Layoffs: ವೊಡಾಫೋನ್​ಗೆ ಹೊಸ ಲೇಡಿ ಬಾಸ್; 11,000 ಮಂದಿ ಲೇ ಆಫ್​ಗೆ ಯೋಜನೆ; ಭಾರತಕ್ಕಿದೆಯಾ ಬಾಧೆ?

Vodafone To Layoff 11,000 Employees: ವೊಡಾಫೋನ್​ನಲ್ಲಿ ಸುಮಾರು 95,000 ಉದ್ಯೋಗಿಗಳನ್ನು ಹೊಂದಿದೆ. ಅದರಲ್ಲಿ ಈಗ 11,000 ಮಂದಿ ಲೇ ಆಫ್ ಅಗಲಿದೆ. ಅಂದರೆ ಶೇ. 10ಕ್ಕಿಂತಲೂ ಹೆಚ್ಚು ಮಂದಿ ವೊಡಾಫೋನ್ ಉದ್ಯೋಗಿಗಳು ಕೆಲಸ ಕಳೆದುಕೊಳ್ಳಲಿದ್ದಾರೆ.

Layoffs: ವೊಡಾಫೋನ್​ಗೆ ಹೊಸ ಲೇಡಿ ಬಾಸ್; 11,000 ಮಂದಿ ಲೇ ಆಫ್​ಗೆ ಯೋಜನೆ; ಭಾರತಕ್ಕಿದೆಯಾ ಬಾಧೆ?
ವೊಡಾಫೋನ್
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: May 16, 2023 | 1:07 PM

ಲಂಡನ್: ವೊಡಾಫೋನ್ ಐಡಿಯಾದ ಮಾತೃಸಂಸ್ಥೆ ವೊಡಾಫೋನ್ (Vodafone) ಮುಂದಿನ 3 ವರ್ಷದಲ್ಲಿ 11,000 ಉದ್ಯೋಗಿಗಳನ್ನು ಕೆಲಸದಿಂದ ತೆಗೆದುಹಾಕುವ (Layoffs) ಯೋಜನೆ ಹಾಕಿದೆ. ನಿರೀಕ್ಷಿತ ಆದಾಯ ಬರದ ಹಿನ್ನೆಲೆಯಲ್ಲಿ ಖರ್ಚು ವೆಚ್ಚಗಳನ್ನು ತಗ್ಗಿಸುತ್ತಿರುವ ವೊಡಾಫೋನ್, ಈ ನಿಟ್ಟಿನಲ್ಲಿ ಒಂದು ಕ್ರಮವಾಗಿ ಉದ್ಯೋಗಕಡಿತ ಮಾಡುತ್ತಿದೆ. ಲಂಡನ್​ನಲ್ಲಿ ಮುಖ್ಯಕಚೇರಿ ಹೊಂದಿರುವ ವೊಡಾಫೋನ್​ನಲ್ಲಿ ಸುಮಾರು 95,000 ಉದ್ಯೋಗಿಗಳನ್ನು ಹೊಂದಿದೆ. ಅದರಲ್ಲಿ ಈಗ 11,000 ಮಂದಿ ಲೇ ಆಫ್ ಅಗಲಿದೆ. ಅಂದರೆ ಶೇ. 10ಕ್ಕಿಂತಲೂ ಹೆಚ್ಚು ಮಂದಿ ವೊಡಾಫೋನ್ ಉದ್ಯೋಗಿಗಳು ಕೆಲಸ ಕಳೆದುಕೊಳ್ಳಲಿದ್ದಾರೆ.

ಇದೇ ಏಪ್ರಿಲ್ ತಿಂಗಳಲ್ಲಿ ಇಟಲಿಯ ಮಾರ್ಗರೆಟಿ ಡೆಲ್ಲಾ ವ್ಯಾಲೆ ಅವರು ವೊಡಾಫೋನ್​ನ ಸಿಇಒ ಆಗಿ ನೇಮಕವಾಗಿದ್ದಾರೆ. ಕಳೆದ ತ್ರೈಮಾಸಿಕ ಅವಧಿಯಲ್ಲಿ ವೊಡಾಫೋನ್​ನ ವಿವಿಧೆಡೆಯಲ್ಲಿ ನಿರೀಕ್ಷಿಸಿದಷ್ಟು ಲಾಭ ಮತ್ತು ಆದಾಯ ಸಿಕ್ಕಿಲ್ಲ.

