AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Sardine Fish: ಕರಾವಳಿಯಲ್ಲಿ ಭೂತಾಯ್ ಮೀನುಗಳ ಸುಗ್ಗಿ; ವಿದೇಶಗಳಿಗೆ ಸಖತ್ ಬೆಲೆಗೆ ಫಿಶ್ ಮೀಲ್ಸ್ ರಫ್ತು; ಯಾಕೆ ಈ ಮೀನಿಗೆ ಇಷ್ಟೊಂದು ಬೇಡಿಕೆ?

Indian Fish Meal Industries Shine: ವಿಶ್ವಾದ್ಯಂತ ಭೂತೈ ಮೀನುಗಳ ಕೊರತೆ ಸೃಷ್ಟಿಯಾಗಿರುವ ಹೊತ್ತಲ್ಲೇ ಕರ್ನಾಟಕ ಸೇರಿದಂತೆ ಭಾರತದ ವಿವಿಧ ಕರಾವಳಿಯಲ್ಲಿ ಈ ಮೀನುಗಳು ಹೇರಳವಾಗಿ ಸಿಗುತ್ತಿವೆ. ಇದರ ಆಧಾರಿತವಾದ ಫಿಶ್ ಮೀಲ್ಸ್​ಗೆ ವಿದೇಶಗಳಲ್ಲಿ ಭರ್ಜರಿ ಬೇಡಿಕೆ ಸೃಷ್ಟಿಯಾಗಿದೆ.

Sardine Fish: ಕರಾವಳಿಯಲ್ಲಿ ಭೂತಾಯ್ ಮೀನುಗಳ ಸುಗ್ಗಿ; ವಿದೇಶಗಳಿಗೆ ಸಖತ್ ಬೆಲೆಗೆ ಫಿಶ್ ಮೀಲ್ಸ್ ರಫ್ತು; ಯಾಕೆ ಈ ಮೀನಿಗೆ ಇಷ್ಟೊಂದು ಬೇಡಿಕೆ?
ಸಾರ್ಡೈನ್ ಫಿಶ್ (ಭೂತಾಯ್ ಮೀನು)
ಸುಗ್ಗನಹಳ್ಳಿ ವಿಜಯಸಾರಥಿ
|

Updated on: May 16, 2023 | 3:20 PM

Share

ನವದೆಹಲಿ: ಕಳೆದ ಒಂದು ವರ್ಷದಿಂದ ಭಾರತದ ಮೀನುಗಾರಿಕೆ ಉದ್ಯಮ ನಳನಳಿಸುತ್ತಿದೆ. ಮೀನುಗಾರರ ಮೊಗದಲ್ಲಿ ಮಂದಹಾಸ ಮೂಡಿದೆ. ಅದರಲ್ಲೂ ಮೀನು ಆಹಾರ ಉದ್ಯಮಗಳಂತೂ (Fish Meals Industries) ಖುಷಿಯಿಂದ ಕುಪ್ಪಳಿಸುವಂತಾಗಿದೆ. ಇದಕ್ಕೆ ಕಾರಣ, ಮೀನು ಆಹಾರಗಳ ರಫ್ತು ಹೆಚ್ಚಾಗಿದ್ದು. ಅದರಲ್ಲೂ ಮಾಮೂಲಿಗಿಂತ ಭರ್ಜರಿ ಬೆಲೆಗೆ ಫಿಶ್ ಮೀಲ್ಸ್ ರಫ್ತಾಗಿದೆ. ಭೂತೈ ಅಥವಾ ಮತ್ತಿ (Sardine Fish) ಎಂದು ಕರೆಯಲಾಗುವ ಪುಟ್ಟ ಮೀನುಗಳಿಂದ ಮಾಡಲಾದ ಮೀನು ಆಹಾರಕ್ಕೆ ವಿಶ್ವಾದ್ಯಂತ ಬೇಡಿಕೆ ಇದೆ. ಭಾರತದ ಅದೃಷ್ಟಕ್ಕೆ ಇಲ್ಲಿನ ಕರಾವಳಿ ಭಾಗಗಳಲ್ಲಿ ಕಳೆದ ಒಂದು ವರ್ಷದಿಂದಲೂ ಭೂತಾಯ್ ಮೀನುಗಳು ಯಥೇಚ್ಛವಾಗಿ ಮೀನುಗಾರರಿಗೆ ಲಭಿಸುತ್ತಿವೆ. ಆದರೆ, ಬೇರೆಡೆ ಈ ಮೀನುಗಳು ಮಾಮೂಲಿಯಷ್ಟು ಲಭಿಸುತ್ತಿಲ್ಲವಾದ್ದರಿಂದ ಭಾರತದ ಫಿಶ್ ಮೀಲ್ಸ್ ಉತ್ಪನ್ನಕ್ಕೆ ಭರ್ಜರಿ ಬೇಡಿಕೆ ಸೃಷ್ಟಿಯಾಗಿದೆ.

