರೋದ್ಯಮಕ್ಕೆ ಎಫ್​ಟಿಎ ಬೇಕೆ? ಆಮದು ಉತ್ಪನ್ನ ಜೊತೆ ಸ್ಪರ್ಧಿಸದಿದ್ದರೆ ರಫ್ತು ಹೇಗೆ ಸಾಧ್ಯ? ಹೆಚ್ಚುವರಿ ಹಾಲು ಏನು ಮಾಡುವುದು?
ಹಾಲು
Follow us on

ನವದೆಹಲಿ: ಹಾಲಿನ ಉತ್ಪನ್ನಗಳ ವ್ಯವಹಾರದ ನೀತಿಯನ್ನು ಉದಾರೀಕರಣಗೊಳಿಸುವ ಮುಕ್ತ ವ್ಯಾಪಾರ ಒಪ್ಪಂದವನ್ನು (FTA- Free Trade Agreement) ಭಾರತದ ಕ್ಷೀರೋದ್ಯಮ ವಿರೋಧ ವ್ಯಕ್ತಪಡಿಸುತ್ತಿರುವುದು ಸರಿಯಾದ ಧೋರಣೆ ಅಲ್ಲ ಎಂದು ನೀತಿ ಆಯೋಗ್ ಸದಸ್ಯ ರಮೇಶ್ ಚಂದ್ ಅಭಿಪ್ರಾಯಪಟ್ಟಿದ್ದಾರೆ. ಭಾರತ ಈಗಾಗಲೇ ವಿಶ್ವದ ಅತಿದೊಡ್ಡ ಹಾಲು ಉತ್ಪಾದಕ ದೇಶವಾಗಿ ಹೊರಹೊಮ್ಮಿದೆ. ತನ್ನ ಹೆಚ್ಚುವರಿ ಹಾಲನ್ನು ವಿದೇಶೀ ಮಾರುಕಟ್ಟೆಗಳಲ್ಲಿ ಮಾರಬೇಕಾದರೆ ದೇಶದ ಹೈನೋದ್ಯಮ ಅದಕ್ಕೆ ತಕ್ಕ ರೀತಿಯಲ್ಲಿ ಸ್ಪರ್ಧಾತ್ಮಕವಾಗಿರಬೇಕು. ಎಫ್​ಟಿಎಯನ್ನು ಸ್ವೀಕರಿಸಬೇಕು ಎಂದು ರಮೇಶ್ ಚಂದ್ ಕರೆ ನೀಡಿದ್ದಾರೆ. ಆಮದು ಉತ್ಪನ್ನಗಳನ್ನು ಎದುರಿಸಲು ಬೇಕಾಗುವ ಸ್ಪರ್ಧಾತ್ಮಕತೆಗಿಂತ ಹೆಚ್ಚು ಮಟ್ಟದ ಸ್ಪರ್ಧಾತ್ಮಕತೆ ರಫ್ತಿಗೆ ಬೇಕಾಗುತ್ತದೆ. ಆದ್ದರಿಂದ ಹಾಲಿನ ಉತ್ಪನ್ನಗಳ ಆಮದು ಸ್ವೀಕರಿಸಿ ಅದರ ವಿರುದ್ಧ ದೇಶದ ಹೈನೋದ್ಯಮ ಸ್ಪರ್ಧಿಸಬೇಕು ಎಂದು ನೀತಿ ಆಯೋಗದ ಸದಸ್ಯರು ಹೇಳಿದ್ದಾರೆ.