ನಮ್ಮ ಸಾಧನೆ ಉತ್ತಮವಾಗಿಲ್ಲ. ಗ್ರಾಹಕರು, ಸರಳ ವ್ಯವಸ್ಥೆ ಮತ್ತು ಪ್ರಗತಿ ಇವು ನಮಗೆ ಆದ್ಯತೆಗಳಾಗಿವೆ. ನಮ್ಮ ಸಂಸ್ಥೆಯ ಸಂಕೀರ್ಣತೆಯನ್ನು ನೀಗಿಸಿ ಸರಳಗೊಳಿಸಿ ಸ್ಪರ್ಧಾತ್ಮಕವಾಗಿ ರೂಪುಗೊಳ್ಳುತ್ತೇವೆಎಂದು ಹೊಸ ಸಿಇಒ ಹೇಳಿದ್ದರು.

ಇದನ್ನೂ ಓದಿAmazon Layoff: ಅಮೇಜಾನ್ 9,000 ಲೇ ಆಫ್; ಭಾರತದಲ್ಲಿ ಕೆಲಸ ಕಳೆದುಕೊಂಡ 500 ಮಂದಿ

ವೊಡಾಫೋನ್​ನ ಅತಿದೊಡ್ಡ ಮಾರುಕಟ್ಟೆ ಜರ್ಮನಿ ಆಗಿದೆ. ಅಲ್ಲಿ ಇದರ ಲಾಭ ಬಹಳಷ್ಟು ಕಡಿಮೆ ಆಗಿದೆ. ಆಫ್ರಿಕಾದಲ್ಲಿ ಮೊಬೈಲ್ ಹ್ಯಾಂಡ್​ಸೆಟ್​ಗಳ ಮಾರಾಟ ಇತ್ತೀಚೆಗೆ ಗಣನೀಯವಾಗಿ ಏರಿದ್ದರಿಂದ ಅದಕ್ಕೆ ಅನುಗುಣವಾಗಿ ವೊಡಾಫೋನ್ ಕೂಡ ಲಾಭ ಮಾಡಿಕೊಂಡಿದೆ. ಇದರು ವೊಡಾಫೋನ್​ನ ಒಟ್ಟಾರೆ ಲಾಭ ಕುಂಠಿತಗೊಳ್ಳದಂತೆ ಮಾಡಿದೆ.

ಜರ್ಮನಿಯಲ್ಲಿ ಹೆಚ್ಚು ಆದಾಯ ಸಿಗದೇ ಇರುವ ಹಿನ್ನೆಲೆಯಲ್ಲಿ ಅಲ್ಲಿಯೇ ಹೆಚ್ಚು ಜಾಬ್ ಕಟ್ ಆಗುವ ಸಾಧ್ಯತೆ ಇದೆ. ವರದಿಯ ಪ್ರಕಾರ ಜರ್ಮನಿಯಲ್ಲಿ 1,300 ಮಂದಿಯ ಲೇ ಆಫ್ ಆಗುವ ಸಾಧ್ಯತೆ ಇದೆ. ಕೆಲ ತಿಂಗಳ ಹಿಂದೆ ಇಟಲಿಯಲ್ಲಿ 1,000 ದಷ್ಟು ವೊಡಾಫೋನ್ ಉದ್ಯೋಗಿಗಳು ಕೆಲಸ ಕಳೆದುಕೊಂಡಿದ್ದರು.

ಇದನ್ನೂ ಓದಿPVR Inox: 50 ಸಿನಿಮಾ ಹಾಲ್ ಮುಚ್ಚಲಿರುವ ಪಿವಿಆರ್ ಐನಾಕ್ಸ್; ಭಾರೀ ನಷ್ಟ ಕಾರಣ- ಹಿಂದಿ ಚಿತ್ರಗಳನ್ನು ನೋಡೋರಿಲ್ಲವಾ?

