ರೈಲ್ವೆ ಟಿಕೆಟ್ ನಿಯಮಗಳ ಪರಿಷ್ಕರಣೆ; ಟಿಕೆಟ್​ನ ವಾಟ್ಸಾಪ್ ಸ್ಕ್ರೀನ್​ಶಾಟ್, ಫೋಟೋ, ಪಿಡಿಎಫ್ ಕಾಪಿಗಳು ಮಾನ್ಯವಾ?

Indian Railways digital ticket rules: ಯಾರೋ ಬುಕ್ ಮಾಡಿದ ಟಿಕೆಟ್​ನ ಸ್ಕ್ರೀನ್​ಶಾಟ್ ಇಟ್ಟುಕೊಂಡು ರೈಲಿನಲ್ಲಿ ಪ್ರಯಾಣಿಸಲು ಆಗುವುದಿಲ್ಲ. ಭಾರತೀಯ ರೈಲ್ವೆ ಇಲಾಖೆ ಡಿಜಿಟಲ್ ಟಿಕೆಟ್ ನಿಯಮಗಳನ್ನು ಪರಿಷ್ಕರಿಸಿದೆ. ನಿಮ್ಮದೇ ನಂಬರ್​ನಲ್ಲಿ ಬುಕ್ ಮಾಡಿದ ಟಿಕೆಟ್ ಆಗಿರಬೇಕು, ಅಥವಾ ಟಿಕೆಟ್ ಬುಕ್ ಮಾಡಿದವರೂ ಜೊತೆಯಲ್ಲಿ ಪ್ರಯಾಣಿಸುತ್ತಿರಬೇಕು.

ರೈಲ್ವೆ ಟಿಕೆಟ್ ನಿಯಮಗಳ ಪರಿಷ್ಕರಣೆ; ಟಿಕೆಟ್​ನ ವಾಟ್ಸಾಪ್ ಸ್ಕ್ರೀನ್​ಶಾಟ್, ಫೋಟೋ, ಪಿಡಿಎಫ್ ಕಾಪಿಗಳು ಮಾನ್ಯವಾ?
ರೈಲಿನ ಸಾಂದರ್ಭಿಕ ಚಿತ್ರ
Image Credit source: Firdous Nazir/NurPhoto via Getty Images

Updated on: Jul 12, 2026 | 3:59 PM

ಮುಖ್ಯಾಂಶಗಳು

  • ಯಾರೋ ಬುಕ್ ಮಾಡಿದ ಟಿಕೆಟ್​ನ ಸ್ಕ್ರೀನ್​ಶಾಟ್ ಇಟ್ಟು ರೈಲಿನಲ್ಲಿ ಪ್ರಯಾಣಿಸಲು ಆಗುವುದಿಲ್ಲ.
  • ಭಾರತೀಯ ರೈಲ್ವೆ ಇಲಾಖೆ ಡಿಜಿಟಲ್ ಟಿಕೆಟ್ ನಿಯಮಗಳನ್ನು ಪರಿಷ್ಕರಿಸಿದೆ.
  • ನಿಮ್ಮದೇ ನಂಬರ್​ನಲ್ಲಿ ಬುಕ್ ಮಾಡಿದ ಟಿಕೆಟ್ ಆಗಿರಬೇಕು.

ನವದೆಹಲಿ, ಜುಲೈ 11: ಇತ್ತೀಚೆಗೆ ಮಹಿಳಾ ಪ್ರಯಾಣಿಕರೊಬ್ಬರು ರೈಲಿನಲ್ಲಿ ಪ್ರಯಾಣಿಸುವಾಗ ತಮ್ಮ ಸಹೋದರ ವಾಟ್ಸಾಪ್ (WhatsApp) ಮೂಲಕ ಕಳುಹಿಸಿದ್ದ ಡಿಜಿಟಲ್ ಅನ್ ರಿಸರ್ವ್ಡ್ (ಸಾಮಾನ್ಯ/ಜನರಲ್) ಟಿಕೆಟ್‌ನ ಸ್ಕ್ರೀನ್‌ಶಾಟ್ ಅನ್ನು ಟಿಕೆಟ್ ತಪಾಸಣಾಧಿಕಾರಿಗೆ (TTE) ತೋರಿಸಿದ್ದರು. ಆದರೆ ಆ ಟಿಕೆಟ್ ರೈಲು ನಿಲ್ದಾಣದಿಂದ ಹೊರಟ ನಂತರ ಬುಕ್ ಆಗಿರುವುದು ಟಿಟಿಇ ಗಮನಕ್ಕೆ ಬಂದಿತು. ಹಾಗೆಯೇ, ಮಹಿಳೆಯ ಸ್ವಂತ ಮೊಬೈಲ್‌ನಿಂದ ಟಿಕೆಟ್ ಬುಕ್ ಆಗಿರಲಿಲ್ಲ. ಈ ಕಾರಣಕ್ಕೆ ಮಹಿಳೆ ತೋರಿದ ಡಿಜಿಟಲ್ ಟಿಕೆಟ್ ಅನ್ನು ಟಿಟಿಇ ಮಾನ್ಯ ಮಾಡಲಿಲ್ಲ. ಒಂದು ರೀತಿಯಲ್ಲಿ ಆ ಮಹಿಳೆಯದ್ದು ರೈಲು ಹೋದ ಮೇಲೆ ಟಿಕೆಟ್ ಕೊಂಡ ಕಥೆಯಂತಿತ್ತು. ಈ ಘಟನೆ ಬಳಿಕ ಭಾರತೀಯ ರೈಲ್ವೆಯು ತನ್ನ ಡಿಜಿಟಲ್ ಟಿಕೆಟ್ ನಿಯಮಗಳನ್ನು ಕಟ್ಟುನಿಟ್ಟಾಗಿಸಿದ್ದು, ಹೊಸ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ. ಅವುಗಳ ವಿವರ ಇಲ್ಲಿದೆ:

ಭಾರತೀಯ ರೈಲ್ವೆ: ಯಾವ ರೀತಿಯ ಟಿಕೆಟ್‌ಗಳು ಅಮಾನ್ಯ?

  • ವಾಟ್ಸಾಪ್ ಅಥವಾ ಇತರೆ ಮೆಸೇಜಿಂಗ್ ಆ್ಯಪ್‌ಗಳಲ್ಲಿ ಬಂದ ಟಿಕೆಟ್‌ಗಳ ಸ್ಕ್ರೀನ್‌ಶಾಟ್‌ಗಳು (Screenshots).
  • ಟಿಕೆಟ್‌ನ ಫೋಟೋಗಳು ಅಥವಾ ಕೇವಲ ಪಿಡಿಎಫ್ (PDF) ಪ್ರತಿಗಳು.
  • ಬೇರೆ ಯಾರೋ ಬುಕ್ ಮಾಡಿ ಕಳುಹಿಸಿದ ಫೋಟೋಗಳು.

ಇಂತಹ ಸ್ಕ್ರೀನ್‌ಶಾಟ್‌ಗಳನ್ನು ತೋರಿಸಿದರೆ ನೀವು ಸೂಕ್ತ ಟಿಕೆಟ್ ಇಲ್ಲದೆ ಪ್ರಯಾಣಿಸುತ್ತಿದ್ದೀರಿ ಎಂದು ಪರಿಗಣಿಸಿ ದಂಡ ವಿಧಿಸಲಾಗುತ್ತದೆ.

ಇದನ್ನೂ ಓದಿ: ಕ್ರೆಡಿಟ್ ಕಾರ್ಡ್ ಹೊಂದಿರುವವರು ದಿಢೀರ್ ಮೃತಪಟ್ಟರೆ ಬಿಲ್ ಕಟ್ಟೋರು ಯಾರು? ಕುಟುಂಬದವರ ಜವಾಬ್ದಾರಿಯೇ?

ಭಾರತೀಯ ರೈಲ್ವೆ: ಹೊಸ ನಿಯಮಗಳ ಪ್ರಕಾರ ಯಾವುದು ಸಿಂಧು?

  • ಡಿಜಿಟಲ್ ಅನ್ ರಿಸರ್ವ್ಡ್ (Unreserved/General) ಟಿಕೆಟ್‌ಗಳಾಗಿದ್ದರೆ, ನೀವು ಅಧಿಕೃತ ‘ರೈಲ್ ಒನ್’ (Rail One) ಅಥವಾ ಆಯಾ ಅಧಿಕೃತ ಆ್ಯಪ್ ಮೂಲಕವೇ ಮೂಲ (Original) ಟಿಕೆಟ್ ಅನ್ನು ಲೈವ್ ಆಗಿ ತೋರಿಸಬೇಕು.
  • ಯಾವ ಮೊಬೈಲ್ ಸಂಖ್ಯೆ ಮತ್ತು ಸಾಧನದಿಂದ ಟಿಕೆಟ್ ಬುಕ್ ಆಗಿದೆಯೋ, ಅದೇ ಮೊಬೈಲ್ ಸಾಧನದಲ್ಲಿ ಟಿಕೆಟ್ ಅನ್ನು ತೋರಿಸುವುದು ಕಡ್ಡಾಯ.
  • ರೈಲು ನಿಲ್ದಾಣದಿಂದ ಹೊರಡುವ ಮುನ್ನವೇ ಈ ಡಿಜಿಟಲ್ ಅನ್ ರಿಸರ್ವ್ಡ್ ಟಿಕೆಟ್‌ಗಳನ್ನು ಬುಕ್ ಮಾಡಿರಬೇಕು. ರೈಲು ಹೊರಟ ನಂತರ ಬುಕ್ ಮಾಡಿದರೆ ಅದು ಮಾನ್ಯವಾಗುವುದಿಲ್ಲ.

ರಿಸರ್ವ್ಡ್ (ಕಾಯ್ದಿರಿಸಿದ) ಟಿಕೆಟ್‌ಗಳಿಗೆ ಈ ನಿಯಮ ಅನ್ವಯಿಸುತ್ತದೆಯೇ?