ಭಾರತದ ಡೈರಿ ಉದ್ಯಮ ಮುಂದಿನ 25 ವರ್ಷದಲ್ಲಿ ಡೈರಿ ಉತ್ಪನ್ನಗಳ ಅತಿ ಹೆಚ್ಚು ಆಮದುಗಾರ ದೇಶವಾಗಬೇಕೆಂಬ ಗುರಿ ಹೊಂದಿರಬೇಕು. ಇದು ಸಾಕಾರವಾಗಬೇಕಾದರೆ ಭಾರತದ ಹೈನೋದ್ಯಮ ಸ್ಪರ್ಧಾತ್ಮಕವಾಗಿರಬೇಕು. ಆಮದುಗಳ ಜೊತೆ ಸ್ಪರ್ಧೆ ಮಾಡಲು ಸಾಧ್ಯವಾಗದಿದ್ದರೆ ರಫ್ತು ಮಾರುಕಟ್ಟೆಯಲ್ಲಿ ಪ್ರಾಬಲ್ಯ ಸಾಧಿಸಲು ಹೇಗೆ ಸಾಧ್ಯ ಆಗುತ್ತದೆ? ಹಾಲಿನ ಗುಣಮಟ್ಟ ಮತ್ತು ಪಶುಗಳ ಆರೋಗ್ಯ ಪಾಲನೆ ವಿಚಾರದತ್ತ ಗಮನ ಹರಿಸಿದರೆ ರಫ್ತು ಮಾರುಕಟ್ಟೆಗಳನ್ನು ತಲುಪಬಹುದು ಎಂದು ರಮೇಶ್ ಚಂದ್ ಸಲಹೆ ನೀಡಿದ್ದಾರೆ.

ಇದನ್ನೂ ಓದಿCGHS: ಕೇಂದ್ರ ಸರ್ಕಾರ ಆರೋಗ್ಯ ಯೋಜನೆಯಲ್ಲಿ ಓಪಿಡಿ, ಆಸ್ಪತ್ರೆ ಬೆಡ್ ಚಾರ್ಜ್ ಇತ್ಯಾದಿ ದರ ಹೆಚ್ಚಳ; ಸರ್ಕಾರಕ್ಕೆ ಹೆಚ್ಚಿನ ಹೊರೆ

ವಿಶ್ವದ ಡೈರಿ ರಫ್ತಿನಲ್ಲಿ ಭಾರತದ ಪಾಲು ಶೇಕಡ ಒಂದೂ ಇಲ್ಲ

ಭಾರತದಲ್ಲಿ ಉತ್ಪಾದನೆಯಾಗುವ ಹಾಲಿನಲ್ಲಿ ಶೇ. 0.5ಕ್ಕಿಂತಲೂ ಕಡಿಮೆ ಪಾಲು ಮಾತ್ರ ರಫ್ತಾಗುತ್ತದೆ. ವಿಶ್ವದ ಕ್ಷೀರೋತ್ಪನ್ನಗಳ ಒಟ್ಟು ರಫ್ತು 2021ರಲ್ಲಿ 63 ಬಿಲಿಯನ್ ಡಾಲರ್ (ಸುಮಾರು 5.15 ಲಕ್ಷ ಕೋಟಿ ರೂ) ಮೊತ್ತದ್ದಿದೆ. ಇದರಲ್ಲಿ ಭಾರತದಿಂದ ಆದ ರಫ್ತು ಕೇವಲ 392 ಮಿಲಿಯನ್ ಡಾಲರ್ (3,200 ಕೋಟಿ ರೂ) ಮಾತ್ರ. ಅಂದರೆ ಶೇ. 0.62 ರಷ್ಟು ರಫ್ತು ಮಾರುಕಟ್ಟೆ ಭಾರತಕ್ಕೆ ಸಿಕ್ಕಿದೆ.

ಭಾರತದ ಡೈರಿ ವಲಯಕ್ಕೆ ಸವಾಲಾಗಿರುವ 3 ಸಂಗತಿಗಳು

  1. ಪಶುಗಳ ಹಾಲಿನ ಧಾರಣೆ ಕಡಿಮೆ ಇರುವುದು
  2. ದನ, ಕುರಿ ಮೊದಲಾದ ಪ್ರಾಣಿಗಳಿಂದ ಹಸಿರುಮನೆ ಅನಿಲಗಳು ಹೊರಹೊಮ್ಮುವುದು ಹೆಚ್ಚಾಗಿರುವುದು
  3. ಹಾಲಿನ ರಫ್ತು ಬಹಳ ಕಡಿಮೆ ಇರುವುದು