ಏನಿದು ಫಿಶ್ ಮೀಲ್ಸ್?

ಫಿಶ್ ಮೀಲ್ಸ್ ಎಂದರೆ ಮೀನು ಆಹಾರ. ಮೀನು ಸಾಕಾಣಿಕೆಯಲ್ಲಿ ಮೀನುಗಳ ಪೋಷಣೆಗೆ ನೀಡಲಾಗುವ ಆಹಾರ. ಸಮುದ್ರದಿಂದ ಹಿಡಿಯಲಾದ ಮೀನಿನಲ್ಲಿ ಬಳಕೆಯಾಗದೇ ಉಳಿದ ಮೀನುಗಳು ಹಾಗೂ ಮೀನು ತ್ಯಾಜ್ಯ ಸೇರಿಸಿ ಫಿಶ್ ಮೀಲ್ ತಯಾರಿಸಲಾಗುತ್ತದೆ. ಇದನ್ನು ಮೀನು ಮತ್ತು ಇತರ ಕೆಲ ಪ್ರಾಣಿಗಳಿಗೆ ಆಹಾರವಾಗಿ ನೀಡಲಾಗುತ್ತೆ.

ಇದನ್ನೂ ಓದಿPVR Inox: 50 ಸಿನಿಮಾ ಹಾಲ್ ಮುಚ್ಚಲಿರುವ ಪಿವಿಆರ್ ಐನಾಕ್ಸ್; ಭಾರೀ ನಷ್ಟ ಕಾರಣ- ಹಿಂದಿ ಚಿತ್ರಗಳನ್ನು ನೋಡೋರಿಲ್ಲವಾ?

ಭೂತೈ ಮೀನಿನ ಅಹಾರಕ್ಕೆ ಯಾಕೆ ಹೆಚ್ಚು ಬೇಡಿಕೆ?

ಭೂತೈ ಮೀನನ್ನು ಇಂಗ್ಲೀಷ್​ನಲ್ಲಿ ಸಾರ್ಡೈನ್ ಫಿಶ್ ಎನ್ನಲಾಗುತ್ತದೆ. ನೀವು ಸಾರ್ಡೈನ್ ಆಯಿಲ್ ಬಗ್ಗೆ ಕೇಳಿರಬಹುದು. ಇದು ಉತ್ತಮ ಪೋಷಕಾಂಶದ ಕಾರಣಕ್ಕೆ ಜನಪ್ರಿಯವಾಗಿದೆ. ಕೈಗಾರಿಕೆಗಳಲ್ಲೂ ಇವುಗಳ ಬಳಕೆ ಆಗುತ್ತದೆ. ಈ ಎಣ್ಣೆಯನ್ನು ಇದೇ ಭೂತೈ ಮೀನಿನಿಂದ ಮಾಡಲಾಗುತ್ತದೆ.

