ಮುಂಬೈ, ಆಗಸ್ಟ್ 25: ಹಬ್ಬದ ಸೀಸನ್ ಬಂದಾಗ ಸಾರಿಗೆ ಮತ್ತು ರೈಲ್ವೆ ಇಲಾಖೆ ಹೆಚ್ಚು ಬಸ್ಸು ಮತ್ತು ರೈಲುಗಳನ್ನು ನಿಯೋಜಿಸುತ್ತವೆ. ಹಬ್ಬಕ್ಕೆ ಊರಿಗೆ ಬಂದು ಹೋಗಿ ಮಾಡುವ ಜನರಿಗೆ ಇದರಿಂದ ಅನುಕೂಲವಾಗುತ್ತದೆ. ಇಲಾಖೆಗಳಿಗೂ ಆದಾಯಕ್ಕೆ ಕಾರಣವಾಗುತ್ತದೆ. ಈ ತಿಂಗಳಿಂದ ಶುರುವಾಗುವ ಹಬ್ಬದ ಸೀಸನ್ಗೆ ಭಾರತೀಯ ರೈಲ್ವೆಯಿಂದ ವಿಶೇಷ ಟ್ರೈನುಗಳು (Special Ganapati Trains) ಬಿಡುಗಡೆ ಆಗಲಿವೆ. ವರದಿಗಳ ಪ್ರಕಾರ, ಗಣಪತಿ ಹಬ್ಬದ ಪ್ರಯುಕ್ತ 312 ವಿಶೇಷ ರೈಲುಗಳು ಸಂಚರಿಸಲಿವೆ. ಮಾಮೂಲಿಯ ರೈಲುಗಳಿಗೆ ಹೆಚ್ಚುವರಿಯಾಗಿ ಈ ವಿಶೇಷ ರೈಲುಗಳು ಓಡಾಡಲಿವೆ. ಸೆಂಟ್ರಲ್ ರೈಲ್ವೆ ಮತ್ತು ವೆಸ್ಟರ್ನ್ ರೈಲ್ವೆಯಿಂದ ಈ ವಿಶೇಷ ಗಣಪತಿ ರೈಲುಗಳು ಸಂಚರಿಸಲಿವೆ.
ಸೆಪ್ಟೆಂಬರ್ 19ರಂದು ಗಣೇಶ ಹಬ್ಬ ಇದೆ. ಮಹಾರಾಷ್ಟ್ರ ರಾಜ್ಯದಲ್ಲಿ ಗಣಪತಿ ಹಬ್ಬವನ್ನು (Ganesha Festival) ಬಹಳ ವೈಭವೋಪೇತವಾಗಿ 10 ದಿನಗಳ ಕಾಲ ಆಚರಿಸಲಾಗುತ್ತದೆ. ಹಬ್ಬದ ಸಂದರ್ಭದಲ್ಲಿ ಇಲ್ಲಿಗೆ ಬರುವ ರೈಲು ಮತ್ತು ಬಸ್ಸುಗಳು ಪೂರ್ತಿ ಭರ್ತಿಯಾಗಿರುತ್ತವೆ. ಬಹುತೇಕ ಎಲ್ಲಾ 312 ವಿಶೇಷ ರೈಲುಗಳು ಮುಂಬೈ ಮೊದಲಾದ ಮಹಾರಾಷ್ಟ್ರದ ವಿವಿಧ ಪ್ರದೇಶಗಳಿಂದ ಸಂಚರಿಸುತ್ತವೆ. ಈ ಪೈಕಿ ಸೆಂಟ್ರಲ್ ರೈಲ್ವೆಯಿಂದ 257 ರೈಲುಗಳು, ಪಶ್ಚಿಮ ರೈಲ್ವೆಯಿಂದ 55 ರೈಲುಗಳು ನಿಯೋಜನೆಯಾಗಲಿವೆ.
Ganapati Festival Special Train Services-
CR & WR running 312 services in 2023 as compared to 294 in 2022.
(18 more services this year)(CR-257
WR-55
Total-312)62 Unreserved services increased this year.
Total 94 unreserved services running in 2023 as compared to 32 in 2022. pic.twitter.com/6FNjPPYRJs— Central Railway (@Central_Railway) August 24, 2023
ಇದನ್ನೂ ಓದಿ: ಬೆಟ್ಟಿಂಗ್ ಜಾಹೀರಾತು ನೇರವಾಗಿಯಾಗಲೀ, ಪರೋಕ್ಷವಾಗಿಯಾಗಲೀ ಪ್ರಸಾರ ಮಾಡದಂತೆ ಮಾಧ್ಯಮ ಸಂಸ್ಥೆಗಳಿಗೆ ಕೇಂದ್ರದಿಂದ ಸೂಚನೆ
ಕಳೆದ ವರ್ಷ (2022ರಲ್ಲಿ) ಗಣಪತಿ ಹಬ್ಬಕ್ಕೆ 257 ವಿಶೇಷ ರೈಲು ಸೇವೆಗಳನ್ನು ಒದಗಿಸಲಾಗಿತ್ತು. ಈ ಬಾರಿ 312 ರೈಲುಗಳಿವೆ. 18 ಹೆಚ್ಚು ರೈಲುಗಳು ಈ ವರ್ಷ ಇರಲಿವೆ. ಈ ವರ್ಷ ಇರುವ 312 ವಿಶೇಷ ಗಣಪತಿ ರೈಲುಗಳ ಪೈಕಿ 94ರಷ್ಟವು ಅನ್ರಿಸರ್ವ್ಡ್ ರೈಲುಗಳಾಗಿವೆ. ಕಳೆದ ವರ್ಷಕ್ಕಿಂತ ಈ ರೈಲುಗಳ ಸಂಖ್ಯೆ 62ರಷ್ಟು ಹೆಚ್ಚಾಗಿದೆ. ಇನ್ನು, ರಿಸರ್ವ್ಡ್ ರೈಲುಗಳ ಸಂಖ್ಯೆ 218 ಇದೆ. ಸರ್ಕಾರಕ್ಕೆ ಈ ಹೆಚ್ಚುವರಿ ರಿಸರ್ವ್ಡ್ ರೈಲುಗಳಿಂದ 5 ಕೋಟಿ ರೂಗೂ ಹೆಚ್ಚು ಆದಾಯ ಬರುವ ನಿರೀಕ್ಷೆ ಇದೆ.
ರೈಲ್ವೆ ಇಲಾಖೆ ಪ್ರತೀ ಪ್ರಮುಖ ಹಬ್ಬದಲ್ಲೂ ಆಯಾ ಪ್ರದೇಶಗಳಲ್ಲಿ ಹೆಚ್ಚುವರಿ ರೈಲುಗಳನ್ನು ಬಿಡುಗಡೆ ಮಾಡುತ್ತದೆ. ಓಣಂ, ಪೊಂಗಲ್, ದುರ್ಗಾ ಪೂಜೆ ಇತ್ಯಾದಿ ಸಂದರ್ಭಗಳಲ್ಲೂ ವಿಶೇಷ ರೈಲುಗಳು ಹಳಿಗೆ ಬರುತ್ತವೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