ರಿಸರ್ವ್ಡ್ ಟಿಕೆಟ್​ಗಳಿಗೆ ಈ ನಿಯಮ ಅನ್ವಯಿಸುವುದಿಲ್ಲ. ಈ ಕಟ್ಟುನಿಟ್ಟಾದ ಸ್ಕ್ರೀನ್‌ಶಾಟ್ ನಿಯಮವು ಮುಖ್ಯವಾಗಿ ಡಿಜಿಟಲ್ ಅನ್ ರಿಸರ್ವ್ಡ್ (ಸಾಮಾನ್ಯ) ಟಿಕೆಟ್‌ಗಳಿಗೆ ಮಾತ್ರ ಅನ್ವಯಿಸುತ್ತದೆ.

ರಿಸರ್ವ್ಡ್ (IRCTC ಮೂಲಕ ಬುಕ್ ಮಾಡಿದ ಸ್ಲೀಪರ್, AC ಇತ್ಯಾದಿ) ಟಿಕೆಟ್‌ಗಳನ್ನು ಹೊಂದಿರುವವರು ಅಧಿಕೃತ ಆ್ಯಪ್, SMS ದೃಢೀಕರಣ ಅಥವಾ ಇ-ಟಿಕೆಟ್ ಪ್ರತಿಯೊಂದಿಗೆ ತಮ್ಮ ಸರ್ಕಾರದ ಅಧಿಕೃತ ಗುರುತಿನ ಚೀಟಿ (Aadhaar, PAN, Voter ID ಇತ್ಯಾದಿ) ತೋರಿಸಿ ಪ್ರಯಾಣಿಸಬಹುದು.

ಇದನ್ನೂ ಓದಿ: ಬಿಎಸ್ಸೆನ್ನೆಲ್​ನಿಂದ ಸೆಟಿಲೈಟ್ ಫೋನ್; ಬೆಲೆ 1.34 ಲಕ್ಷ ರೂ; ಮಾಸಿಕ ಸಬ್​ಸ್ಕ್ರಿಪ್ಷನ್ ಪ್ಲಾನ್ 3,500 ರೂನಿಂದ ಆರಂಭ

ಪ್ರಯಾಣಿಕರಿಗೆ ರೈಲ್ವೆಯ ಸಲಹೆಗಳು

  • ನಿಮ್ಮ ಪ್ರಯಾಣದ ಉದ್ದಕ್ಕೂ ಟಿಕೆಟ್ ಬುಕ್ ಮಾಡಿದ ಮೊಬೈಲ್ ಫೋನ್ ಅನ್ನು ನಿಮ್ಮ ಬಳಿಯೇ ಇಟ್ಟುಕೊಳ್ಳಿ.
  • ಫೋನ್‌ನಲ್ಲಿ ಸಾಕಷ್ಟು ಬ್ಯಾಟರಿ ಚಾರ್ಜ್ ಇರುವಂತೆ ನೋಡಿಕೊಳ್ಳಿ (TTE ತಪಾಸಣೆ ಮಾಡುವಾಗ ಫೋನ್ ಆಫ್ ಆಗಿದ್ದರೆ ಸಮಸ್ಯೆ ಎದುರಾಗಬಹುದು).

ಯಾವುದೇ ವಂಚನೆ ಅಥವಾ ತಪ್ಪುಗಳನ್ನು ತಡೆಯಲು ರೈಲ್ವೆ ಇಲಾಖೆ ಈ ಕಠಿಣ ಕ್ರಮ ಕೈಗೊಂಡಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 3:51 pm, Sun, 12 July 26

ಸುಗ್ಗನಹಳ್ಳಿ ವಿಜಯಸಾರಥಿ

ಹುಟ್ಟೂರು ಹಾಸನ ಜಿಲ್ಲೆಯ ಶ್ರವಣಬೆಳಗೊಳ ಸಮೀಪದ ಒಂದು ಪುಟ್ಟ ಹಳ್ಳಿ. ಬೆಳದದ್ದು ಬೆಂಗಳೂರು ನಗರದಲ್ಲಿ. ಹಲವು ವರ್ಷಗಳಿಂದ ಪತ್ರಿಕಾ ರಂಗದಲ್ಲಿ ನೆಲೆ. ಬರವಣಿಗೆಯ ಆಸಕ್ತಿ ಮತ್ತು ಪರಿಣಿತಿಯ ಕ್ಷೇತ್ರಗಳು ಆರ್ಥಿಕತೆ, ಹಣಕಾಸು, ಅಂತರರಾಷ್ಟ್ರೀಯ ವಿದ್ಯಮಾನ, ಜನಕ್ರಾಂತಿ, ರಾಷ್ಟ್ರೀಯತೆ, ಸಂಸ್ಕೃತಿ, ಮಾನವ ಸಂಬಂಧ, ಕ್ರೀಡೆ ಮೊದಲಾದವು ಇವೆ. ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ಸಾಧ್ಯವಾದಷ್ಟೂ ಸ್ಫುಟವಾಗಿ, ಸರಳವಾಗಿ ಬರೆಯುವ ಇಚ್ಛೆ.

Read More
Loading...
Unable to load recommendations.
Follow Us