ಬಹಳ ಪುಟ್ಟದಾದ ಭೂತೈ ಮೀನು ಒಳ್ಳೆಯ ಪೋಷಕಾಂಶಗಳನ್ನು ಒಳಗೊಂಡಿರುವುದೂ ಅಲ್ಲದೇ ಬಹಳ ಕಡಿಮೆ ಬೆಲೆಗೂ ಸಿಗುತ್ತದೆ. ಹೀಗಾಗಿ, ಮೀನೂಟ ಪ್ರಿಯರಿಗೂ ಭೂತೈ ಫೇವರಿಟ್ ಎನಿಸಿದೆ.

ಭೂತೈ ಮೀನಿನಲ್ಲಿ ಎಣ್ಣೆ ಮತ್ತು ಪೋಷಕಾಂಶಗಳು ಹೆಚ್ಚಿರುತ್ತವಾದ್ದರಿಂದ ಇದರ ಆಧಾರಿತವಾಗಿ ತಯರಿಸಲಾದ ಮೀನು ಆಹಾರವು ಮೀನುಗಳ ಬೆಳವಣಿಗೆಗೆ ಒಳ್ಳೆಯ ಪುಷ್ಟಿ ಕೊಡುತ್ತದೆ.

ಇದನ್ನೂ ಓದಿRs 30 Down: ಪೆಟ್ರೋಲ್, ಡೀಸೆಲ್ ಬೆಲೆ ಲೀಟರ್​ಗೆ 30 ರೂವರೆಗೂ ಕಡಿತ; ಪಾಕಿಸ್ತಾನ ಜನತೆಗೆ ಬಂಪರ್ ಗಿಫ್ಟ್

2-3 ಪಟ್ಟು ಹೆಚ್ಚು ಭೂತೈ ಮೀನುಗಳು

ಕೇಂದ್ರೀಯ ಸಾಗರ ಮೀನುಗಾರಿಕಾ ಸಂಶೋಧನಾ ಸಂಸ್ಥೆ ಮಾಡಿರುವ ಅಂದಾಜು ಪ್ರಕಾರ ಕಳೆದ ವರ್ಷ 2.51 ಟನ್​ಗಳಷ್ಟು ಸಾರ್ಡೈನ್​ಗಳನ್ನು ಹಿಡಿಯಲಾಗಿದೆ. ಹಿಂದಿನ ಎರಡು ವರ್ಷಗಳಲ್ಲಿ ಸಿಕ್ಕ ಈ ಜಾತಿಯ ಮೀನುಗಳ ಪ್ರಮಾಣ 80 ಮತ್ತು 90 ಸಾವಿರ ಟನ್​ಗಳು ಮಾತ್ರ. 2017ರಲ್ಲಿ 3.37 ಲಕ್ಷ ಟನ್​ಗಳಷ್ಟು ಭೂತೈ ಮೀನುಗಳನ್ನು ಹಿಡಿಯಲಾಗಿತ್ತು. ಅದು ಬಿಟ್ಟರೆ 2022ರಲ್ಲೇ ಅತಿ ಹೆಚ್ಚು ಸಾರ್ಡೈನ್​ಗಳ ಕೃಷಿ ಆಗಿರುವುದು.

ಕರ್ನಾಟಕ, ಕೇರಳ, ತಮಿಳುನಾಡು ಮತ್ತು ಮಹಾರಾಷ್ಟ್ರ ಮತ್ತಿತರ ಕಡೆ 68 ಮೀನು ಆಹಾರ ತಯಾರಕಾ ಘಟಕಗಳಿದ್ದು, ಇಲ್ಲಿ ಪ್ರತೀ ವರ್ಷ 1 ಲಕ್ಷ ಟನ್​ಗಳಷ್ಟು ಫಿಶ್ ಮೀಲ್ಸ್ ತಯಾರಾಗುತ್ತವೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