ಇದನ್ನೂ ಓದಿPMFBY: ಪ್ರಧಾನಮಂತ್ರಿ ಫಸಲ್ ಬೀಮಾ ಯೋಜನೆ ಪರಿಣಾಮಕಾರಿ ಅನುಷ್ಠಾನದಲ್ಲಿ ಕರ್ನಾಟಕ ನಂ.1

ಈ ಮೇಲಿನ ಮೂರು ಸವಾಲುಗಳನ್ನು ನೀತಿ ಆಯೋಗ ಸದಸ್ಯ ರಮೇಶ್ ಚಂದ್ ಪ್ರಸ್ತಾಪಿಸಿದ್ದಾರೆ. ಹಸುಗಳಿಂದ ಗ್ರೀನ್​ಹೌಸ್ ಗ್ಯಾಸ್ ಗಮನಾರ್ಹ ಮಟ್ಟದಲ್ಲಿ ಬಿಡುಗಡೆ ಆಗುತ್ತದೆ ಎಂಬುದು ಸಂಶೋಧನೆಗಳಿಂದ ಸ್ಪಷ್ಟವಾಗಿದೆ. ಈ ಹಸಿರುಮನೆ ಅನಿಲಗಳು ಜಾಗತಿಕ ಹವಾಮಾನ ಬದಲಾವಣೆ ಸಮಸ್ಯೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ ಎಂಬುದೂ ಗೊತ್ತಿರುವ ಸಂಗತಿಯಾಗಿದೆ.

2005ರ ನಂತರ ಭಾರತದಲ್ಲಿ ಹಾಲಿನ ಉತ್ಪಾದನೆ ಹೇಗೆ ಹೆಚ್ಚಾಯಿತು?

ಭಾರತದಲ್ಲಿ ಸದ್ಯ ಹಾಲಿನ ಉತ್ಪಾದನೆ ಪ್ರತೀ ವರ್ಷ ಶೇ. 5.3 ದರದಲ್ಲಿ ಹೆಚ್ಚುತ್ತಿದೆ. ಆದರೆ, 2005ರ ನಂತರವಷ್ಟೇ ಭಾರತದಲ್ಲಿ ಹಾಲಿನ ಉತ್ಪಾದನೆ ಹೆಚ್ಚು ವೇಗ ಪಡೆದುಕೊಂಡಿದ್ದು. ವಿದೇಶೀ ತಳಿಯ ಬದಲು ದೇಶೀಯವಾಗಿರುವ ಹಸುಗಳ ತಳಿಗಳತ್ತ ಗಮನ ಹರಿಸಿದ ಬಳಿಕ ಹಾಲಿನ ಉತ್ಪಾದನೆ ಗಮನಾರ್ಹವಾಗಿ ಹೆಚ್ಚಾಗತೊಡಗಿತು. ಐಸಿಎಂಆರ್ ಪ್ರತೀ ವ್ಯಕ್ತಿಗೆ 377 ಗ್ರಾಮ್ ಹಾಲು ದೊರಕಬೇಕು ಎಂದು ನಿಗದಿ ಮಾಡಿದೆ. ಭಾರತದಲ್ಲಿ ಹಾಲಿನ ಉತ್ಪಾದನೆ ಪ್ರತೀ ವ್ಯಕ್ತಿಗೆ 377 ಗ್ರಾಮ್ ಮಟ್ಟಕ್ಕಿಂತ ಹೆಚ್ಚಿದೆ ಎಂಬ ಸಂಗತಿಯನ್ನು ರಮೇಶ್ ಚಂದ್ ಎತ್ತಿ ತೋರಿಸಿದ್ದಾರೆ.

ಇನ್ನಷ್ಟು ವ್ಯವಹಾರ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 4:21 pm, Sun, 16 April 23