ಇನ್ನು ಭಾರತದಲ್ಲಿರುವ ವೊಡಾಫೋನ್ ಐಡಿಯಾ ಸಂಸ್ಥೆಗೂ ಈ ಲೇಆಫ್​ಗೂ ಸಂಬಂಧ ಇಲ್ಲ. ವೊಡಾಫೋನ್​ನ ಉದ್ಯೋಗಕಡಿತ ಪ್ರಕ್ರಿಯೆ ಯೂರೋಪಿಯನ್ ಮಾರುಕಟ್ಟೆಗೆ ಸೀಮಿತವಾಗಬಹುದು.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬೆಳ್ಳಿ ಪರದೆ ಮೇಲೆ ‘ತ್ರಿವ್ಯ’ ಜೋಡಿ, ಭವ್ಯಾ ಗೌಡ ಹೇಳಿದ್ದೇನು?
ಬೆಳ್ಳಿ ಪರದೆ ಮೇಲೆ ‘ತ್ರಿವ್ಯ’ ಜೋಡಿ, ಭವ್ಯಾ ಗೌಡ ಹೇಳಿದ್ದೇನು?
ಸಂಪಾದನೆ ಎಷ್ಟೇ ಇರಲಿ ಉಳಿತಾಯ ಮಾಡಲೇಬೇಕು: ಭವ್ಯಾ ಗೌಡ
ಸಂಪಾದನೆ ಎಷ್ಟೇ ಇರಲಿ ಉಳಿತಾಯ ಮಾಡಲೇಬೇಕು: ಭವ್ಯಾ ಗೌಡ
ತ್ರಿವಿಕ್ರಮ ಜೊತೆ ಗೆಳೆತನ ಅಷ್ಟೇ, ಪೊಸ್ಸೆಸ್ಸಿವ್​ನೆಸ್ ಇರಲಿಲ್ಲ: ಭವ್ಯಾ
ತ್ರಿವಿಕ್ರಮ ಜೊತೆ ಗೆಳೆತನ ಅಷ್ಟೇ, ಪೊಸ್ಸೆಸ್ಸಿವ್​ನೆಸ್ ಇರಲಿಲ್ಲ: ಭವ್ಯಾ
‘ನನ್ನ, ತ್ರಿವಿಕ್ರಮ್ ನಡುವೆ ಏನೂ ಇಲ್ಲ, ಪದೇ ಪದೇ ಇದೇ ಹೇಳೋಕಾಗಲ್ಲ’: ಭವ್ಯಾ
‘ನನ್ನ, ತ್ರಿವಿಕ್ರಮ್ ನಡುವೆ ಏನೂ ಇಲ್ಲ, ಪದೇ ಪದೇ ಇದೇ ಹೇಳೋಕಾಗಲ್ಲ’: ಭವ್ಯಾ
ವಿಜಯೇಂದ್ರ ವಿರುದ್ಧ ನಡ್ಡಾ ಜೀಗೆ ಪತ್ರ ಬರೆದಿರುವುದು ನಿಜ: ಯತ್ನಾಳ್
ವಿಜಯೇಂದ್ರ ವಿರುದ್ಧ ನಡ್ಡಾ ಜೀಗೆ ಪತ್ರ ಬರೆದಿರುವುದು ನಿಜ: ಯತ್ನಾಳ್
ಹೊಸ ಗೆಟಪ್ ನಲ್ಲಿ ಸಭೆಗೆ ಆಗಮಿಸಿದ ಬಸನಗೌಡ ಪಾಟೀಲ್ ಯತ್ನಾಳ್!
ಹೊಸ ಗೆಟಪ್ ನಲ್ಲಿ ಸಭೆಗೆ ಆಗಮಿಸಿದ ಬಸನಗೌಡ ಪಾಟೀಲ್ ಯತ್ನಾಳ್!
ರೈಲ್ವೆ ಟಿಕೆಟ್ ಕಲೆಕ್ಟರ್ ವೇಗಕ್ಕೆ ಶರಣಾದ ಕ್ರಿಕೆಟ್ ಸಾಮ್ರಾಟ..!
ರೈಲ್ವೆ ಟಿಕೆಟ್ ಕಲೆಕ್ಟರ್ ವೇಗಕ್ಕೆ ಶರಣಾದ ಕ್ರಿಕೆಟ್ ಸಾಮ್ರಾಟ..!
ಪಕ್ಷದ ನಾಯಕರು ಒಂದೆಡೆ ಸೇರಿ ಊಟ ಮಾಡುವುದು ತಪ್ಪಲ್ಲ: ಸಿದ್ದರಾಮಯ್ಯ
ಪಕ್ಷದ ನಾಯಕರು ಒಂದೆಡೆ ಸೇರಿ ಊಟ ಮಾಡುವುದು ತಪ್ಪಲ್ಲ: ಸಿದ್ದರಾಮಯ್ಯ
ಬಿಜೆಪಿ ಆಂತರಿಕ ಕಚ್ಚಾಟ ನೆಚ್ಚಿಕೊಂಡು ಸರ್ಕಾರ ನಡೆಸುತ್ತಿಲ್ಲ: ಶಿವಕುಮಾರ್
ಬಿಜೆಪಿ ಆಂತರಿಕ ಕಚ್ಚಾಟ ನೆಚ್ಚಿಕೊಂಡು ಸರ್ಕಾರ ನಡೆಸುತ್ತಿಲ್ಲ: ಶಿವಕುಮಾರ್
ಎಸ್ಟಿ ಸಮುದಾಯದ ಶ್ರೀಗಳು ಜಾತ್ರೆಗೆ ಆಹ್ವಾನಿಸಲು ಬಂದಿದ್ದರು: ಪರಮೇಶ್ವರ್
ಎಸ್ಟಿ ಸಮುದಾಯದ ಶ್ರೀಗಳು ಜಾತ್ರೆಗೆ ಆಹ್ವಾನಿಸಲು ಬಂದಿದ್ದರು: ಪರಮೇಶ್ವರ್