Retro Tax: ಕೇರ್ನ್ ಎನರ್ಜಿಗೆ ಪೂರ್ವಾನ್ವಯ ತೆರಿಗೆ ಬಾಕಿ 7900 ಕೋಟಿ ರೂಪಾಯಿ ಮರುಪಾವತಿಸಿದ ಕೇಂದ್ರ ಸರ್ಕಾರ

| Updated By: Srinivas Mata

Updated on: Feb 24, 2022 | 10:56 PM

ಭಾರತ ಸರ್ಕಾರದಿಂದ ಕೇರ್ನ್ ಎನರ್ಜಿ ಪಿಎಲ್​ಸಿಯ 7900 ಕೋಟಿ ರೂಪಾಯಿಯ ಪೂರ್ವಾನ್ವಯ ತೆರಿಗೆ ಮರುಪಾವತಿಸಲಾಗಿದೆ ಎಂದು ತಿಳಿಸಲಾಗಿದೆ.

Retro Tax: ಕೇರ್ನ್ ಎನರ್ಜಿಗೆ ಪೂರ್ವಾನ್ವಯ ತೆರಿಗೆ ಬಾಕಿ 7900 ಕೋಟಿ ರೂಪಾಯಿ ಮರುಪಾವತಿಸಿದ ಕೇಂದ್ರ ಸರ್ಕಾರ
ಸಾಂದರ್ಭಿಕ ಚಿತ್ರ
Follow us on

ಪೂರ್ವಾನ್ವಯ ತೆರಿಗೆಗಳ (Retro Tax) ಕುರಿತು ವರ್ಷಗಳ ಸುದೀರ್ಘ ವಿವಾದದ ನಂತರ ಭಾರತ ಸರ್ಕಾರವು ಬ್ರಿಟನ್‌ನ ಕೇರ್ನ್ ಎನರ್ಜಿ ಪಿಎಲ್‌ಸಿಗೆ 7,900 ಕೋಟಿ ರೂಪಾಯಿ ಮರುಪಾವತಿ ಮಾಡಿದೆ. ಈಗ ಕ್ಯಾಪ್ರಿಕಾರ್ನ್ ಎನರ್ಜಿ (Capricorn Energy Plc) ಎಂದು ಕರೆಯುವ ಕೇರ್ನ್ ಎನರ್ಜಿ, ಭಾರತ ಸರ್ಕಾರವು ತೆರಿಗೆ ಮರುಪಾವತಿಯನ್ನು ಮಾಡಿದೆ ಮತ್ತು “1.06 ಬಿಲಿಯನ್ ಯುಎಸ್​ಡಿ ನಿವ್ವಳ ಆದಾಯವನ್ನು ಸ್ವೀಕರಿಸಲಾಗಿದೆ,” ಎಂದು ಹೇಳಿದೆ. ಬ್ರಿಟಿಷ್ ಕಂಪೆನಿಯು ಮಾರ್ಚ್ ಆರಂಭದಲ್ಲಿ ಸುತ್ತೋಲೆಯನ್ನು ಹೊರಡಿಸುವ ನಿರೀಕ್ಷೆಯಿದೆ ಎಂದು ಹೇಳಿದೆ. “500 ಮಿಲಿಯನ್ ಯುಎಸ್​ಡಿ ಟೆಂಡರ್ ಕೊಡುಗೆ ಮತ್ತು 200 ಮಿಲಿಯನ್ ಯುಎಸ್​ಡಿಗಾಗಿ ನಡೆಯುತ್ತಿರುವ ಷೇರು ಮರುಖರೀದಿ ಕಾರ್ಯಕ್ರಮವನ್ನು ಒಳಗೊಂಡಿರುವ 700 ಮಿಲಿಯನ್ ಯುಎಸ್​ಡಿವರೆಗಿನ ಪ್ರಸ್ತಾವಿತ ಷೇರುದಾರರ ರಿಟರ್ನ್‌ಗೆ ಸಂಬಂಧಿಸಿದಂತೆ ಅಗತ್ಯವಿರುವ ಷೇರುದಾರರ ನಿರ್ಣಯಗಳನ್ನು ವಿವರಿಸುತ್ತದೆ”.

ಬ್ರಿಟಿಷ್ ಇಂಧನ ಪ್ರಮುಖ ಕಂಪೆನಿಯಾದ ಕೇರ್ನ್ ಎನರ್ಜಿ ಕಳೆದ ತಿಂಗಳು ಭಾರತ ಸರ್ಕಾರದಿಂದ ರೂ. 7,900 ಕೋಟಿ ತೆರಿಗೆ ಮರುಪಾವತಿಯನ್ನು ಪಡೆಯಲು ಅಗತ್ಯವಿರುವ ಎಲ್ಲ ಕ್ರಮಗಳನ್ನು ಪೂರ್ಣಗೊಳಿಸಿದೆ. ಕ್ಯಾಪ್ರಿಕಾರ್ನ್ ಎನರ್ಜಿ ಪಿಎಲ್​ಸಿ ಮುಖ್ಯ ಕಾರ್ಯನಿರ್ವಾಹಕ ಸೈಮನ್ ಥಾಮ್ಸನ್ ಈ ಹಿಂದೆಯೇ ಮಾತನಾಡಿ, 2022ರಲ್ಲಿ ಕಂಪೆನಿಯು ಉತ್ತಮ ಸ್ಥಾನವನ್ನು ಹೊಂದಿದ್ದು, ಷೇರುದಾರರಿಗೆ ಮತ್ತೊಂದು ಗಮನಾರ್ಹ ಬಂಡವಾಳವನ್ನು ಹಿಂದಿರುಗಿಸುತ್ತದೆ. ಭಾರತ ಸರ್ಕಾರದಿಂದ ಕಂಪೆನಿಗೆ ಹಿಂತಿರುಗಬೇಕಾದ ತೆರಿಗೆ ಮರುಪಾವತಿಗೆ ಎಲ್ಲ ಅಗತ್ಯ ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಿದ್ದರು.

ಕೇರ್ನ್ ಎನರ್ಜಿಯಿಂದ ಎಲ್ಲ ತೆರಿಗೆ ಪ್ರಕರಣ ವಾಪಸ್:
ಜನವರಿಯಲ್ಲಿ ಕ್ಯಾಪ್ರಿಕಾರ್ನ್ ಎನರ್ಜಿ ಭಾರತ ಸರ್ಕಾರದ ವಿರುದ್ಧದ ಎಲ್ಲ ಮೊಕದ್ದಮೆಗಳನ್ನು ಹಿಂತೆಗೆದುಕೊಂಡಿತು. ಇದರಿಂದಾಗಿ ಈ ಬ್ರಿಟಿಷ್ ಕಂಪೆನಿಗೆ ರೂ. 7,900 ಕೋಟಿ ಮರುಪಾವತಿ ಮಾಡಲು ಅಧಿಕಾರಿಗಳಿಗೆ ದಾರಿ ಮಾಡಿಕೊಟ್ಟಿತು. ಆ ಕಂಪೆನಿಯ ಕ್ರಮವು ಭಾರತದ ತೆರಿಗೆ (ತಿದ್ದುಪಡಿ ಕಾಯ್ದೆ) 2021ರ ನಿಯಮಗಳ ಅಡಿಯಲ್ಲಿ ಕಂಪೆನಿಯ ಅಂತಿಮ ಅಗತ್ಯ ಹಂತವಾಗಿದೆ. ಇದನ್ನು ಅನುಸರಿಸಿ, ಕಂಪೆನಿಯು ಆದಾಯ ತೆರಿಗೆ ಇಲಾಖೆಗೆ ಅಗತ್ಯ ನಮೂನೆಯನ್ನು ಸಲ್ಲಿಸಿತು. ಅದು ಸರ್ಕಾರಕ್ಕೆ ಅಂತಿಮ ಹಂತಕ್ಕೆ ಹೋಗಲು ಅವಕಾಶ ಮಾಡಿಕೊಟ್ಟಿತು.

ಪೂರ್ವಾನ್ವಯ ತೆರಿಗೆ ವಿವಾದ:
ಭಾರತೀಯ ಆಸ್ತಿಗಳನ್ನು ವಿದೇಶೀ ಕಂಪೆನಿಗಳಿಗೆ ಮಾರಾಟದ ತೆರಿಗೆಗೆ ಸಂಬಂಧಿಸಿದಂತೆ 17 ದೀರ್ಘಕಾಲದ ವಿವಾದಗಳನ್ನು ಭಾರತವು ಕೊನೆಗೊಳಿಸಿತು. ಹಿಂದಿನ ಯುಪಿಎ ಸರ್ಕಾರದ ಅವಧಿಯಲ್ಲಿ, ಅಂದರೆ 2012ರಲ್ಲಿ ಪರಿಚಯಿಸಿದ ಪೂರ್ವಾನ್ವಯ ತೆರಿಗೆಯ ಪ್ರಕಾರ, 28 ಮೇ 2012ಕ್ಕಿಂತ ಮೊದಲು ಕೇಳಿದ ಅಥವಾ ದೃಢೀಕರಿಸಿದ ತೆರಿಗೆ ಬೇಡಿಕೆಗಳನ್ನು ರದ್ದುಗೊಳಿಸಲು ಸರ್ಕಾರದ ಪರಿಹಾರ ಯೋಜನೆಯು ಪ್ರಯತ್ನಿಸಿದೆ.

ಇದನ್ನೂ ಓದಿ: Cairn energy: ಭಾರತದ ವಿರುದ್ಧ ಎಲ್ಲ ವ್ಯಾಜ್ಯಗಳನ್ನು ಕೈಬಿಡಲು ಕೇರ್ನ್ ಎನರ್ಜಿ ಒಪ್ಪಿಗೆ